Gold Rate Today : ಚಿನ್ನದ ಬೆಲೆ ದಿಡೀರ್ ಏರಿಕೆ.!ಮೇ 20, ಇಂದಿನ ಚಿನ್ನ ಬೆಳ್ಳಿ ಬೆಲೆ ಇಲ್ಲಿದೆ. 

Picsart 25 05 20 00 12 57 662

WhatsApp Group Telegram Group

ಮೇ 20, 2025: ಚಿನ್ನದ ದರ ಮತ್ತೆ ಏರಿಕೆ – 24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂ ₹9,552ಗೆ ಮಾರಾಟ

ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ (Gold and Silver market) ಮತ್ತೊಂದು ತಿರುವು ಕಂಡುಬಂದಿದ್ದು, ಮೇ 19, 2025 ರಂದು ಭಾರತದ ಬುಲಿಯನ್ ಮಾರುಕಟ್ಟೆಯಲ್ಲಿ ಬೆಲೆಗಳು ಪುನಃ ಏರಿಕೆಯ ಹಾದಿ ಹಿಡಿವೆ. ಜಾಗತಿಕ ಆರ್ಥಿಕ ಬೆಳವಣಿಗೆಗಳು(Global economic developments), ಅಮೆರಿಕದ ಬಡ್ಡಿದರ ನಿರ್ಧಾರ, ರೂಪಾಯಿ ಮೌಲ್ಯದ ಏರಿಳಿತ ಮತ್ತು ಆಭರಣ ಬೆಲೆಗಳಲ್ಲಿ ಕಂಡುಬರುವ ಮಾರುಕಟ್ಟೆ ಬದಲಾವಣೆಗಳ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿಯ ದರದಗಳು ಏರಿಳಿತ ಕಾಣುತ್ತಿವೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 20, 2025: Gold Price Today

ಕಳೆದ ಎರಡು ದಿನಗಳಿಂದ ಸ್ಥಿರತೆಯನ್ನು ಕಾಯ್ದುಕೊಂಡಿದ್ದ ಚಿನ್ನದ ದರ (Gold rate) ನಿನ್ನೆ ಇಂದ ಸ್ವಲ್ಪಮಟ್ಟಿನ ಏರಿಕೆಯತ್ತ ಮುಖ ಮಾಡಿದೆ. ಸಾಮಾನ್ಯವಾಗಿ ಎಲ್ಲ ಜನರು ಕೂಡ ಚಿನ್ನ ಖರೀದಿಸಲು ಮುಂದಾಗಬೇಕಾದರೆ ಚಿನ್ನದ ದರವನ್ನು ಗಮನಿಸುತ್ತಿರುತ್ತಾರೆ. ಅದೇ ರೀತಿಯಾಗಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದಂತಹ ಚಿನ್ನದ ದರವನ್ನು ಗಮನಿಸಿದ ಗ್ರಾಹಕರು, ಇನ್ನೇನು ಚಿನ್ನವನ್ನು ಕೊಂಡುಕೊಳ್ಳುವ ಯೋಚನೆಯನ್ನು ಮಾಡುವಷ್ಟರಲ್ಲಿ ಮತ್ತೆ ಚಿನ್ನದ ದರ ಏರಿಕೆಯತ್ತ ಮುಖ ಮಾಡಿದೆ. ಹಾಗಿದ್ದರೆ, ಮೇ 20, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,756 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,552 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,164 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 98,100 ರೂ. ನಷ್ಟಿದೆ.

ಬೆಂಗಳೂರಿನಲ್ಲಿ ಮೇ 19, 2025 ರಂದು ಚಿನ್ನದ ದರ ಯಾವ ರೀತಿಯಿದೆ?:

ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ ₹87,550 ಆಗಿದ್ದು, ಇದರಲ್ಲಿ ಪ್ರತಿ ಗ್ರಾಮಿಗೂ ₹35ರಷ್ಟು ಏರಿಕೆಯಾಗಿದೆ. ಇದರೊಂದಿಗೆ 22 ಕ್ಯಾರಟ್ ಚಿನ್ನದ ದರ  ₹8,720 ರಿಂದ ₹8,755ಕ್ಕೆ ಏರಿಕೆಯಾಗಿದೆ. ಅತ್ತ ಶುದ್ಧವಾದ 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ ₹95,510ಕ್ಕೆ ತಲುಪಿದ್ದು, ಪ್ರತಿ ಗ್ರಾಂಗೂ ₹38 ಹೆಚ್ಚಳವಾಗಿದೆ (₹9,513 ರಿಂದ ₹9,551).

ಇದರಿಂದಲೇ 18 ಕ್ಯಾರಟ್ ಚಿನ್ನದ ದರವೂ 10 ಗ್ರಾಂಗೆ ₹71,630ಕ್ಕೆ ಏರಿಕೆಯಾಗಿದೆ. ಈ ದರಗಳು ಆಭರಣ ಖರೀದಿಗೆ (Jewelleries purchase) ತಯಾರಿ ಮಾಡುತ್ತಿರುವ ಗ್ರಾಹಕರಿಗೆ ಹೆಚ್ಚಿನ ವೆಚ್ಚವಾಗುವಂತೆ ಮಾಡುವಂತಿದೆ.

