ಜಿಯೋಪಾಲಿಟಿಕಲ್ ಉದ್ವಿಗ್ನತೆ ನಡುವೆಯೂ ಚಿನ್ನದ ದರ ಗಗನಕ್ಕೇರಿ – ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನ ರೂ.9,868
ಚಿನ್ನ(Gold), ಭಾರತೀಯ ಆರ್ಥಿಕತೆಯಲ್ಲಿಯೇ ಅಲ್ಲದೆ, ಸಂಸ್ಕೃತಿಯಲ್ಲಿಯೂ ಅಪಾರ ಪ್ರಾಧಾನ್ಯತೆ ಹೊಂದಿರುವ ಲೋಹ. ಇದನ್ನು ಆಭರಣಗಳಾಗಿ ಮಾತ್ರವಲ್ಲದೆ, ಭದ್ರ ಹೂಡಿಕೆಯ ರೂಪದಲ್ಲಿಯೂ ಪರಿಗಣಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ (International level) ರಾಜಕೀಯ ತಲ್ಲಣ, ಆರ್ಥಿಕ ಅನಿಶ್ಚಿತತೆ ಹಾಗೂ ಜಿಯೋಪಾಲಿಟಿಕಲ್ ಘರ್ಷಣೆಗಳಿಂದ ಚಿನ್ನದ ಬೆಲೆಗಳಲ್ಲಿ ತೀವ್ರ ಏರಿಳಿತ ಕಂಡುಬರುತ್ತಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 11, 2025: Gold Price Today
ಹೌದು, ಜಿಯೋಪಾಲಿಟಿಕಲ್ (Jiopolitical) ಉದ್ವಿಗ್ನತೆ, ರೂಪಾಯಿಯ ಮೌಲ್ಯ ಕುಸಿತ, ಅಂತಾರಾಷ್ಟ್ರೀಯ ಮಾರುಕಟ್ಟೆಯ ತೀವ್ರ ಒತ್ತಡ ಈ ಎಲ್ಲವು ಭಾರತದಲ್ಲಿ ಚಿನ್ನದ ದರವನ್ನು ಗಗನಕ್ಕೇರಿಸಿವೆ. ನವೆಂಬರ್ ತಿಂಗಳಲ್ಲಿ ಆರಂಭವಾದ ಚಿನ್ನದ ಬೆಲೆ (Gold rate) ಏರಿಕೆ ಪ್ರಕ್ರಿಯೆ, ಮೇ 10, 2025ರ ಹೊತ್ತಿಗೆ ತೀವ್ರವಾಗಿ ಹೆಚ್ಚಳಗೊಂಡಿದೆ. ಒಂದೇ ದಿನ 24 ಕ್ಯಾರಟ್ ಚಿನ್ನದ ಬೆಲೆ ರೂ.3,300 ಹೆಚ್ಚಳವಾಗಿ 100 ಗ್ರಾಂಗೆ ₹9.86 ಲಕ್ಷಕ್ಕೆ ತಲುಪಿದ ಚಿನ್ನದ ದರ ಹೂಡಿಕೆದಾರರನ್ನು ಗೊಂದಲಕ್ಕೀಡುಮಾಡಿದೆ. ಹಾಗಿದ್ದರೆ, ಮೇ 11, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 045 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 868 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7, 401 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 99,000 ರೂ. ನಷ್ಟಿದ್ದು.
ಚಿನ್ನದ ದರ ಇತ್ತೀಚೆಗೆ ದಿನದಿಂದ ದಿನಕ್ಕೆ ಏರುತ್ತಿರುವುದು ಚಿನ್ನಪ್ರಿಯರು ಹಾಗೂ ಹೂಡಿಕೆದಾರರಲ್ಲಿ (Investers) ಆತಂಕ ಹುಟ್ಟಿಸಿದೆ. ಮೇ 10 ರಂದು 24 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಂಗೆ ₹9,868 ಆಗಿದ್ದು, ಒಟ್ಟಾರೆಯಾಗಿ ₹33 ಹೆಚ್ಚಳವಾಗಿದೆ. ಇದರೊಂದಿಗೆ 10 ಗ್ರಾಂಗೆ ₹98,680 ಮತ್ತು 100 ಗ್ರಾಂಗೆ ₹9,86,800 ಕ್ಕೆ ತಲುಪಿದೆ.
ಮೇ 10, 2025 ರಂದು 22 ಕ್ಯಾರಟ್ ಚಿನ್ನದ ಬೆಲೆ ಹೇಗಿತ್ತು?:
1 ಗ್ರಾಂ: ₹9,045
10 ಗ್ರಾಂ: ₹90,450
100 ಗ್ರಾಂ: ₹9,04,500
ಒಟ್ಟಾರೆಯಾಗಿ 100 ಗ್ರಾಂಗೆ ₹3,000 ಹೆಚ್ಚಳವಾಗಿದೆ.
