ಈ ಬಾರಿಯ ದೀಪಾವಳಿ ಹಬ್ಬ (Diwali festival) ಅಕ್ಟೋಬರ್ 31 ಅಥವಾ ನವೆಂಬರ್ 1! ಹಬ್ಬವನ್ನು ಆಚರಿಸಲು ಬಂದ ಗೊಂದಲಕ್ಕೆ ಕಾರಣವೇನು?
ದೀಪಗಳ ಹಬ್ಬ ದೀಪಾವಳಿ (Diwali festival), ಭಾರತದಲ್ಲಿ(India) ಜನರು ಹೆಚ್ಚು ಇಷ್ಟಪಡುವಂತಹ ಹಬ್ಬ ಈ ದೀಪಾವಳಿ. ಹಿಂದೂಗಳ ಪ್ರಮುಖ ಹಬ್ಬದ ಸಾಲಿನಲ್ಲಿ ದೀಪಾವಳಿಯೂ ಒಂದು. ಈ ಬೆಳಗಿನ ಹಬ್ಬವನ್ನು ಆಚರಿಸುವುದಕ್ಕಾಗಿ ಹೊಸ ಹೊಸ ಬಟ್ಟೆಗಳು, ಬಗೆ ಬಗೆಯ ದೀಪಗಳು ಹೀಗೆ ಹಲವಾರು ರೀತಿ ತಯಾರಿಯನ್ನು ನಡೆಸಿಕೊಂಡಿರುತ್ತಾರೆ. ಜನರು ದೀಪಾವಳಿಯ (Deepawali 2024) ಸಮಯದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ದೇವತೆ ಲಕ್ಷ್ಮೀ ದೇವಿಯನ್ನು (Lakshmi devi) ಪೂಜಿಸುತ್ತಾರೆ. ದೀಪಾವಳಿ ಹಬ್ಬವನ್ನು ಆಚರಿಸಲು ಕಾತುರದಿಂದ ಕಾಯುತ್ತಿರುವ ಅಂತಹ ಜನರು ಸ್ವಲ್ಪ ಗೊಂದಲದಲ್ಲಿ ಇದ್ದಾರೆ. ಈ ವರ್ಷ ದೀಪಾವಳಿಯನ್ನು ಯಾವ ದಿನಾಂಕದಂದು ಆಚರಿಸಬೇಕು? ಯಾಕೆ ಗೊಂದಲ ಸೃಷ್ಟಿಯಾಗಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಈ ವರ್ಷದ ದೀಪಾವಳಿ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಪ್ರತಿ ವರ್ಷ ಆಶ್ವಯುಜ ಮಾಸದ ಅಮಾವಾಸ್ಯೆಯಂದು ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಧನ ತ್ರಯೋದಶಿಯಿಂದ ಭಾಯಿ ದೂಜ್‌ವರೆಗೆ ಆಚರಿಸಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ ಈ ವರ್ಷ ದೀಪಾವಳಿ ಹಬ್ಬವನ್ನು ಕಾರ್ತಿಕ ಮಾಸದ ಅಮವಾಸ್ಯೆ ತಿಥಿಯಂದು ಅಂದರೆ ಅಕ್ಟೋಬರ್ 31ರಂದು(31st October) ಆಚರಿಸಲಾಗುವುದು. ಆದರೆ ನವೆಂಬರ್ 1ರಂದು(November 1) ಸಹ ದೀಪಾವಳಿ ಹಬ್ಬವಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದ್ದರಿಂದ ಈ ಗೊಂದಲವನ್ನು ಬಗೆಹರಿಸಲು ಜೈಪುರದ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ (Central Sanskrit University, Jaipur) ದೀಪವಾಳಿ ನಿರ್ಣಯ ಸಭೆ ಆಯೋಜಿಸಿದ್ದರು.
ದೀಪವಾಳಿ ನಿರ್ಣಯ ಸಭೆಯಲ್ಲಿ ಏನು ನಿರ್ಣಯ ತೆಗೆದುಕೊಳ್ಳಲಾಯಿತು :
ಜನರ ಮನಸ್ಸಿನಲ್ಲಿ ಬಂದಿರುವ ದೀಪಾವಳಿ ಹಬ್ಬವನ್ನು ಎಂದು ಆಚರಿಸಬೇಕು ಎಂಬ ಗೊಂದಲವನ್ನು ನಿವಾರಿಸಲು ಭಾರತದ ನೂರಕ್ಕೂ ಹೆಚ್ಚು ಜ್ಯೋತಿಷಿಗಳು, ವಿದ್ವಾಂಸರು ಮತ್ತು ಸಂಸ್ಕೃತ ವಿದ್ವಾಂಸರು ಎಲ್ಲರೂ ಒಟ್ಟಿಗೆ ಸೇರಿ ದೀಪವಾಳಿ ನಿರ್ಣಯ ಸಭೆಯನ್ನು ಜೈಪುರದ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದರು. ಅಕ್ಟೋಬರ್ 31 ರಂದು ಪೂಜೆಗೆ ವೃಷಭ ಮತ್ತು ಸಿಂಹ ಲಗ್ನದ ಶುಭ ಸಮಯ ಲಭ್ಯವಾಗಲಿದೆ. ಹಾಗೂ ಅಮಾವಾಸ್ಯೆಯ ತಿಥಿಯು ಈ ದಿನಾಂಕದಂದು ಸಂಪೂರ್ಣ ಪ್ರದೋಷ ಕಾಲ ಮಾತ್ರವಲ್ಲದೆ ಇಡೀ ರಾತ್ರಿ ಇರಲಿದೆ. ಆದರೆ ನವೆಂಬರ್ 1 ರಂದು ಅಮವಾಸ್ಯೆಯ ತಿಥಿಯು ಸಂಜೆ 6.16ಕ್ಕೆ ಕೊನೆಯಾಗುತ್ತದೆ. ಕೇವಲ ಕೆಲವೇ ನಿಮಿಷಗಳು ಸೂರ್ಯಾಸ್ಥದ ನಂತರ ಸಿಗುತ್ತದೆ. ಆದ್ದರಿಂದ ಲಕ್ಷ್ಮಿ ಪೂಜೆಯನ್ನು ನಡೆಸಲು ಬಹಳ ಕಡಿಮೆ ಸಮಯ ಇರುತ್ತದೆ. ಈ ಕಾರಣಕ್ಕಾಗಿ ಸಭೆಯಲ್ಲಿ ದೀಪಾವಳಿಯನ್ನು ಅಕ್ಟೋಬರ್ 31 ರಂದು ಆಚರಿಸಲು ನಿರ್ಧಾರಕ್ಕೆ ಬರಲಾಗಿದೆ.
ಈ ಬಾರಿಯ ದೀಪಾವಳಿ ಯಾವಾಗ?:
ಜ್ಯೋತಿಷಿಗಳ ತೆಗೆದುಕೊಂಡ ನಿರ್ಧಾರದ ಪ್ರಕಾರ, ದೀಪಾವಳಿಯನ್ನು ಅಕ್ಟೋಬರ್ 31, ಗುರುವಾರದಂದು ಸರ್ವಾನುಮತದಿಂದ ಆಚರಿಸಲಾಗುತ್ತದೆ. ಪಂಚಾಂಗದ ಪ್ರಕಾರ, ಈ ವರ್ಷದ ಅಮಾವಾಸ್ಯೆ ತಿಥಿಯು ಅಕ್ಟೋಬರ್ 31 ರಂದು ಮಧ್ಯಾಹ್ನ 3:11 ಕ್ಕೆ ಪ್ರಾರಂಭವಾಗುತ್ತದೆ ಹಾಗೂ ನವೆಂಬರ್ 1 ರ ಸಂಜೆ 05:12 ರವರೆಗೆ ಇರುತ್ತದೆ. ಅಂದರೆ ಅಕ್ಟೋಬರ್ 31 ರಾತ್ರಿ ಅಮವಾಸ್ಯೆಯ ತಿಥಿ ಇರುತ್ತದೆ. ಆದ್ದರಿಂದ ಅಕ್ಟೋಬರ್ 31 ರ ರಾತ್ರಿ ದೀಪಾವಳಿಯನ್ನು ಆಚರಿಸುವುದು ಮಂಗಳಕರವಾಗಿದೆ.
