ಮೇ 4, 2025: ಅಕ್ಷಯ ತೃತೀಯದ ನಂತರ ಚಿನ್ನದ ಬೆಲೆಯಲ್ಲಿ ಇಳಿಕೆ. ಚಿನ್ನ ಖರೀದಿಗೆ ಇದು ಸೂಕ್ತ ಸಮಯವೇ?
ಚಿನ್ನವು ಭಾರತೀಯ ಸಂಸ್ಕೃತಿಯಲ್ಲಿ ಕೇವಲ ಆಭರಣವಷ್ಟೆ ಅಲ್ಲ, ಅದು ಭದ್ರತೆ, ಬಂಡವಾಳ ಹೂಡಿಕೆ ಮತ್ತು ಸಾಮಾಜಿಕ ಗೌರವದ ಪ್ರತೀಕವಾಗಿಯೂ ಪರಿಗಣಿಸಲಾಗುತ್ತದೆ. ವಿಶೇಷವಾಗಿ ಉತ್ಸವಗಳು, ಮದುವೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಚಿನ್ನದ ಖರೀದಿಗೆ ಭಾರೀ ಉತ್ಸಾಹವಿರುತ್ತದೆ. ಇತ್ತೀಚೆಗೆ ಅಕ್ಷಯ ತೃತೀಯದ ನಂತರದ ದಿನಗಳಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ಹೊಸ ಬೆಳವಣಿಗೆ ಕಂಡುಬಂದಿದೆ. ಹೌದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿರುವುದು ಚಿನ್ನದ ಖರೀದಿಗೆ ಆಸಕ್ತರಾಗಿರುವ ಗ್ರಾಹಕರಿಗೆ ಶುಭಸೂಚನೆ ಎನಿಸಿದೆ.ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 4, 2025: Gold Price Today
ಅಕ್ಷಯ ತೃತೀಯದ ನಂತರ ಚಿನ್ನದ ದರದಲ್ಲಿ ಸತತವಾಗಿ ಇಳಿಕೆಯಾಗುತ್ತಿರುವುದು ಗ್ರಾಹಕರ ಗಮನ ಸೆಳೆದಿದೆ. ದೀರ್ಘ ಕಾಲದ ಬಳಿಕ ಕಂಡುಬಂದ ಈ ಇಳಿಕೆ ಚಿನ್ನ ಖರೀದಿಗೆ ಉತ್ಸುಕರಾಗಿರುವ ಗ್ರಾಹಕರಲ್ಲಿ ಸಂತೋಷ ಉಂಟುಮಾಡಿದರೂ, ಇದು ತಾತ್ಕಾಲಿಕವೇ ಅಥವಾ ಮುಂದಿನ ದಿನಗಳಲ್ಲಿ ದರಗಳು ಮತ್ತೆ ಏರಿಕೆಯಾಗುತ್ತವೆಯೋ ಎಂಬ ಅನುಮಾನವೂ ಅವರಲ್ಲಿ ಮೂಡಿದೆ. ಮಾರುಕಟ್ಟೆಯ ಅನಿಶ್ಚಿತತೆಯ ನಡುವೆ, ಚಿನ್ನದ ಹೂಡಿಕೆಗೆ ಮುನ್ನ ಗಮನ ಹರಿಸುವುದು ಉತ್ತಮ. ಹಾಗಿದ್ದರೆ, ಮೇ 4, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 755 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,551 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,164 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 98,000 ರೂ. ನಷ್ಟಿದ್ದು. ನಿನ್ನಗೆ ಹೋಲಿಸಿದರೆ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
ಚಿನ್ನದ ಬೆಲೆಯಲ್ಲಿ ಇಳಿಕೆ :
ಅಕ್ಷಯ ತೃತೀಯದಂದು ವ್ಯಾಪಕ ಚಿನ್ನದ ಖರೀದಿ ನಡೆದ ನಂತರ, ಮಾರುಕಟ್ಟೆಯಲ್ಲಿನ ಒತ್ತಡ ತಗ್ಗಿದ ಹಿನ್ನೆಲೆಯಲ್ಲಿ ಇಂದಿನ ಚಿನ್ನದ ದರದಲ್ಲಿ ಸ್ವಲ್ಪ ಇಳಿಕೆಯಾಗಿರುವುದು ಗಮನಾರ್ಹ. 99.9% ಪರಿಶುದ್ಧ ಚಿನ್ನದ ದರ ಯಥಾಸ್ಥಿತಿಯಲ್ಲಿದ್ದರೆ, 22 ಕ್ಯಾರೆಟ್, 24 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನದ ದರದಲ್ಲಿ ರೂ.1ರಷ್ಟು ಇಳಿಕೆಯಾಗಿರುವುದು ಕಂಡುಬಂದಿದೆ.
