ಚಿನ್ನದ ಬೆಲೆ (gold price) ಒಂದೇ ದಿನದಲ್ಲಿ ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 650ರೂ ಏರಿಕೆ!
ಚಿನ್ನ (gold) ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಎಲ್ಲರಿಗೂ ಇಷ್ಟ. ಮುಖ್ಯವಾಗಿ ಹೆಣ್ಣುಮಕ್ಕಳು ಚಿನ್ನವನ್ನು ತುಂಬಾನೆ ಇಷ್ಟಪಡುತ್ತಾರೆ. ಯಾವುದೇ ಸಂಭ್ರಮಗಳಲ್ಲಿ ಹೆಣ್ಣು ಮಕ್ಕಳು ಚಿನ್ನವನ್ನು ಧರಿಸಿ ಆ ಸಂಭ್ರಮಕ್ಕೆ ಹೋಗುವುದು ಸರ್ವೇಸಾಮಾನ್ಯ. ಹಣ ಇರುವಂತಹ ಕುಟುಂಬದ ಮಹಿಳೆಯರು ಪ್ರತಿ ತಿಂಗಳು ಚಿನ್ನವನ್ನು ಖರೀದಿಸುತ್ತಾರೆ. ಆದರೆ ಹಣ ಇರದೆ ಇರುವಂತಹ ಹೆಣ್ಣು ಮಕ್ಕಳು ಚಿನ್ನದ ಬೆಲೆ ಯಾವಾಗ ಕಡಿಮೆ ಆಗುತ್ತದೆ ಅನ್ನುವುದನ್ನು ಗಮನಿಸಿಕೊಂಡು ಚಿನ್ನವನ್ನು ಖರೀದಿಸಿರುತ್ತಾರೆ. ಇದೀಗ ದೀಪಾವಳಿ ಹಬ್ಬದ (Diwali festival) ಹೊತ್ತಲ್ಲೇ ಚಿನ್ನದ ಬೆಲೆ ಏರಿಕೆಯಾಗಿದೆ. ಎಷ್ಟು ಬೆಲೆ ಏರಿಕೆಯಾಗಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನವು ಹೆಚ್ಚಿನ ಮೌಲ್ಯದ (valuable thing) ಸರಕಾಗಿದ್ದು, ಚಿನ್ನದ ಬೆಲೆಯಲ್ಲಿ ಆಗಾಗ ಏರಿಕೆ ಇಳಿಕೆ ಆಗುತ್ತಲೇ ಇರುತ್ತದೆ. ಶುಭ ಸಮಾರಂಭವಿದ್ದಾಗ ಬಂಗಾರದ ಅವಶ್ಯಕತೆ ಬಹಳ ಇರುತ್ತದೆ. ಹಬ್ಬದ ಸಂದರ್ಭದಲ್ಲೇ ಚಿನ್ನದ ಬೆಲೆ ಏರಿಕೆಯಾಗಿರುವು ಜನರಲ್ಲಿ ಬೇಸರಮನೆಮಾಡಿದೆ. ಚಿನ್ನ ಕೊಂಡು ಕೊಳ್ಳುವವರಿಗೆ ಇದೊಂದು ಶಾಂಕಿಗ್ ನ್ಯೂಸ್ ಎನ್ನಬಹುದು. ಯಾಕೆಂದರೆ, ಚಿನ್ನದ ಬೆಲೆಯಲ್ಲಿ ಇದೀಗ ಏರಿಕೆ ಕಂಡಿದ್ದು, ನಿನ್ನೆಯಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.
ಚಿನ್ನದ ಬೆಲೆ ಭಾರಿ ಏರಿಕೆ ಕಂಡಿದೆ (gold rate increased):
ಹೌದು, ಚಿನ್ನದ ಬೆಲೆಯಲ್ಲಿ ಭಾರಿ ಏರಕೆಯಾಗಿದೆ. ನಿನ್ನೆಯಿಂದ ಬೆಲೆ ಏರಿಕೆ ಕಂಡಿದ್ದು ಚಿನ್ನ ತೆಗೆದುಕೊಳ್ಳಲು ಹೋಗುವ ಮಹಿಳೆಯರು ಸ್ವಲ್ಪ ಎಚ್ಚರವಿಹಿಸಿದರೆ ಒಳ್ಳೆಯದು. ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 650ರೂ. ಏರಿಕೆಯಾಗಿದೆ. ಇದೀಗ 10 ಗ್ರಾಂ ಚಿನ್ನದ ಬೆಲೆ 80,450ರೂ ಗೆ ಏರಿಕೆಯಾಗಿದೆ. ಈ ಹಿಂದೆ ಅಂದರೆ ಸೋಮವಾರದವರೆಗೂ ಪ್ರತಿ ಗ್ರಾಂ ಗೆ 79,800 ರೂ ಗಳಷ್ಟಿತ್ತು. ಆದರೆ ಮಂಗಳವಾರದಿಂದ ಬೆಲೆ ಏರಿಕೆಯಾಗಿದೆ.
ಒಡವೆ ಚಿನ್ನದ ಬೆಲೆ ಅಂದ್ರೆ 18 ಕ್ಯಾರಟ್ ಚಿನ್ನದಲ್ಲಿ 10 ಗ್ರಾಂ ಗೆ 490 ರೂ ಏರಿಕೆ ಕಂಡಿದ್ದು, ಒಟ್ಟು 60,340 ರೂಗಳಿಗೆ ಏರಿಕೆಯಾಗಿದೆ. ಅದೇರೀತಿಯಾಗಿ 22 ಕ್ಯಾರೆಟ್ ಚಿನ್ನ 10 ಗ್ರಾಂ ಗೆ ಏರಿಕೆ ಕಂಡಿದ್ದು, ಒಟ್ಟು 73,750 ರೂಗಳಿಗೆ ಏರಿಕೆಯಾಗಿದೆ. ಹಾಗೆ 24 ಕ್ಯಾರೆಟ್ ಚಿನ್ನ 10 ಗ್ರಾಂ ಗೆ 650 ರೂ. ಏರಿಕೆಯಾಗಿದ್ದು, 80,450 ರೂಗಳಿಗೆ ಏರಿಕೆಯಾಗಿದೆ.
ಬೆಳ್ಳಿಯ ಬೆಲೆಯಲ್ಲೂ ಏರಿಕೆ (silver price also increased):
ಚಿನ್ನದ ಬೆಲೆ ಏರಿಕೆಯಿಂದಲೇ ಜನರು ಬೇಸರಗೊಂಡಿದ್ದಾರೆ. ಇದು ಸಾಲದು ಎಂಬಂತೆ ಬೆಳ್ಳಿ ಬೆಲೆ ಕೂಡ 2000 ರೂಪಾಯಿ ಏರಿಕೆ ಕಂಡಿದೆ. ಈ ನಿಟ್ಟಿನಲ್ಲಿ ಪ್ರತೀ ಕೆಜಿ ಬೆಳ್ಳಿ ದರ 99,000 ರೂಗೆ ಏರಿಕೆಯಾಗಿದೆ ಎಂದು ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ತಿಳಿಸಿದೆ. ಹಬ್ಬದವೇಳೆಯಲ್ಲಿ ಚಿನ್ನ ಬೆಳ್ಳಿ ಬೆಲೆ ಏರಿಕೆಯಾಗಿರುವುದರಿಂದ ಗ್ರಾಹಕರಿಗೆ ಬಹಳ ಬೇಸರವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತೆ ಇಳಿಕೆಯಾಗುವ ಸಾಧ್ಯತೆಯಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




