ಕರ್ನಾಟಕ ರಾಜ್ಯ ಸರ್ಕಾರವು ಸ್ಥಿರಾಸ್ತಿ ವ್ಯವಹಾರಗಳಿಗೆ ಸಂಬಂಧಿಸಿದ ದಸ್ತಾವೇಜುಗಳ ಮೇಲೆ ವಿಧಿಸುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪರಿಷ್ಕರಿಸಲು ನಿರ್ಧರಿಸಿದೆ. ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಆಯುಕ್ತ ಶ್ರೀ ಮುಲೈ ಮುಗಿಲನ್ ಅವರು ನೀಡಿದ ಮಾಹಿತಿಯಂತೆ, ಕರ್ನಾಟಕದ ಪ್ರಸ್ತುತ ಶುಲ್ಕವು ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಿದ್ದು, ಈಗ ಅದನ್ನು ಇತರ ರಾಜ್ಯಗಳ ದರಗಳೊಂದಿಗೆ ಸಮೀಕರಿಸಲಾಗುತ್ತಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೋಲಿಕಾತ್ಮಕ ವಿಶ್ಲೇಷಣೆ ಪ್ರಕಾರ, ಮುದ್ರಾಂಕ, ನೋಂದಣಿ ಮತ್ತು ಇತರೆ ಎಲ್ಲ ಶುಲ್ಕಗಳನ್ನು ಸೇರಿಸಿ ಕರ್ನಾಟಕವು ಇದುವರೆಗೆ ಶೇಕಡಾ 6.6 ರಷ್ಟು ವಿಧಿಸುತ್ತಿತ್ತು. ಆದರೆ, ಇದೇ ಅವಧಿಯಲ್ಲಿ ತಮಿಳುನಾಡು ರಾಜ್ಯದಲ್ಲಿ ಈ ಒಟ್ಟು ಶುಲ್ಕ ಶೇಕಡಾ 9, ಕೇರಳದಲ್ಲಿ ಶೇಕಡಾ 10, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಶೇಕಡಾ 7.5 ರಷ್ಟು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಶುಲ್ಕಗಳನ್ನು ಪರಿಷ್ಕರಿಸುವ ಮುಖ್ಯ ಉದ್ದೇಶವೆಂದರೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕದ ರಚನೆಯನ್ನು ಸುಸಂಘಟಿತಗೊಳಿಸಿ, ಆಡಳಿತಾತ್ಮಕ ಕಾರ್ಯಪ್ರಣಾಲಿಗಳನ್ನು ಸುಧಾರಿಸಿ, ನಾಗರಿಕರಿಗೆ ಹೆಚ್ಚು ಪರಿಣಾಮಕಾರಿ ಮತ್ತು ಉತ್ತಮ ಸೇವೆ ಸಲ್ಲಿಸುವುದಾಗಿದೆ.
ಹೊಸ ಶುಲ್ಕದ ರೂಪರೇಷೆ:
ಈ ನಿಟ್ಟಿನಲ್ಲಿ, ರಾಜ್ಯ ಸರ್ಕಾರವು ನೋಂದಣಿ ಶುಲ್ಕವನ್ನು ಶೇಕಡಾ 1 ರಿಂದ ಶೇಕಡಾ 2 ರಷ್ಟಕ್ಕೆ ಹೆಚ್ಚಿಸಿದೆ. ಈ ಪರಿವರ್ತಿತ ಶುಲ್ಕವು 31 ಆಗಸ್ಟ್ 2025 ರಿಂದ ಜಾರಿಗೆ ಬರಲಿದೆ.
ಹೊಸ ದರಗಳಿಗೆ ಅನುಗುಣವಾಗಿ ಪಾವತಿ ಪ್ರಕ್ರಿಯೆ:
ಹಿಂದಿನ ದರದಲ್ಲಿ ಶುಲ್ಕವನ್ನು ಪಾವತಿಸಿ ಈಗಾಗಲೇ ದಸ್ತಾವೇಜು ನೋಂದಣಿಗಾಗಿ ನಿರ್ದಿಷ್ಟ ಸಮಯ (ಅಪಾಯಿಂಟ್‌ಮೆಂಟ್) ಪಡೆದವರು ಅಥವಾ ಶುಲ್ಕ ಪಾವತಿಸಿದರೂ ಸಮಯ ಪಡೆಯದವರು, ಹೊಸ ಮತ್ತು ಹಳೆಯ ದರಗಳ ನಡುವಿನ ವ್ಯತ್ಯಾಸದ ಮೊತ್ತವನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕೃತ ವೆಬ್‌ಪೋರ್ಟಲ್ ಮೂಲಕ ಪೂರೈಸಬೇಕು. ಈ ಪಾವತಿಯನ್ನು ಮಾಡಲು ಅರ್ಜಿದಾರರು ಮೊದಲು ಬಳಸಿದ ಲಾಗಿನ್ ಖಾತೆಯನ್ನು ಬಳಸಬೇಕಾಗುತ್ತದೆ. ಈ ಸಂಬಂಧಿತ ಎಲ್ಲಾ ಮಾಹಿತಿ ಮತ್ತು ಸೂಚನೆಗಳನ್ನು ಒಳಗೊಂಡ ಸಂದೇಶವನ್ನು (SMS) ಅರ್ಜಿದಾರರ ನೋಂದಾಯಿತ ಮೊಬೈಲ್ ನಂಬರಿಗೆ ಕಳುಹಿಸಲಾಗುವುದು.
ಇಲಾಖೆಯಲ್ಲಿ ಈಗಾಗಲೇ ಸಲ್ಲಿಸಲ್ಪಟ್ಟು, ಪರಿಶೀಲನೆಯ ಹಂತದಲ್ಲಿರುವ ದಸ್ತಾವೇಜುಗಳಿಗೆ ಸಂಬಂಧಿಸಿದಂತೆ, ನೋಂದಣಿ ಶುಲ್ಕವನ್ನು ಮರು ಲೆಕ್ಕಹಾಕಲಾಗುತ್ತದೆ. ಅಂತಹ ದಸ್ತಾವೇಜುಗಳ ಮಾಲೀಕರು ಪರಿಷ್ಕೃತ ಶೇಕಡಾ 2 ರ ದರದ ಪ್ರಕಾರ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಬಹುದು. ಈ ವರ್ಗದ ಅರ್ಜಿದಾರರಿಗೆ, ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೊದಲು, ಪರಿಷ್ಕೃತ ಶುಲ್ಕದ ವಿವರವನ್ನು ಸೂಚಿಸಲಾಗುವುದು.
ಇಲಾಖೆಯಲ್ಲಿ ಈಗಾಗಲೇ ಸಲ್ಲಿಸಲ್ಪಟ್ಟು, ಪರಿಶೀಲನೆಯ ಹಂತದಲ್ಲಿರುವ ದಸ್ತಾವೇಜುಗಳಿಗೆ ಸಂಬಂಧಿಸಿದಂತೆ, ನೋಂದಣಿ ಶುಲ್ಕವನ್ನು ಮರು ಲೆಕ್ಕಹಾಕಲಾಗುತ್ತದೆ. ಅಂತಹ ದಸ್ತಾವೇಜುಗಳ ಮಾಲೀಕರು ಪರಿಷ್ಕೃತ ಶೇಕಡಾ 2 ರ ದರದ ಪ್ರಕಾರ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಬಹುದು. ಈ ವರ್ಗದ ಅರ್ಜಿದಾರರಿಗೆ, ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೊದಲು, ಪರಿಷ್ಕೃತ ಶುಲ್ಕದ ವಿವರವನ್ನು ಸೂಚಿಸಲಾಗುವುದು.
ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವನ್ನು ತಪ್ಪಿಸಲು ಎಲ್ಲಾ ಅರ್ಜಿದಾರರಿಗೂ ಈ ನವೀಕರಿಸಿದ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತಿ ಇಲಾಖೆಯಿಂದ ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿ ಮತ್ತು ಹಂತ-ಹಂತದ ಸೂಚನೆಗಳಿಗಾಗಿ ಇಲಾಖೆಯ ಅಧಿಕೃತ ವೆಬ್‌ಪೋರ್ಟಲ್‌ನಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿರುವುದಾಗಿ ಸಹ ತಿಳಿಸಲಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.