ಚಿನ್ನ ಪ್ರಿಯರಿಗೆ ಗುಡ್‌ನ್ಯೂಸ್, “ಒನ್ ನೇಷನ್ ಒನ್ ಗೋಲ್ಡ್ ರೇಟ್ ” ಇಲ್ಲಿದೆ ಸಂಪೂರ್ಣ ಮಾಹಿತಿ….!
ದುಬಾರಿ ವಸ್ತುಗಳಲ್ಲಿ ಚಿನ್ನ(Gold)ವು ಒಂದು, ಮೈಮೇಲೆ ಚಿನ್ನವಿದ್ದರೆ ಒಂದು ಗತ್ತು ಇರುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡ ಚಿನ್ನವನ್ನು ಇಷ್ಟಪಡುತ್ತಾರೆ ಮತ್ತು ಧರಿಸಿಕೊಳ್ಳುತ್ತಾರೆ. ಅದರಲ್ಲೂ ಮಹಿಳೆಯರಂತೂ ಹೇಳುವುದೇ ಬೇಡ ತಮ್ಮ ಬಳಿ ಚಿನ್ನ ಇದ್ದಷ್ಟು ಸಾಕಾಗುವುದಿಲ್ಲ. ಈಗಂತೂ ಚಿನ್ನದ ಬೆಲೆ (Gold rate) ಗಗನಕ್ಕೆರಿದೆ. ಎಲ್ಲರೂ ಯಾವಾಗ ಚಿನ್ನದ ಬೆಲೆ ಇಳಿಕೆಯಾಗುತ್ತದೆ ಎಂದು ಕಾಯುತ್ತಿರುತ್ತಾರೆ. ಆದರೆ ಇದೀಗ ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್ ಬಂದಿದೆ. “ಒನ್ ನೇಷನ್ ಒನ್ ಗೋಲ್ಡ್ ರೇಟ್ ” ಎಂಬ ನೀತಿಯನ್ನು ಜಾರಿಗೆ ತರಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿನ್ನದ ಬೆಲೆಯಲ್ಲಿ “ಒಂದು ರಾಷ್ಟ್ರ, ಒಂದು ಬೆಲೆ” ನೀತಿ ಜಾರಿ :
ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಲೇ ಇದೆ. ಅಷ್ಟೇ ಅಲ್ಲದೆ ದೇಶದ ಒಂದೊಂದು ರಾಜ್ಯದಲ್ಲೂ ಒಂದೊಂದು ರೀತಿಯಲ್ಲಿ ಚಿನ್ನದ ಬೆಲೆ ಇದೆ. ಇದರಿಂದ ಸಾರ್ವಜನಿಕರಿಗೆ ಬಹಳ ಗೊಂದಲವಿದೆ. ಆದರೆ ಇದೀಗ ಅದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಯಾಕೆಂದರೆ, ಚಿನ್ನದ ಬೆಲೆ ಇಳಿಕೆಗೆ ಸಂಬಂಧಿಸಿ ಇದೀಗ ಒಂದು ರಾಷ್ಟ್ರ, ಒಂದು ಬೆಲೆ ನೀತಿ (One Nation, One Gold Rate Policy) ಜಾರಿಗೆ ಬರುತ್ತಿದೆ.
ಹಲವು ಕಾರಣಗಳಿಂದ ಚಿನ್ನದ ಬೆಲೆ ಹೆಚ್ಚಳ :
ಇರಾನ್ – ಇಸ್ರೇಲ್ ಯುದ್ಧ ಸೇರಿದಂತೆ ಹಲವು ಕಾರಣಕ್ಕೆ ಚಿನ್ನದ ಬೆಲೆ ಹೆಚ್ಚಾಗ್ತಲೇ ಇದೆ. ಹೌದು, ಈಗಷ್ಟೇ ತಿಳಿಸಿದ ಹಾಗೆ ಚಿನ್ನದ ಬೆಲೆ ಪ್ರತಿಗ್ರಾಂಗೆ 8,000 ಹಾಗೂ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 80,000 ಸಾವಿರ ರೂಪಾಯಿ ಗಡಿದಾಟಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಚಿನ್ನ ಬೆಲೆ ಏರಿಕೆಯಾಗಿ ಡೈಮಾಂಡ್ ನ ಬೆಲೆಗೆ ತಲುಪಲುಬಹುದು. ಹೀಗಾದಾಗ ಚಿನ್ನವನ್ನು ಯಾರು ಕೂಡ ಕೊಂಡುಕೊಳ್ಳುವುವರೇ ಇಲ್ಲದಂತಾಗುತ್ತದೆ.
