ಚಿನ್ನದ ದರ ಭಾರೀ ಇಳಿಕೆ: ಬಂಗಾರ ಪ್ರಿಯರಿಗೆ ಖುಷಿ! ಹೂಡಿಕೆದಾರರಿಗೆ ನಿರಾಸೆ. ಏಪ್ರಿಲ್ 24ರ ಬಂಗಾರ ಮತ್ತು ಬೆಳ್ಳಿ ಬೆಲೆ ವಿವರ ಹೀಗಿದೆ
ಭಾರತೀಯ ಸಂಸ್ಕೃತಿಯಲ್ಲಿ (In Indian culture) ಬಂಗಾರಕ್ಕೆ ವಿಶಿಷ್ಟ ಮಹತ್ವವಿದೆ. ಮದುವೆ, ಹಬ್ಬ, ಜಾತ್ರೆ, ಧಾರ್ಮಿಕ ಸಮಾರಂಭಗಳಷ್ಟೇ ಅಲ್ಲದೆ ಯಾವುದೇ ಶ್ರೇಷ್ಠ ಸಂದರ್ಭವನ್ನೂ ಚಿನ್ನವಿಲ್ಲದೆ ಕಲ್ಪಿಸುವುದೇ ಕಷ್ಟ. ಹೂಡಿಕೆ ದೃಷ್ಟಿಯಿಂದಲೂ ಬಂಗಾರ (Gold) ಹೆಚ್ಚು ಪ್ರಾಮುಖ್ಯತೆ ಪಡೆದ ಲೋಹ. ಅಂತಹ ಬೆಲೆಬಾಳುವ ಬಂಗಾರದ ದರ ಏರುಪೇರುಗಳು ಸಹಜವಾಗಿಯೇ ಜನಮನ ಸೆಳೆಯುತ್ತವೆ. ಇಂತಹ ಸಂದರ್ಭದಲ್ಲೇ ಏಪ್ರಿಲ್ 23ರಂದು ಚಿನ್ನದ ದರಗಳಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ನಿರಂತರ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ, ಆಭರಣ ಪ್ರಿಯರಿಗೆ, ಬಂಗಾರದ ದರ ಇಳಿಕೆ ಒಂದು ಸಿಹಿಸುದ್ದಿಯಂತಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 24, 2025: Gold Price Today
ಇತ್ತೀಚಿಗೆ ಚಿನ್ನದ ದರ ಭಾರಿ ಏರಿಕೆಯನ್ನು ಕಾಣುತ್ತಿತ್ತು. ಅದರಲ್ಲೂ ನಿನ್ನೆ ಬೆಳಗ್ಗೆ ಚಿನ್ನದ ದರ ಬರೋಬ್ಬರಿ ಒಂದು ಲಕ್ಷ ಗಡಿದಾಟಿತ್ತು. ಆದರೆ ಇದೇ ತರ ನಿನ್ನೆ ಸಂಜೆಯೊಳಗೆ ಇಳಿಕೆಯನ್ನು ಕಂಡಿದೆ. ಇದಕ್ಕೆ ಗ್ರಾಹಕರಲ್ಲಿ ಕೊಂಚ ಸಂತೋಷವನ್ನು ಉಂಟು ಮಾಡಿದ್ದು, ಖರೀದಿಗೆ ಸೂಕ್ತ ಸಮಯವೆಂದು ವಿಶ್ಲೇಷಕರು (specilalist) ಹೇಳುತ್ತಿದ್ದಾರೆ. ಹಾಗಿದ್ದರೆ, ಏಪ್ರಿಲ್ 24, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9, 014 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,834 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,315 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,00,900 ರೂ. ನಷ್ಟಿದ್ದು.
