ರೈತರಿಗೆ 10HP ವರೆಗೆ ಉಚಿತ ವಿದ್ಯುತ್ ಪೂರೈಕೆ, ಸರ್ಕಾದಿಂದ ಸಿಹಿ ಸುದ್ದಿ..!
ರೈತರು ದೇಶದ ಬೆನ್ನುಲೆಬು, ರೈತರು ಸುಖವಾಗಿದ್ದರೆ ದೇಶವೂ ಕೂಡ ಸುಖಾವಾಗಿರುತ್ತದೆ. ಆದರೆ ಇಂದು ರೈತನು ಬಹಳ ಕಷ್ಟ ಪಾಡುಗಳನ್ನು ಎದುರಿಸಿಕೊಂಡು ತನ್ನ ಬದುಕನ್ನು ಸಾಗಿಸುತ್ತಿದ್ದಾನೆ. ಒಂದು ಕಡೆ ವಸ್ತುಗಳ ಬೆಲೆ ಏರಿಕೆ, ಮತ್ತೊಂದು ಕಡೆ ಕಾಲಕ್ಕೆ ತಕ್ಕಂತೆ ಮಳೆ ಇಲ್ಲದೆ ಬೆಳೆಯನ್ನು ಕೂಡ ಬೆಳೆಯಲು ಸಾಧ್ಯವಾಗುತ್ತಿಲ್ಲ. ನೀರಿಗಾಗಿ ಪರದಾಡುತ್ತಿದ್ದಾನೆ. ತನ್ನ ಸುತ್ತ ಮುತ್ತಲಿನ ಕೆರೆ ಬಾವಿ ಅಷ್ಟೇ ಅಲ್ಲದೆ ಬೋರ್ವೆಲ್ ಕೊರೆಸಿ ಪಂಪ್ ಸೆಟ್ (Pumpu set) ಗಳನ್ನು ಅಳವಡಿಸಿ ಕೊಂಡಿದ್ದಾರೆ. ಆದರೆ ಅದಕ್ಕೂ ಕೂಡ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ. ಆದರೆ ಇದೀಗ ರೈತರು ಇದೀಗ ಚಿಂತಿಸುವ ಹಾಗಿಲ್ಲ. ಯಾಕೆಂದರೆ ರೈತರಿಗೆ ಸರ್ಕಾರದಿಂದ ಸಿಹಿ ಸುದ್ದಿ ತಿಳಿದು ಬಂದಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಎಐ ತಂತ್ರಜ್ಞಾನದ ಮೂಲಕ ಕೃಷಿ ಬೆಳೆಗಳಿಗೆ ವಿದ್ಯುತ್ ಪೂರೈಕೆ (free power supply) :
ಇದೀಗ ಸರ್ಕಾರವು ರೈತರಿಗೆ ಗುಡ್ ನ್ಯೂಸ್ ನೀಡಿದೆ. ಏನೆಂದರೆ ಕೃಷಿ ಬೆಳೆಗಳಿಗೆ ವಿದ್ಯುತ್ ಪೂರೈಕೆ ನಿರ್ವಹಣೆಗಾಗಿ ಎಐ ತಂತ್ರಜ್ಞಾನ (AI technology) ಬಳಕೆ ಮಾಡಲು ಇಂಧನ ಇಲಾಖೆ ಮುಂದಾಗಿದ್ದು, ಈ ಕುರಿತು ಇಂಧನ ಸಚಿವ ಕೆ. ಜೆ ಜಾರ್ಚ್ ಮಾಹಿತಿ ನೀಡಿದ್ದಾರೆ. ಕೃಷಿ ಬೆಳೆಗಳಿಗೆ ವಿದ್ಯುತ್ ಪೂರೈಕೆ ನಿರ್ವಹಣೆಗೆ ಎಐ ತಂತ್ರಜ್ಞಾನ ಬಳಕೆ ಮಾಡಲು ಇಂಧನ ಇಲಾಖೆ ಮುಂದಾಗಿದೆ.
ವಿದ್ಯುತ್ ಪೂರೈಕೆಗೆ ಎಐ ತಂತ್ರಜ್ಞಾನ ಬಳಕೆಯ ಉದ್ದೇಶ (Purpose) ?
