ಭಾರತದಲ್ಲಿ ಚಿನ್ನವು ಕೇವಲ ಲೋಹವಲ್ಲ, ಸಂಪ್ರದಾಯ, ನಂಬಿಕೆ, ಮತ್ತು ಪರಂಪರೆಯ ಪ್ರತೀಕ. ಉತ್ತರದಿಂದ ದಕ್ಷಿಣದವರೆಗೆ ಪ್ರತಿಯೊಬ್ಬರ ಹೃದಯದಲ್ಲಿ ಚಿನ್ನದ ಹಾಗೂ ಅದರ ಆಭರಣಗಳ ಪ್ರೀತಿ ಗಾಢವಾಗಿದೆ. ಮದುವೆ, ಹಬ್ಬ, ಅಥವಾ ಯಾವುದೇ ಸಂಭ್ರಮ ಚಿನ್ನ ಇಲ್ಲದೆ ಪೂರ್ಣವಾಗುವುದಿಲ್ಲ. ಇದೇ ಕಾರಣಕ್ಕಾಗಿ ಭಾರತೀಯ ಕುಟುಂಬಗಳು ತಲೆಮಾರಿನಿಂದ ತಲೆಮಾರಿಗೆ ಆಭರಣಗಳ ರೂಪದಲ್ಲಾಗಲಿ ಅಥವಾ ನಾಣ್ಯಗಳ ರೂಪದಲ್ಲಾಗಲಿ ಚಿನ್ನವನ್ನು ಕೂಡಿಟ್ಟುಕೊಂಡು ಬಂದಿದೆ. ಆದರೆ, ಆದಾಯ ತೆರಿಗೆ ಇಲಾಖೆಯು ನಿಮ್ಮ ಚಿನ್ನದ ಖರೀದಿ ಮತ್ತು ಸಂಗ್ರಹಣೆಯ ಮೇಲೆ ನಿಗಾ ಇಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ನಿಗದಿತ ಮಿತಿಗಿಂತ ಹೆಚ್ಚು ಚಿನ್ನವನ್ನು ಹೊಂದಿದ್ದರೆ ಮತ್ತು ಅದರ ವೈಧ್ಯತೆಯ ಪುರಾವೆ ನೀಡಲು ಸಾಧ್ಯವಾಗದಿದ್ದರೆ, ತೆರಿಗೆ ನೋಟಿಸ್ ಅಥವಾ ದಾಳಿ ಎದುರಾಗಬಹುದು. ಆದ್ದರಿಂದ, ತೆರಿಗೆ ತನಿಖೆಯಿಂದ ದೂರವಿರಲು ಮನೆಯಲ್ಲಿ ಎಷ್ಟು ಚಿನ್ನವನ್ನು ಕಾನೂನುಬದ್ಧವಾಗಿ ಇಡಬಹುದು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.
ವಿವಿಧ ವ್ಯಕ್ತಿಗಳಿಗೆ ಚಿನ್ನ ಸಂಗ್ರಹಿಸುವ ಮಿತಿಗಳು:
ಭಾರತದಲ್ಲಿ ಚಿನ್ನದ ಖರೀದಿ, ಸಂಗ್ರಹಣೆ, ಮತ್ತು ತೆರಿಗೆ ನಿಯಮಗಳನ್ನು ಸರ್ಕಾರ ನಿಗದಿಪಡಿಸಿದೆ. ಇದರಂತೆ, ವಿವಾಹಿತ ಮಹಿಳೆಯರು ಮನೆಯಲ್ಲಿ 500 ಗ್ರಾಂ ಚಿನ್ನವನ್ನು ಇಡಬಹುದು. ಅವಿವಾಹಿತ ಮಹಿಳೆಯರಿಗೆ 250 ಗ್ರಾಂ ಮತ್ತು ಪುರುಷರಿಗೆ 100 ಗ್ರಾಂ ಮಿತಿ ಇದೆ.
