jobs

ರಾಜ್ಯದ ಏಕಲವ್ಯ ವಸತಿ ಶಾಲೆಗಳಲ್ಲಿ 7267 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಕಂಪ್ಲೀಟ್ ಮಾಹಿತಿ

Categories:
WhatsApp Group Telegram Group

ಬುಡಕಟ್ಟು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ (EMRS) ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 7,267 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಖಾಲಿ ಹುದ್ದೆಗಳ ವಿವರ

ಈ ನೇಮಕಾತಿ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ವರ್ಗ ಮತ್ತು ಸಂಖ್ಯೆ ಈ ಕೆಳಗಿನಂತಿವೆ:

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಪ್ರಾಂಶುಪಾಲರು (Principals)225
ಸ್ನಾತಕೋತ್ತರ ಶಿಕ್ಷಕರು (PGT)1,460
ತರಬೇತಿ ಪಡೆದ ಪದವೀಧರ ಶಿಕ್ಷಕರು (TGT)3,962
ಮಹಿಳಾ ಸ್ಟಾಫ್ ನರ್ಸ್550
ಹಾಸ್ಟೆಲ್ ವಾರ್ಡನ್ (ಪುರುಷ & ಮಹಿಳೆ)635
ಲೆಕ್ಕಪತ್ರಗಾರರು (Accountants)61
ಕಿರಿಯ ಕಾರ್ಯದರ್ಶಿ ಸಹಾಯಕ (JSA)228
ಪ್ರಯೋಗಾಲಯ ಸಹಾಯಕ146
ಒಟ್ಟು ಹುದ್ದೆಗಳು7,267

ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾರ್ಹತೆಗಳು

ವಿವಿಧ ಹುದ್ದೆಗಳಿಗೆ ವಿಭಿನ್ನ ವಿದ್ಯಾರ್ಹತೆಗಳನ್ನು ನಿಗದಿಪಡಿಸಲಾಗಿದೆ:

  • ಪ್ರಾಂಶುಪಾಲರು: ಕನಿಷ್ಠ 50% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ (Post Graduate Degree) ಮತ್ತು ಬಿ.ಎಡ್. (B.Ed) ಪದವಿ.
  • ತರಬೇತಿ ಪಡೆದ ಪದವೀಧರ ಶಿಕ್ಷಕರು (TGT): ಸಂಬಂಧಿತ ವಿಷಯದಲ್ಲಿ ಪದವಿ ಪದವಿ (Degree) ಮತ್ತು ಸಿಟಿಇಟಿ (CTET) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ.
  • ಮಹಿಳಾ ಸ್ಟಾಫ್ ನರ್ಸ್: ನರ್ಸಿಂಗ್ ವಿಷಯದಲ್ಲಿ ಬಿ.ಎಸ್ಸಿ (B.Sc Nursing) ಪದವಿ.
  • ಪ್ರಯೋಗಾಲಯ ಸಹಾಯಕ: 10ನೇ ತರಗತಿಯಲ್ಲಿ ಉತ್ತೀರ್ಣರಾಗಿರುವುದು ಮತ್ತು ಸಂಬಂಧಿತ ವಿಷಯದಲ್ಲಿ ಡಿಪ್ಲೊಮಾ ಪದವಿ.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಆಯ್ಕೆ ಪ್ರಕ್ರಿಯೆಯು ಬಹು-ಹಂತದ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ:

  1. ಟೈಯರ್ 1 ಪರೀಕ್ಷೆ: ಮೊದಲು ಟೈಯರ್ 1 ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಅರ್ಹರಾಗುತ್ತಾರೆ.
  2. ಟೈಯರ್ 2 ಪರೀಕ್ಷೆ: ಟೈಯರ್ 1 ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಟೈಯರ್ 2 ಪರೀಕ್ಷೆ ಇರುತ್ತದೆ. ಈ ಪರೀಕ್ಷೆಯು 100 ಅಂಕಗಳನ್ನು ಹೊಂದಿದ್ದು, ಪೂರ್ಣಗೊಳಿಸಲು ಎರಡು ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ.
  3. ಸಂದರ್ಶನ (Interview): ಟೈಯರ್ 2 ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಸಂದರ್ಶನ ಇರುತ್ತದೆ. ಸಂದರ್ಶನವು 40 ಅಂಕಗಳನ್ನು ಹೊಂದಿರುತ್ತದೆ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕಸೆಪ್ಟೆಂಬರ್ 19, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಅಕ್ಟೋಬರ್ 23, 2025

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories