ಉದ್ಯೋಗಿಗಳಿಗೆ ಪ್ರಮುಖ ಮಾಹಿತಿ! EPFOಗೆ ಸಂಬಂಧಿಸಿದ ಈ ಕರ್ತವ್ಯವನ್ನು ಜನವರಿ 15ರೊಳಗೆ(January 15) ಪೂರ್ಣಗೊಳಿಸಿ!
ಉದ್ಯೋಗಿಯ ಭವಿಷ್ಯವನ್ನು ಭದ್ರಪಡಿಸಲು ಮತ್ತು ಅವರ ಆರ್ಥಿಕ ಸುರಕ್ಷತೆಗೆ ಪೂರಕವಾಗಲು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಪ್ರಮುಖ ಆದೇಶವನ್ನು ಹೊರಡಿಸಿದೆ. EPFOಯ UAN (ಸಾರ್ವತ್ರಿಕ ಖಾತೆ ಸಂಖ್ಯೆ) ಅನ್ನು ಸಕ್ರಿಯಗೊಳಿಸುವ ಮತ್ತು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್(Link Aadhar with bank) ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 2025ರ ಜನವರಿ 15ರ ಅಂತಿಮ ಗಡುವು ನಿರ್ಧರಿಸಲಾಗಿದೆ. ಈ ಆದೇಶದ ಪ್ರಮುಖ ಅಂಶಗಳೇನು? UAN ಸಂಖ್ಯೆಯನ್ನು ಸಕ್ರಿಯಗೊಳಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇದು ವಿಶೇಷವಾಗಿ ಹೊಸ ಉದ್ಯೋಗಿಗಳಿಗೆ ಅತ್ಯಂತ ಮುಖ್ಯವಾಗಿದ್ದು, EPFOಯ UAN ಸಕ್ರಿಯಗೊಳಿಸುವ ಮತ್ತು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 2025ರ ಜನವರಿ 15ರ ಅಂತಿಮ ಗಡುವು ನಿರ್ಧರಿಸಲಾಗಿದ್ದು, ಇನ್ನು ಎರೆಡು ದಿನಗಳಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿಕೊಳ್ಳಬಹುದು. ಈ ಹಿಂದೆ ಡಿಸೆಂಬರ್ 15, 2024ರ ಗಡುವು ಇದ್ದರೂ, ಸರ್ಕಾರವು ಗಡುವನ್ನು ಮುಂದೂಡಿದೆ. ಆದ್ದರಿಂದ, ಈ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ.
EPFO ಈ ಆದೇಶದ ಪ್ರಮುಖ ಅಂಶಗಳು ಹೀಗೆವೆ :
ಯಾಕೆ UAN ಸಕ್ರಿಯಗೊಳಿಸಬೇಕು?
EPFO ಸದಸ್ಯರು ಸರ್ಕಾರದ “ಉದ್ಯೋಗ ಲಿಂಕ್ಸ್ ಇನ್ಸೆಂಟಿವ್ (ELI)” ಯೋಜನೆಯಡಿ ಲಭ್ಯವಿರುವ ಅನೇಕ ಪ್ರಯೋಜನಗಳನ್ನು ಪಡೆಯಲು UAN ಸಕ್ರಿಯಗೊಳಿಸುವುದು ಮುಖ್ಯ. ಇದು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಮತ್ತು ಹೊಸ ಉದ್ಯೋಗಿಗಳಿಗೆ ಆರ್ಥಿಕ ನೆರವು ನೀಡಲು ಉದ್ದೇಶಿತ ಯೋಜನೆಯಾಗಿದೆ.
ಬ್ಯಾಂಕ್ ಖಾತೆ(bank account) ಮತ್ತು ಆಧಾರ್ ಲಿಂಕ್(Adhar link) ಆದ್ಯತೆ:
EPFOನ ಎಲ್ಲಾ ಸದಸ್ಯರು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದರಿಂದ ಅವರ ಪಿಎಫ್ ಕಾರ್ಯಗಳು ಸುಗಮವಾಗುತ್ತವೆ ಮತ್ತು EPFOನ ಅಡಿಯಲ್ಲಿ ಇರುವ ಇತರ ಸೇವೆಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ಈಗಾಗಲೇ ಮೂರ್ನಾಲ್ಕು ಬಾರಿ ಗಡುವಿನ ವಿಸ್ತರಣೆಯಾಗಿದೆ :
UAN ಸಕ್ರಿಯಗೊಳಿಸಲು ಮೊದಲ ಗಡುವು 2024ರ ನವೆಂಬರ್ 30 ಎಂದು ಘೋಷಿಸಲಾಗಿತ್ತು.
ನಂತರ ಇದನ್ನು 2024ರ ಡಿಸೆಂಬರ್ 15ಕ್ಕೆ ವಿಸ್ತರಿಸಲಾಯಿತು.
ಇದೀಗ EPFO ಜನವರಿ 15, 2025ರೊಳಗೆ ಅಂತಿಮ ಗಡುವು ನೀಡಿದ್ದು, ಇದನ್ನು ಪುನಃ ವಿಸ್ತರಿಸುವ ಸಾಧ್ಯತೆ ಕಡಿಮೆ ಇದೆ.
ELI ಯೋಜನೆ: ಒಂದು ಹೊಸ ಧೃಡ ಕ್ರಮವಾಗಿದೆ :
2024ರ ಬಜೆಟ್‌ನಲ್ಲಿ ಘೋಷಿತ ELI (Employment Links Incentive) ಯೋಜನೆ, ಹೊಸ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಸರಕಾರದ ಪ್ರಮುಖ ಯೋಜನೆಯಾಗಿದೆ.