ಚಿನ್ನದ ಮೂಲದ ಪುರಾವೆ:
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಪ್ರಕಾರ, ಮನೆಯಲ್ಲಿ ಇರುವ ಚಿನ್ನದ ಪ್ರಮಾಣವು ನಿಗದಿತ ಮಿತಿಯೊಳಗಿದ್ದರೆ, ಅದರ ಖರೀದಿ ಅಥವಾ ಸಂಪಾದನೆಯ ಸಾಧ್ಯತೆಯ ಪುರಾವೆ (ಉದಾ: ಬ್ಯಾಂಕ್ ಸ್ಟೇಟ್ಮೆಂಟ್, ವರದಾನ ಪತ್ರ) ಹೊಂದಿರಬೇಕು.
ವಾರಸುದಾರ ಚಿನ್ನ ಮತ್ತು ತೆರಿಗೆ:
ನೀವು ಹಣವನ್ನು ತೆರಿಗೆ ಪಾವತಿಸಿದ ಆದಾಯದಿಂದ ಚಿನ್ನವನ್ನು ಖರೀದಿಸಿದ್ದರೆ, ವ್ಯವಸಾಯದಂತಹ ತೆರಿಗೆಮುಕ್ತ ಆದಾಯದಿಂದ ಪಡೆದಿದ್ದರೆ, ಅಥವಾ ಕಾನೂನುಬದ್ಧವಾಗಿ ವಾರಸಾಗಿ ಸಿಕ್ಕಿದ್ದರೆ, ಅದರ ಮೇಲೆ ತೆರಿಗೆ ಇರುವುದಿಲ್ಲ. ದಾಳಿಯ ಸಂದರ್ಭದಲ್ಲಿ, ಮಿತಿಯೊಳಗಿನ ಆಭರಣಗಳನ್ನು ಜಪ್ತಿ ಮಾಡಲು ಸಾಧ್ಯವಿಲ್ಲ.
ಚಿನ್ನ ಮಾರಾಟ ಮತ್ತು ತೆರಿಗೆ:
ಮನೆಯಲ್ಲಿ ಚಿನ್ನ ಇಡುವುದಕ್ಕೆ ತೆರಿಗೆ ಇಲ್ಲದಿದ್ದರೂ, ಅದನ್ನು ಮಾರಾಟ ಮಾಡುವಾಗ ಲಾಭದ ಮೇಲೆ ತೆರಿಗೆ ಪಾವತಿಸಬೇಕು. 2025ರ ಯೂನಿಯನ್ ಬಜೆಟ್ ಪ್ರಕಾರ, ಭೌತಿಕ ಚಿನ್ನದ ಹೋಲ್ಡಿಂಗ್ ಅವಧಿಯನ್ನು 3 ವರ್ಷದಿಂದ 2 ವರ್ಷಕ್ಕೆ ಕಡಿಮೆ ಮಾಡಲಾಗಿದೆ.
- ಸಣ್ಣ-ಅವಧಿ ಲಾಭ (Short-Term Capital Gains): 2 ವರ್ಷದೊಳಗೆ ಮಾರಿದರೆ, ಸಾಮಾನ್ಯ ಆದಾಯ ತೆರಿಗೆ ದರ ಪ್ರಕಾರ ತೆರಿಗೆ.
- ದೀರ್ಘ-ಅವಧಿ ಲಾಭ (Long-Term Capital Gains): 2 ವರ್ಷಕ್ಕಿಂತ ಹೆಚ್ಚು ಇಟ್ಟು ಮಾರಿದರೆ, 12.5% ತೆರಿಗೆ (ಸೂಚ್ಯಂಕ ಲಾಭ ಇಲ್ಲದೆ).
ಆದ್ದರಿಂದ, ಚಿನ್ನದ ಮಿತಿ ಮತ್ತು ತೆರಿಗೆ ನಿಯಮಗಳನ್ನು ಅರ್ಥಮಾಡಿಕೊಂಡು, ಕಾನೂನುಬದ್ಧವಾಗಿ ಸಂಗ್ರಹಿಸಿ, ತೊಂದರೆಗಳನ್ನು ತಪ್ಪಿಸಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.