ಉಪಗ್ರಹ ಚಿತ್ರ ಬಳಕೆ ಮಾಡಿಕೊಂಡು ಪ್ರದೇಶವಾರು ಬೆಳೆ, ವಿದ್ಯುತ್ ಬೇಡಿಕೆ ಅಂದಾಜಿಸಿ ಆಯಾ ವಿದ್ಯುತ್ ಉಪ ಕೇಂದ್ರಕ್ಕೆ ಒದಗಿಸುವುದು ಎಐ ತಂತ್ರಜ್ಞಾನ ಬಳಕೆಯ ಉದ್ದೇಶವಾಗಿದೆ. ಇದರಿಂದಾಗಿ ಬೆಳೆಗಳಿಗೆ ಅಗತ್ಯವಿರುವ ಕಾಲದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ (power supply), ವಿದ್ಯುತ್ ಉಪ ಕೇಂದ್ರ ಮತ್ತು ಟಿಸಿಗಳ ಕಾರ್ಯಕ್ಷಮತೆ, ವಿದ್ಯುತ್ ಲಭ್ಯತೆ ದಕ್ಷತೆ ಹೀಗೆ ಅನೇಕ ಉಪಯೋಗವಾಗುತ್ತದೆ.
ವಿದ್ಯುತ್ ಪೂರೈಕೆ ನಿರ್ವಹಣೆಗೆ ಕೃತಕ ಬುದ್ದಿ ಮತ್ತೆ ತಂತ್ರಜ್ಞಾನ ಅಳವಡಿಕೆ :
ಇಂದು ಎಲ್ಲಾ ಕ್ಷೇತ್ರಗಳಿಗೂ ಕೂಡ ತಂತ್ರಜ್ಞಾನದ ಅಳವಡಿಕೆಯಾಗಿದೆ. ತಂತ್ರಜ್ಞಾನದ ಮೂಲಕ ಈ ಎಲ್ಲಾ ಕೆಲಸ ಕಾರ್ಯಗಳು ಬಹು ಬೇಗನೆ ಮುಗಿದು ಹೋಗುತ್ತದೆ. ಹಾಗೆಯೇ ಕೃಷಿ ಕ್ಷೇತ್ರದಲ್ಲೂ ಕೂಡ ಇದೀಗ ಕೃತಕ ಬುದ್ದಿ ಮತ್ತೆ ಯ ಬಳಕೆ ಬಹಳ ಅವಶ್ಯಕವಿದೆ. ಇದೀಗ ಕೃಷಿ ಬೆಳೆಗಳಿಗೆ ಅಗತ್ಯತೆ ಪ್ರದೇಶವಾರು ಅನುಗುಣವಾಗಿ ವಿದ್ಯುತ್ ಪೂರೈಕೆ ನಿರ್ವಹಣೆಗೆ ಕೃತಕ ಬುದ್ದಿ (Artificial Intelligence) ಮತ್ತೆ ತಂತ್ರಜ್ಞಾನ ಬಳಸಲು ಇಲಾಖೆ ಮುಂದಾಗಿದ್ದು, ಈಗಾಗಲೇ ಪ್ರಾಯೋಗಿಕವಾಗಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಇದರಿಂದ ರೈತರಿಗೆ ಅಷ್ಟೇ ಅಲ್ಲದೆ ಕೃಷಿ ಕ್ಷೇತ್ರಕ್ಕೆ ಬಹಳ ಅನುಕೂಲವಾಗಲಿದೆ.
ಆಧಾರ್ ಸಂಖ್ಯೆ ಜೋಡಣೆ ಜೊತೆಗೆ 10 ಹೆಚ್.ಪಿ. ವರೆಗೆ ಉಚಿತ ವಿದ್ಯುತ್ ಪೂರೈಕೆ ದೊರೆಯಲಿದೆ :
ರೈತರ ಹಿತರಕ್ಷಣೆಗಾಗಿ ನೀರಾವರಿ ಪಂಪ್ ಸೆಟ್ ಗಳಿಗೆ ಇದೀಗ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುತ್ತಿದೆ. ಅದರ ಜೊತೆಗೆ 10 ಹೆಚ್.ಪಿ. ವರೆಗೆ ಉಚಿತ ವಿದ್ಯುತ್ ಪೂರೈಕೆ (10 HP Free power supply) ಮುಂದುವರೆಯಲಿದೆ. ಆಧಾರ್ ಜೋಡಣೆಯು ಕೂಡ ಬಹಳ ಅವಶ್ಯಕವಾಗಿದೆ. ರೈತರು ಆದಷ್ಟು ಬೇಗ ಆಧಾರ್ ಜೋಡಣೆ (Adhar link) ಮಾಡಿಕೊಳ್ಳಬೇಕು. ರೈತರ ಸಹಕಾರದಿಂದ ಇದುವರೆಗೆ 32 ಲಕ್ಷ ನೀರಾವರಿ ಪಂಪ್ ಸೆಟ್ ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿದ್ದು, ಇನ್ನೂ ಎರಡು ಲಕ್ಷ ಪಂಪೈಟ್ ಗಳು ಬಾಕಿ ಉಳಿದಿವೆ ಎಂದರು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




