Picsart 25 11 13 22 12 13 558 scaled

ಸರಿಯಾದ ಜೀವನಶೈಲಿ, ವ್ಯಾಯಾಮ ಮತ್ತು ಆಹಾರದಿಂದ ಮಧುಮೇಹವನ್ನು ತಡೆಗಟ್ಟಬಹುದು!

Categories:
WhatsApp Group Telegram Group

ಇಂದಿನ ವೇಗದ ಜೀವನದಲ್ಲಿ ಆರೋಗ್ಯದ ಕಡೆ ಗಮನ ಕೊಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳ ಪ್ರಮಾಣ ದಿನೇದಿನೇ ಹೆಚ್ಚುತ್ತಿದೆ. ಅದರಲ್ಲೂ ಮಧುಮೇಹ (Diabetes Mellitus) ಎನ್ನುವ ಕಾಯಿಲೆ ಅತ್ಯಂತ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಒಂದು ಸಲ ಮಧುಮೇಹ ಬಂದರೆ ಸಂಪೂರ್ಣವಾಗಿ ಗುಣಪಡಿಸುವುದು ಕಷ್ಟ. ಆದರೆ ಸರಿಯಾದ ಜೀವನಶೈಲಿ ಮತ್ತು ಮುನ್ನೆಚ್ಚರಿಕೆಗಳಿಂದ ನಿಯಂತ್ರಣದಲ್ಲಿಡಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮಧುಮೇಹವು ಕೇವಲ ಹಿರಿಯರ ಕಾಯಿಲೆ ಎನ್ನುವುದು  ತಪ್ಪು ಕಲ್ಪನೆ. ಕಳೆದ ಕೆಲವು ವರ್ಷಗಳಲ್ಲಿ 20 ರಿಂದ 30 ವರ್ಷ ವಯಸ್ಸಿನವರಲ್ಲಿಯೂ ಮಧುಮೇಹದ ಪ್ರಕರಣಗಳು ಹೆಚ್ಚುತ್ತಿವೆ. ತಜ್ಞರ ಪ್ರಕಾರ, ಅನಾರೋಗ್ಯಕರ ಆಹಾರ ಪದ್ಧತಿ, ಶಾರೀರಿಕ ಚಟುವಟಿಕೆಯ ಕೊರತೆ ಮತ್ತು ಒತ್ತಡ ಇವೆಲ್ಲವೂ ಯುವಕರಲ್ಲಿ ಮಧುಮೇಹದ ಅಪಾಯವನ್ನು ವೇಗವಾಗಿ ಹೆಚ್ಚಿಸುತ್ತಿವೆ.

ಮಧುಮೇಹ ಎಂದರೇನು?:

ಮಧುಮೇಹವು ದೇಹದಲ್ಲಿ ಇನ್ಸುಲಿನ್ (Insulin) ಹಾರ್ಮೋನ್‌ನ ಕೊರತೆಯಿಂದ ಉಂಟಾಗುವ ಕಾಯಿಲೆ. ಇನ್ಸುಲಿನ್ ಎನ್ನುವುದು ಪ್ಯಾಂಕ್ರಿಯಾಸ್ (ಮೇದೋಜೀರಕ ಗ್ರಂಥಿ) ಉತ್ಪಾದಿಸುವ ಹಾರ್ಮೋನ್ ಆಗಿದ್ದು, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.
ದೇಹವು ಇನ್ಸುಲಿನ್‌ನ್ನು ಸರಿಯಾಗಿ ಬಳಸದೆ ಅಥವಾ ಕಡಿಮೆ ಪ್ರಮಾಣದಲ್ಲಿ ಉತ್ಪಾದಿಸಿದರೆ, ರಕ್ತದಲ್ಲಿನ ಸಕ್ಕರೆ ಮಟ್ಟ (Blood Sugar Level) ಏರಿಕೆಯಾಗುತ್ತದೆ. ಇದರಿಂದ ಹೃದಯ, ಕಣ್ಣು, ಮೂತ್ರಪಿಂಡಗಳು, ನರಗಳು ಹಾಗೂ ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಯಾವ ವಯಸ್ಸಿನಲ್ಲಿ ಮಧುಮೇಹ ಹೆಚ್ಚು ಕಾಣುತ್ತದೆ?:

