ರಾಜ್ಯ ಸರ್ಕಾರದಿಂದ ಇ – ಖಾತಾ(e-khata) ಬಗ್ಗೆ ಮಹತ್ವದ ಮಾಹಿತಿ, ಇನ್ಮುಂದೆ ಹೊಸ ನಿಯಮಗಳು ಜಾರಿ..!
ಇದೀಗ ರಾಜ್ಯ ಸರ್ಕಾರದಿಂದ ಇ – ಖಾತಾ ವಿಷಯದ ಬಗ್ಗೆ ಹೊಸ ಮಾಹಿತಿಯನ್ನು ನೀಡಲಾಗಿದ್ದು, ಸರ್ಕಾರವು (government) ಇ – ಖಾತಾ ವಿಷಯದ ಬಗ್ಗೆ ಹಲವು ಹೊಸ ನಿಯಮಗಳನ್ನು (New rules) ಜಾರಿಗೆ ತಂದಿದೆ. ಈ ಎಲ್ಲಾ ಹೊಸ ನಿಯಮಗಳು ಮಹತ್ವದ್ದಾಗಿದ್ದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ರಾಜ್ಯ ಸರ್ಕಾರವು ನೀಡಿದ ಈ ಹೊಸ ನಿಯಮಗಳು ಯಾವುವು?ಇದರಲ್ಲಿರುವ ಮಹತ್ವ ಏನು? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯ ಸರ್ಕಾರದಿಂದ ಆಸ್ತಿ ಖಾತಾಗೆ ಸಂಬಂಧಿಸಿದ ಹೊಸ ಹಾಗೂ ಮಹತ್ವದ ಮಾಹಿತಿ :
ಇ – ಆಸ್ತಿಗೆ (E – property) ಸಂಬಂಧಿಸಿದಂತೆ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಮಹತ್ವದ ಸಂದೇಶವೊಂದನ್ನು ಹಂಚಿಕೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ಟೋಬರ್ 7ರಿಂದ ಕಾವೇರಿ ತಂತ್ರಾಂಶಗಳ ಮೂಲಕ ಮಹತ್ವದ ಪ್ರಕ್ರಿಯೆಯನ್ನು ಪ್ರಾರಂಭಿಸುವುದಾಗಿ ತಿಳಿಸಿದೆ.
ಇ – ಆಸ್ತಿ ತಂತ್ರಾಂಶಗಳ ಸಂಯೋಜನೆ ನಾಳೆಯಿಂದ ಪ್ರಾರಂಭ :
ಕಾವೇರಿ ತಂತ್ರಾಂಶ ಹಾಗೂ ಇ – ಆಸ್ತಿಯ ಬಗ್ಗೆ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಪ್ರಕಟಣೆಯೊಂದನ್ನು ಹೊರಡಿಸಿದ್ದು, ಇ – ಆಸ್ತಿ ಖಾತಾ (E – property account) ಬಗ್ಗೆ ವಿಶೇಷ ಮಾಹಿತಿಯನ್ನು ನೀಡಲಾಗಿದೆ. ಕಾವೇರಿ – 2 ತಂತ್ರಾಂಶದಲ್ಲಿ ಇ – ಆಸ್ತಿ ತಂತ್ರಾಂಶಗಳ (E-property software integration) ಸಂಯೋಜನೆ ನಾಳೆಯಿಂದ ಅಂದರೆ ಅಕ್ಟೋಬರ್ 7 ರಿಂದ ಪ್ರಾರಂಭವಾಗಲಿದೆ. ರಾಜ್ಯದಲ್ಲಿ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದ್ದು, ಇದೀಗ ಬಾಕಿ ಜಿಲ್ಲೆಗಳಲ್ಲೂ ಈ ಯೋಜನೆಯನ್ನು ಪರಿಚಯಿಸಲಾಗುತ್ತಿದೆ.
ಹಲವು ಜಿಲ್ಲೆಗಳಲ್ಲಿ ಸ್ಥಿರಾಸ್ತಿಗಳ ನೋಂದಣಿ ಕಡ್ಡಾಯ :
ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ನಾಳೆಯಿಂದ ಸ್ಥಿರಾಸ್ತಿ ನೋಂದಣಿ (Immovable property registration) ಪ್ರಕ್ರಿಯೆ ನಡೆಯಲಿದ್ದು, ಅದರಲ್ಲಿ ಬೆಂಗಳೂರು ಗ್ರಾಮಾಂತರ, ಕಲಬುರಗಿ, ವಿಜಯಪುರ, ಯಾದಗಿರಿ, ಬೆಳಗಾವಿ, ಧಾರವಾಡ, ಗದಗ, ವಿಜಯನಗರ, ಕಾರವಾರ, ಶಿವಮೊಗ್ಗ, ಉಡುಪಿ, ಮಂಗಳೂರು, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಕೋಲಾರ ಮತ್ತು ತುಮುಕೂರು ಜಿಲ್ಲೆಗಳು ಸೇರಿವೆ. ಈ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ (CMC, TMC) ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ – ಆಸ್ತಿ ಕಡ್ಡಾಯವಾಗಿರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಇ- ಆಸ್ತಿ ಖಾತಾಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು (state government) ಕೆಲವು ನಿರ್ದಿಷ್ಟ ಸೂಚನೆಗಳನ್ನು ಸಹ ನೀಡಿದೆ. ಅದರಲ್ಲಿ ಪ್ರಮುಖ ವಿಷಯಗಳನ್ನು ಕೆಳಗಡೆ ನೀಡಲಾಗಿದೆ :
ಇ – ಆಸ್ತಿ ಖಾತಾ (PID Number) ಇಲ್ಲದ ಸ್ವತ್ತುಗಳ ನೋಂದಣಿ ಸಾಧ್ಯವಿಲ್ಲ. ನಿಮ್ಮ ಸ್ವತ್ತಿಗೆ ಪಿಡಿಐ ಸಂಖ್ಯೆ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ಇ – ತಂತ್ರಾಂಶಕ್ಕೆ ಮಾತ್ರ ಅನುಮತಿ : ನೋಂದಣಿ ವೇಳೆ ಸ್ವತ್ತಿಗೆ ಸಂಬಂಧಿಸಿದ ಗುರುತಿನ ಮಾಹಿತಿಯನ್ನು ಇ – ಆಸ್ತಿ ತಂತ್ರಾಂಶದಿಂದ ಮಾತ್ರ ಪಡೆದುಕೊಳ್ಳಲಾಗುವುದು, ಭೌತಿಕ (Physical Khata)ಗಳನ್ನು ನೋಂದಣಿಗೆ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಂದರೆ ನೋಂದಣಿ ಮಾಡುವ ಸಂದರ್ಭದಲ್ಲಿ ಪತ್ರ ವ್ಯವಹಾರವನ್ನು ಮಾನ್ಯ ಮಾಡುವುದಿಲ್ಲ ಎಂದು ಹೇಳಲಾಗಿದೆ.
ತಂತ್ರಾಂಶ ಸಂಯೋಜನೆ: ಇನ್ನು ಇ – ಆಸ್ತಿ ಖಾತಾದಲ್ಲಿ ಆಸ್ತಿಗಳ ಸಂಯೋಜನೆಯನ್ನು ತಾಂತ್ರಾಂಶಗಳ ಸಂಯೋಜನೆ ವಿಧಾನ ಹೊರತುಪಡಿಸಿ, ಬೇರೆ ಯಾವುದೇ ವಿಧಾನದಿಂದ ನೋಂದಣಿ ಮಾಡಿದ್ದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.
ಇ – ಆಸ್ತಿ ಖಾತಾ ಕಡ್ಡಾಯ (E- property khata is compulsory) : ರಾಜ್ಯದಲ್ಲಿ ಆಸ್ತಿ ಹೊಂದಿರುವವರಿಗೆ ಮತ್ತೊಂದು ಅಪ್ಡೇಟ್ ನೀಡಲಾಗಿದೆ ಇನ್ನು ಈ ಆಸ್ತಿ ಖಾತಾ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸರ್ಕಾರವು ಮಾಹಿತಿ ನೀಡಿದೆ.
ಇ – ಆಸ್ತಿಯ ಬಗ್ಗೆ ಯಾವುದೇ ಮಾಹಿತಿ ತಿಳಿದು ಕೊಳ್ಳಲು ಕರೆ ಮಾಡಿ :
ಇ – ಆಸ್ತಿಯ ತಂತ್ರಾಂಶಗಳ ಸಂಯೋಜನೆಯಲ್ಲಿ ಯಾವುದೇ ಮಾಹಿತಿ ಬೇಕಿದ್ದರೂ (E-property software integration) ನೀವು ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸಹಾಯವಾಣಿ ಸಂಖ್ಯೆ 080 -68265316 ಕ್ಕೆ ಕರೆ ಮಾಡಬಹುದಾಗಿದೆ. ಇ – ಆಸ್ತಿ ತಂತ್ರಾಂಶ ಸಂಯೋಜನೆ ಹೇಗೆ, ಎಲ್ಲಿ, ಯಾವಾಗ ಎನ್ನುವ ಮಾಹಿತಿಯನ್ನು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




