ದೃಷ್ಟಿ ಮರಳಿ ನೀಡುವ ಭಾರತೀಯ ನವೀನ ತಂತ್ರಜ್ಞಾನ: ಪಿನ್‌ಹೋಲ್ ಪ್ಯುಪಿಲೊಪ್ಲಾಸ್ಟಿ ದಾನಿಯ ಅವಶ್ಯಕತೆ ಇಲ್ಲದೆ ಬೆಳಕು ಹರಡುತ್ತಿದೆ
ದೃಷ್ಟಿ ಕಳೆದುಕೊಂಡವರಿಗೆ ಮತ್ತೆ ನೋಡಲು ಸಾಧ್ಯವಿಲ್ಲವೆಂಬ ಭಯ, ದೃಷ್ಟಿಯ ಮೌಲ್ಯವನ್ನು ಪ್ರತಿದಿನವೂ ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಇಂದಿನ ಆರೋಗ್ಯಪರ ಸ್ಥಿತಿಯಲ್ಲಿ, ವಿಶೇಷವಾಗಿ ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ, ಕಾರ್ನಿಯಾ ದಾನಿಗಳ ಕೊರತೆಯು ಬಹುಮಟ್ಟಿಗೆ ಕಣ್ಣಿನ ಕಸಿ ಶಸ್ತ್ರಚಿಕಿತ್ಸೆಗಳ (Eye transplant surgeries) ಲಭ್ಯತೆಗೆ ಅಡ್ಡಿಯಾಗುತ್ತಿದೆ. ಈ ಪರಿಸ್ಥಿತಿಯಲ್ಲಿ, ಪಾರದರ್ಶಕತೆ, ನವೀನತೆಗೆ ಆದ್ಯತೆ ನೀಡುವ ಹೊಸ ಶಸ್ತ್ರಚಿಕಿತ್ಸಾ ವಿಧಾನವೊಂದು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಅದರಲ್ಲೂ ಭಾರತದಲ್ಲಿ ಲಕ್ಷಾಂತರ ಮಂದಿ ಕಾರ್ನಿಯಾ ಸಮಸ್ಯೆಗಳ(Cornea problems) ಕಾರಣದಿಂದ ದೃಷ್ಟಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ದೃಷ್ಟಿ ಕಳೆದುಕೊಳ್ಳುವುದು ಒಂದೆಡೆ, ಆದರೆ ಅದನ್ನು ಮರಳಿ ಪಡೆಯಲು ಅಗತ್ಯವಿರುವ ಕಾರ್ನಿಯಾ ಕಸಿ ದಾನಿಗಳ ಕೊರತೆಯಿಂದ ಬಹುಪಾಲು ಜನರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ, ದೃಷ್ಟಿ ಪುನಃಪಡೆಯುವ ಸಮರ್ಥ, ವೆಚ್ಚ-ಪರಿಣಾಮಕಾರಿ ಹಾಗೂ ದಾನಿ ಅಂಗಾಂಶಗಳ ಅವಲಂಬನೆ(Dependence on donor tissues) ಇಲ್ಲದ ನವೀನವಿಧಾನವೊಂದು ವೈದ್ಯಕೀಯ ಲೋಕದಲ್ಲಿ ಹೊಸ ಬೆಳಕು ಹರಡುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಈ ಪಥಪ್ರದರ್ಶಕ ತಂತ್ರಜ್ಞಾನವೇ ಪಿನ್‌ಹೋಲ್ ಪ್ಯುಪಿಲೊಪ್ಲಾಸ್ಟಿ (Pinhole pupilloplasty). ಭಾರತದಲ್ಲಿ ಅಭಿವೃದ್ಧಿಗೊಂಡ ಈ ಶಸ್ತ್ರಚಿಕಿತ್ಸಾ ವಿಧಾನವು ತೀವ್ರ ಕಾರ್ನಿಯಾ ಸಮಸ್ಯೆಗಳಿರುವ ರೋಗಿಗಳಿಗೆ ಕಾರ್ನಿಯಾ ಕಸಿ ಇಲ್ಲದೆ ದೃಷ್ಟಿ ಪುನಃಪಡೆಯುವ ಸಾಧ್ಯತೆಯನ್ನು ಒದಗಿಸುತ್ತದೆ. ಈ ವಿಧಾನವು ನಾವೀನ್ಯತೆ, ಸರಳತೆ ಮತ್ತು ಸಮರ್ಥತೆಯ ವಿಶಿಷ್ಟ ಮಿಶ್ರಣವಾಗಿದ್ದು, ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದೆ.