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಮಧುಮೇಹ ಸಾಮಾನ್ಯವಾಗಿ 40 ರಿಂದ 45 ವರ್ಷ ವಯಸ್ಸಿನ ಮಧ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ.
ಇದರರ್ಥ, ಮಧ್ಯವಯಸ್ಕರು ಮತ್ತು ಹಿರಿಯ ನಾಗರಿಕರಲ್ಲಿ ಈ ಕಾಯಿಲೆಗೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ವಯಸ್ಸಾದಂತೆ ದೇಹದ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ, ಇನ್ಸುಲಿನ್ ಪ್ರತಿರೋಧ (Insulin Resistance) ಹೆಚ್ಚುತ್ತದೆ ಮತ್ತು ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಇದರ ಪರಿಣಾಮವಾಗಿ, 45 ವರ್ಷ ಮೇಲ್ಪಟ್ಟವರಲ್ಲಿ ಮಧುಮೇಹದ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತದೆ.

ಆದರೆ, ಇತ್ತೀಚಿನ ದಿನಗಳಲ್ಲಿ 20-30 ವರ್ಷದವರಲ್ಲಿಯೂ ಮಧುಮೇಹದ ಪ್ರಕರಣಗಳು ಹೆಚ್ಚುತ್ತಿರುವುದನ್ನು ತಜ್ಞರು ಎಚ್ಚರಿಸುತ್ತಿದ್ದಾರೆ.
ಮಧುಮೇಹದ ಪ್ರಕರಣಗಳು ಹೆಚ್ಚುತ್ತಿರುವುದರ ಹಿಂದಿನ ಪ್ರಮುಖ ಕಾರಣಗಳು ಹೀಗಿವೆ:
ಹೆಚ್ಚಿದ ಬೊಜ್ಜು (Obesity)
ಜಂಕ್ ಫುಡ್‌ಗಳ ಸೇವನೆ
ವ್ಯಾಯಾಮದ ಕೊರತೆ
ನಿದ್ರಾಹೀನತೆ ಮತ್ತು ಒತ್ತಡ

ವಯಸ್ಸಿಗೂ ಮಧುಮೇಹಕ್ಕೂ ಸಂಬಂಧವಿದೆಯಾ?:

ವಯಸ್ಸಾಗುತ್ತಿದ್ದಂತೆ ದೇಹದ ಅಂಗಾಂಗಗಳು ನಿಧಾನವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ.
ಪ್ಯಾಂಕ್ರಿಯಾಸ್‌ನ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುತ್ತದೆ.
ಸ್ನಾಯುಗಳು ಮತ್ತು ಕೋಶಗಳು ಇನ್ಸುಲಿನ್‌ಗೆ ಕಡಿಮೆ ಪ್ರತಿಕ್ರಿಯೆ ನೀಡುತ್ತವೆ.
ದೈಹಿಕ ಚಟುವಟಿಕೆ ಕಡಿಮೆಯಾಗುವುದರಿಂದ ಕೊಬ್ಬು ಸಂಗ್ರಹ ಹೆಚ್ಚುತ್ತದೆ.
ಇವೆಲ್ಲವೂ ಸೇರಿ ಟೈಪ್ 2 ಮಧುಮೇಹದ ಅಪಾಯವನ್ನು ವಯಸ್ಸಾದವರಿಗೆ ಹೆಚ್ಚಿಸುತ್ತದೆ.
ಹೀಗಾಗಿ 45 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಮಿತವಾಗಿ ತಪಾಸಣೆ ಮಾಡಿಕೊಳ್ಳಬೇಕು.

ಯುವಕರಲ್ಲಿಯೇ ಮಧುಮೇಹ ಏಕೆ ಹೆಚ್ಚುತ್ತಿದೆ?:

ಇಂದಿನ ಪೀಳಿಗೆಯ ಜೀವನಶೈಲಿಯಲ್ಲಿ ಅತ್ಯಂತ ಸಾಮಾನ್ಯ ಸಮಸ್ಯೆ ಸೀಟಿಂಗ್ ಲೈಫ್ಸ್ಟೈಲ್ ಅಂದರೆ ದೈಹಿಕ ಚಟುವಟಿಕೆ ಇಲ್ಲದ ಜೀವನ.
ಕಂಪ್ಯೂಟರ್/ಮೊಬೈಲ್ ಬಳಕೆ ಹೆಚ್ಚಳ.
ಫಾಸ್ಟ್ ಫುಡ್‌ಗಳ ಮೇಲಿನ ಅವಲಂಬನೆ.
ಮನಸ್ಸಿನ ಒತ್ತಡ ಮತ್ತು ನಿದ್ರೆಯ ಕೊರತೆ ಇವುಗಳೆಲ್ಲ ಸೇರಿ ಯುವಕರಲ್ಲಿಯೇ ಮಧುಮೇಹಕ್ಕೆ ಕಾರಣವಾಗುತ್ತಿವೆ.

ಮಧುಮೇಹ ತಡೆಗಟ್ಟುವ ಸರಳ ಮಾರ್ಗಗಳು ಹೀಗಿವೆ:

ತಜ್ಞರ ಸಲಹೆ ಪ್ರಕಾರ, ಜೀವನಶೈಲಿಯಲ್ಲಿನ ಸಣ್ಣ ಬದಲಾವಣೆಗಳು ಮಧುಮೇಹವನ್ನು ದೂರ ಇಡಲು ಸಹಕಾರಿಯಾಗುತ್ತವೆ.
ಆಹಾರದಲ್ಲಿ ಸಮತೋಲನ ಕಾಪಾಡಿ:
ಹಸಿರು ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಪ್ರೋಟೀನ್ ಆಹಾರಗಳನ್ನು ಸೇರಿಸಿ.
ದಿನನಿತ್ಯ ವ್ಯಾಯಾಮ ಮಾಡಿ:
ಚುರುಕಾದ ವಾಕಿಂಗ್, ಯೋಗ ಅಥವಾ ಜಾಗಿಂಗ್‌ನಂತಹ ಚಟುವಟಿಕೆ 30 ನಿಮಿಷಗಳಾದರೂ ಮಾಡಿ.
ತೂಕ ನಿಯಂತ್ರಿಸಿ :
ಹೆಚ್ಚು ತೂಕದವರು ಮಧುಮೇಹಕ್ಕೆ ಹೆಚ್ಚು ಅಪಾಯದಲ್ಲಿರುತ್ತಾರೆ.
ಒತ್ತಡ ನಿಯಂತ್ರಿಸಿ:
ಧ್ಯಾನ, ಯೋಗ ಅಥವಾ ಹವ್ಯಾಸಗಳಲ್ಲಿ ತೊಡಗಿ.
ನಿದ್ರೆ ಸರಿಯಾಗಿ ಮಾಡಿ:
ಕನಿಷ್ಠ 7–8 ಗಂಟೆಗಳ ನಿದ್ರೆ ಅಗತ್ಯ.
ನಿಯಮಿತ ತಪಾಸಣೆ:
ರಕ್ತದ ಸಕ್ಕರೆ ಪರೀಕ್ಷೆಯನ್ನು ವರ್ಷಕ್ಕೆ ಕನಿಷ್ಠ ಎರಡು ಬಾರಿ ಮಾಡಿಸಿಕೊಳ್ಳಿ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.















WhatsApp Group Join Now
Telegram Group Join Now

Popular Categories