Gold Rate Today: ಚಿನ್ನದ ಬೆಲೆಯಲ್ಲಿ ಏರುಪೇರು, ಎಪ್ರಿಲ್ 25, ಇಂದಿನ ಚಿನ್ನ ಬೆಳ್ಳಿ ಬೆಲೆ ಇಲ್ಲಿದೆ.

Picsart 25 04 26 06 48 15 180

WhatsApp Group Telegram Group

ಭಾರತದಲ್ಲಿ ಚಿನ್ನದ ದರ ಸ್ಥಿರತೆ: ಏಪ್ರಿಲ್ 26ರಂದು 24K, 22K, 18K ಚಿನ್ನದ ಬೆಲೆ ಹೇಗಿದೆ ಎಂಬುದರ ವಿವರ ಇಲ್ಲಿದೆ!

ಭಾರತದಲ್ಲಿ ಚಿನ್ನವು (Gold) ಕೇವಲ ಮೌಲ್ಯವರ್ಧಿತ ಲೋಹವಲ್ಲ, ಇದು ಸಂಸ್ಕೃತಿಯ ಪ್ರತೀಕ, ಆರ್ಥಿಕ ಸುರಕ್ಷೆಯ ಸಂಕೇತ, ಮತ್ತು ಕುಟುಂಬದ ಪರಂಪರೆಗೂ ಮೂಲವಾದದ್ದು. ವಿವಾಹ ಮಹೋತ್ಸವಗಳು, ಧಾರ್ಮಿಕ ಆಚರಣೆಗಳು, ಅಥವಾ ಉಡುಗೊರೆ (Gift) ನೀಡುವ ಸಂದರ್ಭಗಳಲ್ಲಿ ಚಿನ್ನವನ್ನು ಅತೀವ ಗೌರವದಿಂದ ಬಳಸಲಾಗುತ್ತದೆ. ಭಾರತೀಯ ಮಹಿಳೆಯರ ಹೃದಯ ಗೆಲ್ಲಬಲ್ಲ ಉಡುಗೊರೆ ಯಾವುದೆಂದರೆ, ಅದು ಖಂಡಿತವಾಗಿಯೂ ಚಿನ್ನ. ಇಂತಹ ಬೆಲೆಬಾಳುವ ಲೋಹದ ಮಾರುಕಟ್ಟೆ ಸ್ಥಿತಿಗತಿಯು (Market situation) ಪ್ರತಿದಿನವೂ ಲಕ್ಷಾಂತರ ಜನರ ಗಮನ ಸೆಳೆಯುತ್ತಿದೆ. ಏಪ್ರಿಲ್ 25, 2025 ರಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ದೇಶದ ಪ್ರಮುಖ ನಗರಗಳ ಚಿಲ್ಲರೆ ಮಾರುಕಟ್ಟೆಗಳಲ್ಲಿ 24 ಕ್ಯಾರಟ್, 22 ಕ್ಯಾರಟ್ ಹಾಗೂ 18 ಕ್ಯಾರಟ್ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 26, 2025: Gold Price Today

ಇತ್ತೀಚಿನ ದಿನಗಳಲ್ಲಿ ಚಿನ್ನದ ಸಾಕಷ್ಟು ಬದಲಾವಣೆಗಳನ್ನು (Changes) ಕಂಡಿತು. ಈ ನಿಟ್ಟಿನಲ್ಲಿ ನೋಡುವುದಾದರೆ ಪ್ರತಿದಿನ ಏರಿಕೆ ಅಥವಾ ಇಳಿಕೆಯನ್ನು ಕಾಣುತ್ತಿದ್ದ ದರ ಕಳೆದ ಎರಡು ದಿನಗಳಿಂದ ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ. ಈ ರೀತಿಯ ಸ್ಥಿರದರ ಗ್ರಾಹಕರಿಗೆ ಕೊಂಚ ನೀರಳತೆಯನ್ನು ತಂದುಕೊಟ್ಟಿದೆ. ಹಾಗಿದ್ದರೆ, ಏಪ್ರಿಲ್ 26, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 004  ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,823 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,367 ಆಗಿದೆ. ನಿನ್ನೆಗೆ ಹೋಲಿಸಿದರೆ 10 ರೂ. ನಷ್ಟು ಇಳಿಕೆಯಾಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,00,800 ರೂ. ನಷ್ಟಿದ್ದು. ನಿನ್ನಗೆ ಹೋಲಿಸಿದರೆ 100 ರೂ ನಷ್ಟು ಇಳಿಕೆಯಾಗಿದೆ.