ಬೆಳ್ಳಿಯ ಬೆಲೆಯಲ್ಲಿಯೂ ಏರಿಕೆ(Increased in Silver rate) :

ಚಿನ್ನದ ಬೆಲೆ ಏರಿಕೆಯ ಜೊತೆಗೆ ಬೆಳ್ಳಿಯೂ ಬೆಳ್ಳಿಯ ಬೆಲೆಯೂ ಏರಿಕೆಯತ್ತ ಮುಖ ಮಾಡಿದೆ. ಬೆಳ್ಳಿಯ ದರ ಪ್ರತಿ ಗ್ರಾಂ ಗೆ ₹1 ಏರಿಕೆಯಾಗಿದ್ದು, ಭಾರತದೆಲ್ಲೆಡೆ (All India) ಈ ಬದಲಾವಣೆಯ ಪ್ರಭಾವ ಕಂಡುಬಂದಿದೆ. ಬೆಂಗಳೂರಿನಲ್ಲಿ 100 ಗ್ರಾಂ ಗೆ ಬೆಳ್ಳಿಯ ದರ ₹9,800ಗೆ ತಲುಪಿದ್ದು, ಮುಂಬೈ ಮತ್ತು ಕೋಲ್ಕತ್ತಾದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಬೆಲೆಯು ₹97 ರಿಂದ ₹98ಕ್ಕೆ ಏರಿದೆ. ಚೆನ್ನೈನಲ್ಲಿ ಈ ಬೆಲೆ ₹109ಕ್ಕೆ ತಲುಪಿದ್ದು, ಉಳಿದ ನಗರಗಳಿಗಿಂತ ಹೆಚ್ಚು ಮಟ್ಟದಲ್ಲಿದೆ.

ಚಿನ್ನ ದರ ಏರಿಳಿತದಲ್ಲಿ ಜಾಗತಿಕ ಪ್ರಭಾವಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ?:

ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕದ ಬಡ್ಡಿದರ (American Intrest rate) ನಿರ್ಣಯ, ಮಧ್ಯಪ್ರಾಚ್ಯ ಮತ್ತು ಯುರೋಪ್ ದೇಶಗಳಲ್ಲಿ ಉಂಟಾದ ಭೌಗೋಳಿಕ ರಾಜಕೀಯ ತೀವ್ರತೆ, ಬ್ಯಾಂಕುಗಳ ಬಂಡವಾಳ ನೀತಿ ಈ ರೀತಿಯ ಎಲ್ಲಾ ಕಾರಣಗಳು ಚಿನ್ನ ಮತ್ತು ಬೆಳ್ಳಿ ಬೆಲೆಯ ಮೇಲ್ನೋಟದ ಕಾರಣಗಳಾಗಿವೆ. ಕೆಲವೆಡೆ ಚಿನ್ನದ ಬೆಲೆ ಇಳಿಕೆಯಾದರೂ, ಭಾರತದಲ್ಲಿ ಆಭರಣಗಳ ಬೇಡಿಕೆ ಹಾಗೂ ರೂಪಾಯಿ ಮೌಲ್ಯದ (Rupees value) ಕುಸಿತದಿಂದಾಗಿ ಬೆಲೆ ಏರಿಕೆಯಾಗಿದೆ.

ಹೂಡಿಕೆದಾರರಿಗೂ, ಗ್ರಾಹಕರಿಗೂ ಎಚ್ಚರಿಕೆ ಕಾಲ:

ಇಂತಹ ಸಂದರ್ಭದಲ್ಲಿ ಚಿನ್ನ ಅಥವಾ ಬೆಳ್ಳಿಯಲ್ಲಿ ಹೂಡಿಕೆ ಮಾಡಲು ಯೋಜಿಸುವವರು ಮಾರುಕಟ್ಟೆಯ ನಿತ್ಯದ ಬೆಲೆಗಳನ್ನು (everyday Market rates) ಪರಿಶೀಲಿಸುವುದು ಅತ್ಯಗತ್ಯ. ಆಭರಣ ಖರೀದಿಗೆ ಮುಂದಾಗುವವರು ಸ್ಥಳೀಯ ಚಿನ್ನದ ಅಂಗಡಿಯಿಂದ ಸ್ಪಷ್ಟ ಮಾಹಿತಿ ಪಡೆಯುವುದು ಉತ್ತಮ.

ಇತ್ತೀಚಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ನಿಖರವಾಗಿ ತಿಳಿಯಲು ಆನ್‌ಲೈನ್ ಬೂಲಿಯನ್ ಟ್ರ್ಯಾಕರ್‌ಗಳು(Online Bullion tracker), ಅಧಿಕೃತ ಜ್ಯುವೆಲ್ಲರಿ ವೆಬ್‌ಸೈಟ್‌ಗಳು ಅಥವಾ ನಂಬಲರ್ಹವಾದ ಚಿನ್ನದ ಅಂಗಡಿಗಳ ಸಂಪರ್ಕ ಮಾಡುವುದು ಒಳ್ಳೆಯದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!