ಸರ್ವರಿಗೂ ಸೂರು ಯೋಜನೆಯಡಿಯಲ್ಲಿ ದೊರೆಯುತ್ತದೆ 1.30 ಲಕ್ಷ, ಮನೆಗೆ ರಾಜ್ಯದಿಂದ ತಲಾ 5 ಲಕ್ಷ ರೂ!
ಮೂರು ಹೊತ್ತಿನ ಊಟ, ವಸತಿ ಇವುಗಳು ಪ್ರತಿಯೊಬ್ಬ ಮನುಷ್ಯನಿಗೆ ಬಹಳ ಅವಶ್ಯಕತೆ ಇದೆ. ಮೂರು ಹೊತ್ತಿನ ಊಟಕ್ಕಾದರೂ ದುಡಿದು ತಿನ್ನುತ್ತಾರೆ. ಹಾಗೆಯೇ ಸ್ವಂತ ಮನೆಯೊಂದನ್ನು (own House) ಹೊಂದಬೇಕೆನ್ನುವುದು ಪ್ರತಿಯೊಬ್ಬರ ಕನಸು. ಆದರೆ ಇಂದಿನ ದುಬಾರಿ ಯುಗದಲ್ಲಿ ಪ್ರತಿಯೊಬ್ಬರಿಗೂ ಬಹಳ ಕಷ್ಟ. ಅಂತವರು ಯೋಚಿಸಬೇಕಾಗಿಲ್ಲ. ರಾಜ್ಯ ಸರ್ಕಾರದ ಸರ್ವರಿಗೂ ಸೂರು ಯೋಜನೆ ಅಡಿ ಬಡವರಿಗೆ ಬಂಪರ್ ಗಿಫ್ಟ್ ನೀಡಿದೆ. ಸರಿಸುಮಾರು 1.30 ಲಕ್ಷ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಒಟ್ಟು 5 ಲಕ್ಷ ರೂ. ಭರಿಸಲು ತೀರ್ಮಾನಿಸಿದೆ. ಅಂದರೆ 2 ಲಕ್ಷ ರೂಪಾಯಿ ಸಬ್ಸಿಡಿ(subsidy) ಜೊತೆಗೆ ಹೆಚ್ಚುವರಿ 3 ಲಕ್ಷ ರೂಪಾಯಿಯನ್ನು ಭರಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಮನೆಗಳ ನಿರ್ಮಾಣದ ಹಣವನ್ನು ಸರ್ಕಾರವೇ ಭರಿಸಲು ಒಪ್ಪಿಗೆ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (PM Siddaramaiyya) :
ಸರ್ವರಿಗೂ ಸೂರು ಯೋಜನೆ(sarvarigu sooru scheme) ಅಡಿ ನಿರ್ಮಿಸಲಾಗುವ ಮನೆಗಳ ನಿರ್ಮಾಣದ ಹಣವನ್ನು ಸರ್ಕಾರವೇ (government) ಭರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ನಿರ್ಮಾಣದ ವಿವಿಧ ಹಂತದಲ್ಲಿರುವ 1.29 ಲಕ್ಷ ಮನೆಗಳಿಗೆ ಎಷ್ಟು ವೆಚ್ಚ ಆಗುತ್ತದೆ. ಈ ವರ್ಷ ಗರಿಷ್ಠ ಎಷ್ಟು ಹಣ ಕೊಡಬಹುದು? ಮುಂದಿನ ವರ್ಷ ಎಷ್ಟು ಹಣ ಕೊಡಬಹುದು? ಎಂಬುದರ ಬಗ್ಗೆ ಪರಿಶೀಲಿಸುವಂತೆ ಹಣಕಾಸು ಇಲಾಖೆ (financial department) ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ.
ಸರ್ವರಿಗೂ ಸೂರು ಯೋಜನೆ (Sarvarigu suru yojana) :
ಇದೀಗ ಸ್ವಂತ ವಸತಿ ಹೊಂದಬೇಕು ಎಂದು ಕನಸು ಕಂಡವರಿಗೆ ಗುಡ್ ನ್ಯೂಸ್ (good news) ಎನ್ನಬಹುದು. ಯಾಕೆಂದರೆ, ಸರ್ವರಿಗೂ ಸೂರು ಯೋಜನೆ ಅಡಿಯಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ಬಡ ಕುಟುಂಬಗಳಿಗಾಗಿ ನೀಡಲಾಗುತ್ತಿರುವ ಒಟ್ಟಾರೆ 1,29,457 ಮನೆಗಳಿಗೆ ಫಲಾನುಭವಿಗಳ ವಂತಿಗೆಯನ್ನು ಸರ್ಕಾರ ಭರಿಸಲು ತೀರ್ಮಾನಿಸಿದೆ. ಈ ಮೂಲಕ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮನೆಗಳ ನಿರ್ಮಾಣ ಕಾರ್ಯಕ್ಕೆ ಮುಕ್ತಿ ನೀಡಲು ಸರ್ಕಾರ ತೀರ್ಮಾನಿಸಿದೆ.
1 ಲಕ್ಷ ಕಟ್ಟಿದರೆ ಸಾಕು, 3 ಲಕ್ಷ ರೂಪಾಯಿ ಸರ್ಕಾರವೇ ಭರಿಸಲಿದೆ (3 Lakh government paying) :
ಈ ಯೋಜನೆ ಅಡಿ ಪ್ರಸ್ತುತ ಪ್ರತಿ ಮನೆ ನಿರ್ಮಾಣಕ್ಕೆ ಒಟ್ಟು 7.5 ಲಕ್ಷ ರೂ. ಖರ್ಚಾಗುತ್ತಿದ್ದು, ಈ ಯೋಜನೆಯಲ್ಲಿ ಕೇಂದ್ರದಿಂದ 1.5 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ 2 ಲಕ್ಷ ರೂ. ಸಬ್ಸಿಡಿ (subsidy) ಸಿಗುತ್ತಿತ್ತು, ಹಾಗೆಯೇ ಇನ್ನು ಉಳಿದ ಹಣವನ್ನು ಫಲಾನುಭವಿಯೇ ಕಟ್ಟಬೇಕಿತ್ತು. ಆದರೆ ಈಗ ಅದರಲ್ಲಿ ಫಲಾನುಭವಿಗಳು 1 ಲಕ್ಷ ರೂ. ಪಾವತಿಸಿದರೆ ಸಾಕು, ಉಳಿದ ಹೆಚ್ಚುವರಿ 3 ಲಕ್ಷ ರೂಪಾಯಿಯನ್ನು ಸರ್ಕಾರವೇ ಭರಿಸಲಿದೆ. ಈ ಮೂಲಕ ಸರ್ಕಾರ ಒಟ್ಟು 5 ಲಕ್ಷ ರೂ. ನೀಡಿದಂತೆ ಆಗುತ್ತದೆ.
ನೀವೇನಾದರೂ ನಿಮ್ಮ ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕು ಎಂಬ ಆಸೆಯನ್ನು ಇಟ್ಟುಕೊಂಡು ಹಣದ ಕೊರತೆ ಇದೆ ಎಂದಾಗ, ಇದೀಗ ಯೋಚಿಸುವ ಅವಶ್ಯಕತೆ ಇಲ್ಲ. ಸರ್ಕಾರದಿಂದ ನಿಮ್ಮ ಮನೆ ನಿರ್ಮಾಣಕ್ಕಾಗಿ ಸರ್ವರಿಗೂ ಸೂರು ಯೋಜನೆ ಅಡಿಯಲ್ಲಿ ಮನೆ ಕಟ್ಟಲು ಹಣ ದೊರೆಯುತ್ತದೆ. ಈ ಯೋಜನೆಯ ಉಪಯೋಗಿಸಿಕೊಂಡು ನಿಮ್ಮ ಸ್ವಂತ ಮನೆ ಕಟ್ಟಿಕೊಳ್ಳಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




