Picsart 25 11 01 22 32 04 798 scaled

18 ತಿಂಗಳು ₹35,100 ಮೌಲ್ಯದ Gemini Pro ಎಐ ಸೇವೆಗಳು ಜಿಯೋ ಬಳಕೆದಾರರಿಗೆ ಉಚಿತ!

Categories:
WhatsApp Group Telegram Group

ಭಾರತದಲ್ಲಿ ಡಿಜಿಟಲ್ ಕ್ರಾಂತಿ ವೇಗವಾಗಿ ಬೆಳೆಯುತ್ತಿರುವ ಈ ಸಮಯದಲ್ಲಿ, ಕೃತಕ ಬುದ್ಧಿಮತ್ತೆ (AI) ಜೀವನದ ಪ್ರತಿಯೊಂದು ಕ್ಷೇತ್ರವನ್ನೂ ಪ್ರವೇಶಿಸುತ್ತಿದೆ. ಸ್ಮಾರ್ಟ್‌ಫೋನ್ ಬಳಕೆ, ಆನ್‌ಲೈನ್ ಅಧ್ಯಯನ, ಕಂಟೆಂಟ್ ಸೃಷ್ಟಿ, ಗೇಮಿಂಗ್, ವ್ಯವಹಾರ ನಿರ್ವಹಣೆ ಎಲ್ಲೆಡೆ AI ಸಾಧನಗಳು ಅವಶ್ಯಕವಾಗುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತದ ಅತಿ ದೊಡ್ಡ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ಜಿಯೋ, AI ಬಳಕೆಯನ್ನು ಸಾಮಾನ್ಯ ಜನರಿಗೆ ತಲುಪಿಸುವ ಮಹತ್ವಾಕಾಂಕ್ಷೆಯ ಹೆಜ್ಜೆಯನ್ನು ಇಟ್ಟಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗೂಗಲ್‌ನೊಂದಿಗೆ ಕೈಜೋಡಿಸಿ, ಯುವಕರಿಗೆ ಹಾಗೂ ಮುಂದಿನ ದಿನಗಳಲ್ಲಿ ಎಲ್ಲಾ ಜಿಯೋ ಗ್ರಾಹಕರಿಗೆ ಅತ್ಯಂತ ದುಬಾರಿ ಮತ್ತು ಪ್ರೀಮಿಯಂ ಎಐ ಸೇವೆಗಳನ್ನು ಉಚಿತವಾಗಿ ನೀಡುವ ದೊಡ್ಡ ಮಟ್ಟದ ಘೋಷಣೆ ಮಾಡಿದೆ. ಇದು ಭಾರತದಲ್ಲಿ AI ಅನ್ನು ಸಾಮಾನ್ಯ ಜನರ ಮಟ್ಟಕ್ಕೆ ತರುವ ಅತ್ಯಂತ ದೊಡ್ಡ ಉಪಕ್ರಮಗಳಲ್ಲಿ ಒಂದೆಂದು ಹೇಳಬಹುದು.

18 ತಿಂಗಳು 35,100 ರೂ ಮೌಲ್ಯದ ಗೂಗಲ್ ಜೆಮಿನಿ ಪ್ರೊ ಉಚಿತ ಪ್ರವೇಶ!:

ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್ ಮತ್ತು ಗೂಗಲ್ ನಡುವಿನ ಹೊಸ ಪಾಲುದಾರಿಕೆಯಡಿ, ಜಿಯೋ ಗ್ರಾಹಕರಿಗೆ ಗೂಗಲ್ ಜೆಮಿನಿ ಪ್ರೊ (Gemini Pro) ಯೋಜನೆಗೆ 18 ತಿಂಗಳವರೆಗೆ ಉಚಿತ ಬಳಕೆ ಸಿಗಲಿದೆ.
ಈ ಸೇವೆಯಲ್ಲಿ ವರ್ಷಕ್ಕೆ ಪಾವತಿ ಮೌಲ್ಯ ಸುಮಾರು ₹35,100, ಆದರೆ ಜಿಯೋ ಬಳಕೆದಾರರಿಗೆ ಸಂಪೂರ್ಣ ಉಚಿತ!

ಮೊದಲ ಹಂತದಲ್ಲಿ 18 ರಿಂದ 25 ವರ್ಷದ ಜಿಯೋ ಬಳಕೆದಾರರಿಗೆ ಮಾತ್ರ:

ಈ ಆಫರ್ ಪ್ರಾರಂಭಿಕ ಹಂತದಲ್ಲಿ,
18–25 ವರ್ಷದ ಯುವ ಜಿಯೋ ಗ್ರಾಹಕರಿಗೆ ಮಾತ್ರ ಲಭ್ಯ.
ಮುಂದಿನ ಹಂತಗಳಲ್ಲಿ ಎಲ್ಲಾ ಜಿಯೋ ಬಳಕೆದಾರರಿಗೆ ವಿಸ್ತರಿಸಲಿದ್ದಾರೆ ಎಂದು ಕಂಪನಿ ಹೇಳಿದೆ.
ಈ ಆಫರ್ ಜಿಯೋ 5G Unlimted plans ಇರುವ ಗ್ರಾಹಕರಿಗೆ ಮಾತ್ರ ಅವಕಾಶ.

ಜೆಮಿನಿ ಪ್ರೊ ಯೋಜನೆ ಒಳಗೊಂಡಿರುವ ಸೌಲಭ್ಯಗಳು ಹೀಗಿವೆ:

ಈ ಉಚಿತ ಆಫರ್ ಅಡಿಯಲ್ಲಿ ಬಳಕೆದಾರರು ಕೆಳಗಿನ ಮೌಲ್ಯಯುತ AI ಸೇವೆಗಳನ್ನು ಪಡೆಯುತ್ತಾರೆ,
Gemini 2.5 ಪ್ರೊ – ಹೊಸ ತಲೆಮಾರಿನ ಅತ್ಯಾಧುನಿಕ ಎಐ ಮಾದರಿ.
Nana Banana, Viva 3.1 ಮಾದರಿಗಳ ಮೂಲಕ ಅದ್ಭುತ ಫೋಟೋ-ವಿಡಿಯೋ ಸೃಷ್ಟಿ.
ಅಧ್ಯಯನ ಮತ್ತು ಸಂಶೋಧನೆಗಾಗಿ Notebook LM ಗೆ ಹೆಚ್ಚಿನ ಪ್ರವೇಶ.
2 TB Google Cloud Storage ಉಚಿತ.
ಪ್ರೀಮಿಯಂ AI ಉಪಕರಣಗಳ ಪೂರ್ಣ ಬಳಕೆ.
ವೈಯಕ್ತಿಕ, ವೃತ್ತಿಪರ, ಡೆವಲಪ್‌ಮೆಂಟ್ ಕಾರ್ಯಗಳಿಗೆ AI ಏಜೆಂಟ್‌ಗಳ ಬಳಕೆ.

ರಿಲಯನ್ಸ್ ಮತ್ತು ಗೂಗಲ್‌ಗಳ ಪಾಲುದಾರಿಕೆಯ ಉದ್ದೇಶವನ್ನು ಸ್ಪಷ್ಟ:

ಮುಕೇಶ್ ಅಂಬಾನಿ ಹೇಳಿರುವ ಪ್ರಕಾರ, ಭಾರತದ 145 ಕೋಟಿ ಜನರು AI ಸೇವೆಗಳನ್ನು ಬಳಸುವಂತೆ ಮಾಡುವುದು ನಮ್ಮ ಗುರಿ. ಗೂಗಲ್‌ನಂತಹ ದೀರ್ಘಕಾಲೀನ ಪಾಲುದಾರರೊಂದಿಗೆ, ದೇಶವನ್ನು AI-ಸಕ್ರಿಯ ರಾಷ್ಟ್ರವನ್ನಾಗಿ ರೂಪಿಸುವುದು ನಮ್ಮ ಮಿಷನ್ ಎಂದು ತಿಳಿಸಿದ್ದಾರೆ.

ಇನ್ನು ಈ ಕುರಿತಾಗಿ ಸುಂದರ್ ಪಿಚೈ ಮಾತನಾಡಿದ್ದು, ರಿಲಯನ್ಸ್ ಭಾರತದಲ್ಲಿ ಡಿಜಿಟಲ್ ಕ್ರಾಂತಿಯ ಪ್ರಮುಖ ಪಾಲುದಾರ. ಈಗ ನಾವು ಈ ಸಹಯೋಗವನ್ನು AI ಯುಗಕ್ಕೆ ಕೊಂಡೊಯ್ಯುತ್ತಿದ್ದೇವೆ. ಗೂಗಲ್‌ನ ಅತ್ಯಾಧುನಿಕ AI ತಂತ್ರಜ್ಞಾನದ ಪ್ರಯೋಜನವನ್ನು ಭಾರತದ ಗ್ರಾಹಕರು, ಉದ್ಯಮಗಳು, ಡೆವಲಪರ್‌ಗಳು ಪಡೆಯಲಿದ್ದಾರೆ.

ಭಾರತ AI ಕೇಂದ್ರವಾಗಲು ರಿಲಯನ್ಸ್–ಗೂಗಲ್ ಹೆಜ್ಜೆ:

ಈ ಪಾಲುದಾರಿಕೆಯಡಿ ಭಾರತದಲ್ಲಿ,
ಗೂಗಲ್‌ನ Tensor Processing Units (TPUs) ಬಳಕೆಯನ್ನು ವಿಸ್ತರಿಸಲಾಗುವುದು.
ಭಾರತೀಯ ಕಂಪನಿಗಳು ದೊಡ್ಡ ಪ್ರಮಾಣದ AI ಮಾದರಿಗಳನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ.
Reliance Intelligence Limited ಅನ್ನು Google Cloud Strategic Partner ಎಂದು ಘೋಷಿಸಲಾಗಿದೆ.
Gemini Enterprise ವ್ಯವಹಾರ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಕೆಗೆ ತರಲಾಗುತ್ತದೆ.

ಒಟ್ಟಾರೆಯಾಗಿ, ಜಿಯೋ ಮತ್ತು ಗೂಗಲ್ ಪಾಲುದಾರಿಕೆ ಕೇವಲ ಒಂದು ಆಫರ್ ಮಾತ್ರವಲ್ಲ, ಭಾರತವನ್ನು ಜಾಗತಿಕ AI ಕೇಂದ್ರವನ್ನಾಗಿಸುವ ಮಹಾ ಯೋಜನೆ. ಯುವಕರಿಗೆ ಅತ್ಯಾಧುನಿಕ AI ತಂತ್ರಜ್ಞಾನ ಉಚಿತವಾಗಿ ಕಲಿಯುವ ಅವಕಾಶ ಇದರಲ್ಲಿ ಸಿಗುತ್ತದೆ. ಡಿಜಿಟಲ್ ಇಂಡಿಯಾ 2.0 ಗೆ ವೇಗ ನೀಡುವ ಬೃಹತ್ ಹೆಜ್ಜೆಯೂ ಕೂಡ ಆಗಿದೆ.  ಆದ್ದರಿಂದ ಜಿಯೋ ಬಳಕೆದಾರರಿಗೆ ಇದು ನಿಜಕ್ಕೂ ಇತಿಹಾಸದಲ್ಲೇ ದೊಡ್ಡ AI ಆಫರ್ ಎಂದೇ ಹೇಳಬಹುದು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories