ಬೆಂಗಳೂರು BBMP ವ್ಯಾಪ್ತಿಯಲ್ಲಿ ಇ-ಖಾತಾ(E-khata) ಕಡ್ಡಾಯ: ನಕ್ಷೆ ಮಂಜೂರಿಗೆ ಮೊದಲೇ ಡಿಜಿಟಲ್ ದಾಖಲೆ ಅಗತ್ಯ

Picsart 25 06 16 13 48 43 113

WhatsApp Group Telegram Group

ನವೀನ ತಂತ್ರಜ್ಞಾನ ಆಧಾರಿತ ಆಡಳಿತದತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹೆಜ್ಜೆ ಹಾಕಿದ್ದು, ನಗರಾಭಿವೃದ್ಧಿಯ ಗತಿ ಹೆಚ್ಚಿಸಲು ಮತ್ತು ಭದ್ರತೆ, ಪಾರದರ್ಶಕತೆಗೆ ಮತ್ತಷ್ಟು ಮೆರಗು ನೀಡಲು ‘ಇ-ಖಾತಾ’ ಪದ್ಧತಿಯ ಜಾರಿಗೆ ಮಹತ್ವ ನೀಡಲಾಗಿದೆ. ಇದೇ ಹಿನ್ನೆಲೆಯಲ್ಲಿ, ಜುಲೈ 1, 2025 ರಿಂದ ಬಿಬಿಎಂಪಿ ವ್ಯಾಪ್ತಿಯ ಕಟ್ಟಡ ಮಾಲೀಕರಿಗೆ ಇ-ಖಾತಾ ಕಡ್ಡಾಯಗೊಳಿಸಲಾಗುತ್ತಿದೆ. ಇ-ಖಾತೆ ಇಲ್ಲದೆ ಇನ್ನು ಮುಂದೆ ಕಟ್ಟಡದ ನಕ್ಷೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(Deputy Chief Minister D.K. Shivakumar) ಪ್ರಕಟಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇ-ಖಾತಾ ಎಂದರೇನು?:

ಇ-ಖಾತಾ ಎಂದರೆ ಆಸ್ತಿಯ ನಿಜವಾದ ಮಾಲೀಕತ್ವ, ವಿವರ ಹಾಗೂ ತೆರಿಗೆ ಪಾವತಿ ಸಂಬಂಧಿತ ಮಾಹಿತಿಗಳನ್ನು ಡಿಜಿಟಲ್(Digital) ರೂಪದಲ್ಲಿ ದಾಖಲಿಸುವ ನವೀನ ವ್ಯವಸ್ಥೆ. ಇದು ನಕಲಿ ದಾಖಲೆಗಳನ್ನು ತಡೆಯುವುದು, ಭ್ರಷ್ಟಾಚಾರ ನಿಗ್ರಹಿಸಲು ಸಹಾಯ ಮಾಡುವುದು, ಹಾಗೂ ಆಸ್ತಿ ಸಂಬಂಧಿತ ಸೇವೆಗಳನ್ನು ವೇಗವಾಗಿ ನೀಡುವುದು ಮೊದಲಾದ ಹಲವಾರು ಉದ್ದೇಶಗಳನ್ನು ಹೊಂದಿದೆ.

ಇದುವರೆಗೆ ಐದು ಲಕ್ಷಕ್ಕೆ ಮಾತ್ರ ವಿತರಣೆಯಾದ ಇ-ಖಾತಾ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 25 ಲಕ್ಷ ಇ-ಖಾತಾಗಳನ್ನು ತಯಾರಿಸಲಾಗಿದೆ. ಆದರೆ, ಸದ್ಯದವರೆಗೆ ಕೇವಲ 5 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಮಾತ್ರ ಇ-ಖಾತಾ ವಿತರಿಸಲಾಗಿದೆ. ಇನ್ನು ಉಳಿದ ಮಹತ್ವದ ಪ್ರಮಾಣದ ಜನರಿಗೆ ಈ ಡಿಜಿಟಲ್ ದಾಖಲೆ ತಲುಪಿಲ್ಲ. ಇದರಿಂದಾಗಿ ಈಗ ಸರ್ಕಾರ  ಕಾರ್ಯಚರಣೆ ನಡೆಸುತ್ತಿದೆ.

