“ಗಂಗಾಕಲ್ಯಾಣ ಯೋಜನೆ: ಬೋರ್‌ವೆಲ್ ಸಹಾಯಧನದಿಂದ ರೈತರ ಕೃಷಿ ವ್ಯವಸ್ಥೆಗೆ ನೀರಾವರಿ ಸೌಲಭ್ಯ”
ಭೂಮಿಯ ಮೇಲೆ ನೀರು ಅತ್ಯವಶ್ಯಕ. ನೀರು (Water) ಇಲ್ಲದೆ ಯಾವ ಜೀವಿಯು ಭೂಮಿಯ ಮೇಲೆ ಜೀವಿಸಲು ಆಗುವುದಿಲ್ಲ. ಅದರಲ್ಲೂ ರೈತರಿಗೆ ಕೃಷಿ ಮಾಡಲು ಬಹಳ ಮುಖ್ಯವಾಗಿ ಬೇಕಾಗಿರುವುದು ನೀರು. ನೀರು ಇಲ್ಲದೆ ಯಾವ ಕೃಷಿ (Agriculture) ಮಾಡಲು ಅಸಾಧ್ಯ. ಇನ್ನು, ಬರಗಾಲದ ಬಂತೆಂದರೆ ರೈತಪಡುವ ಕಷ್ಟ ಹೇಳತಿರದು. ಕೇವಲ ಮಳೆಯನ್ನೇ ನಂಬಿಕೊಂಡು ಕೃಷಿ ಮಾಡಲು ಅಸಾಧ್ಯ. ಆದ್ದರಿಂದ ರೈತ ಕೃಷಿ ಚಟುವಟಿಕೆಗಳಿಗೆ ಬೋರ್ವೆಲ್ ಗಳನ್ನು ಕೊರೆಸಿ ನೀರನ್ನು ಸಸ್ಯಗಳಿಗೆ ಒದಗಿಸುತ್ತಾನೆ. ಆದ್ದರಿಂದ ಸರ್ಕಾರ ಕೃಷಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಗಂಗಾಕಲ್ಯಾಣ ಯೋಜನೆಯಡಿ (Ganga Kalyana Scheme) ಬೋರ್‌ವೆಲ್‌ಗಳನ್ನು (Borewell)ಕೊರೆಸಿ ಕೊಡಲಾಗುತ್ತದೆ. 2024-25ನೇ ಸಾಲಿನ ಗಂಗಾಕಲ್ಯಾಣ ಯೋಜನೆಯಡಿ ಬೋರ್‌ವೆಲ್‌ಗಾಗಿ (Borewell) ಸಹಾಯಧನ ಪಡೆಯಲು ರಾಜ್ಯ ಸರ್ಕಾರ(State Govt) ರೈತರಿಂದ ಅರ್ಜಿ ಆಹ್ವಾನಿಸಿದೆ. ಯಾರೆಲ್ಲಾ ಈ ಸೌಲಭ್ಯ ಪಡೆಯಲು ಅರ್ಹರು? ಅರ್ಹತಾ ಮಾನದಂಡಗಳೇನು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಗಂಗಾಕಲ್ಯಾಣ ಯೋಜನೆ (Ganga Kalyana Scheme) ಅತ್ಯಂತ ಜನಪ್ರಿಯವಾಗಿರುವಂತಹ ಯೋಜನೆ. ರೈತರಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಸಲು ಆರ್ಥಿಕ ನೆರವು (Economic help) ನೀಡಲಾಗುತ್ತಿದೆ. ಇದರಿಂದ ಬೆಳೆಗಳನ್ನು ಬೆಳೆದುಕೊಂಡು ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಈಗಾಗಲೇ ಅನೇಕೆ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.
ಸಹಾಯಧನದ ಪ್ರಮಾಣ ಎಷ್ಟು?:
ಸಹಾಯಧನವು 1.5 ಲಕ್ಷ ರೂಪಾಯಿಯಿಂದ 3.50 ಲಕ್ಷ ರೂಪಾಯಿಗಳವರೆಗೆ ನೀಡಲಾಗುತ್ತದೆ, ಇದು ಬೋರ್‌ವೆಲ್ (Borwel) ಕೊರೆಸಲು ಮತ್ತು ಪಂಪ್‌ಸೆಟ್ ಸ್ಥಾಪನೆಗೆ ಅನುವು ಮಾಡಿಕೊಡುತ್ತದೆ. ರೈತರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಮತ್ತು ಉತ್ತಮ ಬೆಳೆಗಳನ್ನು ಉತ್ಪಾದಿಸಲು ಈ ಸಹಾಯಧನವನ್ನು ಬಳಕೆ ಮಾಡಬಹುದು.
ಈ ಯೋಜನೆಗೆ ಅರ್ಜಿ ಹಾಕಲು ಯಾರು ಅರ್ಹರು (Qualifications) ?
ಮೊದಲಿಗೆ ಅರ್ಜಿದಾರರು ಕರ್ನಾಟಕ(karnataka) ಖಾಯಂ ನಿವಾಸಿಯಾಗಿರಬೇಕು.
1.20 ಎಕರೆಯಿಂದ 5 ಎಕರೆ ಜಮೀನು ಹೊಂದಿರಬೇಕು.
ಪರಿಶಿಷ್ಟ ಪಂಗಡಕ್ಕೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯಡಿ ಅರ್ಜಿ (Apllication) ಸಲ್ಲಿಸಲು ಅವಕಾಶವಿರುತ್ತದೆ.
ಅರ್ಜಿದಾರನ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು.
ಈಗಾಗಲೇ ಆಯಾ ಜಾತಿ ಸಮುದಾಯದ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅರ್ಜಿದಾರನು ಕೇಂದ್ರ ಅಥವಾ ರಾಜ್ಯ ಸರ್ಕಾರದ (State government) ಹುದ್ದೆಯಲ್ಲಿ ಇರಬಾರದು.
ಅರ್ಜಿದಾರರ ಹೆಸರಿನಲ್ಲಿ ಕೃಷಿ ಜಮೀನು ಹೊಂದಿರುವುದು ಕಡ್ಡಾಯವಾಗಿದೆ.
ಈ ಯೋಜನೆಯ ಪ್ರಯೋಜನ ಪಡೆಯಬೇಕೆಂದರೆ ರೈತರು ಯಾವುದೇ ರೀತಿಯ ನೀರಾವರಿ ಸೌಲಭ್ಯ ಹೊಂದಿಲ್ಲದವರಾಗಿರಬೇಕು.
ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
ಅರ್ಜಿದಾರನು ಆಧಾರ್ ನಂಬರ್ (Adhar number) ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು (Documents) ?
ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್.
ಹಿಡುವಳಿ ಪ್ರಮಾಣ ಪತ್ರ.
ಬ್ಯಾಂಕ್ ಪಾಸ್ ಬುಕ್ ಪ್ರತಿ.
ಸಣ್ಣ/ಅತಿ ಸಣ್ಣ ರೈತರ ದೃಢೀಕರಣ ಪತ್ರ.
ಜಮೀನಿನ ಪಹಣಿ (RTC).
ಅರ್ಜಿದಾರರ ಪೋಟೋ.
ಬಾವಿ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ (ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಪಡೆಯಬೇಕು).
ಎಲ್ಲಿ ಅರ್ಜಿ ಸಲ್ಲಿಸಬೇಕು.?
ಅರ್ಹ ಫಲಾಪೇಕ್ಷಿಗಳು ಗ್ರಾಮ ಒನ್/ಬೆಂಗಳೂರು ಒನ್/ಕರ್ನಾಟಕ ಒನ್ ಕಂಪ್ಯೂಟರ್ ಸೆಂಟರ್ ಗಳನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು. ಅಥವಾ https://sevasindhu.karnataka.gov.in/Sevasindhu/Kannada ಸೇವಾ ಸಿಂದು ಪೋರ್ಟಲ್ (Sevasindhu portal) ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು. ಎಲ್ಲಾ ಅರ್ಹ ಫಲಾನುಭವಿಗಳು ಅಗತ್ಯ ದಾಖಲಾತಿಗಳ ಸಮೇತ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ (For more information):
ಯೋಜನೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದರೆ ಅಥವಾ ಯೋಜನೆಯನ್ನು ಹೆಚ್ಚಿನ ವಿವರಗಳಿಂದ ತಿಳಿದುಕೊಳ್ಳಲು, ಕಲ್ಯಾಣ ಮಿತ್ರ 24×7 ಸಹಾಯವಾಣಿ 9482300400 ಗೆ ಕರೆಮಾಡಬಹುದು. ಮತ್ತು ಸಾಮಾಜಿಕ ಮಾಧ್ಯಮವಾದ Xನಲ್ಲಿ (@SWDGok) ಫಾಲೋ ಮಾಡಿ, ಅಗತ್ಯ ಮಾಹಿತಿಯನ್ನು ಪಡೆಯಬಹುದು.
ಈ ಯೋಜನೆಯ ಮೂಲಕ, ರೈತರಿಗೆ ಸುಸ್ಥಿರ ಕೃಷಿ ವ್ಯವಸ್ಥೆ ನಿರ್ಮಿಸಲು ಮತ್ತು ಆರ್ಥಿಕವಾಗಿ ಸಬಲರಾಗಲು ಸಹಾಯ ಮಾಡುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.