ಭಾರತ-ಪಾಕಿಸ್ತಾನ ಉದ್ವಿಗ್ನತೆ ನಡುವೆ ಚಿನ್ನದ ಬೆಲೆಯಲ್ಲಿ ಅಸಾಧಾರಣ ಇಳಿಕೆ: ಗ್ರಾಹಕರಿಗೆ ಖರೀದಿಗೆ ಅವಕಾಶ
ಭಾರತ ಮತ್ತು ಪಾಕಿಸ್ತಾನದ (India and Pakistan) ನಡುವಿನ ತೀವ್ರ ಮಿಲಿಟರಿ ಉದ್ವಿಗ್ನತೆ ಮತ್ತು ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆಯ ಕ್ಷಿಪಣಿ ದಾಳಿ ಬೆನ್ನಲ್ಲೇ ಬಂಗಾರದ ಬೆಲೆಯಲ್ಲಿ ಅಸಾಧಾರಣವಾದ ಇಳಿಕೆ ಕಂಡುಬಂದಿದೆ. ಸಾಮಾನ್ಯವಾಗಿ ಭೌಗೋಳಿಕ ಮತ್ತು ರಾಜಕೀಯ ಉದ್ವಿಗ್ನತೆಗಳು ಉಲ್ಬಣಗೊಂಡಾಗ ಚಿನ್ನದಂತೆ ಸುರಕ್ಷಿತ ಬಂಡವಾಳಗಳಲ್ಲಿ ಬಂಡವಾಳ ಹೂಡಿಕೆಯಾಗುತ್ತದೆ. ಈ ಕಾರಣದಿಂದಾಗಿ ಚಿನ್ನದ ಬೆಲೆ ಹೆಚ್ಚುವುದು ಸಾದಾರಣ. ಆದರೆ ಈ ಬಾರಿ ನಡೆಯುತ್ತಿರುವ ಬೆಳವಣಿಗೆಗಳು ತದ್ವಿರುದ್ಧವಾಗಿದ್ದು, ಚಿನ್ನದ ಬೆಲೆ ಕುಸಿಯುತ್ತಿದೆ ಮತ್ತು ಷೇರು ಮಾರುಕಟ್ಟೆ ಏರಿಕೆಯಾಗುತ್ತಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 8, 2025: Gold Price Today
ಚಿನ್ನದ ಬೆಲೆಯಲ್ಲಿ ಬದಲಾವಣೆಗಳು ಸರ್ವೇಸಾಮಾನ್ಯ, ಈ ನಿಟ್ಟಿನಲ್ಲಿ ನೋಡುವುದಾದರೆ ಸತತವಾಗಿ ಇಳಿಕೆಯನ್ನು ಕಾಣುತ್ತಿದ್ದ ಚಿನ್ನದ ದರ (Gold rate) ಮೂರ್ನಾಲ್ಕು ದಿನಗಳಿಂದ ಏರಿಕೆಯತ್ತ ಮುಖ ಮಾಡಿತ್ತು. ಆದರೆ ನಿನ್ನೆ ಬೆಳಗ್ಗೆ ಏರಿಕೆಯನ್ನು ಕಂಡಂತಹ ಚಿನ್ನದ ದರ ಸಂಜೆಯೊಳಗೆ ಇಳಿಕೆಯತ್ತ ಮುಖ ಮಾಡಿದೆ ಇನ್ನು ಈ ಇಳಿಕೆಯಿಂದ ಗ್ರಾಹಕರು ಕೊಂಚ ಸಂತೋಷ ಕಾಣುತ್ತಿದ್ದು ಚಿನ್ನ ಖರೀದಿಸಲು ಮುಂದಾಗುತ್ತಿದ್ದಾರೆ. ಹಾಗಿದ್ದರೆ, ಮೇ 8, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 076 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,901 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,426 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 99,100 ರೂ. ನಷ್ಟಿದ್ದು.
ಹೌದು, ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ನಡೆದ ದಾಳಿಯ ಬಳಿಕ ಭಾರತದಲ್ಲಿನ ಷೇರು ಮಾರುಕಟ್ಟೆಯಲ್ಲಿ ಉತ್ಸಾಹದ ಅಲೆ ಕಂಡುಬಂದಿದೆ. Multi Commodity Exchange (MCX) ನಲ್ಲಿ ಚಿನ್ನದ ಫ್ಯೂಚರ್‌ಗಳು ಶೇ.1ರಷ್ಟು ಇಳಿಕೆಯಿಂದ ₹96,625 ಕ್ಕೆ ವ್ಯಾಪಾರವಾಗುತ್ತಿವೆ. ಈ ಮಧ್ಯೆ, ಷೇರು ಮಾರುಕಟ್ಟೆ ಪ್ರಾರಂಭದಲ್ಲಿ ಕುಸಿದರೂ ಕೂಡ ಶೀಘ್ರದಲ್ಲೇ ಪ್ರಬಲ ಏರಿಕೆಯನ್ನು ಕಂಡಿದೆ.
