- ಗಜ್ಜುಗದ ಬಳ್ಳಿ: ನಾವು ಚಿಕ್ಕವರಿದ್ದಾಗ ಗಜ್ಜುಗದ ಬೀಜಗಳನ್ನು ಕಲ್ಲಿಗೆ ಉಜ್ಜಿ ಗೆಳೆಯರ ಕೈಗೋ, ತೊಡೆಗೋ ಇಟ್ಟು ಬಿಸಿ ಮುಟ್ಟಿಸುತ್ತಿದ್ದೆವು. ಗಜ್ಜುಗದ ಬೀಜಗಳನ್ನು ನಾವು ಗೋಲಿಯಂತೆ ಆಟಕ್ಕೆ ಬಳಸುತ್ತಿದ್ದೆವು. ಆಟವಾಡುವಾಗ ಗಾಯ ಮಾಡಿಕೊಂಡು ಅಳುತ್ತ ಮನೆಗೆ ಹೋದಾಗ ಅವ್ವ ಗಜ್ಜುಗದ ಬೀಜವನ್ನು ಸಾಣೇಕಲ್ಲಿನ ಮೇಲೆ ತಿಕ್ಕಿ ಗಾಯದ ಮೇಲೆ ಲೇಪನ ಮಾಡುತ್ತಿದ್ದರು. ಇಂಥ ಗಜ್ಜುಗವನ್ನು ಬಹಳ ವರ್ಷಗಳಿಂದ ನಾನು ನೋಡಿರಲಿಲ್ಲ. ಮೊನ್ನೆ ಅಳಲಗೇರಿ ಸಂರಕ್ಷಿತ ಕೃಷ್ಣಮೃಗ ಅಭಯಾರಣ್ಯಕ್ಕೆ ಹೋದಾಗ ಈ ಪೊದರು ಕಣ್ಣಿಗೆ ಬಿತ್ತು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಮುಳ್ಳು ಪೊದರು ಗಿಡ, ತನ್ನ ಮುಳ್ಳುಗಳ ನೆರವಿನಿಂದ ಬೇರೆ ಸಸ್ಯಗಳಿಗೆ ಅಂಟಿಕೊಂಡು ಬೆಳೆಯುತ್ತದೆ. ಉಷ್ಣವಲಯ ಪ್ರದೇಶದ ಬೇಲಿಗಳಲ್ಲಿ ಹೆಚ್ಚು ಕಂಡುಬರುತ್ತದೆ.
ಲೆಗ್ಯೂಮಿನೇಸಿ ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು ಸಿಸಾಲ್ವಿನಿಯಾ ಬೊಂಡುಸೆಲ್ಲ ಎಂದಿದೆ. ಬೀಜಗಳು ಕಣ್ಣುಗುಡ್ಡೆಯಂತೆ ಕಾಣುವುದರಿಂದ ಸಂಸ್ಕೃತದಲ್ಲಿ ಕುಬೇರಾಕ್ಷಿ ಎನ್ನುವರು.

ಬೂದುಬಣ್ಣದ ರೆಂಬೆಗಳಲ್ಲಿ ಒಂದರಿಂದ ಎರಡು ಅಡಿ ಉದ್ದದ ಸಂಯುಕ್ತ ಎಲೆಗಳಿರುತ್ತವೆ. ಕಾಂಡದ ಮೇಲೆ ಗಡುಸಾದ, ಚೂಪಾದ ಮುಳ್ಳುಗಳುಂಟು. ಗಜ್ಜುಗದ ಮುಖ್ಯ ಲಕ್ಷಣ ಮುಳ್ಳುಗಳು. ಹಳದಿ ಬಣ್ಣದ ಹೂಗಳು ರೆಸೀಮ್ ಮಾದರಿಯವು. ಹೂಗಳು ಗೊಂಚಲಲ್ಲಿ ಇಳಿಬಿದ್ದಿರುತ್ತವೆ. ಪ್ರತಿ ಹೂವಿನಲ್ಲಿ ಐದು ಪುಷ್ಪಪತ್ರಗಳು ಮತ್ತು ಐದು ಪುಷ್ಪದಳಗಳಿರುತ್ತವೆ. ಕಾಯಿ ಪಾಡ್ ಮಾದರಿಯದು. ಕಾಯಿಯ ಮೇಲೂ ಮುಳ್ಳುಗಳಿರುತ್ತವೆ. ಒಳಗೆ 1-3 ಬೀಜಗಳು ಇರುತ್ತವೆ. ಬೀಜದ ಹೊರಮೈ ನುಣುಪಾಗಿದೆ. ಇದಕ್ಕೆ ಬೂದುಬಣ್ಣವಿದ್ದು, ಹೊಳಪಾಗಿದೆ.