ಹೌದು, ಚಿನ್ನದ ಬೆಲೆಯಲ್ಲಿ ದಿಢೀರ್ ಕುಸಿತ (suddenly decreased) ಉಂಟಾಗಿದೆ. ಇದು ಬಂಗಾರ ಪ್ರಿಯರಿಗೆ ಖುಷಿಯ ವಿಷಯವಾಗಿದ್ದರೆ, ಹೂಡಿಕೆದಾರರಿಗೆ ಸ್ವಲ್ಪ ನಿರಾಶೆಯ ಸಂಗತಿಯೂ ಆಗಿದೆ. ಏಕೆಂದರೆ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರುತ್ತಿದ್ದ ಚಿನ್ನದ ದರ ಇದೀಗ ಏಪ್ರಿಲ್ 23 ರಂದು ಬಹಳಷ್ಟು ಇಳಿಕೆಯಾಗಿದೆ. ಬಂಗಾರದೊಂದಿಗೆ ಬೆಳ್ಳಿಯ ದರದಲ್ಲಿಯೂ ಕೂಡ ಇಳಿಕೆ ಕಂಡುಬಂದಿದೆ. ಈ ತೀವ್ರ ಬದಲಾವಣೆ, ಬಸವ ಜಯಂತಿ ಮತ್ತು ಅಕ್ಷಯ ತೃತೀಯ (Akshaya thritiya) ಮುಂತಾದ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಬಹಳಷ್ಟು ಗಮನ ಸೆಳೆಯುತ್ತಿದೆ. ವಿಶೇಷವಾಗಿ ಆಭರಣ ಖರೀದಿಗೆ ಉತ್ಸುಕರಾಗಿರುವ ಗ್ರಾಹಕರಿಗೆ ಇದು ಒಂದು ಉತ್ತಮ ಅವಕಾಶವಾಗಿದ್ದು, ಚಿನ್ನ ಕೊಳ್ಳಲು ಸಕಾಲವೇ ಸರಿ ಎನ್ನುತ್ತಿದ್ದಾರೆ ವಿಶ್ಲೇಷಕರು.
ಏಪ್ರಿಲ್ 23ರಂದು ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ:
22 ಕ್ಯಾರೆಟ್ ಚಿನ್ನ:
ಪ್ರತಿ ಗ್ರಾಂ – ₹9,015
10 ಗ್ರಾಂ – ₹90,150
100 ಗ್ರಾಂ – ₹9,01,500 (₹27,500ರ ಇಳಿಕೆ)
24 ಕ್ಯಾರೆಟ್ ಚಿನ್ನ (ಅಪರಂಜಿ):
ಪ್ರತಿ ಗ್ರಾಂ – ₹9,835
10 ಗ್ರಾಂ – ₹98,350
100 ಗ್ರಾಂ – ₹9,83,500 (₹30,000ರ ಇಳಿಕೆ)
18 ಕ್ಯಾರೆಟ್ ಚಿನ್ನ:
ಪ್ರತಿ ಗ್ರಾಂ – ₹7,376
10 ಗ್ರಾಂ – ₹73,760
100 ಗ್ರಾಂ – ₹7,37,600
ಏಪ್ರಿಲ್ 23 ಬೆಂಗಳೂರಿನಲ್ಲಿ ಬೆಳ್ಳಿಯ ದರ:
ಪ್ರತಿ ಗ್ರಾಂ – ₹101
10 ಗ್ರಾಂ – ₹1,010
1 ಕಿಲೋಗ್ರಾಂ – ₹1,01,000 (₹100ರ ಇಳಿಕೆ)
ಇತರೆ ಪ್ರಮುಖ ನಗರಗಳಲ್ಲಿ ಚಿನ್ನದ ದರ ಯಾವ ರೀತಿಯಿದೆ:
ಮೈಸೂರು, ಮಂಗಳೂರು, ಗದಗ, ಮಂಡ್ಯ, ಚಿತ್ರದುರ್ಗ ಈ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಚಿನ್ನದ ಸಮಾನವಾಗಿದೆ.