ಈ ಯೋಜನೆಯು ಮೂರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದ್ದು, “ಎ”, “ಬಿ”, ಮತ್ತು “ಸಿ” ಪ್ರಕಾರಗಳಲ್ಲಿ ವರ್ಗೀಕರಿಸಲಾಗಿದೆ.
ಈ ಯೋಜನೆಯ ಪ್ರಮುಖ ಉದ್ದೇಶ, ಉದ್ಯೋಗದ ಸೃಜನಶೀಲತೆಗೆ ಉತ್ತೇಜನ ನೀಡುವ ಜೊತೆಗೆ ಹೊಸ ಉದ್ಯೋಗಿಗಳಿಗೆ ಆರ್ಥಿಕ ನೆರವನ್ನು ಒದಗಿಸುತ್ತದೆ.
UAN ಸಂಖ್ಯೆಯನ್ನು ಸಕ್ರಿಯಗೊಳಿಸುವ ಹೇಗೆ?:
EPFOಯ UAN ಸಕ್ರಿಯಗೊಳಿಸಲು, ಈ ಕೆಳಕಂಡ ಸೂಚನೆಗಳನ್ನು ಅನುಸರಿಸಬೇಕು.
EPFOನ ಅಧಿಕೃತ ವೆಬ್‌ಸೈಟ್ epfindia.gov.in ಗೆ ಭೇಟಿ ನೀಡಿ.
“ಸೇವೆಗಳ” ವಿಭಾಗದಲ್ಲಿ “ಉದ್ಯೋಗಿಗಳಿಗಾಗಿ” ಆಯ್ಕೆಯನ್ನು ಕ್ಲಿಕ್ ಮಾಡಿ.
“ಸದಸ್ಯ UAN ಆನ್‌ಲೈನ್ ಸೇವೆ” ವಿಭಾಗದ ಅಡಿಯಲ್ಲಿ “Activate UAN” ಆಯ್ಕೆಯನ್ನು ಆರಿಸಿ.
ನಿಮ್ಮ UAN ಸಂಖ್ಯೆ, ಆಧಾರ್ ಸಂಖ್ಯೆ, ಹುಟ್ಟಿದ ದಿನಾಂಕ, ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇತರ ಮಾಹಿತಿಗಳನ್ನು ನಮೂದಿಸಿ.
Captcha ಕೋಡ್ ನಮೂದಿಸಿ ಮತ್ತು “Get Authorization PIN” ಮೇಲೆ ಕ್ಲಿಕ್ ಮಾಡಿ.
OTP ಮೂಲಕ ದೃಢೀಕರಣ ಮಾಡಿ ಮತ್ತು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಭವಿಷ್ಯದಲ್ಲಿ ಆಗುವ ಸಂಭಾವ್ಯ ಬದಲಾವಣೆಗಳು ಹೀಗಿವೆ :
ATM ಮೂಲಕ ಪಿಎಫ್ ಡ್ರಾ ಮಾಡುವ ಅವಕಾಶ ಕಲ್ಪಿಸಿಕೊಡಲಾಗುವುದು :
EPFO ತನ್ನ ನೂತನ 3.0 ಯೋಜನೆಯಡಿ ಪಿಎಫ್ ಹಣವನ್ನು ಎಟಿಎಂ(ATM) ಮೂಲಕ ಹಿಂತೆಗೆದುಕೊಳ್ಳುವ ವ್ಯವಸ್ಥೆಯನ್ನು ಆರಂಭಿಸಲು ಯೋಜನೆ ನಿರ್ಧರಿಸಿದೆ. ಆದರೆ, ಇದರೊಂದಿಗೆ ಹಿಂತೆಗೆದುಕೊಳ್ಳುವ ಮಿತಿಯನ್ನು ನಿರ್ದಿಷ್ಟವಾಗಿ ನಿಗದಿಪಡಿಸಲಾಗುವುದು.
ಉದ್ಯೋಗಿಗಳ ಕೊಡುಗೆಗಳ ಮೇಲೆ ಹೆಚ್ಚುವರಿ ಅವಕಾಶ ನೀಡಲಾಗುತ್ತದೆ :
ಕಾರ್ಮಿಕ ಸಚಿವಾಲಯವು ಪ್ರಸ್ತುತ ಇರುವ 12% ಪಿಎಫ್ ಕೊಡುಗೆ ಮಿತಿಯನ್ನು ಹೆಚ್ಚಿಸಲು ಪರಿಗಣಿಸುತ್ತಿದೆ. ಇದು ಉದ್ಯೋಗಿಗಳಿಗೆ ತಮ್ಮ ಹಣಕಾಸಿನ ಗುರಿಗಳನ್ನು ಸುಲಭವಾಗಿ ತಲುಪಲು ಸಹಾಯ ಮಾಡುತ್ತದೆ.
ಉದ್ಯೋಗಿಗಳೆ, ನಿಮ್ಮ ಆರ್ಥಿಕ ಭದ್ರತೆಗಾಗಿ ಈ ಮಾರ್ಗಸೂಚಿಗಳನ್ನು ಪಾಲಿಸಿ. ಇಂದೇ ನಿಮ್ಮ UAN ಸಕ್ರಿಯಗೊಳಿಸಿ, ಬ್ಯಾಂಕ್ ಖಾತೆಯನ್ನು ಆಧಾರ್ ಲಿಂಕ್ ಮಾಡಿ, ಮತ್ತು EPFOಯ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




