Gold Rate Today : ಸತತ 3ನೇ ದಿನ ಚಿನ್ನದ ಬೆಲೆ ಇಳಿಕೆ. ಇಂದು ಮಾರ್ಚ್ 30 ಚಿನ್ನ ಬೆಳ್ಳಿ ಬೆಲೆ ಎಷ್ಟು.?

IMG 20250530 WA0001

WhatsApp Group Telegram Group

ಮೇ 30ಕ್ಕೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ: ಬಂಡವಾಳ ಹೂಡಿಕೆದಾರರಿಗೆ ಮತ್ತು ಗ್ರಾಹಕರಿಗೆ ಸುವರ್ಣಾವಕಾಶ

ಮೇ ತಿಂಗಳು ಅಂತ್ಯಗೊಳ್ಳುತ್ತಿದೆ, ಹಾಗೆಯೇ ಮದುವೆ ಸೀಸನ್ ಕೊನೆಗೊಳ್ಳುತ್ತಿದೆ. ಇನ್ನು, ಇದೀಗ ಆರಂಭವಾಗುತ್ತಿರುವ ಮುಂಗಾರು ಹಾಗೂ ಜಾಗತಿಕ ಆರ್ಥಿಕ ಬೆಳವಣಿಗೆಗಳ ನಡುವೆ ಚಿನ್ನದ ಬೆಲೆಯಲ್ಲಿ ಹೆಚ್ಚಾದ ಅಸ್ಥಿರತೆ ಕನ್ನಡ ರಾಜ್ಯ ಕರ್ನಾಟಕದ ಮಾರುಕಟ್ಟೆಯಲ್ಲೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ ಕೆಲ ತಿಂಗಳುಗಳಿಂದ ನಿರಂತರ ಏರಿಕೆಯನ್ನು ಕಂಡಿದ್ದ ಚಿನ್ನದ ದರ ಇದೀಗ ಉಲ್ಟಾ ದಿಕ್ಕು ಹಿಡಿದಿದ್ದು, ಬಂಡವಾಳ ಹೂಡಿಕೆದಾರರು, ಆಭರಣ ಖರೀದಿಸುವ ಗ್ರಾಹಕರು, ಜೆವೆಲ್ಲರ್‌ಗಳು ಸೇರಿದಂತೆ ಎಲ್ಲರ ಗಮನ ಸೆಳೆದಿದೆ. ವಿಶೇಷವಾಗಿ ಮೇ ತಿಂಗಳ ಕೊನೆಗೆ, ಮೇ 29ರಂದು ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆಯನ್ನು ನೋಡಬಹುದಾಗಿದೆ. ಇದು ದೇಶೀಯ ಚಿನ್ನ ಮಾರುಕಟ್ಟೆಯಲ್ಲಿನ ಪ್ರಮುಖ ಬೆಳವಣಿಗೆಯಾಗಿ ರೂಪುಗೊಂಡಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 30, 2025: Gold Price

ಹೌದು, ಮದುವೆ ಸೀಸನ್ ಕೊನೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಚಿನ್ನದ ದರ ಇಳಿಕೆಯಾಗುತ್ತಿರುವುದು ಗ್ರಾಹಕರಿಗೆ ಖುಷಿಯನ್ನು ತಂದುಕೊಟ್ಟಿದೆ. ಚಿನ್ನದ ಬೆಲೆ ಏರಿಕೆಯಿಂದ ಗ್ರಾಹಕರು ನಿರಾಸೆ ವ್ಯಕ್ತಪಡಿಸುತ್ತಿದ್ದರು. ಆದರೆ ಇದೀಗ ಕಾಣುತಿಂದಿರುವಂತಹ ಇಳಿಕೆ ಗ್ರಾಹಕರನ್ನ ಚಿನ್ನ ಖರೀದಿಸುವತ್ತ ಸೆಳೆಯುತ್ತಿದೆ. ಹಾಗಿದ್ದರೆ, ಮೇ 30, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,894 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,703 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,277 ಆಗಿದೆ. ಒಟ್ಟಾರೆಯಾಗಿ, 1ರೂ. ನಷ್ಟು ಇಳಿಕೆಯನ್ನು ಕಂಡಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ:, 99,800 ರೂ. ನಷ್ಟಿದೆ. ಒಟ್ಟಾರೆಯಾಗಿ 100 ರೂ. ನಷ್ಟು ಇಳಿಕೆಯನ್ನು ಕಂಡಿದೆ.

ಮದುವೆ, ಕಾರ್ಯೋತ್ಸವಗಳ ಸೀಸನ್‌ ನಿಧಾನವಾಗಿ ಕಡಿಮೆಯಾಗುತ್ತಿರುವ ಈ ಹಿನ್ನಲೆಯಲ್ಲಿ ಚಿನ್ನದ ಡಿಮ್ಯಾಂಡ್ ತಗ್ಗತೊಡಗಿದ್ದು, ಇದರ ಪರಿಣಾಮ ಬೆಲೆಯಲ್ಲಿ ನೇರವಾಗಿ ಪ್ರತಿಬಿಂಬಿಸುತ್ತಿದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ  ಮುಖ್ಯವಾಗಿ ಅಮೆರಿಕದ ಫೆಡರಲ್ ಕೋರ್ಟ್ ಡೊನಾಲ್ಡ್ ಟ್ರಂಪ್(Donald Trump) ಅವರ ತೆರಿಗೆ ನೀತಿಗೆ ಸಂಬಂಧಿಸಿದಂತೆ ನೀಡಿರುವ ಮಹತ್ವದ ಆದೇಶ ಚಿನ್ನದ ಮೌಲ್ಯದಲ್ಲಿ ಕುಸಿತಕ್ಕೆ ಕಾರಣವಾಗಿದೆ. ಈ ಆದೇಶದ ಪರಿಣಾಮವಾಗಿ ಚಿನ್ನದ ಆಮದು ಸುಂಕದಲ್ಲಿ ಕಡಿತ ಸಾಧ್ಯವಾಗಿರುವ ನಿರೀಕ್ಷೆಯಿಂದ ಜಾಗತಿಕ ಚಿನ್ನ ಮಾರುಕಟ್ಟೆ ತನ್ನ ಮೌಲ್ಯವನ್ನು ಇಳಿಸಿಕೊಂಡಿದೆ.

