ಇದೀಗ ಹೊಸ ಸುದ್ದಿ ತಿಳಿದು ಬಂದಿದೆ. 2023ರ ಕೇಂದ್ರ ಬಜೆಟ್ ಗೆ ತಕ್ಕಂತೆ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಹಣಕಾಸು ಸ್ಥಿತಿಗತಿ ಮೇಲೆ ಪರಿಣಾಮ ಬಿರುವಂತಹ ಹಲವಾರು ಹೊಸ ಬದಲಾವಣೆಗಳು ನಡೆಯಲಿವೆ ಎಂದು ತಿಳಿಸಿದ್ದಾರೆ. ಹೀಗಾಗಿ ಅಕ್ಟೋಬರ್ 1 ಕ್ಕೂ ಮೊದಲೇ ನೀವು update ಮಾಡಿಸುವುದು ಒಳ್ಳೆಯದು ಎಂದು ತಿಳಿಸಿದ್ದಾರೆ. ಏನಿದು ಹೊಸ ಬದಲಾವಣೆ ಅಂತ ತಿಳಿದುಕೊಳ್ಳ ಬೇಕೇ ಹಾಗಿದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ
ಅಕ್ಟೋಬರ್ ಬರುವ ಮುನ್ನ ಈ ಕೆಲಸ ತಪ್ಪದೇ ಮಾಡಿ :
ಆಧಾರ್ ಕಾರ್ಡ್ ನಲ್ಲಿ (adhar card )ವಿವರ ಬದಲಾವಣೆ, ಮ್ಯೂಚುವಲ್ ಫಂಡ್, ಡಿಮ್ಯಾಟ್ ಅಥವಾ ಟ್ರೇಡಿಂಗ್ ಖಾತೆಗಳಿಗೆ ನಾಮಿನಿಗಳ ನೇಮಕ ಅಥವಾ ಬದಲಾವಣೆ, ಮತ್ತು ಟಿಸಿಎಸ್ (TCS)ನಿಯಮಗಳು, ಎರಡು ಸಾವಿರ ಮುಖಬೆಲೆಯ ನೋಟುಗಳ ಬದಲಾವಣೆ, ಜನನ-ಮರಣ ಪ್ರಮಾಣಪತ್ರ (Birth &Death Certificate )ಸಲ್ಲಿಕೆ ಮಾಡಬೇಕಾಗುತ್ತದೆ. ಇವೆಲ್ಲವುಗಳನ್ನು ನೀವು ಅಕ್ಟೋಬರ್ ತಿಂಗಳು ಶುರುವಾಗುವ ಮುಂಚೆ ಕಡ್ಡಾಯವಾಗಿ ಮಾಡಿಸಬೇಕಿದೆ.
ಆಧಾರ್ ಜೋಡಣೆ:
ಸಾರ್ವಜನಿಕ ಭವಿಷ್ಯ ನಿಧಿ, ಸುಕನ್ಯಾ ಸಮೃದ್ಧಿ ಯೋಜನೆ, ಅಂಚೆ ಕಚೇರಿ ಠೇವಣಿ ಮತ್ತು ಇತರ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದವರು ಈ ತಿಂಗಳ ಅಂತ್ಯದೊಳಗೆ ತಮ್ಮ ಆಧಾರ್ ಸಂಖ್ಯೆಯನ್ನು ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಗೆ ಸಲ್ಲಿಸಬೇಕು. ಸೆಪ್ಟೆಂಬರ್ 30 ರ ತನಕ ಅವಕಾಶ ನೀಡಲಾಗಿದೆ. ಇಲ್ಲದಿದ್ದಲ್ಲಿ ಈ ಹೂಡಿಕೆಗಳನ್ನು ಫ್ರೀಜ್ ಮಾಡುವ ಸಂಭವವಿದೆ ಎಂದು ತಿಳಿದು ಬಂದಿದೆ.
ಮ್ಯೂಚುಯಲ್ ಫಂಡ್‌ಗಳಿಗೆ ನಾಮಿನಿ:
ಅಸ್ತಿತ್ವದಲ್ಲಿರುವ ಎಲ್ಲಾ ಮ್ಯೂಚುಯಲ್ ಫಂಡ್ ಗಳಿಗೆ ನಾಮಿನಿಯ ಹಜೆಸರನ್ನು ಸೇರಿಸಲು ಸೆಪ್ಟೆಂಬರ್ 30ರಂದು ಕೊನೆಯ ದಿನವಾಗಿದೆ. ಒಂದು ವೇಳೆ ಸೆಪ್ಟೆಂಬರ್ 30ರ ಒಳಗಾಗಿ ನಾಮಿನಿಯನ್ನು ಹೆಸರಿಸಲು ಆಗಲಿಲ್ಲ ಎಂದರೆ ಮ್ಯೂಚುವಲ್ ಫಂಡ್ ಗಳನ್ನು ಡೆಬಿಟ್ ಗಳಾಗಿ ಫ್ರೀಜ್ ಮಾಡಲಾಗುತ್ತದೆ.
ಟಿಸಿಎಸ್( TCS ) ನಿಯಮಗಳು:
ಕ್ರೆಡಿಟ್ ಕಾರ್ಡ್ ಮೂಲಕ ಏಳು ಲಕ್ಷ ರೂಪಾಯಿಗೂ ಹೆಚ್ಚು ಮೊತ್ತವನ್ನು ಖರ್ಚು ಮಾಡಿದ್ದರೆ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಶೇ.20ರಷ್ಟು TCS ನೀವು ಒಳಪಡುತ್ತೀರಿ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಗಳನ್ನು ಶೈಕ್ಷಣಿಗೆ ಹಾಗೂ ವೈದ್ಯಕೀಯ ಉದ್ಧೇಶಗಳಿಗೆ ಬಳಸಿದ್ದರೆ ಶೇ.05ರಷ್ಟು TCS ವಿಧಿಸಲಾಗುತ್ತದೆ. ಕೇಂದ್ರವು 2023-24ರ ಬಜೆಟ್‌ನಲ್ಲಿ ಸಾಗರೋತ್ತರ ಪ್ರವಾಸ ಪ್ಯಾಕೇಜ್ ಮತ್ತು LRS ಅಡಿಯಲ್ಲಿ ರವಾನೆಯಾಗುವ ಹಣಕ್ಕೆ TCS ದರಗಳನ್ನು ಪ್ರಸ್ತುತ ಶೇ. 055ರಿಂದ ಶೇಕಡಾ 20ಕ್ಕೆ ಹೆಚ್ಚಿಸಿದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಡಿಮ್ಯಾಟ್ ಅಥವಾ ಟ್ರೇಡಿಂಗ್ ಖಾತೆಗಳಿಗೆ ನಾಮಿನಿ:
ಅಸ್ತಿತ್ವದಲ್ಲಿರುವ ಟ್ರೇಡಿಂಗ್ ಮತ್ತು ಡಿಮ್ಯಾಟ್ ಖಾತೆದಾರರಿಗೆ ಫಲಾನುಭವಿಗಳನ್ನು ನಾಮನಿರ್ದೇಶನ ಮಾಡುವ ಗಡುವು ಸೆಪ್ಟೆಂಬರ್ 30ರಂದು ಕೊನೆಗೊಳ್ಳುತ್ತದೆ. ಅಕ್ಟೋಬರ್ 1ರ ನಂತರ ವಿವಿಧ ನಿಬಂಧನೆಗಳನ್ನು ವಿಧಿಸಲಾಗುತ್ತದೆ ಎಂದು ಹೇಳಲಾಗಿದೆ.
ನೋಟುಗಳ ವಿನಿಮಯ:
ಮೇ 19ರಂದು ಭಾರತೀಯ ರಿಸರ್ವ್ ಬ್ಯಾಂಕ್ ಎರಡು ಸಾವಿರ ಮುಖಬೆಲೆಯ ನೋಟುಗಳ ಚಲಾವಣೆಯನ್ನು ಹಿಂಪಡೆದಿತ್ತು. ನಿಮ್ಮಲ್ಲಿ ಕೆಲವರು ಇನ್ನೂ ರೂ. 2000 ನೋಟುಗಳನ್ನು ಹೊಂದಿದ್ದರೆ, 30 ಸೆಪ್ಟೆಂಬರ್ 2023ರೊಳಗೆ ನೋಟುಗಳನ್ನು ಬದಲಾಯಿಸಲು ಟೈಮ್ ನೀಡಿದೆ.
ಜನನ-ಮರಣ ಪ್ರಮಾಣಪತ್ರ ಸಲ್ಲಿಕೆ:
ಹಣದ ವಿಷಯಗಳ ಹೊರತಾಗಿ, ಬೇರೆ ಬದಲಾವಣೆ ಕೂಡ ಆಗಲಿವೆ ಜನನ ಪ್ರಮಾಣಪತ್ರಗಳು ಮುಂದಿನ ತಿಂಗಳಿನಿಂದ ಆಧಾರ್ ಮತ್ತು ಸರ್ಕಾರಿ ಉದ್ಯೋಗಗಳಿಗೆ ಒಂದೇ ದಾಖಲೆಯಾಗಿ ಮಾರ್ಪಟ್ಟಿವೆ. ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 ಅಕ್ಟೋಬರ್ 1, 2023 ರಿಂದ ದೇಶದಲ್ಲಿ ಜಾರಿಗೆ ಬರಲಿದೆ ಎಂದು ತಿಳಿದು ಬಂದಿದೆ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group








