Picsart 25 09 26 22 09 28 532 scaled

ಮೀಟರ್ ರೀಡಿಂಗ್ ವಿಳಂಬದಿಂದ ದುಬಾರಿ ಬಿಲ್, ಸರ್ಕಾರದ ಕ್ರಮದ ವಿರುದ್ಧ ಗ್ರಾಹಕರ ಆಕ್ರೋಶ

Categories:
WhatsApp Group Telegram Group

ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಜನಸಾಮಾನ್ಯರ ಜೀವನೋಪಾಯದ ಮೇಲೆ ನೇರವಾಗಿ ಪರಿಣಾಮ ಬೀರಿರುವ ಈ ಘಟನೆ ಬೆಸ್ಕಾಂ (BESCOM) ಗ್ರಾಹಕರಿಗೆ ಅಸಮಾಧಾನ ಮತ್ತು ಆಕ್ರೋಶ ತಂದಿಟ್ಟಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸಮೀಕ್ಷೆಗಾಗಿ ಮೀಟರ್ ರೀಡರ್‌ಗಳನ್ನು ಮನೆಮನೆಗೆ ಕಳುಹಿಸಿ ‘ಯುಎಚ್‌ಐಡಿ(UHID)’ ಸ್ಟಿಕ್ಕರ್ ಅಂಟಿಸುವ ಕೆಲಸಕ್ಕೆ ನಿಯೋಜಿಸಿದ್ದರಿಂದ, ಆಗಸ್ಟ್ ತಿಂಗಳ ವಿದ್ಯುತ್ ಮೀಟರ್‌ಗಳ ನಿಯಮಿತ ರೀಡಿಂಗ್ ಕಾರ್ಯದಲ್ಲಿ ತಡವಾಯಿತು. ಈ ವಿಳಂಬದಿಂದಾಗಿ ಬಿಲ್‌ಗಳಲ್ಲಿ 30 ದಿನಗಳ ಬದಲು 35-40 ದಿನಗಳ ಬಳಕೆ ದಾಖಲಾಗಿದ್ದು, ಪರಿಣಾಮವಾಗಿ ನೂರಾರು ಗ್ರಾಹಕರು “ಗೃಹಜ್ಯೋತಿ ಯೋಜನೆ”ಯ ಉಚಿತ ವಿದ್ಯುತ್ ಸೌಲಭ್ಯದಿಂದ ವಂಚಿತರಾದರು.

ಹೇಗೆ ಸಮಸ್ಯೆ ಉಂಟಾಯಿತು?:

ಸಾಮಾನ್ಯವಾಗಿ ಪ್ರತಿ ತಿಂಗಳು ನಿಗದಿತ ದಿನಾಂಕದಂದು ಮೀಟರ್ ರೀಡಿಂಗ್ ನಡೆಸಿ, 30 ದಿನಗಳ ಬಳಕೆಯನ್ನು ಆಧಾರವನ್ನಾಗಿ ಮಾಡಿ ಬಿಲ್ ನೀಡಲಾಗುತ್ತದೆ. ಆದರೆ ಆಗಸ್ಟ್‌ನಲ್ಲಿ ಮೀಟರ್ ರೀಡರ್‌ಗಳು ಜಾತಿ ಗಣತಿ ಕಾರ್ಯದಲ್ಲಿ ತೊಡಗಿದ್ದರಿಂದ, ಮೀಟ‌ರ್ ರೀಡಿಂಗ್‌ಗೆ ತಡವಾಗಿ ಹೋಗಿದ್ದರು. ಇದರ ಪರಿಣಾಮ, ಮಾಸಿಕ 200 ಯುನಿಟ್ ಗಡಿಗೆ ಮೀರಿದಂತೆ ವಿದ್ಯುತ್ ಬಳಕೆ ದಾಖಲಾಗಿದ್ದು, ಉಚಿತ ವಿದ್ಯುತ್ ಪಡೆಯುತ್ತಿದ್ದ ಅನೇಕ ಮನೆಗಳಿಗೆ ದುಬಾರಿ ಬಿಲ್ ಬಂದಿದೆ.

ಗ್ರಾಹಕರ ಅಳಲು:

ಇನ್ನು,  ಈ ಕುರಿತಾಗಿ ಸಹಕಾರನಗರದ ಜಕ್ಕೂರಿನ ವಾಸುದೇವ ಶೆಟ್ಟಿ(Vasudeva Shetty) ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು,
ಸಾಮಾನ್ಯವಾಗಿ 8ನೇ ತಾರೀಖಿಗೆ ಮೀಟರ್ ರೀಡರ್ ಗಳು ಬರಬೇಕಾಗಿತ್ತು, ಈ ಬಾರಿ 18ರಂದು ಬಂದಿದ್ದರೂ, ಬಿಲ್‌ನಲ್ಲಿ ಅವಧಿಯನ್ನು 08-08-2025 ರಿಂದ 08-09-2025ರವರೆಗೆ ಎಂದೇ ನಮೂದಿಸಲಾಗಿದೆ.
30 ದಿನದ ಬಳಕೆ ತೋರಿಸಬೇಕಾದಲ್ಲಿ, ಹೆಚ್ಚುವರಿ 8 ದಿನಗಳ ಲೆಕ್ಕ ಸೇರಿ 248 ಯುನಿಟ್ ಬಳಕೆ ದಾಖಲಾಗಿದೆ.
ಇದರಿಂದಾಗಿ ಪ್ರತಿಮಾಸ ಉಚಿತ ವಿದ್ಯುತ್ ಪಡೆಯುತ್ತಿದ್ದ ಶೆಟ್ಟಿ ಕುಟುಂಬವು ಸಂಪೂರ್ಣ ಬಿಲ್ ಪಾವತಿಸಬೇಕಾದ ಸ್ಥಿತಿಯಲ್ಲಿದೆ.
ಅವರ ಮತ್ತೊಂದು ಸಂಪರ್ಕಕ್ಕೂ ಇದೇ ಸಮಸ್ಯೆ ಎದುರಾಗಿದೆ, ಸಾಮಾನ್ಯವಾಗಿ 58 ಯುನಿಟ್ ಬಳಕೆ ತೋರಿಸುತ್ತಿದ್ದ ಮೀಟರ್ ಈ ಬಾರಿ 84 ಯುನಿಟ್ ದಾಖಲಾಗಿದೆ.

ಈ ಗೊಂದಲದಿಂದ ಬೇಸತ್ತಿರುವ ಗ್ರಾಹಕರು ಸರ್ಕಾರದ ನಿಲುವಿನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಣತಿ ನಡೆಸಲು ಬೇಕಾದ ಹಣವನ್ನು ಸರ್ಕಾರ ಜನರ ಬಿಲ್ಲಿನಿಂದಲೇ ಸಂಗ್ರಹಿಸುತ್ತಿದೆಯೇ? ಎಂದು ವಾಸುದೇವ ಶೆಟ್ಟಿ ಪ್ರಶ್ನಿಸಿದ್ದಾರೆ.

ಒಟ್ಟಾರೆಯಾಗಿ, ಜಾತಿ ಗಣತಿಯ ನಿರ್ವಹಣೆಗೆ ಸಿಬ್ಬಂದಿಯನ್ನು ಬಳಸಿಕೊಳ್ಳುವ ಸರ್ಕಾರದ ಕ್ರಮವೇ ಇಂತಹ ಆರ್ಥಿಕ ತೊಂದರೆಗಳಿಗೆ ಕಾರಣವಾಗಿದೆ ಎಂಬ ಅಭಿಪ್ರಾಯ ಹೆಚ್ಚಾಗುತ್ತಿದೆ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories