ಮೇ 1, 2025: ಬೆಂಗಳೂರು ಸೇರಿದಂತೆ ಹಲವಾರು ನಗರಗಳಲ್ಲಿ ಚಿನ್ನ-ಬೆಳ್ಳಿ ದರ ಕುಸಿತ
ನಿನ್ನೆ ಅಕ್ಷಯ ತೃತೀಯದ (Akshaya Thrithiya) ಪವಿತ್ರ ದಿನ. ಈ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಯನ್ನು ಶ್ರೇಯಸ್ಕರವೆಂದು ನಂಬುವ ಭಾರತೀಯ ಸಂಸ್ಕೃತಿಯು ಈ ಹಬ್ಬಕ್ಕೆ ವಿಶೇಷ ಮಹತ್ವ (Special importance) ನೀಡುತ್ತದೆ. ವೈದಿಕ ಪರಂಪರೆ ಪ್ರಕಾರ, ಈ ದಿನ ಚಿನ್ನ ಅಥವಾ ಬೆಳ್ಳಿ ಖರೀದಿಸಿದರೆ ಅದರಿಂದ ಶ್ರೇಷ್ಠ ಫಲ ಲಭ್ಯವಗುತ್ತದೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ, ದೇಶದಾದ್ಯಂತ ಗ್ರಾಹಕರು ಚಿನ್ನದ ಅಂಗಡಿಗಳತ್ತ ಮುಖಮಾಡಿದ್ದರು. ಆದರೆ ಈ ಬಾರಿಯ ಅಕ್ಷಯ ತೃತೀಯ ಏಪ್ರಿಲ್ 30, 2025 ಅಂದರೆ ನಿನ್ನೆ ಗ್ರಾಹಕರಿಗೆ (Buyer’s) ಒಂದಷ್ಟು ಶುಭ ಸುದ್ದಿ ಸಿಕ್ಕಿದೆ. ಅದು ಏನೆಂದರೆ, ಚಿನ್ನದ ಬೆಲೆಯಲ್ಲಿ ಕೆಲವೊಂದು ನಗರಗಳಲ್ಲಿ ಇಳಿಕೆ ಕಂಡುಬಂದಿದೆ, ಇದು ಖರೀದಿಕಾರರಿಗೆ ಉತ್ಸಾಹದ ಸಂಗತಿಯಾಗಿದ್ದು, ಮುಂಗಡ ಬುಕ್ಕಿಂಗ್ ಸಹ ಹೆಚ್ಚಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 1, 2025: Gold Price Today
ಕಳೆದ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಏರಿಕೆಯನ್ನು ಕಂಡಂತಹ ಚಿನ್ನದ ದರ ಏಪ್ರಿಲ್ (April) ಕೊನೆಯ ಹಂತದಲ್ಲಿ ಇಳಿಕೆಯನ್ನು ಕಂಡಿದೆ ಅಂದರೆ ನಿನ್ನೆ ಅಕ್ಷಯ ತೃತೀಯದ ದಿನದಂದು ಚಿನ್ನದ ದರ ಇಳಿಕೆಯನ್ನು ಕಂಡು ಗ್ರಾಹಕರು ಚಿನ್ನದ ಖರೀದಿಸುವಂತೆ ಮಾಡಿದೆ. ಈ ತಿಂಗಳ ಮೊದಲ ದಿನದಿಂದಲೇ ಚಿನ್ನ ಕೊಂಚ ಇಳಿಕೆಯನ್ನು ಕಾಣುತ್ತಿದ್ದು ಮುಂದೆ ಹೇಗೆ ಎನ್ನುವ ಪ್ರಶ್ನೆ ಗ್ರಾಹಕರಲ್ಲಿ ಕಾಡುತ್ತಿದೆ. ಹಾಗಿದ್ದರೆ, ಮೇ 1, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 974 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,790 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,343 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,00,300 ರೂ. ನಷ್ಟಿದ್ದು.
ಚಿನ್ನದ ಬೆಲೆಯಲ್ಲಿ ಇಳಿಕೆ ಗ್ರಾಹಕರಿಗೆ ಶುಭ ಸುದ್ದಿ:
ಕಳೆದ ಕೆಲವು ವಾರಗಳಿಂದ ಚಿನ್ನದ ದರವು (Gold rate) ಐತಿಹಾಸಿಕ ಮಟ್ಟಕ್ಕೆ ಏರಿಕೆಯಾಗಿದ್ದು, ಒಂದು ಲಕ್ಷ ರೂಪಾಯಿಗೆ ಹತ್ತುವ ಹಂತದಲ್ಲಿತ್ತು. ಆದರೆ ಇದೀಗ ದರದಲ್ಲಿ ನಿರಂತರ ಇಳಿಕೆ (Continues decreased) ಕಾಣಿಸುತ್ತಿದ್ದು, ಇದು ಗ್ರಾಹಕರಲ್ಲಿ ಖರೀದಿಯ ಪ್ರೇರಣೆಯನ್ನು ಹೆಚ್ಚಿಸಿದೆ. ಈ ದಿನ 22 ಕ್ಯಾರಟ್ ಚಿನ್ನದ ದರ ಪ್ರತಿ 10 ಗ್ರಾಂಗೆ ₹50 ಇಳಿಕೆ ಕಂಡುಬಂದಿದ್ದು, 100 ಗ್ರಾಂಗೆ ₹500 ರಷ್ಟು ಇಳಿಕೆ ಆಗಿದೆ.
ಇದಾದ ನಂತರವೂ 24 ಕ್ಯಾರಟ್ ಚಿನ್ನದ ದರದಲ್ಲಿ ₹600 ರಷ್ಟು ಏರಿಕೆಯಾದರೂ, 10 ಗ್ರಾಂ ದರ ₹60 ರಷ್ಟು ಇಳಿಕೆಯಾಗಿದೆ. ಕಳೆದ ಮೂರು ದಿನಗಳಿಂದ ಚಿನ್ನದ ದರದಲ್ಲಿ ಏರಿಳಿತಗಳು ನಡೆಯುತ್ತಿವೆ. ವಿಶ್ಲೇಷಕರು ಹೇಳುವಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯ ನಿರೀಕ್ಷೆ ವ್ಯಕ್ತವಾಗಿದೆ.
ಏಪ್ರಿಲ್ 30, 2025 22 ರಂದು ಕ್ಯಾರಟ್, 10 ಗ್ರಾಂ ಚಿನ್ನದ ದರ ಪಟ್ಟಿ ಹೀಗಿದೆ:
ಬೆಂಗಳೂರು: ₹89,750
ದೆಹಲಿ: ₹89,900
ಹೈದರಾಬಾದ್: ₹89,750
ಚೆನ್ನೈ: ₹89,750
ಪುಣೆ: ₹90,150
ಮುಂಬೈ: ₹89,750
ಜೈಪುರ್: ₹89,900
ಲಕ್ನೋ: ₹89,900
ಕೋಲ್ಕತಾ: ₹89,750
ಕೇರಳ: ₹89,750
ಅಹ್ಮದಾಬಾದ್: ₹89,800
ಉತ್ತರ ಪ್ರದೇಶ: ₹90,400
ಬೆಳ್ಳಿಯ ದರದಲ್ಲಿಯೂ ಇಳಿಕೆ :
ಬೆಳ್ಳಿಯ ದರದಲ್ಲಿಯೂ ಇಳಿಕೆ ಕಂಡುಬಂದಿದ್ದು, 100 ಗ್ರಾಂಗೆ ₹10 ಹಾಗೂ 1 ಕೆ.ಜಿ ಬೆಳ್ಳಿಗೆ ₹100 ಇಳಿಕೆಯಾಗಿದೆ. ಆದರೆ ಈ ದರವು ನಗರದಿಂದ ನಗರಕ್ಕೆ ಭಿನ್ನವಾಗಿದೆ.
ಬೆಳ್ಳಿಯ ದರ ಪಟ್ಟಿ (100 ಗ್ರಾಂ):
ಬೆಂಗಳೂರು: ₹10,040
ದೆಹಲಿ: ₹10,000
ಪುಣೆ: ₹11,100
ಚೆನ್ನೈ: ₹10,900
ಕೋಲ್ಕತಾ: ₹10,000
ಮುಂಬೈ: ₹10,000
ಅಹ್ಮದಾಬಾದ್: ₹10,000
ಜೈಪುರ್: ₹10,000
ಕೇರಳ: ₹10,900
ಚಿನ್ನ ಬೆಳ್ಳಿಯ ದರದಲ್ಲಿ ಇಂತಹ ಇಳಿಕೆಗಳು ಅಕ್ಷಯ ತೃತೀಯದಂದು ಖರೀದಿಗೆ ತಕ್ಕ ಸಮಯವನ್ನಾಗಿ ಮಾಡುತ್ತಿವೆ. ಗ್ರಾಹಕರು (Buyer’s) ಖರೀದಿಗೆ ಮುಂದಾಗುವ ಮುನ್ನ ವೇಸ್ಟೇಜ್, ಮೇಕಿಂಗ್ ಚಾರ್ಜಸ್, ಜಿಎಸ್‌ಟಿ (GST) ಮುಂತಾದ ಅನೇಕ ಅಂಶಗಳನ್ನೂ ಗಮನಿಸಬೇಕು. ನಗರಾನುಗುಣವಾಗಿ ದರಗಳಲ್ಲಿ ಸ್ವಲ್ಪ ವ್ಯತ್ಯಾಸ ಇರುವುದರಿಂದ, ಖರೀದಿಗೆ ಮೊದಲು ಸ್ಥಳೀಯ ಅಂಗಡಿಗಳ ದರ ಪರಿಶೀಲಿಸಿ ಖರೀದಿ ನಿರ್ಧಾರ ಕೈಗೊಳ್ಳುವುದು ಒಳಿತು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.