ಕರ್ನಾಟಕದಲ್ಲಿ ಮೇ 29,2025 ರ ಚಿನ್ನದ ಬೆಲೆ ವಿವರಗಳು:

24 ಕಾರೆಟ್ ಚಿನ್ನ (10 ಗ್ರಾಂ): ₹97,040 (₹400 ಇಳಿಕೆ)
22 ಕಾರೆಟ್ ಚಿನ್ನ (10 ಗ್ರಾಂ): ₹88,950 (₹400 ಇಳಿಕೆ)
19 ಕಾರೆಟ್ ಚಿನ್ನ (10 ಗ್ರಾಂ): ₹72,780 (₹330 ಇಳಿಕೆ)

ಬೆಳ್ಳಿ (1 ಕೆಜಿ): ಇಳಿಕೆ ಅನುಭವಿಸಿ ಈಗ ₹99,900
ಈ ದರಗಳಲ್ಲಿ ಜಿಎಸ್‌ಟಿ(GST), ಮೇಕಿಂಗ್ ಚಾರ್ಜಸ್ ಮತ್ತು ಇತರೆ ಖರ್ಚುಗಳನ್ನು ಸೇರಿಸಿಲ್ಲ. ಗ್ರಾಹಕರು ಆಭರಣ ಅಥವಾ ಚಿನ್ನ ಖರೀದಿಸುವಾಗ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ.

ಅಂತರಾಷ್ಟ್ರೀಯ ಪರಿಣಾಮಗಳು ಮತ್ತು ಭಾರತಕ್ಕೆ ಅದರ ಪ್ರಭಾವ:

ಅಮೆರಿಕದ ಆರ್ಥಿಕ ನೀತಿಯಲ್ಲಿ ನಡೆದುತ್ತಿರುವ ಸುದ್ಧಿಗಳು ಇಡೀ ಜಾಗತಿಕ ಬಂಡವಾಳ ಮಾರುಕಟ್ಟೆಗೆ ಪರಿಣಾಮ ಬೀರುತ್ತಿವೆ. ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿಯ ಕುರಿತ ಫೆಡರಲ್ ಕೋರ್ಟ್ ಆದೇಶ, ಚಿನ್ನದ ಆಮದು ಸುಂಕವನ್ನು ತಗ್ಗಿಸಬಹುದೆಂಬ ನಿರೀಕ್ಷೆ ಮೂಡಿಸಿದ್ದು, ಅದರ ಪರಿಣಾಮವಾಗಿ ಚಿನ್ನದ ಬೆಲೆ ಇಳಿಕೆಯಾಗಿದೆ. ಈ ಬೆಳವಣಿಗೆಯ ಪಾರ್ಶ್ವಭೂಮಿಯಲ್ಲಿ ಭಾರತದಂತಹ ಚಿನ್ನದ ಬೃಹತ್ ಬಳಕೆದಾರ ರಾಷ್ಟ್ರಗಳ ಮಾರುಕಟ್ಟೆಗಳ ಮೇಲೂ ನೇರವಾಗಿ ಪರಿಣಾಮ ಬೀರುತ್ತಿದೆ.

ವಿಶೇಷವಾಗಿ ಚಿನ್ನದ ಆಭರಣಗಳಲ್ಲಿ ಹೂಡಿಕೆಗೆ ಇಚ್ಛಿಸುವವರಿಗೆ ಇದು ಒಳ್ಳೆಯ ಅವಕಾಶವಾಗಬಹುದು. ಮದುವೆ ಮತ್ತು ಉತ್ಸವ ಸೀಸನ್ ಮುಕ್ತಾಯದ ಸಮಯದಲ್ಲಿ ಬೆಲೆ ಇಳಿಕೆಯಾಗಿರುವುದು ಖರೀದಿಗೆ ಸೂಕ್ತ ಸಂದರ್ಭವನ್ನೇ ನೀಡಿದೆ. ಆದಾಗ್ಯೂ, ಬಂಡವಾಳ ಹೂಡಿಕೆ ಅಥವಾ ಆಭರಣ ಖರೀದಿಗೆ ಮುಂದಾಗುವ ಮುನ್ನ ತಜ್ಞರ ಸಲಹೆ ಪಡೆದು ಆರ್ಥಿಕ ಸ್ಥಿತಿಗತಿಯ ಮೇಲೆ ಗಮನ ಹರಿಸುವುದು ಬುದ್ಧಿವಂತಿಕೆಯಲ್ಲದೆ, ಭದ್ರತೆಗೂ ಸಹಾಯಕವಾಗಲಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!