WhatsApp Image 2025 10 16 at 3.43.45 PM

ಬೆಳಗ್ಗೆ ಎದ್ದಾಗ ಸುಸ್ತಾಗುತ್ತಿದೆಯಾ? ಹಾಗಾದ್ರೆ ತಪ್ಪದೇ ಈ 5 ಕೆಲಸಗಳನ್ನು ಮಾಡಿ.!

Categories:
WhatsApp Group Telegram Group

ರಾತ್ರಿ ಪೂರ್ತಿ ಚೆನ್ನಾಗಿ ನಿದ್ರೆ ಮಾಡಿದರೂ ಸಹ ಬೆಳಗ್ಗೆ ಎದ್ದಾಗ ಮೈ-ಕೈ ನೋವು, ಆಯಾಸ, ಮತ್ತು ಸುಸ್ತು ಎದುರಾಗುತ್ತಿದೆಯೇ? ಹಾಗಿದ್ದರೆ ನಿಮ್ಮ ದಿನಚರಿಯಲ್ಲಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವ ಸಮಯ ಬಂದಿದೆ ಎಂದರ್ಥ. ಇಂದಿನ ಒತ್ತಡದ ಜೀವನಶೈಲಿಯಲ್ಲಿ, ಯುವಜನರಿಗೆ ಬೆಳಗಿನ ಉಪಾಹಾರಕ್ಕೆ ಸಹ ಸಮಯ ಸಿಗದಿರುವುದು ಸಾಮಾನ್ಯವಾಗಿದೆ. ಇದರ ನಡುವೆ ಧ್ಯಾನ, ಯೋಗ, ವ್ಯಾಯಾಮ ಅಥವಾ ವಾಕಿಂಗ್ ಮಾಡುವುದು ದೂರದ ಮಾತು!ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಆದರೆ ಆರೋಗ್ಯ ದೃಷ್ಟಿಯಿಂದ ನೋಡಿದರೆ, ಬೆಳಗಿನ ನಿತ್ಯಕರ್ಮಗಳ ನಂತರ ಮಾಡುವ ಇಂತಹ ದೈಹಿಕ ಚಟುವಟಿಕೆಗಳು ಮತ್ತು ಆರೋಗ್ಯಕರ ಅಭ್ಯಾಸಗಳು ದೀರ್ಘಾವಧಿಯಲ್ಲಿ ಉತ್ತಮ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಇಂದಿನ ಲೇಖನದಲ್ಲಿ ಬೆಳಗಿನ ಆಲಸ್ಯವನ್ನು ದೂರ ಮಾಡಿ, ಇಡೀ ದಿನ ಶಕ್ತಿ ಮತ್ತು ಚೈತನ್ಯದಿಂದ ಇರಲು ಸಹಾಯ ಮಾಡುವ 5 ಪ್ರಮುಖ ಆರೋಗ್ಯಕರ ಅಭ್ಯಾಸಗಳನ್ನು ನೋಡೋಣ.

ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯಿರಿ

image 70

ರಾತ್ರಿಯ ನಿದ್ರೆಯ ಸಮಯದಲ್ಲಿ ದೇಹವು ನಿರ್ಜಲೀಕರಣಗೊಳ್ಳುವ ಕಾರಣ ಬೆಳಗಿನ ಸುಸ್ತು ಮತ್ತು ಆಯಾಸ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಹಾಸಿಗೆಯಿಂದ ಎದ್ದ ತಕ್ಷಣ ಒಂದು ಅಥವಾ ಎರಡು ಲೋಟ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ದೇಹವನ್ನು ಹೈಡ್ರೇಟ್ ಮಾಡಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಪೌಷ್ಟಿಕ ಬೆಳಗಿನ ಉಪಾಹಾರ

image 73

ದಿನದ ಪ್ರಮುಖ ಊಟವಾದ ಬೆಳಗಿನ ಉಪಾಹಾರ ಎಂದಿಗೂ ಆರೋಗ್ಯಕರವಾಗಿರಲಿ. ನಿಮ್ಮ ಉಪಾಹಾರದಲ್ಲಿ ಸಂಸ್ಕರಿಸಿದ ಆಹಾರಗಳ ಬದಲಿಗೆ ಓಟ್ಸ್, ಗಂಜಿ, ಮೊಳಕೆ ಕಾಳುಗಳು, ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ಸೇರಿಸಿಕೊಳ್ಳಿ. ಉತ್ತಮ ಉಪಾಹಾರವು ಇಡೀ ದಿನಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ.

ಬೆಳಗ್ಗೆ ಟೀ/ಕಾಫಿ ಅಭ್ಯಾಸವನ್ನು ದೂರ ಮಾಡಿ

image 74

ನಮ್ಮಲ್ಲಿ ಬಹುತೇಕರು ಬೆಳಗ್ಗೆ ಎದ್ದ ತಕ್ಷಣ ಟೀ ಅಥವಾ ಕಾಫಿ ಕುಡಿಯುವುದಕ್ಕೆ ಮೊರೆ ಹೋಗುತ್ತಾರೆ. ಆದರೆ, ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವಿಸುವುದು ಅಸಿಡಿಟಿ ಮತ್ತು ಅಲ್ಪಾವಧಿಯ ಶಕ್ತಿಯ ನಂತರ ತಕ್ಷಣ ಆಯಾಸ ಹೆಚ್ಚಾಗಲು ಕಾರಣವಾಗಬಹುದು. ಇದರ ಬದಲಿಗೆ ಬೆಚ್ಚಗಿನ ನೀರು, ಗಿಡಮೂಲಿಕೆ ಚಹಾ ಅಥವಾ ಹಣ್ಣಿನ ರಸವನ್ನು ಸೇವಿಸಿ.

ಕಡ್ಡಾಯವಾಗಿ ವ್ಯಾಯಾಮ ಮಾಡಿ

image 71

ಬೆಳಗ್ಗೆ ವ್ಯಾಯಾಮ, ಲಘು ಯೋಗಾಭ್ಯಾಸ, ಅಥವಾ ವಾಕಿಂಗ್ ಮಾಡುವುದರಿಂದ ನಿಮ್ಮ ಮನಸ್ಸು ಮತ್ತು ದೇಹವು ದಿನವಿಡೀ ಚುರುಕಾಗಿ ಮತ್ತು ಉಲ್ಲಾಸದಿಂದ ಇರುತ್ತದೆ. ಜೊತೆಗೆ, ಇದು ಆರೋಗ್ಯವನ್ನು ವೃದ್ಧಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕನಿಷ್ಠ 20-30 ನಿಮಿಷಗಳ ಕಾಲ ದೈಹಿಕ ಚಟುವಟಿಕೆಯಲ್ಲಿ ತೊಡಗಿ.

ಖಾಲಿ ಹೊಟ್ಟೆಗೆ ಖರ್ಜೂರ ತಿನ್ನಿ

image 72

ಬೆಳಗ್ಗೆ ಖಾಲಿ ಹೊಟ್ಟೆಗೆ 2-3 ಖರ್ಜೂರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು. ಖರ್ಜೂರದಲ್ಲಿರುವ ನೈಸರ್ಗಿಕ ಸಕ್ಕರೆ ಅಂಶ ಮತ್ತು ಅಗತ್ಯ ಪೋಷಕಾಂಶಗಳು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸಿ, ಸುಸ್ತು ಕಡಿಮೆ ಮಾಡಲು ಮತ್ತು ದಿನವನ್ನು ಚೈತನ್ಯದಿಂದ ಆರಂಭಿಸಲು ನೆರವಾಗುತ್ತವೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories