Gold Rate Today : ಚಿನ್ನದ ಬೆಲೆ ಬರೋಬ್ಬರಿ ₹4500/- ಇಳಿಕೆ, ಇಂದಿನ ಚಿನ್ನ ಬೆಳ್ಳಿ ಬೆಲೆ ಎಷ್ಟಿದೆ.?

IMG 20250521 WA0001

WhatsApp Group Telegram Group

ಈಗ ಚಿನ್ನ ಖರೀದಿಗೆ ಸೂಕ್ತ ಸಮಯ: 22k, 24k, 18k ದರಗಳಲ್ಲಿ ಗಣನೀಯ ಇಳಿಕೆ, ಬೆಳ್ಳಿಯ ದರವೂ ಕಡಿಮೆ

ಭಾರತೀಯ ಸಮಾಜದಲ್ಲಿ ಚಿನ್ನದ (Gold) ಮಹತ್ವವನ್ನೆಲ್ಲಾ ವಿವರಿಸಬೇಕಾದರೆ ಸಾಕಷ್ಟು ಸಮಯ ಬೇಕಾಗುತ್ತದೆ. ಸಾಂಪ್ರದಾಯಿಕ ಆಭರಣಗಳಾಗಲಿ, ಧಾರ್ಮಿಕ ಆಚರಣೆಗಳಾಗಲಿ, ಮದುವೆಗಳಾಗಲಿ ಅಥವಾ ಹೂಡಿಕೆಯ (Investment) ಪರಿಕಲ್ಪನೆಯಾಗಲಿ ಚಿನ್ನ ಎಂದರೆ ಭಾರತದ ಸಂಸ್ಕೃತಿಯ ನೈಜ ಸಂಕೇತ. ಇಂತಹ ಪವಿತ್ರ ಹಿನ್ನೆಲೆಯಲ್ಲಿರುವ ಚಿನ್ನದ ಮಾರುಕಟ್ಟೆಯಲ್ಲಿ ಮೇ 20, 2025 ರಂದು ಆಭರಣ ಪ್ರಿಯರಿಗೆ ಖುಷಿಯ ಸುದ್ದಿಯೊಂದು ಬಂದಿದೆ. ಹೌದು, ಮಳೆಯ ನಡುವೆಯೇ ಚಿನ್ನದ ದರದಲ್ಲಿ ಭಾರೀ ಇಳಿಕೆಯಾಗಿದ್ದು, ಚಿನ್ನ ಖರೀದಿಸಲು ಇದು ಉತ್ತಮ ಅವಕಾಶವಾಗಿ ಪರಿಣಮಿಸಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 21, 2025: Gold Price Today

ಮಳೆಗಾಲದ ಆರಂಭದ ನಡುವೆಯೂ ಬಂಗಾರದ ಬೆಲೆಯಲ್ಲಿ ದಿಢೀರ್ ಇಳಿಕೆಯಾಗಿದೆ. ಮೆಟ್ರೋ ನಗರವಾದ ಬೆಂಗಳೂರಿನಲ್ಲಿ (in Bangalore) ಚಿನ್ನದ ದರದಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಏರಿಕೆಯಾಗುತ್ತಿದ್ದ ಬೆಲೆ ಇಂದು ತೀವ್ರವಾಗಿ ಕುಸಿತ ಕಂಡಿದ್ದು, ಖರೀದಿದಾರರಲ್ಲಿ ಉತ್ಸಾಹ ಮೂಡಿಸಿದೆ. ಹಾಗಿದ್ದರೆ, ಮೇ 21, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,709 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,501 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,126 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 96,900 ರೂ. ನಷ್ಟಿದೆ.

ಹೌದು, ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಸ್ಥಿರತೆ (stability in Gold rate) ಕಂಡಿದ್ದು, ಇತ್ತೀಚೆಗೆ ಅದು  ಇಳಿಕೆಯತ್ತ ಮುಖಮಾಡಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಚಿನ್ನದ ಬೆಲೆಗಳಲ್ಲಿ ಸ್ಪಷ್ಟ ಕುಸಿತ ದಾಖಲಾಗಿದ್ದು, ಇದು ಮಹಿಳೆಯರು ಹಾಗೂ ಹೂಡಿಕೆದಾರರಲ್ಲಿ (Women’s and investers) ಖುಷಿ ಮೂಡಿಸಿದೆ. ಚಿನ್ನದ ಜೊತೆಗೆ ಬೆಳ್ಳಿಯ ದರದಲ್ಲಿಯೂ ಇಳಿಕೆ ಕಂಡುಬಂದಿದೆ.

ಮೇ 20ರಂದು ಬೆಂಗಳೂರು ಚಿನ್ನ ಬೆಲೆ ಎಷ್ಟಿದೆ?:

22 ಕ್ಯಾರೆಟ್ ಚಿನ್ನ:
10 ಗ್ರಾಂ ಚಿನ್ನದ ದರ ₹87,100 ರೂ. ನಷ್ಟಿದೆ. (₹450 ಇಳಿಕೆ).
100 ಗ್ರಾಂ ಚಿನ್ನಕ್ಕೆ ₹4,500 ಇಳಿಕೆ ಕಂಡುಬಂದಿದ್ದು, ಪ್ರಸ್ತುತ ದರ ₹8,71,000 ರೂ. ನಷ್ಟಿದೆ.

24 ಕ್ಯಾರೆಟ್ ಚಿನ್ನ (ಅಪರಂಜಿ):
1 ಗ್ರಾಂ ದರ ₹9,502, 10 ಗ್ರಾಂ ದರ ₹95,020, ಇದರಲ್ಲಿ ₹490 ಇಳಿಕೆಯಾಗಿದೆ.
100 ಗ್ರಾಂ ಅಪರಂಜಿ ಚಿನ್ನದ ದರ ₹9,50,200 ರೂ. ನಸ್ಟಿದ್ದು.(₹4,900 ಇಳಿಕೆಯಾಗಿವೆ).

18 ಕ್ಯಾರೆಟ್ ಚಿನ್ನ:
1 ಗ್ರಾಂ ದರ ₹7,127, 10 ಗ್ರಾಂ ₹71,270, 100 ಗ್ರಾಂ ₹7,12,700 ರೂ ನಷ್ಟಿದೆ.

ಬೆಳ್ಳಿ ಬೆಲೆಗಳಲ್ಲೂ ಇಳಿಕೆ:
1 ಕಿಲೋ ಬೆಳ್ಳಿಯ ದರ ₹97,000 ರೂ. ನಷ್ಟಿದೆ. (₹1,000 ಕಡಿಮೆಯಾಗಿದೆ).
1 ಗ್ರಾಂ ಬೆಳ್ಳಿ ₹97, 10 ಗ್ರಾಂ ₹970, 100 ಗ್ರಾಂ ₹9,700.

ಕರ್ಣಾಟಕದ (Karnataka) ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು ಯಾವರೀತಿಯಿವೆ?:

ಮೈಸೂರು, ಮಂಗಳೂರು, ಗದಗ, ಮಂಡ್ಯ, ಚಿತ್ರದುರ್ಗ – ಎಲ್ಲೆಡೆ 18k – ₹7,127, 22k – ₹8,710, 24k – ₹9,502 ರೂಪಾಯಿಗೆ ಮಾರಾಟವಾಗುತ್ತಿವೆ 

ಸ್ಪಾಟ್ ಚಿನ್ನದ (Spot gold) ದರ (ಅಂತಾರಾಷ್ಟ್ರೀಯ ಮಟ್ಟ):

ಸ್ಪಾಟ್ ಚಿನ್ನದ ದರ: $3,213.35 (0.5% ಇಳಿಕೆ)
US ಚಿನ್ನ ಭವಿಷ್ಯ: $3,215.50 (0.6% ಇಳಿಕೆ)
ಸ್ಪಾಟ್ ಬೆಳ್ಳಿ: $32.17 (0.6% ಇಳಿಕೆ)

ಚಿನ್ನದ ಬೆಲೆ ಇಳಿಕೆಗೆ ಕಾರಣವೇನು(Causes)?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಶಕ್ತಿ ಹೆಚ್ಚಳ.
ಭದ್ರತೆ ಹೂಡಿಕೆಗಳ ಕಡೆ ಜನರ ಆಸಕ್ತಿ.
ವಿನಿಮಯ ದರಗಳಲ್ಲಿ ಬದಲಾವಣೆ.
ಹೂಡಿಕೆದಾರರ ಆತಂಕ, ಜಾಗತಿಕ ರಾಜಕೀಯ ಅನಿಶ್ಚಿತತೆ.
ದೇಶೀಯ ಬೇಡಿಕೆ ಇಳಿಕೆ.
ಸುಂಕ ನಿಲುವುಗಳು ಮತ್ತು ಆರ್ಥಿಕ ತೊಂದರೆಗಳು.

ಚಿನ್ನದ ಇಳಿಕೆ ಮುಂದುವರಿಯಬಹುದಾ?:

ಇದೊಂದು ತಾತ್ಕಾಲಿಕ ಇಳಿಕೆಯೆ? ಅಥವಾ ಮುಂದಿನ ದಿನಗಳಲ್ಲಿ ಚಿನ್ನದ ದರ ಮತ್ತೆ ಏರಿಕೆಯಾಗಬಹುದಾ? ಇದು ನಿರ್ಧರಿಸಲು ಹಲವಾರು ಜಾಗತಿಕ ಅಂಶಗಳನ್ನು (Global elements) ಗಮನಿಸಬೇಕಿದೆ. ಆದರೆ ಈ ಹೊತ್ತಿನಲ್ಲಿ, ಚಿನ್ನ ಖರೀದಿಗೆ ಇದು ಉತ್ತಮ ಸಮಯವಾಗಿದ್ದು, ವಿಶೇಷವಾಗಿ ಮದುವೆ ಹಾಗೂ ಹಬ್ಬದ ಸಂದರ್ಭದಲ್ಲಿ ಇರುವ ಕುಟುಂಬಗಳು ಇದರ ಲಾಭ ಪಡೆಯಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!