ಗಜ್ಜುಗದ ಗಿಡದ ಉಪಯೋಗಗಳು ಹಲವಾರು. ಇದರ ಎಳೆಯ ಎಲೆಗಳನ್ನು ಯಕೃತ್ತಿನ ವ್ಯಾಧಿಗಳನ್ನು ನಿವಾರಿಸಲು ಉಪಯೋಗಿಸುತ್ತಾರೆ. ಎಲೆಯಿಂದ ತಯಾರಿಸಿದ ಲೇಪವನ್ನು ಹಲ್ಲುನೋವಿಗೆ ಬಳಸುವುದಿದೆ. ಊತಗಳನ್ನು ಇಳಿಸಲು ಎಲೆ ಮತ್ತು ಬೀಜಗಳನ್ನು ಬಳಸುತ್ತಾರೆ. ಎಲೆ ಮತ್ತು ತೊಗಟೆಗಳಿಗೆ ಜಂತುನಾಶಕ, ವಾಂತಿಕಾರಕ, ಜ್ವರಶಾಮಕ ಗುಣಗಳಿವೆ. ಬೀಜದಿಂದ ತೆಗೆಯುವ ಎಣ್ಣೆಯನ್ನು ಮುಖದ ಮೇಲೆ ಮೂಡುವ ನಸುಗಂದು ಬಣ್ಣದ ಮಚ್ಚೆಗಳನ್ನು ನಿವಾರಿಸುವುದಕ್ಕೂ ಕಿವಿಯಿಂದ ಸೋರುವ ಕೀವನ್ನು ನಿಲ್ಲಿಸುವುದಕ್ಕೂ ಉಪಯೋಗಿಸುವುದುಂಟು. ಸಂಧಿವಾತ, ಜ್ವರ, ಬಿಟ್ಟು ಬಿಟ್ಟು ಬರುವ ಗೊರಲು, ಸಾಮಾನ್ಯ ದುರ್ಬಲತೆ ಮುಂತಾದ ಕಾಯಿಲೆಗಳಿಗೆ ಈ ಎಣ್ಣೆ ಸಿದ್ಧೌಷಧ ಎನ್ನುತ್ತಾರೆ. ಹುರಿದ ಬೀಜ ಕುಷ್ಠರೋಗಕ್ಕೆ ಒಳ್ಳೆಯ ಮದ್ದು ಎನ್ನಲಾಗಿದೆ. ಬೀಜದಿಂದ ಬಲವರ್ಧಕ ಮತ್ತು ಕಾಂತಿವರ್ಧಕ ಔಷಧಿಗಳನ್ನು ತಯಾರಿಸುತ್ತಾರೆ.

ಗಜ್ಜುಗ ಈಗ ನಮ್ಮ ನಿಷ್ಕಾಳಜಿಯಿಂದ ಕಣ್ಮರೆಯಾಗುತ್ತಿದೆ. ಹೀಗಾಗಿ ಮಕ್ಕಳಿಗೆ ಆಟಕ್ಕೆ, ಹಿರಿಯರ ಔಷಧಿಗೆ ಇದು
▪️ಆಯುರ್ವೇದ ಮತ್ತು ನಾಟಿ ಔಷಧದಲ್ಲಿ ಗಜ್ಜುಗಕ್ಕೆ ವಿಶೇಷ ಸ್ಥಾನ. ಎಲೆಯಿಂದ ತಯಾರಿಸಿದ ಲೇಪನವನ್ನು ಹಲ್ಲು ನೋವಿನ ಚಿಕಿತ್ಸೆಗೆ ಬಳಸುವರು.
▪️ಎಳೆಯ ಎಲೆಗಳನ್ನು ಯಕೃತ್ತಿನ ವ್ಯಾಧಿಯ ಪರಿಹಾರಕ್ಕೆ ಉಪಯೋಗಿಸುವರು.
▪️ಬೀಜಗಳನ್ನು ಕಲ್ಲಿನ ಮೇಲೆ ನೀರು ಹಾಕಿ ಉಜ್ಜಿ ಊತ ಬಂದಾಗ ಹಚ್ಚಿದರೆ ಊತ ಕಡಿಮೆಯಾಗುತ್ತದೆ.
▪️ಎಲೆ ಮತ್ತು ತೊಗಟೆಗೆ ಜ್ವರ ನಿವಾರಕ, ವಾಂತಿ ನಿವಾರಕ ಗುಣವಿದೆ.
▪️ಬೀಜದಿಂದ ತೆಗೆದ ಎಣ್ಣೆ ಮುಖದ ಮೇಲೆ ಮೂಡುವ ಬಣ್ಣದ ಮಚ್ಚೆಗಳ ನಿವಾರಣೆಗೆ ಪರಿಹಾರ ನೀಡಬಲ್ಲದು. ಅಲ್ಲದೇ ಬೀಜದಿಂದ ಕಾಂತಿವರ್ಧಕ , ಬಲವರ್ಧಕ ಔಷಧಿಯನ್ನು ತಯಾರಿಸುವರು.
▪️ಗಜ್ಜುಗ ಇದು ಆಯುರ್ವೇದ ಔಷಧ ಪದ್ಧತಿಯಲ್ಲಿ ಬಳಕೆಯಲ್ಲಿರುವ ಒಂದು ಸಸ್ಯ. ಇದರ ಸಸ್ಯ ಶಾಸ್ತ್ರೀಯ ಹೆಸರು ಕ್ಯಾಸಲ್ಪೀನಿಯ ಕ್ರಿಸ್ತ (Caesalpinia crista}.ಈ ಸಸ್ಯದಿಂದ ತಯಾರಿಸುವ ಔಷಧವು ಮಧುಮೇಹ ಹಾಗು ಮಲೇರಿಯ ದಂತಹ ಕಾಯಿಲೆಗಳಿಗೆ ರಾಮಬಾಣ.
ವೃಷಣಗಳ ಊತ ಮತ್ತು ನೋವು ಸಂಪಾದಿಸಿ
ಗಜ್ಜುಗದ ಸೊಪ್ಪನ್ನು ನೀರಿನಲ್ಲಿ ನುಣ್ಣಗೆ ಅರೆದು ಸರಿಯಂತೆ ಮಾಡುವುದು. ಈ ಸರಿಯನ್ನು ಸ್ವಲ್ಲಪ ಬಿಸಿ ಮಾಡಿ ಅಂಡಗಳಿಗೆ ಲೇಪಿಸುವುದು, ಮತ್ತು ಅದರ ಮೇಲೆ ಹರಳು ಎಲೆಗಳನ್ನು ಸುತ್ತುವುದು.
▪️ರಕ್ತ ಶುದ್ದಿ ಕರುಳಿನ ಕ್ರಿಮಿಗಳ ನಾಶ
ಆಗತಾನೆ ಕಿತ್ತು ತಂದ ಒಂದು ಹಿಡಿ ಗಜ್ಜುಗದ ಎಲೆಗಳನ್ನು ನೀರಿನಲ್ಲಿ, ನುಣ್ಣಗೆ ಅರೆದು ಬಟ್ಟೆಯಲ್ಲಿ ಸೋಸಿಕೊಳ್ಳುವುದು, ಇದರಲ್ಲಿ ದಿನಕ್ಕೆ ಒಂದು ವೇಳೆಗೆ ಟೀ ಚಮಚ ಕುಡಿಯುವುದು.

▪️ಆಸ್ತಮ ಮತ್ತು ಗೊರಲು ವ್ಯಾಧಿ ಸಂಪಾದಿಸಿ
ನಾಲ್ಕು ಗಜ್ಜುಗದ ಕಾಯಿಯನ್ನು ಬಿಸಿ ಬೂದಿಯಲ್ಲಿ ಇಟ್ಟು ಸುಡುವುದು. ತಣ್ಣಗಾದ ಮೇಲೆ ನಯವಾಗಿ ಚೊರ್ಣಿಸುವುದು. ವೇಳೆಗೆ ಒಂದು ಚಿಟಿಕ ಬೂದಿಯನ್ನು ನೀರಿನಲ್ಲಿ ಕದಡಿ ಸೇವಿಸುವುದು. ಹೊಟ್ಟೆ ನೋವಿನಲ್ಲಿ (ವಾಯು ತುಂಬಿಕೊಂಡು) 10 ಗ್ರಾಂ ಗಜ್ಜುಗದ ಸಿಪ್ಪೆಯನ್ನು ಮತ್ತು 10 ಗ್ರಾಂ ಶುಂಠಿಯನ್ನು ನಯವಾಗಿ ಚೊರ್ಣಿಸುವುದು, ಈ ಚೊರ್ಣದ ಅರ್ಧ ಚಮಚದಷ್ಟನ್ನು ಬಿಸಿ ನೀರಿನಲ್ಲಿ ಕದಡಿ ಕುಡಿಸುವುದು.
