ಆರ್ಥಿಕ ಭದ್ರತೆಗಾಗಿ ಚಿನ್ನದತ್ತ ಭಾರತ ಆರ್‌ಬಿಐ ಮೀಸಲು ಮೌಲ್ಯದಲ್ಲಿ ಭರ್ಜರಿ ಏರಿಕೆ
ಜಾಗತಿಕ ಆರ್ಥಿಕತೆ (Global Economic) ದಿನದಿಂದ ದಿನಕ್ಕೆ ಅಸ್ಥಿರತೆಯತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ, ಚಿನ್ನದ ಮಹತ್ವ ಮತ್ತೊಮ್ಮೆ ವಿಶ್ವದ ಆರ್ಥಿಕ ವ್ಯವಸ್ಥೆಗಳಲ್ಲಿ (World economic System) ಹೊಸ ದಿಕ್ಕನ್ನು ತೋರಿಸುತ್ತಿದೆ. ಅಂತರ್ಜಾಲ ಬಂಡವಾಳ ಹೂಡಿಕೆದಾರರಿಂದ ಹಿಡಿದು, ದೇಶದ ಕೇಂದ್ರ ಬ್ಯಾಂಕುಗಳು (Central Banks) ತನಕ ಎಲ್ಲರೂ ತಮ್ಮ ಸಂಪತ್ತನ್ನು ‘ಸುರಕ್ಷಿತ ಸ್ವರ್ಗ’ವೆನ್ನಲಾದ ಚಿನ್ನದತ್ತ ತಿರುಗಿಸುತ್ತಿರುವುದು ಸ್ಪಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಚಿನ್ನದ ಮೀಸಲುಗಳಲ್ಲಿ ದಾಖಲೆಯ ಮಟ್ಟದ ಏರಿಕೆಯನ್ನು ದಾಖಲಿಸಿದೆ. ಇದು ನಾವೆಲ್ಲರ ಗಮನ ಸೆಳೆಯುವಂತಹ ಮಹತ್ವದ ಆರ್ಥಿಕ ಬೆಳವಣಿಗೆಯಾಗಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಏಪ್ರಿಲ್ 20, 2025: Gold Price Today
ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದ್ದು, ಸಾಮಾನ್ಯ ಜನರು ಚಿನ್ನ ಖರೀದಿಸಲು ನೂರು ಬಾರಿ ಯೋಚಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ದಿನೇ ದಿನೇ ಮಾತ್ರವಲ್ಲದೇ, ಪ್ರತಿಕ್ಷಣವೂ ಚಿನ್ನದ ದರಗಳಲ್ಲಿ ಬದಲಾವಣೆಗಳು (Changes in Gold rates) ಸಂಭವಿಸುತ್ತಿದ್ದು, ಗ್ರಾಹಕರು ಯಾವಾಗ ಖರೀದಿಸಬೇಕು ಎಂಬುದರ ಬಗ್ಗೆ ಗೊಂದಲದಲ್ಲಿದ್ದಾರೆ. ಬಂಡವಾಳ ಹೂಡಿಕೆಗೆ ಚಿನ್ನ ಅತ್ಯುತ್ತಮ ಆಯ್ಕೆ ಎನಿಸಿಕೊಂಡಿದ್ದರೂ, ಇತ್ತೀಚಿನ ಏರಿಕೆಯಿಂದ ಅದು ಹಲವರ ಕೈಗೆಟಕದಷ್ಟಾಗಿಲ್ಲ. ಬಂಡವಾಳ ಮಾರುಕಟ್ಟೆಯ ಅಸ್ಥಿರತೆ, ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತು ರೂಪಾಯಿ ಮೌಲ್ಯದ (decreased value of rupees) ಕುಸಿತ ಇವುಗಳು ಚಿನ್ನದ ದರ ಏರಿಕೆಗೆ ಕಾರಣಗಳಾಗಿವೆ. ಹಾಗಿದ್ದರೆ, ಏಪ್ರಿಲ್ 20, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8, 945 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,758 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,319 ಆಗಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ: 1,00,000 ರೂ. ನಷ್ಟಿದ್ದು. ನಿನ್ನೆಗೆ ಹೋಲಿಸಿದರೆ 1100 ರೂ. ನಷ್ಟು ಏರಿಕೆಯಾಗಿದೆ.