ದೀಪಾವಳಿ ಹಬ್ಬದ ಪೂಜಾ ವಿಧಾನ ಹೇಗೆ?:
ದೀಪಾವಳಿ ಹಬ್ಬದ ದಿನದಂದು ಮುಂಜಾನೆ ಬೇಗ ಎದ್ದು ಗಂಗಾಜಲ ಮೇಶ್ರಿತ ನೀರಿನಿಂದ ಸ್ನಾನ ಮಾಡಿಕೊಳ್ಳಬೇಕು. ಮನೆ ಹಾಗೂ ಪೂಜಾ ಕೊಠಡಿಯನ್ನು ಸ್ವಚ್ಛಗೊಳಿಸಿಕೊಂಡ ಬಳಿಕ ವಿನಾಯಕ ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳನ್ನು ನೀರಿನಿಂದ ಸ್ವಚ್ಛಗೊಳಿಸಬೇಕು. ಗಂಗಾಜಲದೊಂದಿಗೆ ಪಂಚಾಮೃತದಿಂದ ಅಭಿಷೇಕವನ್ನು ಮಾಡಬೇಕು. ನಂತರ ಹೂವುಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಅರ್ಪಿಸಿ. ನೇವೈದ್ಯ ಮಾಡಿ ಲಕ್ಷ್ಮಿ ದೇವಿಗೆ ಅರ್ಪಿಸಬೇಕು. ಪೂಜೆ ವೇಳೆ “ಓಂ ಶ್ರೀಂ ಹ್ರೀಂ ಶ್ರೀಂ ಕಮಲೇ ಕಮಲಾಲಯ ಪ್ರಸೀದ ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮಿ ನಮಃ” ಎಂದು ಜಪಿಸಬೇಕು. ಈ ಮಂತ್ರವನ್ನು ಪಠಿಸುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ.
ದೀಪಾವಳಿ 2024ರ ಪೂಜಾ ಸಮಯ:
ಅಕ್ಟೋಬರ್ 31, 2024ರಂದು 03:52 ಅಪರಾಹ್ನ ಅಮವಾಸ್ಯೆ ತಿಥಿ ಪ್ರಾರಂಭವಾಗುತ್ತದೆ. ನವೆಂಬರ್ 01, 2024ರಂದು 06:16 PM ಕ್ಕೆ ಅಮಾವಾಸ್ಯೆ ತಿಥಿ ಕೊನೆಯಾಗುತ್ತದೆ. ಪ್ರದೋಷ ಕಾಲ ಸಂಜೆ – 05:12 80 07:43 PM. ಲಕ್ಷ್ಮಿ ಪೂಜೆ ಮಾಹೂರ್ತ ಸಂಜೆ – 8 05:12 80 06:16 PM. ವೃಷಭ ಮಾಹೂರರ್ತ ಸಂಜೆ – 2 06:00 80 07:59 PM.
ದೀಪಾವಳಿ ಹಬ್ಬದ ಮಹತ್ವ :
ದೀಪಾವಳಿ ಹಬ್ಬವನ್ನು ಹಿಂದೂಗಳು ಅತ್ಯಂತ ವೈಭವದಿಂದ ಆಚರಿಸುತ್ತಾರೆ. ಅದರಲ್ಲೂ ದೀಪಾವಳಿ ಬೆಳಕಿನ ಹಬ್ಬವಾಗಿರುವುದರಿಂದ ಮನೆತುಂಬಾ ಹಣತೆ, ದೀಪಗಳನ್ನು ಹಚ್ಚಲಾಗುತ್ತದೆ. ದೀಪಗಳನ್ನು ಬೆಳಗಿಸುವುದು ಸದ್ಗುಣ, ಮುಗ್ಧತೆ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಜನರ ಬದುಕಲ್ಲಿ ದೀಪಾವಳಿಯು ಕತ್ತಲೆಯನ್ನು ಹೋಗಲಾಡಿಸಿ ಜೀವನದಲ್ಲಿ ಬೆಳಕು ತುಂಬುತ್ತದೆ ಎಂದು ಜನರು ನಂಬುತ್ತಾರೆ. ಈ ದಿನದಂದು ಲಕ್ಷ್ಮೀದೇವಿಯನ್ನು ಪೂಜೆ ಮಾಡಲಾಗುತ್ತದೆ ಹಾಗೂ ಕೆಲವೆಡೆ ಸುಮಾರು ಐದು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




