Picsart 25 10 07 22 57 06 7301 scaled

ಚಿನ್ನದ ಬೆಲೆಯಲ್ಲಿ ಮುಂದಿನ 2 ವಾರಗಳಲ್ಲಿ ಪಾತಾಳಕ್ಕೆ ಇಳಿಯುವ ಸಾಧ್ಯತೆ! ಚಿನ್ನ ಮತ್ತು ಬೆಳ್ಳಿ: ಹೂಡಿಕೆದಾರರಿಗೆ ಎಚ್ಚರಿಕೆ.!

Categories:
WhatsApp Group Telegram Group

ಹೂಡಿಕೆ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎಂದರೆ ಕೇವಲ ಲೋಹವಲ್ಲ ಅವು ಭದ್ರತೆ, ನಂಬಿಕೆ ಮತ್ತು ಆರ್ಥಿಕ ಸ್ಥಿರತೆಯ ಸಂಕೇತ. ಶತಮಾನಗಳಿಂದಲೂ ಚಿನ್ನ ಮತ್ತು ಬೆಳ್ಳಿಯು ಹೂಡಿಕೆದಾರರ ಪ್ರಿಯ ಆಯ್ಕೆಗಳಾಗಿದ್ದು, ವಿಶೇಷವಾಗಿ ಅನಿಶ್ಚಿತ ಆರ್ಥಿಕ ಪರಿಸ್ಥಿತಿಗಳಲ್ಲಿ ಸುರಕ್ಷಿತ ಲಾಭವಾಗಿ ಪರಿಗಣಿಸಲ್ಪಟ್ಟಿವೆ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ರಾಜಕೀಯ ಅಸ್ಥಿರತೆ, ಡಾಲರ್ ಮೌಲ್ಯದ ಬದಲಾವಣೆ ಮತ್ತು ಹೂಡಿಕೆದಾರರ ಭಾವನಾತ್ಮಕ ಚಲನೆಗಳ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಅಸಾಧಾರಣ ಏರಿಕೆಯನ್ನು ಕಂಡಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇದೀಗ ಪ್ರಸಿದ್ಧ ಆಸ್ತಿ ನಿರ್ವಹಣಾ ಸಂಸ್ಥೆಯ ತಜ್ಞರೊಬ್ಬರು ನೀಡಿರುವ ಎಚ್ಚರಿಕೆಯು ಹೂಡಿಕೆದಾರರ ಗಮನ ಸೆಳೆದಿದೆ. ನವದೆಹಲಿ ಮೂಲದ PACE 360 ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಮುಖ್ಯ ಜಾಗತಿಕ ತಂತ್ರಜ್ಞ ಅಮಿತ್ ಗೋಯೆಲ್ ಅವರು, ಮುಂದಿನ ಕೆಲ ವಾರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ತೀವ್ರವಾದ ಕರೆಕ್ಷನ್ (Correction) ಅಂದರೆ ಬೆಲೆ ಕುಸಿತ ಸಂಭವಿಸಬಹುದು ಎಂದು ತಿಳಿಸಿದ್ದಾರೆ.

PACE 360 ಕಂಪನಿಯು ಪ್ರಸ್ತುತ $2.4 ಶತಕೋಟಿ ಮೌಲ್ಯದ ಆಸ್ತಿಗಳನ್ನು ನಿರ್ವಹಿಸುತ್ತಿದ್ದು, ಜಾಗತಿಕ ಹೂಡಿಕೆ ವಲಯದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ. ಗೋಯೆಲ್ ಅವರ ಪ್ರಕಾರ, ಅಮೂಲ್ಯ ಲೋಹಗಳ ಇತ್ತೀಚಿನ ಬೆಲೆ ಏರಿಕೆ  ಕಾಣಿಸುತ್ತಿದ್ದು, ಈ ಏರಿಕೆ ಶಾಶ್ವತವಾಗಿರುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದಾರೆ.

ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ದಾಖಲೆ ಮಟ್ಟದ ಏರಿಕೆ:

ಈ ವರ್ಷ ಚಿನ್ನದ ಬೆಲೆಗಳು ಹಲವಾರು ಬಾರಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದ್ದು, ಪ್ರಸ್ತುತ $4,000 ದತ್ತ ಸಾಗಿವೆ. ಬೆಳ್ಳಿಯು ಸಹ $50 ಮಟ್ಟವನ್ನು ತಲುಪಿದೆ.