6.88 ಲಕ್ಷ ಕೋಟಿ ರೂ. ಮೌಲ್ಯದ ಚಿನ್ನದ ಮೀಸಲು:
2024ರ ಏಪ್ರಿಲ್ 11ಕ್ಕೆ ಕೊನೆಗೊಂಡ ವಾರದ ವರದಿ ಪ್ರಕಾರ, RBI ತನ್ನ ಚಿನ್ನದ ಮೀಸಲು ಮೌಲ್ಯದಲ್ಲಿ ಭಾರೀ ಹೆಚ್ಚಳವನ್ನು ಮಾಡಿದೆ. ಈ ವಾರದಲ್ಲಿ ಮಾತ್ರ ಚಿನ್ನದ ಮೌಲ್ಯದಲ್ಲಿ 11,986 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ. ಈ ಏರಿಕೆಯೊಂದಿಗೆ ಆರ್‌ಬಿಐಯ (RBI) ಒಟ್ಟು ಚಿನ್ನದ ಮೀಸಲು ಮೌಲ್ಯವು 6,88,496 ಕೋಟಿ ರೂ.ಗಳ ಮಟ್ಟಿಗೆ ತಲುಪಿದೆ, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ಎಂದು ವರದಿಯಾಗಿದೆ.
ಮೌಲ್ಯ ಏರಿಕೆಯ ಹಿಂದಿರುವ ಕಾರಣಗಳು (Cause’s) ಯಾವುವು?:
ಈ ಮಹತ್ವದ ಬೆಳವಣಿಗೆಯ ಹಿಂದಿರುವ ಪ್ರಮುಖ ಕಾರಣವೆಂದರೆ ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆಯಲ್ಲಿ ನಡೆದಿರುವ ಏರಿಕೆ. ಭೌಗೋಳಿಕ ರಾಜಕೀಯ ಅಸ್ಥಿರತೆ, ಜಾಗತಿಕ ಆರ್ಥಿಕ ಬಿಕ್ಕಟ್ಟುಗಳ ಆತಂಕ, ಹಾಗೂ ಬೃಹತ್ ಆರ್ಥಿಕ ಶಕ್ತಿಗಳ ನಡುವಿನ ವ್ಯಾಪಾರ ಯುದ್ಧಗಳು ಚಿನ್ನದ ಬೇಡಿಕೆಯನ್ನು ಹೆಚ್ಚು ಮಾಡಿವೆ. ಇದರೊಂದಿಗೆ, ಚಿನ್ನದ ಇಟಿಎಫ್‌ಗಳಲ್ಲಿ ಬೃಹತ್ ಹೂಡಿಕೆಗಳು ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ.
ಅಂದರೆ, ಭಾರತ ಮಾತ್ರವಲ್ಲದೆ ಜಗತ್ತಿನ ಇತರೆ ಪ್ರಮುಖ ಕೇಂದ್ರ ಬ್ಯಾಂಕುಗಳು (Central banks) ಕೂಡ ತಮ್ಮ ಚಿನ್ನದ ಖರೀದಿಯನ್ನು ಗಂಭೀರವಾಗಿ ಹೆಚ್ಚಿಸುತ್ತಿರುವುದನ್ನು ಈ ದಿಸೆಯಲ್ಲಿ ಗಮನಿಸಬಹುದು. ಚಿನ್ನವನ್ನು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಲು ಒಂದು ಗಂಭೀರವಾದ ಸಾಧನವಾಗಿ ಪರಿಗಣಿಸಲಾಗುತ್ತಿದೆ.
ಟ್ರಂಪ್–ಚೀನಾ ವ್ಯಾಪಾರ ಪರಿಣಾಮ:
ಈ ಬೆಳವಣಿಗೆಯ ಪೈಪೋಟಿಯಲ್ಲಿ (Competition) ಮತ್ತೊಂದು ಪ್ರಮುಖ ಸಂಗತಿಯೆಂದರೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೀನಾ ವಿರುದ್ಧದ ಸುಂಕ ನೀತಿಯ ಪರಿಣಾಮ. ಇದು ಜಾಗತಿಕ ವ್ಯಾಪಾರದಲ್ಲಿ (Global market) ಗೊಂದಲ ಉಂಟುಮಾಡಿ ಚಿನ್ನದ ಮೇಲೆ ಮತ್ತಷ್ಟು ಒತ್ತಡ ತಂದಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ಬಹು ಸರಕು ವಿನಿಮಯ ಕೇಂದ್ರದಲ್ಲಿ (MCX) ಚಿನ್ನದ ಬೆಲೆಗಳು ಹೊಸ ದಾಖಲೆ ತಲುಪಿದವು. ಜೂನ್ 5 ರ ಒಪ್ಪಂದದಂತೆ, 10 ಗ್ರಾಂ ಚಿನ್ನದ ಬೆಲೆ ರೂ. 95,935 ರ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿರುವುದನ್ನು ನಾವು ನೋಡಬಹುದು.
ಆರ್‌ಬಿಐ ನಡೆ ಆರ್ಥಿಕ ಬಲವರ್ಧನೆಯ ಚಿಹ್ನೆ:
ಈ ಎಲ್ಲಾ ಬೆಳವಣಿಗೆಗಳ ನಡುವೆ, RBI ತನ್ನ ಚಿನ್ನದ ಮೀಸಲುಗಳನ್ನು ಗಂಭೀರವಾಗಿ ವಿಸ್ತರಿಸುತ್ತಿರುವುದು ಭಾರತದ ಆರ್ಥಿಕ ಶಕ್ತಿಯ ಬಲವರ್ಧನೆಗೆ (To strengthen India’s economic strength) ಸ್ಪಷ್ಟ ಸೂಚನೆ ನೀಡುತ್ತದೆ. ಇದು ದೇಶದ ವಿದೇಶಿ ವಿನಿಮಯ ಮೀಸಲುಗಳನ್ನು ಬಲಪಡಿಸುವ ಹೆಜ್ಜೆ ಮಾತ್ರವಲ್ಲದೆ, ಬಾಹ್ಯ ಆಘಾತಗಳಿಗೆ ಎದುರಿಸಬಲ್ಲ ಆರ್ಥಿಕ ಸ್ಥಿತಿಗೆ ಭಾರತವನ್ನು ತಯಾರಿಸುತ್ತಿದೆ.
ಒಟ್ಟಾರೆಯಾಗಿ, ಜಾಗತಿಕ ಅಸ್ಥಿರತೆಗೆ (global instability) ಉತ್ತರವಾಗಿ ಚಿನ್ನದ ಮೇಲೆ ಮರುನಂಬಿಕೆ ನಿರ್ಮಾಣವಾಗುತ್ತಿರುವ ಈ ಘಟ್ಟದಲ್ಲಿ RBI ನ ಚಿನ್ನದ ಮೀಸಲುಗಳ ಮೌಲ್ಯ ಏರಿಕೆ ಅಸಾಧಾರಣ ಆರ್ಥಿಕ ಕೌಶಲ್ಯವನ್ನು (Economic Skill) ಪ್ರತಿಬಿಂಬಿಸುತ್ತದೆ. ಇದು ಭಾರತದ ಆರ್ಥಿಕ ದೃಢತೆಯಲ್ಲಿನ ಹೊಸ ಪಾಠವನ್ನು ನಮಗೆ ಕಲಿಸುತ್ತಿದೆ.
“ಬದಲಾವಣೆಯ ಯುಗದಲ್ಲಿ ಭದ್ರತೆಯ ದಿಕ್ಕು ಚಿನ್ನದತ್ತ!”
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