18k ಪ್ರತಿ ಗ್ರಾಂ – ₹7,376
22k ಪ್ರತಿ ಗ್ರಾಂ – ₹9,015
24k ಪ್ರತಿ ಗ್ರಾಂ – ₹9,835
ಸ್ಪಾಟ್ ಚಿನ್ನ ಮತ್ತು ಬೆಳ್ಳಿ ದರ (ಜಾಗತಿಕ ಮಟ್ಟದಲ್ಲಿ):
ಸ್ಪಾಟ್ ಚಿನ್ನ: $3,357.11 (0.7% ಇಳಿಕೆ)
US ಚಿನ್ನದ ಭವಿಷ್ಯ: $3,366.80 (1.5% ಇಳಿಕೆ)
ಸ್ಪಾಟ್ ಬೆಳ್ಳಿ: $32.67 (0.5% ಏರಿಕೆ)
ಬಂಗಾರದ ಇಳಿಕೆಗೆ ಕಾರಣವೇನು (causes) ?:
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾದ ವ್ಯತ್ಯಾಸಗಳು ಮತ್ತು ಆರ್ಥಿಕ ಪರಿಸ್ಥಿತಿಗಳೇ ಚಿನ್ನದ ದರ ಇಳಿಕೆಗೆ ಪ್ರಮುಖ ಕಾರಣಗಳಾಗಿವೆ. ಸ್ಪಾಟ್ ಚಿನ್ನದ ದರ (spot gold rate) ಔನ್ಸ್‌ಗೆ ಶೇ.0.7ರಷ್ಟು ಕುಸಿದು $3,357.11 ಕ್ಕೆ ತಲುಪಿದೆ. ಅಮೆರಿಕದ ಚಿನ್ನದ ಭವಿಷ್ಯ ವ್ಯವಹಾರ ಶೇ.1.5ರಷ್ಟು ಇಳಿಕೆಯೊಂದಿಗೆ $3,366.80 ಕ್ಕೆ ತಲುಪಿದೆ. ಡಾಲರ್ ಮೌಲ್ಯದ ಏರಿಕೆ, ಯುದ್ಧ ಭೀತಿ, ಮತ್ತು ಹೂಡಿಕೆದಾರರ ಅಭಿಪ್ರಾಯದಲ್ಲಿ ಬದಲಾವಣೆಗಳು ಕೂಡ ಇಳಿಕೆಗೆ ಕಾರಣವಾಗಿದೆ.
ಭಾರತದಲ್ಲಿ ಚಿನ್ನವು ಕೇವಲ ಆಭರಣವಲ್ಲ, ಅದು ಶ್ರದ್ಧೆಯ ಸಂಕೇತ, ಹಬ್ಬಗಳ ಪ್ರಮುಖ ಭಾಗ ಮತ್ತು ಆರ್ಥಿಕ ಸುರಕ್ಷತೆಯ ಅಭಿವ್ಯಕ್ತಿ. ಮದುವೆ, ಧಾರ್ಮಿಕ ಆಚರಣೆಗಳು ಮತ್ತು ವಿಶೇಷ ಸಂದರ್ಭಗಳಲ್ಲಿ (special situations) ಚಿನ್ನ ಖರೀದಿಯು ಸಾಮಾಜಿಕ ರಿತಿಯಾಗಿ ಮಹತ್ವ ಹೊಂದಿದೆ. ಚಿನ್ನ ಮನೆಯಲ್ಲಿ ಇರುವುದರಿಂದ ಭವಿಷ್ಯದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಸಹಾಯವಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಗಟ್ಟಿಯಾಗಿಯೇ ಇದೆ.
ಚಿನ್ನದ ದರದಲ್ಲಿ ಕಂಡುಬಂದಿರುವ ಭಾರೀ ಇಳಿಕೆ ನವದೆಹಲಿಯಿಂದ ದಕ್ಷಿಣದ ನಗರಗಳವರೆಗೆ ಚರ್ಚೆಯ ವಿಷಯವಾಗಿದೆ. ಹಬ್ಬದ ಸೀಸನ್ ಮುಂಚಿತವಾಗಿ ಗ್ರಾಹಕರಿಗೆ (for buyer’s) ಇದು ಚಿನ್ನ ಖರೀದಿಗೆ ಲಾಭದಾಯಕ ಅವಕಾಶ. ಆದರೆ ಹೂಡಿಕೆದಾರರಿಗೆ ಇದು ನಿರಾಸೆಯ ಸುದ್ದಿಯಾಗಿದೆ. ಮುಂದಿನ ದಿನಗಳಲ್ಲಿ ಬಂಗಾರದ ಮೌಲ್ಯ ಹೇಗೆ ಇರುತ್ತದೆ ಎಂಬುದನ್ನು ಹೇಳುವುದು ಕಷ್ಟ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