ಬೆಳ್ಳಿಯಲ್ಲಿ ಶೇ. 50 ಕ್ಕಿಂತ ಹೆಚ್ಚು ಕುಸಿತ:

ಮುಂದಿನ ಕೆಲವು ದಿನಗಳಲ್ಲಿ ಅಥವಾ ಹೆಚ್ಚು ಎಂದರೆ ಒಂದೆರಡು ವಾರಗಳಲ್ಲಿ ಬೆಲೆಗಳು ಹೊಸ ಗರಿಷ್ಠವನ್ನು ಮುಟ್ಟುವ ಸಾಧ್ಯತೆ ಇದೆ. ಅದರ ನಂತರ ಬೃಹತ್ ಪ್ರಮಾಣದ ಮಾರಾಟದ ಅಲೆ ಎದುರಾಗಬಹುದು ಎಂದು ತಜ್ಞರು  ಎಚ್ಚರಿಸಿದರು.
ಅಂದಾಜಿನ ಪ್ರಕಾರ, ಚಿನ್ನದಲ್ಲಿ 30–35% ಕರೆಕ್ಷನ್ ಕಾಣಬಹುದು. 2007–08 ಮತ್ತು 2011ರ ಇಳಿಕೆಯ  ನಂತರ ಚಿನ್ನವು 45% ರಷ್ಟು ಕುಸಿದ ಉದಾಹರಣೆಯನ್ನೂ ಕೂಡ ನೋಡಬಹುದು. ಒಟ್ಟಾರೆಯಾಗಿ ಬೆಳ್ಳಿಯಲ್ಲಿ ಶೇ. 50 ಕ್ಕಿಂತ ಹೆಚ್ಚಿನ ಬೆಲೆ ಕುಸಿತ ಕಾಣುವ ಸಾಧ್ಯತೆ ಇದೆ.

$2,600–$2,700 ಮಟ್ಟದಲ್ಲಿ ಚಿನ್ನ ಮತ್ತೆ ಹೂಡಿಕೆ ಆಕರ್ಷಕವಾಗಬಹುದು:

ತಂತ್ರಜ್ಞರ ಪ್ರಕಾರ, ಚಿನ್ನದ ಬೆಲೆ $2,600–$2,700 ಮಟ್ಟಕ್ಕೆ ತಲುಪಿದಾಗ ಅದು ಮತ್ತೆ ಬಲವಾದ ಹೂಡಿಕೆ ಆಯ್ಕೆಯಾಗಿ ಹೊರಹೊಮ್ಮಬಹುದು. ಆದರೆ ಜಾಗತಿಕ ಆರ್ಥಿಕಯಲ್ಲಿ  ಬೆಳ್ಳಿಯ ಕೈಗಾರಿಕಾ ಬೇಡಿಕೆ ಕುಗ್ಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಹೂಡಿಕೆದಾರರಿಗೆ ಸ್ಪಷ್ಟ ಸಂದೇಶ:

ಗೋಯೆಲ್ ಅವರ ವಿಶ್ಲೇಷಣೆಯ ಪ್ರಕಾರ, ಅಲ್ಪಾವಧಿಯಲ್ಲಿ ಬೆಲೆಗಳಲ್ಲಿ ಸ್ವಲ್ಪ ಏರಿಕೆ ಕಂಡರೂ, ಪ್ರಸ್ತುತ ಚಿನ್ನ–ಬೆಳ್ಳಿಯ ಏರಿಕೆ ಸುಸ್ಥಿರವಲ್ಲ. ಹೀಗಾಗಿ ಹೂಡಿಕೆದಾರರು ಆಳವಾದ ಕರೆಕ್ಷನ್‌ಗಾಗಿ ಸಿದ್ಧರಾಗಬೇಕು ಎಂದು ತಿಳಿಸಿದ್ದಾರೆ.

ಗಮನಿಸಿ:
ಬೆಳ್ಳಿ $50 ಮಟ್ಟದಲ್ಲಿ :  ಶೇ. 50 ಕ್ಕಿಂತ ಹೆಚ್ಚು ಕರೆಕ್ಷನ್ ಸಾಧ್ಯತೆ.
ಮುಂದಿನ 1–2 ವಾರಗಳಲ್ಲಿ ಪೀಕ್ ತಲುಪಿ ಮಾರಾಟದ ಅಲೆ ಪ್ರಾರಂಭವಾಗಬಹುದು.
ಚಿನ್ನ ಮತ್ತೆ ಹೂಡಿಕೆ ಆಕರ್ಷಕವಾಗಲು $2,600–$2,700 ಮಟ್ಟದ ನಿರೀಕ್ಷೆ ಇದೆ.

WhatsApp Image 2025 09 05 at 10.22.29 AM 3

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories