ಜೂನ್ 1ರ ಚಿನ್ನದ ದರ : ಮಾರುಕಟ್ಟೆಯ ಅಸ್ಥಿರತೆ ನಡುವೆ ಹೂಡಿಕೆದಾರರಿಗೆ ಎಚ್ಚರಿಕೆ
ಇಡೀ ಜಗತ್ತಿನ ಆರ್ಥಿಕ ವ್ಯವಸ್ಥೆಯಲ್ಲಿ (Economic system) ಚಿನ್ನವು ಒಂದು ಪ್ರಮುಖ ಹೂಡಿಕೆ ಆಯ್ಕೆಯಾಗಿ ಗುರುತಿಸಿಕೊಂಡಿದೆ. ಇದು ಕೇವಲ ಆಭರಣ ರೂಪದಲ್ಲಿರುವ ಮೌಲ್ಯವಸ್ತುವಲ್ಲದೆ, ಭದ್ರ ಹೂಡಿಕೆಯಾಗಿ ತೀರ್ಮಾನಿಸಲಾಗುತ್ತದೆ. ವಿಶೇಷವಾಗಿ ಆರ್ಥಿಕ ಅನಿಶ್ಚಿತತೆ, ಬಡ್ಡಿದರಗಳ ಬದಲಾವಣೆ (Interest rate) ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳ ಸಂದರ್ಭದಲ್ಲಿ ಚಿನ್ನದ ಬೆಲೆಯಲ್ಲಿ ತೀವ್ರವಾದ ಏರಿಳಿತಗಳು ಸಂಭವಿಸುತ್ತವೆ. ಇಂತಹ ಒಂದು ಹಿನ್ನಲೆಯಲ್ಲಿ, ಮೇ 31, ಶನಿವಾರದಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿರುವುದು ಹೂಡಿಕೆದಾರರ ಆಸಕ್ತಿಗೆ ಕಾರಣವಾಗಿದೆ. ಕಳೆದ ಕೆಲವು ವಾರಗಳಿಂದ ನಿರಂತರ ಏರಿಕೆಯಲ್ಲಿ ಇದ್ದ ಚಿನ್ನದ ಮೌಲ್ಯ, ಇದೀಗ ರಾತ್ರೋರಾತ್ರಿ ಬರೋಬ್ಬರಿ 5,000 ರೂ. ಕಡಿಮೆಯಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಜೂನ್ 1, 2025: Gold Price
ಮೇ ತಿಂಗಳಲ್ಲಿ (May month) ಸಾಕಷ್ಟು ಸಂಚಲನವನ್ನು ಮೂಡಿಸಿದೆ ಚಿನ್ನದ ದರ. ಪ್ರತಿ ದಿನವೂ ಪ್ರತಿಕ್ಷಣವೂ ಕೂಡ ಏರಿಳಿತವನ್ನು ಕಂಡಿದೆ. ಅದೇ ರೀತಿಯಾಗಿ ಮೇ ತಿಂಗಳ ಕೊನೆಯ ದಿನ ಸ್ವಲ್ಪ ಮಟ್ಟಿನ ಇಳಿಕೆಯನ್ನು ನಾವು ನೋಡಿದ್ದೇವೆ. ಇನ್ನು, ಜೂನ್ ತಿಂಗಳಲ್ಲಿ ಚಿನ್ನದ ದರ ಯಾವ ರೀತಿ ಇರುತ್ತದೆ ಎಂದು ಊಹಿಸುವುದು ಸ್ವಲ್ಪಮಟ್ಟಿಗೆ ಕಷ್ಟವಾಗಿದ್ದು, ಪ್ರತಿನಿತ್ಯವೂ ಕೂಡ ಚಿನ್ನದ ದರವನ್ನು ಗಮನಿಸುತ್ತಿರಬೇಕು. ಹಾಗಿದ್ದರೆ, ಜೂನ್ 1, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,920 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,731 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,299 ಆಗಿದೆ. ಒಟ್ಟಾರೆಯಾಗಿ, 27ರೂ. ನಷ್ಟು ಏರಿಕೆಯನ್ನು ಕಂಡಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ:, 99,900 ರೂ. ನಷ್ಟಿದೆ. 100 ರೂ. ನಷ್ಟು ಏರಿಕೆಯಾಗಿದೆ.
ಮೇ 31, ಶನಿವಾರದ ಚಿನ್ನದ ದರ :
ಮೇ 31, ಶನಿವಾರದ ದಿನದಂದು 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ₹96,200 ಆಗಿದ್ದು, ಇದೇ ಸಮಯದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ₹87,530ಕ್ಕೆ ಇಳಿದಿದೆ. ಇದೇ ಸಂದರ್ಭದಲ್ಲಿ ಬೆಳ್ಳಿಯ ದರವೂ ಪ್ರತಿ ಕಿಲೋಗ್ರಾಂಗೆ ₹99,744 ನಷ್ಟಿದೆ. ಇದನ್ನು ಕಳೆದ ಕೆಲವು ದಿನಗಳ ದರದೊಂದಿಗೆ ಹೋಲಿಸಿದರೆ ಸುಮಾರು ₹5,000ರಷ್ಟು ಕಡಿಮೆಯಾಗಿದೆ.
ಜಾಗತಿಕ ಮಟ್ಟದಲ್ಲಿ (Global level) ಏನಾಗುತ್ತಿದೆ?:
ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಸ್ಪಾಟ್ ದರ ಪ್ರತಿ ಔನ್ಸ್ಗೆ $21.91 ಅಥವಾ 0.66% ಇಳಿಕೆಯಾಗಿದ್ದು, ಪ್ರತಿ ಔನ್ಸ್ಗೆ $3,295.82ಕ್ಕೆ ತಲುಪಿದೆ. ಕೋಟಕ್ ಸೆಕ್ಯುರಿಟೀಸ್ನ ಸಹಾಯಕ ಉಪಾಧ್ಯಕ್ಷ (ಸರಕು ಸಂಶೋಧನೆ) ಕೈನಾತ್ ಚೈನ್ವಾಲಾ ಅವರ ಪ್ರಕಾರ, ಹೂಡಿಕೆದಾರರು ಅಮೆರಿಕದ PCE ಡೇಟಾ (Personal Consumption Expenditure), ಮಿಚಿಗನ್ ವಿಶ್ವವಿದ್ಯಾಲಯದ ಹಣದುಬ್ಬರ ಅಂದಾಜುಗಳು, ಮತ್ತು ಗ್ರಾಹಕರ ಭಾವನೆಗಳ ಸೂಚಕಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಬಂಗಾರದ ದರದಲ್ಲಿ ಅಸ್ಥಿರತೆ ಉಂಟಾಗಿದೆ.
ಹಿಂದಿನ ದಶಕದ ಬೆಳವಣಿಗೆ ಹೇಗಿತ್ತು:
2015ರ ಮೇ 30ರಂದು 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹25,500 ಆಗಿದ್ದರೆ, 2025ರ ಮೇ 30ಕ್ಕೆ ಅದು ₹98,600ಕ್ಕೆ ಏರಿದೆ. ಈ ದಶಕದಲ್ಲಿ ₹73,100 ಅಥವಾ ಸುಮಾರು 287%ರಷ್ಟು ಏರಿಕೆಯನ್ನೂ ದಾಖಲಿಸಿದೆ. ಇದು ಕೇವಲ ಆರ್ಥಿಕ ಬೆಳವಣಿಗೆಯ (Economic changes) ಸಂಕೇತವಲ್ಲ, ಬದಲಾಗಿ ಹೂಡಿಕೆದಾರರ ಭಾವನೆಗಳು ಮತ್ತು ಜಾಗತಿಕ ತೀವ್ರತೆಯ ಪ್ರತಿಬಿಂಬವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಹೂಡಿಕೆದಾರರು (Investers) ತಾತ್ಕಾಲಿಕ ಏರಿಳಿತಗಳಿಂದ ದೂರವಿದ್ದು, ದೀರ್ಘಕಾಲಿಕ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು ಅಥವಾ ಆರ್ಥಿಕ ಅಸ್ಥಿರತೆಗಳು (Geopolitical crises or economic instability) ಮುಂದಿನ ದಿನಗಳಲ್ಲಿ ಬಂಗಾರದ ದರವನ್ನು ಮತ್ತಷ್ಟು ಪ್ರಭಾವಿಸಬಹುದು.
ಒಟ್ಟಾರೆ, ಚಿನ್ನದ ಮೌಲ್ಯದಲ್ಲಿ ಸಂಭವಿಸಿರುವ ಇತ್ತೀಚಿನ ಇಳಿಕೆಯು ತಾತ್ಕಾಲಿಕವಾಗಿರಬಹುದು ಅಥವಾ ಮುಂದಿನ ಬದಲಾವಣೆಗಳ ನಾಂದಿ ಆಗಿರಬಹುದು. ಮಾರುಕಟ್ಟೆ ಚಲನಶೀಲವಾಗಿರುವ (Market is volatile) ಹಿನ್ನೆಲೆಯಲ್ಲಿ, ಆರ್ಥಿಕ ಗುರಿಗಳ ಪ್ರಕಾರ ಸೂಕ್ತ ಹೂಡಿಕೆ ಯೋಜನೆ ರೂಪಿಸುವುದು ಅತಿ ಅಗತ್ಯವಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.