ಒಂದು ರಾಷ್ಟ್ರ, ಒಂದು ಬೆಲೆ ನೀತಿ ಜಾರಿಗೆ ದೇಶದ ಪ್ರಮುಖ ಆಭರಣ ಉದ್ಯಮಗಳು ಮುಂದಾಗಿವೆ :
ಚಿನ್ನದ ಬೆಲೆಯಲ್ಲಿ ಏರಿಕೆಯಾದಾಗನಿಂದಲೂ ಚಿನ್ನ ಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ಹಾಗಾಗಿ ಚಿನ್ನದ ಬೆಲೆ ಇಳಿಕೆಗೆ ಕಾಯುತ್ತಿದ್ದಾರೆ. ಆದರೆ ಇದೀಗ ಗುಡ್ ನ್ಯೂಸ್ ಸಿಕ್ಕಿದಂತಾಗಿದೆ. ಈಗ ಒಂದು ರಾಷ್ಟ್ರ ಒಂದು ಬೆಲೆ ಜಾರಿಗೆ ಬರ್ತಿದ್ದು, ಇದು ನಿಜಕ್ಕೂ ಚಿನ್ನದ ಕೊಳ್ಳುವವರಿಗೆ ಸಿಹಿ ಸುದ್ದಿಯಾಗಿದೆ. ದೇಶದಲ್ಲಿ ಒಂದು ರಾಷ್ಟ್ರ, ಒಂದು ಬೆಲೆ ನೀತಿ ಜಾರಿಗೆ (ONOR) ತರುವುದಕ್ಕೆ ದೇಶದ ಪ್ರಮುಖ ಆಭರಣ ಉದ್ಯಮಗಳು ಮುಂದಾಗಿವೆ. ಇಂಡಿಯನ್ ಜ್ಯುವೆಲರ್ಸ್ (Indian Jewellers) ಮತ್ತು ಬುಲಿಯನ್ ಅಸೋಸಿಯೇಷನ್ ಆಫ್ ಇಂಡಿಯಾ (Bulian Association of India) ಹಾಗೂ ಆಲ್ ಇಂಡಿಯಾ ಜೆಮ್ ಅಂಡ್ ಜ್ಯುವೆಲ್ಲರಿ ಡೊಮೆಸ್ಟಿಕ್ ಕೌನ್ಸಿಲ್ (All india Jem and Jewellery Domestic Counsel) ಉದ್ಯಮವು ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಿದೆ.
ಅಖಿಲ ಭಾರತ ರತ್ನ ಮತ್ತು ಆಭರಣ ಡೊಮೆಸ್ಟಿಕ್ ಕೌನ್ಸಿಲ್ ಏಕರೂಪ ಚಿನ್ನದ ಬೆಲೆ ನೀತಿಗೆ ಮುಂದಾಗುತ್ತಿದ್ದು, ಎಲ್ಲಾ ಕಡೆ ಒಂದೇ ಚಿನ್ನದ ಬೆಲೆಗೆ ವಿವಿಧ ಪ್ರತಿಷ್ಠಿತ ಚಿನ್ನಾಭರಣ ಕಂಪನಿಗಳೊಂದಿಗೆ (Jewellery companies) ಚರ್ಚೆ ನಡೆದಿದೆ. ಈ ರೀತಿ ಮಾಡುವುದರಿಂದ ಗ್ರಾಹಕರ ವಿಶ್ವಾಸ ಹೆಚ್ಚಾಗುತ್ತದೆ. ದೇಶದಲ್ಲಿ ಏರರೂಪ ಚಿನ್ನದ ಬೆಲೆ ನಿಗದಿ ಮಾಡುವುದರಿಂದ ಗ್ರಾಹಕರಿಗೆ ಹೆಚ್ಚು ಲಾಭವಾಗಲಿದೆ.
ಜನರು ಎಲ್ಲಾ ಕಡೆಯೂ ಒಂದೇ ಬೆಲೆಯಲ್ಲಿ ಚಿನ್ನವನ್ನು ಖರೀದಿಸಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