▪️ಕಜ್ಜಿ ಮತ್ತು ತುರಿಯಲ್ಲಿ ಸಂಪಾದಿಸಿ
ಗಜ್ಜುಗದ ಎಲೆ ಮತ್ತು ಕಾಳುಮೆಣಸನ್ನು ನಯವಾಗಿ ಅರೆದು ಒಂದು ಅರ್ಧ ಟೀ ಚಮಚದಷ್ಟನ್ನು ನೀರಿನಲ್ಲಿ ಹಾಕಿ ಕುಡಿಸುವುದು. ಗಜ್ಜುಗದ ಕಾಯಿಯ ಸಿಪ್ಪೆಯನ್ನು ನುಣ್ಣಗೆ ಅರೆದು ಎಳ್ಳೆಣ್ಣೆಯಲ್ಲಿ ಹಾಕಿ ತಣ್ಣಗಾದ ಮೇಲೆ ಕಜ್ಜಿ ಮತ್ತು ತುರಿಕೆ ಇರುವು ಜಾಗದಲ್ಲಿ ಸವರುವುದು.
▪️ಆನೆಕಾಲು ವ್ಯಾಧಿಯಲ್ಲಿ ಸಂಪಾದಿಸಿ
ಹೊಸದಾಗಿ ಕಿತ್ತು ತಂದ ಒಂದು ಹಿಡಿ ಗಜ್ಜುಗದ ಹಸಿರು ಎಲೆಗಳನ್ನು ಕುಟ್ಟಿ ರಸ ತೆಗೆಯುವುದು. ರಸವನ್ನು ಬಟ್ಟೆಯಲ್ಲಿ ಸೋಸಿ ದಿನಕ್ಕೆ ಎರಡು ವೇಳೆ ಒಂದೊಂದು ಟೀ ಚಮಚ ಕುಡಿಸುವುದು.
▪️ಕಿವಿ ನೋವಿನಲ್ಲಿ ಸಂಪಾದಿಸಿ
ಗಜ್ಜುಗದ ಗಿಡದ ಕಾಂಡದ ತಿರುಳನ್ನು ಚೆನ್ನಾಗಿ ಜಜ್ಜಿ ರಸವನ್ನು ತೆಗೆದು ಒಂದು ಬಟ್ಟಲು ಎಳ್ಳೆಣ್ಣೆಯಲ್ಲಿ ಹಾಕಿ ಕಾಯಿಸುವುದು, ತಣ್ಣಗಾದ ಮೇಲೆ ಒಂದೆರಡು ತೊಟ್ಟು ತೈಲವನ್ನು ಸ್ವಲ್ಪ ಬಿಸಿ ಮಾಡಿ ನೋವಿರುವ ಕಿವಿಗೆ ಹಾಕುವುದು.
▪️ಹೊಟ್ಟೆ ಶೊಲೆಯಲ್ಲಿ ಸಂಪಾದಿಸಿ
ಒಂದು ಗಜ್ಜುಗದ ಬೀಜದ ಸೊಪ್ಪನ್ನು ನೀರಿನಲ್ಲಿ ತೇದು, ಕಾಲು ಟೀ ಚಮಚ ಗಂಧವನ್ನು ಕಾದಾರಿದ ನೀರಿನಲ್ಲಿ ಕದಡಿ ಕುಡಿಸುವುದು
▪️ಗಜ್ಜುಗದ ಬೇರನ್ನು ನೀರಿಲ್ಲಿ ತೇದು ಚೇಳು ಕುಟುಕಿರುವ ಕಡೆ ಹಚ್ಚುವುದು.
ಈ ಮಾಹಿತಿ ನಿಮಗೆ ಉಪಯೋಗವಾಗಿದೆ ಎಂದು ಭಾವಿಸಿದ್ದೇವೆ
ಈ ಮಾಹಿತಿ ನಿಮಗೆ ಇಷ್ಟ ಆದ್ರೆ ಕಾಮೆಂಟ್ ಮಾಡಿ ಹಾಗೆ ಈ ಪೋಸ್ಟ್ ನ್ನು ನಿಮ್ಮ ಫ್ರೆಂಡ್ಸ್ ಗೂ ಶೇರ್ ಮಾಡಿ. ಹಾಗೆ ಫಾಲೋ ಮಾಡಿರಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Shivaraj is the Lead Editor at NeedsOfPublic.in with over 4 years of experience tracking Indian government schemes and educational updates. He specializes in simplifying complex notifications from the Central and State governments to help the public understand their benefits. Before joining NeedsOfPublic, Shivaraj worked as a Content Writer focusing on Civic issues. When he isn’t decoding the latest circulars, he enjoys reading about digital literacy.”
Follow Shivaraj on:


WhatsApp Group