ಮೇ 3,2025 ರಂದು ಪ್ರತಿ ಗ್ರಾಂ ಚಿನ್ನದ ದರಗಳು ಯಾವರೀತಿಯಿವೆ?:
24 ಕ್ಯಾರೆಟ್ ಚಿನ್ನ: ₹9,572 (1 ರೂ. ಇಳಿಕೆ)
22 ಕ್ಯಾರೆಟ್ ಚಿನ್ನ: ₹8,774 (1 ರೂ. ಇಳಿಕೆ)
18 ಕ್ಯಾರೆಟ್ ಚಿನ್ನ: ₹7,179 (1 ರೂ. ಇಳಿಕೆ)
ಈ ಇಳಿಕೆಯಿಂದಾಗಿ ಮದುವೆ ಸಮಾರಂಭಗಳು, ಅಥವಾ ಉತ್ಸವಗಳ ಹಿನ್ನೆಲೆಯಲ್ಲಿ ಚಿನ್ನ ಖರೀದಿಸಲು ಉತ್ಸುಕರಾಗಿರುವ ಗ್ರಾಹಕರಿಗೆ ಇದು ಉತ್ತಮ ಅವಕಾಶವಾಗಿದೆ.
ಚಿನ್ನದ ದರದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳು ಯಾವುವು?:
1. ಬೇಡಿಕೆಯ ಏರಿಕೆ: ಮದುವೆ ಋತು ಮತ್ತು ಹಬ್ಬದ ಕಾಲದಲ್ಲಿ ಚಿನ್ನದ ಬೇಡಿಕೆ ಸಹಜವಾಗಿ ಹೆಚ್ಚಾಗುತ್ತದೆ.
2. ಅಂತರರಾಷ್ಟ್ರೀಯ ಮಾರುಕಟ್ಟೆ ಬೆಳವಣಿಗೆಗಳು: ಜಾಗತಿಕ ದರದ ಏರಿಳಿತಗಳು ಸ್ಥಳೀಯ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತವೆ.
3. ಆರ್ಥಿಕ ಸ್ಥಿರತೆ ಮತ್ತು ಹೂಡಿಕೆ ಭದ್ರತೆ: ಆರ್ಥಿಕ ಅನಿಶ್ಚಿತತೆ ಅಥವಾ ನಷ್ಟ ಭೀತಿಯ ಸಂದರ್ಭದಲ್ಲಿ ಚಿನ್ನವನ್ನು ಭದ್ರ ಹೂಡಿಕೆ ಯಾಗಿ ಪರಿಗಣಿಸಲಾಗುತ್ತದೆ.
4. ದೈನಂದಿನ ದರದ ಮೇಲ್ವಿಚಾರಣೆ: ಚಿನ್ನದ ದರ ದಿನದಿಂದ ದಿನಕ್ಕೆ ಬದಲಾಗುವ ಸಾಧ್ಯತೆ ಇರುವುದರಿಂದ ಖರೀದಿಗೆ ಮೊದಲು ದರ ಪರಿಶೀಲನೆಯು ಅನಿವಾರ್ಯ.
ಚಿನ್ನ ಖರೀದಿಸುವ ಮುನ್ನ ಈ ಸಲಹೆಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ:
BIS ಪ್ರಮಾಣೀಕೃತ ಅಂಗಡಿಗಳಿಂದ ಖರೀದಿ ಮಾಡುವುದು ಸುರಕ್ಷಿತವಾಗಿದೆ.
ಕ್ಯಾರೆಟ್ ಆಯ್ಕೆ: 24 ಕ್ಯಾರೆಟ್ ಚಿನ್ನ ಹೆಚ್ಚು ಶುದ್ಧವಾದರೆ, ಆಭರಣಗಳಿಗಾಗಿ ಸಾಮಾನ್ಯವಾಗಿ 22 ಅಥವಾ 18 ಕ್ಯಾರೆಟ್ ಶ್ರೇಣಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಇಂದಿನ ಚಿನ್ನದ ಬೆಲೆಯಲ್ಲಿ ಕಂಡುಬಂದಿರುವ ಇಳಿಕೆ ಚಿನ್ನ ಪ್ರಿಯರಿಗೆ ಸಂತೋಷದ ಸುದ್ದಿ. ಹೂಡಿಕೆಯ ದೃಷ್ಟಿಯಿಂದಲೂ, ಸಂಭ್ರಮದ ಸಂದರ್ಭಗಳಲ್ಲಿ ತೊಡಬಹುದಾದ ಆಭರಣಗಳ ಖರೀದಿಯಲ್ಲಿಯೂ ಈ ಸಮಯವು ಅನುಕೂಲಕರವಾಗಿದೆ. ಆದ್ದರಿಂದ, ಇಂದಿನ ದರವನ್ನು ಪರಿಶೀಲಿಸಿ, ಅಗತ್ಯಮಾದಷ್ಟು ಪ್ರಾಮಾಣಿಕ ಮತ್ತು ಖ್ಯಾತಿ ಪಡೆದ ಅಂಗಡಿಯಿಂದ ಚಿನ್ನವನ್ನು ಖರೀದಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.