ಡಾ. ಅಗರ್ವಾಲ್ಸ್ ಐ ಹಾಸ್ಪಿಟಲ್ ಅಧ್ಯಕ್ಷ ಡಾ. ಅಮರ್ ಅಗರ್ವಾಲ್ (Dr. Amar Agarwal, Chairman, Dr. Agarwal’s Eye Hospital) ಅವರು ಈ ಕ್ರಾಂತಿಕಾರಿ ತಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಅವರು ಲಾಸ್ ಏಂಜಲೀಸ್‌ನಲ್ಲಿ ನಡೆದ ವಿಶ್ವ ಪ್ರಸಿದ್ಧ ಎಎಸ್‌ಸಿಆರ್‌ಎಸ್ ಫಿಲ್ಡ್ ಫೆಸ್ಟಿವಲ್‌ನಲ್ಲಿ ಈ ತಂತ್ರಜ್ಞಾನಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನೂ (International Award) ಪಡೆದಿದ್ದಾರೆ. ಭಾರತದಲ್ಲಿ ಜನಿತವಾದ ಈ ತಂತ್ರಜ್ಞಾನವು ಈಗ ಜಗತ್ತಿನ ಹಲವಾರು ದೇಶಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ.
ಪಿನ್‌ಹೋಲ್ ಪ್ಯುಪಿಲೊಪ್ಲಾಸ್ಟಿ ಹೇಗೆ ಕೆಲಸ ಮಾಡುತ್ತದೆ?:
ಈ ತಂತ್ರಜ್ಞಾನದಲ್ಲಿ, ಪಾಪೆ ಅಥವಾ ಮಸೂರದ ಗಾತ್ರವನ್ನು 1-1.5 ಮಿಲಿಮೀಟರ್‌ಗೆ ಇಳಿಸಿ, ಕಣ್ಣಿಗೆ ಒಳಬರುವ ಬೆಳಕನ್ನು ನಿಯಂತ್ರಿಸಲಾಗುತ್ತದೆ. ಇದರ ಪರಿಣಾಮವಾಗಿ ಕಾರ್ನಿಯಾದ ಅನಿಯಮಿತತೆಗಳು ಇರುವ ಪ್ರದೇಶಗಳನ್ನು ಬೆಳಕು ತಪ್ಪಿಸಿ, ರೆಟಿನಾದ(Retina) ಮೇಲೆ ಸ್ಪಷ್ಟ ಮತ್ತು ನಿಖರವಾದ ದೃಶ್ಯ ನಿರ್ಮಾಣವಾಗುತ್ತದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಹೊಲಿಗೆಗಳನ್ನು ಬಳಸಿ ಪಾಪೆಯ ಆಕಾರವನ್ನು ಬದಲಾಯಿಸಲಾಗುತ್ತದಾದರೂ, ಯಾವುದೇ ಕಸಿ ಅಥವಾ ದೀರ್ಘ ಚೇತರಿಕೆಗೆ ಅಗತ್ಯವಿಲ್ಲ.
ಯಾರು ಇದರಿಂದ ಪ್ರಯೋಜನ ಪಡೆಯಬಹುದು?:
ಕಾರ್ನಿಯಾ ಗಾಯಗಳಿಂದ ಅನಿಯಮಿತ ಅಸ್ಟಿಸ್ಮಾಟಿಸಮ್ (Astigmatism) ಹೊಂದಿರುವವರು.
ಕೆರಾಟೊಕೊನಸ್ (ಶಂಕು ಆಕಾರದ ಕಾರ್ನಿಯಾ) ರೋಗಿಗಳು.
ಪಾಪೆ ಶಾಶ್ವತವಾಗಿ ಹಿಗ್ಗಿದವರು.
ರೇಡಿಯಲ್ ಕೆರಾಟೊಟೊಮಿ ಶಸ್ತ್ರಚಿಕಿತ್ಸೆಯಿಂದ (By radial keratotomy surgery) ಉಂಟಾದ ಜಟಿಲತೆಗಳಿಂದ ಬಳಲುತ್ತಿರುವವರು.
ಹಿಂದಿನ ಕಾರ್ನಿಯಾ ಕಸಿಯಿಂದ ಫಲಿತಾಂಶಗಳಿಲ್ಲದವರು.
ಪಿಪಿಪ್ಪಿಯ ವಿಶಿಷ್ಟತೆ ಮತ್ತು ಪ್ರಯೋಜನಗಳು(Features and benefits) ?
ದಾನಿಯ ಕಾರ್ನಿಯಾ ಅವಶ್ಯಕವಿಲ್ಲ.
ಶಸ್ತ್ರಚಿಕಿತ್ಸೆಯ ನಂತರ ಚುರುಕು ಚೇತರಿಕೆ.
ಉರಿಯೂತ, ತಿರಸ್ಕರಣೆ ಹಾಗೂ ದೀರ್ಘಕಾಲೀನ ಔಷಧೋಪಚಾರಗಳ (Longterm Medicines) ಅಗತ್ಯವಿಲ್ಲ.
ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ಹೊಂದಿಕೊಳ್ಳುವಿಕೆ.
