ಚಿಕ್ಕಬಳ್ಳಾಪುರ : ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮವು ಪರಿಶಿಷ್ಟ ಜಾತಿಯ ಸಫಾಯಿ ಕರ್ಮಚಾರಿ, ಪೌರ ಕಾರ್ಮಿಕ ಮತ್ತು ಮ್ಯೂನ್ಯುಯಲ್ ಸ್ಕ್ಯಾವೆಂಜರ್ ಅವರ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಒಂದು ಪ್ರಮುಖ ಯೋಜನೆಯನ್ನು ಕಾರ್ಯಗತಗೊಳಿಸಿದೆ. ಈ ಯೋಜನೆಯಡಿ, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗುವುದು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ……
ಈ ಕಾರ್ಯಕ್ರಮದ ಉದ್ದೇಶ ಬಡ ವರ್ಗದ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ವಿಧ್ಯಾಭ್ಯಾವವನ್ನು ಸುಗಮಗೊಳಿಸುವುದು. ಡಿಜಿಟಲ್ ಯುಗದಲ್ಲಿ, ಲ್ಯಾಪ್‌ಟಾಪ್ ಒಂದು ಅತ್ಯಗತ್ಯ ಶೈಕ್ಷಣಿಕ ಸಾಧನವಾಗಿ ಮಾರ್ಪಟ್ಟಿದೆ. ಆನ್‌ಲೈನ್ ಕ್ಲಾಸ್‌ಗಳು, ರಿಸರ್ಚ್ ವರ್ಕ್, ಪ್ರಾಜೆಕ್ಟ್ ತಯಾರಿಕೆ ಮತ್ತು ಅಸೈನ್‌ಮೆಂಟ್‌ಗಳಿಗೆ ಇದು ಅತ್ಯವಶ್ಯಕ. ಈ ಅಗತ್ಯತೆಯನ್ನು ಗಮನದಲ್ಲಿಟ್ಟುಕೊಂಡುೀ ನಿಗಮವು ಈ ಮಹತ್ವದ ಯೋಜನೆಯನ್ನು ಆರಂಭಿಸಿದೆ.
ಯಾರಿಗೆ ಅರ್ಹತೆ?
ಈ ಯೋಜನೆಯ ಲಾಭ ಪಡೆಯಲು, ಅರ್ಜಿದಾರನ ತಂದೆ ಅಥವಾ ತಾಯಿ ಪರಿಶಿಷ್ಟ ಜಾತಿಯ ಸಫಾಯಿ ಕರ್ಮಚಾರಿ, ಪೌರ ಕಾರ್ಮಿಕ ಅಥವಾ ಮ್ಯೂನ್ಯುಯಲ್ ಸ್ಕ್ಯಾವೆಂಜರ್ ಆಗಿ ಕನಿಷ್ಠ 5 ವರ್ಷಗಳ ಕಾಲ ಕಾರ್ಯನಿರ್ವಹಿಸಿರಬೇಕು. ವಿದ್ಯಾರ್ಥಿಯು B.Com, B.Sc, BBM, MBBS, M.Com, MA, M.Sc, M.Tech, MBA ಸೇರಿದಂತೆ ಯಾವುದೇ ಉನ್ನತ ಶಿಕ್ಷಣ ಪದವಿ ಅಥವಾ ಸ್ನಾತಕೋತ್ತರ ಪಠ್ಯಕ್ರಮದಲ್ಲಿ ನೋಂದಣಿ ಹೊಂದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:
ಆಸಕ್ತ ವಿದ್ಯಾರ್ಥಿಗಳು ಆಫ್‌ಲೈನ್ ವಿಧಾನದ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಪತ್ರವನ್ನು ಮತ್ತು ಅಗತ್ಯ ದಾಖಲೆಗಳನ್ನು ಈ ಕೆಳಕಂಡ ವಿಳಾಸಕ್ಕೆ ಡಿಸೆಂಬರ್ 6, 2025ರ ಶುಕ್ರವಾರ ಸಂಜೆ 5:30 ಗಂಟೆಗೆ ಮುಂಚೆ ತಲುಪಿಸಿರಬೇಕು.
ವಿಳಾಸ:
ಜಿಲ್ಲಾ ವ್ಯವಸ್ಥಾಪಕರು,
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ,
ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಕಚೇರಿ,
ನಂ. SA1, ಜಿಲ್ಲಾಡಳಿತ ಭವನ,
ಚಿಕ್ಕಬಳ್ಳಾಪುರ – 562101.
ಅಗತ್ಯ ದಾಖಲೆಗಳ ಪಟ್ಟಿ:
ವಿದ್ಯಾರ್ಥಿಗಳು ಅರ್ಜಿಯ ಜೊತೆಯಲ್ಲಿ ಈ ಕೆಳಕಂಡ ದಾಖಲೆಗಳ ಪ್ರತಿಗಳನ್ನು ಸಲ್ಲಿಸಬೇಕು:
*ಅರ್ಜಿದಾರರ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ (2)
*ಅರ್ಜಿದಾರರ ತಂದೆ/ತಾಯಿಯ ಸಫಾಯಿ ಕರ್ಮಚಾರಿ ಗುರುತಿನ ಚೀಟಿ ಪ್ರತಿ
*ತಂದೆ/ತಾಯಿಯು 5 ವರ್ಷಗಳ ಕನಿಷ್ಠ ಅನುಭವ ಹೊಂದಿರುವುದರ ಪ್ರಮಾಣಪತ್ರ
ಜಾತಿ ಪ್ರಮಾಣಪತ್ರ
*ಆದಾಯ ಪ್ರಮಾಣಪತ್ರ (ವಿದ್ಯಾರ್ಥಿ, ತಂದೆ ಮತ್ತು ತಾಯಿಯ ಆದಾಯ ಸೇರಿ)
*ಆಧಾರ್ ಕಾರ್ಡ್ (ವಿದ್ಯಾರ್ಥಿ, ತಂದೆ ಮತ್ತು ತಾಯಿಯ ಪ್ರತಿ)
*ಪ್ರಸ್ತುತ ಶಿಕ್ಷಣ ಸಂಸ್ಥೆಯ ಪಡಿತರ ಚೀಟಿ/ಫೀಸ್ ರಸೀದಿ
*ಇತ್ತೀಚಿನ ಶೈಕ್ಷಣಿಕ ಅಂಕಪಟ್ಟಿ/ಮಾರ್ಕ್ಸ್ ಕಾರ್ಡ್
*ವಿದ್ಯಾರ್ಥಿ ಗುರುತು ಪತ್ರ (ಕಾಲೇಜ್/ವಿಶ್ವವಿದ್ಯಾಲಯದ ID ಕಾರ್ಡ್)
*ಶಿಕ್ಷಣ ಸಂಸ್ಥೆಯಿಂದ ವ್ಯಾಸಂಗ ಪ್ರಮಾಣಪತ್ರ
ಹೆಚ್ಚಿನ ಮಾಹಿತಿಗಾಗಿ:
ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಸಿಕೊಳ್ಳಲು, ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು 08156-277026 ಈ ದೂರವಾಣಿ ನಂಬರ್‌ಮೂಲಕ ಸಂಪರ್ಕಿಸಬಹುದು. ಅಥವಾ [email protected] ಈ ಇ-ಮೇಲ್ ವಿಳಾಸಕ್ಕೆ ಮಾಹಿತಿ ಕೋರಬಹುದು.
ಈ ಯೋಜನೆಯು ಸರ್ಕಾರದ ಸಮಾಜ ಕಲ್ಯಾಣದತ್ತಿನ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಸಮಾಜದ ಒಂದು ಪ್ರಮುಖ ವರ್ಗವಾದ ಸಫಾಯಿ ಕರ್ಮಚಾರಿಗಳ ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ, ಅವರಿಗೆ ಡಿಜಿಟಲ್ ಸಾಧನಗಳ ಮೂಲಕ ಹೊಸ ಅವಕಾಶಗಳನ್ನು ತೆರೆಯುವ ಈ ಪಹೆಯನ್ನು ಸಮುದಾಯದ ಎಲ್ಲಾ ಯೋಗ್ಯ ವಿದ್ಯಾರ್ಥಿಗಳು ಪೂರ್ಣವಾಗಿ ಬಳಸಿಕೊಳ್ಳಬೇಕೆಂದು ನಿಗಮದ ಅಧಿಕಾರಿಗಳು ಅಪೇಕ್ಷಿಸಿದ್ದಾರೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group