18 ಕ್ಯಾರಟ್ ಚಿನ್ನದ ಬೆಲೆ:
1 ಗ್ರಾಂ: ₹7,401
10 ಗ್ರಾಂ: ₹74,010
100 ಗ್ರಾಂ: ₹7,40,100
ಒಟ್ಟಾರೆಯಾಗಿ 100 ಗ್ರಾಂಗೆ ₹2,500 ಹೆಚ್ಚಳ
ವಿಭಿನ್ನ ನಗರಗಳಲ್ಲಿ ನಿನ್ನೆ 1 ಗ್ರಾಂ ಚಿನ್ನದ ಬೆಲೆ ಹೇಗಿತ್ತು?:
ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ, ಪುಣೆ, ಮುಂಬೈ, ಕೇರಳ:
22 ಕ್ಯಾರಟ್ – ₹9,045
24 ಕ್ಯಾರ್ಟ್ – ₹9,868
18 ಕ್ಯಾರಟ್ – ₹7,401
ದೆಹಲಿ:
22 ಕ್ಯಾರಟ್ – ₹9,060
24 ಕ್ಯಾರಟ್ – ₹9,883
18 ಕ್ಯಾರ್ಟ್ – ₹7,413
ಬರೋಡಾ ಮತ್ತು ಅಹಮದಾಬಾದ್:
22 ಕ್ಯಾರಟ್ – ₹9,050
24 ಕ್ಯಾರ್ಟ್ – ₹9,873
18 ಕ್ಯಾರ್ಟ್ – ₹7,405
ಬೆಳ್ಳಿಯ ಬೆಲೆಯ (Silver rate) ಸ್ಥಿತಿ ಯಾವರೀತಿಯಿದೆ?:
ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆಯೇ ಬೆಳ್ಳಿಯಲ್ಲಿ ಸ್ವಲ್ಪ ಇಳಿಕೆಯನ್ನು ನಾವು ಕಾಣಬಹುದು.
1 ಗ್ರಾಂ ಬೆಳ್ಳಿ: ₹98.90
10 ಗ್ರಾಂ: ₹989
100 ಗ್ರಾಂ: ₹9,890
1 ಕೆಜಿ: ₹98,900
ಒಟ್ಟಾರೆಯಾಗಿ 1 ಕೆಜಿಗೆ ₹100 ಇಳಿಕೆ
ಸ್ಪಾಟ್ ಗೋಲ್ಡ್ (Spot Gold) ವರದಿ:
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್ಗೆ $3,277.67 ಕ್ಕೆ ಇಳಿಕೆಯಾಗಿದೆ. ಯುಎಸ್ ಗೋಲ್ಡ್ ಫ್ಯೂಚರ್ಸ್ ದರ ಕೂಡ ಪ್ರತಿ ಔನ್ಸ್ಗೆ $3,282.80 ಆಗಿದೆ.
ಚಿನ್ನದ ಬೆಲೆ ಏರಿಕೆ-ಇಳಿಕೆಗೆ ಕಾರಣಗಳು (Causes) ಏನು?:
1. ಜಿಯೋಪಾಲಿಟಿಕಲ್ ಅನಿಶ್ಚಿತತೆಗಳು: ಭಾರತ-ಪಾಕಿಸ್ತಾನ ನಡುವಿನ ಸಂಘರ್ಷದಿಂದಾಗಿ ಹೂಡಿಕೆದಾರರು ಚಿನ್ನದತ್ತ ಮುಖ ಮಾಡಿದ್ದಾರೆ.
2. ರೂಪಾಯಿಯ ಮೌಲ್ಯ (Rupees value) ಕುಸಿತ: ಕರೆನ್ಸಿ ಮೌಲ್ಯದ ಕುಸಿತ ಚಿನ್ನದ ದರವನ್ನು ಪ್ರಭಾವಿಸುತ್ತಿದೆ.
3. ಅಮೆರಿಕದ ಫೆಡ್ ಮತ್ತು RBI ನೀತಿಗಳು: ಬಡ್ಡಿದರಗಳ ಬದಲಾವಣೆಗಳು ಹೂಡಿಕೆದಾರರ ಮನೋಭಾವದಲ್ಲಿ ಬದಲಾವಣೆ ತರುತ್ತವೆ.
4. ಅಂತರರಾಷ್ಟ್ರೀಯ ಬೇಡಿಕೆ: ಚಿನ್ನದ ಉತ್ಪಾದನೆಯ ಹ್ರಾಸ ಅಥವಾ ಬೇಡಿಕೆಯ ಏರಿಕೆ ಬೆಲೆ ಮೇಲೆ ಪ್ರಭಾವ ಬೀರುತ್ತದೆ.
5. ಆರ್ಥಿಕ ಅಸ್ಥಿರತೆ (Economic instability): ಮಾರುಕಟ್ಟೆಯ ತಾಣಮೌಲ್ಯಗಳು, ಇನ್ಫ್ಲೇಶನ್ ಹಾಗೂ ಹೂಡಿಕೆದಾರರ ಭಯಗಳು ಬೆಲೆ ಏರಿಕೆಗೆ ಕಾರಣ.
ಈಗಿನ ಚಿನ್ನದ ಬೆಲೆಗಳು ಹೂಡಿಕೆದಾರರಲ್ಲಿ ಹಲವು ಬಗೆಯ ಭಾವನೆಗಳನ್ನು ಹುಟ್ಟಿಸುತ್ತಿವೆ. ಈಗಲೇ ಹೂಡಿಕೆ ಮಾಡಬೇಕೆಂಬ ಆತುರ ಮತ್ತು ಹೆಚ್ಚಿನ ಬೆಲೆಗೆ ಖರೀದಿಸಿ ನಷ್ಟಪಡುವ ಆತಂಕ ಹುಟ್ಟಿಸಿದೆ. ಚಿನ್ನದಲ್ಲಿ ಹೂಡಿಕೆ (Gold investment) ಮಾಡುವ ಮುನ್ನ ಆರ್ಥಿಕ ಸಲಹೆಗಾರರ ಮಾರ್ಗದರ್ಶನ ಪಡೆಯುವುದು ಸೂಕ್ತ. ಆಂತರಾಷ್ಟ್ರೀಯ ಸ್ಥಿತಿಗತಿಯ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಚಿನ್ನದ ದರ ಇನ್ನೂ ಏರಬಹುದೆಂಬ ನಿರೀಕ್ಷೆಯೂ ಇದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.