ವೆಚ್ಚ-ಪರಿಣಾಮಕಾರಿ, ವಿಶೇಷವಾಗಿ ಕಡಿಮೆ ಸಂಪನ್ಮೂಲ ಇರುವ ದೇಶಗಳಿಗೆ ಸೂಕ್ತ.
ತ್ವರಿತ, ಉತ್ಕೃಷ್ಟ ಹಾಗೂ ಹಿಂದಿರುಗಿಸಬಹುದಾದ ಶಸ್ತ್ರಚಿಕಿತ್ಸೆ.
ಹಾಗಿದ್ದರೆ ಈ ತಂತ್ರಜ್ಞಾನದಲ್ಲಿ ಎದುರಾಗುವ ಸವಾಲುಗಳೇನು?:
ಹೆಚ್ಚಿನ ಶಸ್ತ್ರಚಿಕಿತ್ಸೆಗಳಂತೆ, ಪಿಪಿಪ್ಪಿಗೂ ಕೆಲವು ಮಿತಿಗಳು ಮತ್ತು ಅಪಾಯಗಳಿವೆ. ಹೊಲಿಗೆಗಳು ಕೆಲವೊಮ್ಮೆ ನೈಸರ್ಗಿಕ ಮಸೂರದ (Natural lense) ಹತ್ತಿರ ಹೋದರೆ ಕಣ್ಣಿನ ಪೊರೆ ಉಂಟಾಗಬಹುದು. ಹಾಗಾಗಿ, ಈ ಶಸ್ತ್ರಚಿಕಿತ್ಸೆಯನ್ನು ಸಾಮಾನ್ಯವಾಗಿ ನೈಸರ್ಗಿಕ ಮಸೂರವನ್ನು ಕೃತಕ ಮಸೂರದಿಂದ ಬದಲಾಯಿಸಿರುವ ಸೂಡೋಫಾಕಿಕ್ (Pseudophakic) ಕಣ್ಣುಗಳಲ್ಲಿ ಮಾಡಲಾಗುತ್ತದೆ. ಪಾಪೆಯ ಗಾತ್ರ ತುಂಬಾ ಚಿಕ್ಕವಾಗಿರುವುದರಿಂದ ರೆಟಿನಾದ ಹೊರ ಭಾಗವನ್ನು ಪರಿಶೀಲಿಸುವುದು ಕಷ್ಟವಾಗಬಹುದು, ಆದರೆ ಆಧುನಿಕ ಉಪಕರಣಗಳು ಈ ತೊಂದರೆಯನ್ನು ಸಮರ್ಥವಾಗಿ ಪರಿಹರಿಸುತ್ತವೆ.
ಒಟ್ಟಾರೆಯಾಗಿ ಹೇಳುವುದಾದರೆ, ಪಿನ್‌ಹೋಲ್ ಪ್ಯುಪಿಲೊಪ್ಲಾಸ್ಟಿ ಕೇವಲ ವೈದ್ಯಕೀಯ ಸಾಧನೆ ಮಾತ್ರವಲ್ಲ, ಇದು ಆರೋಗ್ಯ ಸೇವೆಯ (Health service) ಪ್ರಜಾಪ್ರಭುತ್ವೀಕರಣದತ್ತ ಒಂದು ಹೆಜ್ಜೆಯಾಗಿದೆ. ಈ ತಂತ್ರಜ್ಞಾನವು ದೃಷ್ಟಿ ಕಳೆದುಕೊಂಡವರು ಆತ್ಮವಿಶ್ವಾಸ ಮತ್ತು ಜೀವನದ ಗುಣಮಟ್ಟವನ್ನು ಮರಳಿ ಪಡೆಯಲು ಸಾಧ್ಯವನ್ನಾಗಿ ಮಾಡುತ್ತಿದೆ.
“ಜನರಿಗೆ ದೃಷ್ಟಿಯೊಂದಿಗೆ ಬದುಕನ್ನು ವಿಸ್ತಾರಗೊಳಿಸಲು, ನಾವೀನ್ಯತೆಯ ಮೂಲಕ ಬೆಳಕನ್ನು ಹಂಚಿಕೊಳ್ಳಲು ನಾನು ಯಾವಾಗಲೂ ತುದಿಗಾಲಿನಲ್ಲಿ ಇರುತ್ತೇನೆ,” ಎಂದು ಡಾ. ಅಗರ್ವಾಲ್ ಹೇಳಿದ್ದಾರೆ.
ಇದು ಕಣ್ಣುಗಳಿಗೆ ಬೆಳಕು ನೀಡುವ ಹೊಸ ತಂತ್ರಜ್ಞಾನವಾಗಿದ್ದು(New Technology) ಅದರ ಹಿಂದಿರುವ ಭಾರತೀಯ ವಿಜ್ಞಾನದ ಪರಾಕಾಷ್ಠೆಯನ್ನೂ ಪ್ರತಿಬಿಂಬಿಸುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.