ಹೌದು, ಎರಡು ದಿನಗಳಿಂದ ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದ್ದು, ಈ ಸ್ಥಿತಿ ಹೂಡಿಕೆದಾರರಿಗೆ ಹಾಗೂ ಗ್ರಾಹಕರಿಗೆ ಒಂದು ಸಮಾಧಾನ ನೀಡುವಂತಹ ಸಂಗತಿಯಾಗಿದೆ. ಈ ಸ್ಥಿತಿಗತಿಯು ಚಿನ್ನದ ಮಾರುಕಟ್ಟೆಯಲ್ಲಿ ಜಾಗತಿಕ ಮತ್ತು ದೇಶೀಯ ಅಂಶಗಳ (Global and Local elements) ಪ್ರಭಾವದಿಂದ ಉಂಟಾಗಿದೆ. ಇಂತಹ ಸಂದರ್ಭಗಳಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ಬೆಲೆ ಏರಿಕೆಯಾಗದಿರುವುದು ನಿರಾಳತೆಯ ಸೂಚನೆ.

ಏಪ್ರಿಲ್ 25, 2025 ರಂದು ಚಿನ್ನದ ಬೆಲೆಗಳು ಯಾವರೀತಿಯಿವೆ?:

22 ಕ್ಯಾರಟ್ ಚಿನ್ನ
ಪ್ರತಿ ಗ್ರಾಂ: ₹9,005
10 ಗ್ರಾಂ: ₹90,050
100 ಗ್ರಾಂ: ₹9,00,500

24 ಕ್ಯಾರಟ್ ಚಿನ್ನ
ಪ್ರತಿ ಗ್ರಾಂ: ₹9,824
10 ಗ್ರಾಂ: ₹98,240
100 ಗ್ರಾಂ: ₹9,82,400

18 ಕ್ಯಾರಟ್ ಚಿನ್ನ
ಪ್ರತಿ ಗ್ರಾಂ: ₹7,368
10 ಗ್ರಾಂ: ₹73,680
100 ಗ್ರಾಂ: ₹7,36,800

ಪ್ರಮುಖ ನಗರಗಳಲ್ಲಿ ಏಪ್ರಿಲ್ 25, 2025 ರಂದು ಪ್ರತಿ ಗ್ರಾಂ ಚಿನ್ನದ ಬೆಲೆ:
ಬೆಂಗಳೂರು, ಚೆನ್ನೈ, ಮುಂಬೈ, ಹೈದರಾಬಾದ್, ಕೋಲ್ಕತ್ತಾ, ಪುಣೆ:
22K – ₹9,005 | 24K – ₹9,824 | 18K – ₹7,368

ದೆಹಲಿ:
22K – ₹9,020 | 24K – ₹9,834 | 18K – ₹7,380

ಬರೋಡಾ, ಅಹಮದಾಬಾದ್:
22K – ₹9,010 | 24K – ₹9,829 | 18K – ₹7,372

ಭಾರತದಲ್ಲಿ ಬೆಳ್ಳಿ ಬೆಲೆ ಕೂಡ ಸ್ಥಿರತೆ ಕಂಡುಕೊಂಡಿದೆ:
ಪ್ರತಿ ಗ್ರಾಂ: ₹100.90
10 ಗ್ರಾಂ: ₹1,009
100 ಗ್ರಾಂ: ₹10,090
1 ಕೆ.ಜಿ: ₹1,00,900

ಜಾಗತಿಕ ಮಾರುಕಟ್ಟೆ ಸ್ಥಿತಿ: ಸ್ಪಾಟ್ ಗೋಲ್ಡ್ (Spot Gold):

ಏಪ್ರಿಲ್ 25ರ ಬೆಳಿಗ್ಗೆ (0421 GMT) ಸ್ಪಾಟ್ ಗೋಲ್ಡ್ ದರವು ಪ್ರತಿ ಔನ್ಸ್‌ಗೆ $3,322.36 ಇಳಿಕೆಯಾಗಿ ದಾಖಲಾಗಿದ್ದು, ಸರಾಸರಿ 0.8% ಕುಸಿತವಿದೆ. ಫ್ಯೂಚರ್ ಗೋಲ್ಡ್ ಕೂಡ 0.5% ಇಳಿಕೆ ಕಂಡುಬಂದಿದ್ದು, ಪ್ರತಿ ಔನ್ಸ್‌ಗೆ $3,332.90 ಸ್ಥಿತಿಗತಿಯನ್ನು ತಲುಪಿದೆ.

ಚಿನ್ನದ ಬೆಲೆ ಏರಿಕೆ ಅಥವಾ ಇಳಿಕೆಗೆ ಪರಿಣಾಮ ಬೀರುವ ಅಂಶಗಳು ಯಾವುವು?:

ಚಿನ್ನದ ಬೆಲೆ ಏರಿಕೆ-ಇಳಿಕೆಗೆ ಹಲವಾರು ಅಂಶಗಳು (some elements) ಕಾರಣವಾಗುತ್ತವೆ ಪ್ರಮುಖವಾಗಿ ನೋಡುವುದಾದರೆ,
ಆರ್ಥಿಕ ಅಸ್ಥಿರತೆ (ಅಂತಾರಾಷ್ಟ್ರೀಯ ಮಟ್ಟದಲ್ಲಿ).
ಯುದ್ಧ ಅಥವಾ ರಾಜಕೀಯ ಕಲಹಗಳು.
ಡಾಲರ್ ಮೌಲ್ಯ ಕುಸಿತ.
ಭದ್ರತೆಯ ಹೂಡಿಕೆಗೆ ಬೇಡಿಕೆ ಹೆಚ್ಚಳ.
ಫೆಡ್ ಅಥವಾ RBI ಬಡ್ಡಿದರ ಬದಲಾವಣೆ.
ಚಿನ್ನದ ಉತ್ಪಾದನೆಯಲ್ಲಿ ಇಳಿಕೆ.
ಹೂಡಿಕೆದಾರರ ನಂಬಿಕೆ ಮತ್ತು ಮನೋಭಾವ
ಈ ಮೇಲಿನ ಎಲ್ಲಾ ಕಾರಣಗಳು ಚಿನ್ನದ ಬೆಲೆ ಏರಿಕೆ ಅಥವಾ ಇಳಿಕೆಗೆ ಕಾರಣವಾಗುತ್ತದೆ.

ಇನ್ನು, ಇಂದಿನ ಮೌಲ್ಯದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲದಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿನ (Global market) ಚಲನೆ, ಬಂಡವಾಳ ಹೂಡಿಕೆದಾರರ ಧೋರಣೆ ಹಾಗೂ ಆರ್ಥಿಕ ಪ್ರಭಾವಗಳ ಪರಿಕಲ್ಪನೆಯೊಂದಿಗೆ ಚಿನ್ನದ ಬೆಲೆ ನಿರ್ಧಾರವಾಗುತ್ತದೆ. ಹೀಗಾಗಿ, ಹೂಡಿಕೆಗೆ ಮೊದಲು ಮಾರುಕಟ್ಟೆಯ ವಿಶ್ಲೇಷಣೆ ಮತ್ತು ದಿನನಿತ್ಯದ ಬೆಲೆಗಳನ್ನು ಗಮನಿಸುವುದು ಅವಶ್ಯಕ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!