ಜುಲೈ 1ರಿಂದ ನವ ನಿಯಮ ಜಾರಿ:

ಜುಲೈ 1ರಿಂದ ಯಾರಾದರೂ ತಮ್ಮ ಕಟ್ಟಡದ ನಕ್ಷೆ ಮಂಜೂರಾತಿಗೆ ಬಿಬಿಎಂಪಿಗೆ ಅರ್ಜಿ ಸಲ್ಲಿಸುತ್ತಿದ್ದರೆ, ಅವರ ಬಳಿ ಇ-ಖಾತಾ ಇರಲೇಬೇಕು. ಇಲ್ಲದಿದ್ದರೆ, ಮೊದಲು ಎಲ್ಲಾ ಅಗತ್ಯ ದಾಖಲೆಗಳನ್ನು ನೀಡಿ ಇ-ಖಾತಾ ಪಡೆದು, ನಂತರ ಮಂಜೂರಾತಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇಲ್ಲವಾದರೆ ಅರ್ಜಿ ತಿರಸ್ಕಾರವಾಗುವ ಸಾಧ್ಯತೆ ಇದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಇ-ಖಾತಾ ಪಡೆಯುವುದು ಹೇಗೆ?:

ಇ-ಖಾತಾ ಪಡೆಯುವ ಪ್ರಕ್ರಿಯೆ ಈಗ ತುಂಬಾ ಸುಲಭವಾಗಿದೆ. ಈ ಹಿಂದೆ ಬಿಬಿಎಂಪಿ ಕಚೇರಿ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಬೇಕಾಗಿತ್ತು. ಈಗ ನೀವು ಆನ್‌ಲೈನ್(Online) ಮೂಲಕವೇ ಅರ್ಜಿ ಸಲ್ಲಿಸಬಹುದು.
ಅರ್ಜಿಯ ಪ್ರಕ್ರಿಯೆ ಹೀಗಿದೆ,
1. ಆನ್‌ಲೈನ್ ಅರ್ಜಿ ಸಲ್ಲಿಕೆ:
BBMP ನ ಅಧಿಕೃತ ವೆಬ್‌ಸೈಟ್: https://bbmp.karnataka.gov.in/newkhata/
ಇಲ್ಲಿ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ನಿಗದಿತ ಶುಲ್ಕ ಪಾವತಿಸಿದರೆ ಎರಡೇ ದಿನಗಳಲ್ಲಿ ಅಂತಿಮ ಇ-ಖಾತಾ ಪಡಿಸಿಕೊಳ್ಳಬಹುದು.
2. ಜನಸೇವಕ ಸಹಾಯವಾಣಿ ಸೇವೆ:
ದೂರವಾಣಿ ಸಂಖ್ಯೆ: 080-4920-3888 ಗೆ ಕರೆಮಾಡಿ
ಅಧಿಕಾರಿ ನಿಮ್ಮ ಮನೆಗೆ ಬಂದು ದಾಖಲೆ ಸಂಗ್ರಹಿಸಿ, ಕೆಲಸ ಪೂರೈಸುತ್ತಾರೆ.

ಇ-ಖಾತಾ ಪಡೆಯಲು ಅಗತ್ಯವಿರುವ ದಾಖಲೆಗಳು ಯಾವುವು?:

1. ಆಧಾರ್ ಕಾರ್ಡ್(Adhar card).
2. ಆಸ್ತಿ ತೆರಿಗೆ (SAS) ಸಂಖ್ಯೆಯ ವಿವರಗಳು.
3. ಮಾರಾಟದ ಡೀಡ್ ಅಥವಾ ನೋಂದಾಯಿತ ದಾಖಲೆ.
4. ಸ್ವತ್ತಿನ ಛಾಯಾಚಿತ್ರ (property photo).
ಈ ದಾಖಲೆಗಳನ್ನು ಸಿದ್ಧಪಡಿಸಿ ಅರ್ಜಿ ಸಲ್ಲಿಸಿದರೆ, ನಿಗದಿತ ಶುಲ್ಕ ಪಾವತಿಸಿ, ಎರಡು ದಿನಗಳೊಳಗೆ ಇ-ಖಾತಾ ಪಡೆಯಬಹುದು.

ಒಟ್ಟಾರೆಯಾಗಿ, ಜುಲೈ 1ರಿಂದ ಇ-ಖಾತೆ ಕಡ್ಡಾಯವಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಆಸ್ತಿ ಮಾಲೀಕರು ತಾವು ಈ ವ್ಯವಸ್ಥೆಗೆ ಹೊಂದಿಕೊಳ್ಳಬೇಕು. ಇಲ್ಲವಾದರೆ ನಿಮ್ಮ ಆಸ್ತಿ ಸಂಬಂಧಿತ ಕಾರ್ಯಗಳು ವಿಳಂಬಗೊಳ್ಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕರಿಗೆ ಇ-ಖಾತಾ ಪಡೆಯುವ ಬಗ್ಗೆ ಕರೆ ನೀಡಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!