ಇತ್ತೀಚೆಗೆ 10 ಗ್ರಾಂ ಚಿನ್ನದ ಬೆಲೆ ₹1 ಲಕ್ಷವನ್ನು ತಲುಪಿದ ನಂತರ, ಮಾರುಕಟ್ಟೆಯ ಮೇಲೆ ನಿರಂತರ ಒತ್ತಡ ತಲೆದೋರಿದೆ. ಇದರಿಂದಾಗಿ ಚಿನ್ನದ ದರಗಳಲ್ಲಿ ಕ್ರಮೇಣ ಇಳಿಕೆ (Decreased) ಕಂಡುಬರುತ್ತಿದೆ. ಚರಿತ್ರಾತ್ಮಕವಾಗಿ ನೋಡಿದರೆ, 1965, 1971 ಮತ್ತು 1999ರ ಕಾರ್ಗಿಲ್ ಯುದ್ಧಗಳ ಸಮಯದಲ್ಲಿಯೂ ಚಿನ್ನದ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಂಡುಬಂದಿರಲಿಲ್ಲ ಎಂಬುದು ಗಮನಾರ್ಹ.
ಜಾಗತಿಕ ಅಂಶಗಳ (Global elements) ಪ್ರಭಾವ ಹೆಚ್ಚು:
“ಭಾರತ-ಪಾಕಿಸ್ತಾನ ನಡುವಿನ ಸ್ಥಳೀಯ ಗಡಿಭದ್ರತಾ ಸಮಸ್ಯೆಗಳಿಗಿಂತ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳು ಅಥವಾ ಅಮೆರಿಕ-ಚೀನಾ (America – China) ನಡುವಿನ ವ್ಯಾಪಾರ ಸಂಘರ್ಷಗಳು ಜಾಗತಿಕ ಚಿನ್ನದ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ,” ಎಂದು ಯುನಿವೆಸ್ಟ್‌ನ ಅಸೋಸಿಯೇಟ್ ಡೈರೆಕ್ಟರ್ (ರಿಸರ್ಚ್) ತರುಣ್ ಸತ್ಸಂಗಿ ಹೇಳಿದರು. ಅವರ ಪ್ರಕಾರ, ಜಾಗತಿಕ ಆರ್ಥಿಕತೆ ನಿಧಾನಗತಿಯಲ್ಲಿರುವುದು ಮತ್ತು ವ್ಯಾಪಾರ ಸಂಘರ್ಷಗಳು ಬಂಗಾರದ ಮೇಲಿನ ಬೇಡಿಕೆಯನ್ನು ಹೆಚ್ಚಿಸುತ್ತವೆ.
ಮೇ 7 ರಂದು ವಿವಿಧ ನಗರಗಳಲ್ಲಿ ಚಿನ್ನದ ದರಗಳು (Gold rates) ಹೀಗಿವೆ?:
ಬೆಂಗಳೂರು, ಚೆನ್ನೈ, ಮುಂಬೈ ಮತ್ತು ಕೊಲ್ಕತ್ತಾದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,075 ಇದೆ. ದೆಹಲಿಯಲ್ಲಿ ಇದು ₹9,090 ರೂ ಗೆ ವ್ಯಾಪಾರವಾಗುತ್ತಿದೆ.
ಇದೀಗ ವಿವಿಧ ಕ್ಯಾರಟ್‌ಗಳಲ್ಲಿ ಬಂಗಾರದ ದರಗಳನ್ನು ನೋಡೋಣ:
18 ಕ್ಯಾರಟ್ (ಆಭರಣ ಚಿನ್ನ):
1GM – ₹7,425
8GM – ₹59,400
10GM – ₹74,250
100GM – ₹7,42,500
22 ಕ್ಯಾರಟ್ (ಆಭರಣ ಚಿನ್ನ):
1GM – ₹9,075
8GM – ₹72,600
10GM – ₹90,750
100GM – ₹9,07,500
24 ಕ್ಯಾರಟ್ (ಅಪರಂಜಿ):
1GM – ₹9,846
8GM – ₹79,200
10GM – ₹99,000
100GM – ₹9,90,000
ಭಾರತ-ಪಾಕಿಸ್ತಾನದ ನಡುವಿನ ರಾಜಕೀಯ ಗದ್ದಲ ಮತ್ತು ದಾಳಿಗಳ ನಡುವೆಯೂ ಈ ಬಾರಿ ಚಿನ್ನದ ಮಾರುಕಟ್ಟೆಯಲ್ಲಿ (Gold market) ನಿರೀಕ್ಷೆಯ ವಿರುದ್ಧ ಇಳಿಕೆಯಾಗುತ್ತಿರುವುದು ವಿಶೇಷವಾಗಿದೆ. ಬಂಗಾರದ ದರಗಳು ಇನ್ನು ಮುಂದೆ ಜಾಗತಿಕ ಅಂಶಗಳಿಂದಲೇ (Global elements) ಪ್ರಭಾವಿತವಾಗಲಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.