ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ದಸರಾ ಹಬ್ಬದ ಪ್ರಯುಕ್ತ ಭರ್ಜರಿ ರಜೆ, ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..!
ಕನ್ನಡ ನಾಡಿನ ಕಲೆ-ಸಂಸ್ಕೃತಿ ಬಿಂಬಿಸುವ, ದೇಶ-ವಿದೇಶದ ಜನರನ್ನು ಆಕರ್ಷಿಸುವ ನವರಾತ್ರಿ, ವಿಜಯ ದಶಮಿ, ದಸರಾ ಹಬ್ಬ, ಜಂಬೂ ಸವಾರಿ ಎಂದೆಲ್ಲ ಕರೆಯಲ್ಪಡುವ ನಾಡ ಹಬ್ಬ ದಸರವು (Dasara Festival) ಒಂದು ಅದ್ದೂರಿಯ ಸಂಭ್ರಮವಾಗಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಬರುವ ಈ ಹಬ್ಬವು ನಾಡಿನ ಒಂದು ವಿಶೇಷ. ವಿಜೃಂಭಣೆಯಿಂದ ಆಚರಿಸಲ್ಪಡುವ ನಾಡ ಹಬ್ಬ ದಸರಾವನ್ನು ವೀಕ್ಷಿಸಲು ದೇಶದ ಮೂಲೆ ಮೂಲೆಗಳಿಂದ ಜನ ಮೈಸೂರಿಗೆ ಬರುತ್ತಾರೆ. ಹಾಗೆಯೇ ಕರ್ನಾಟಕ ರಾಜ್ಯದ (Karnataka state) ಎಲ್ಲಾ ಶಾಲಾ ಕಾಲೇಜು ಗಳಿಗೆ ರಜಾ ದೊರೆಯುತ್ತದೆ. ಮಕ್ಕಳು, ವಿದ್ಯಾರ್ಥಿಗಳಿಗೆ ಈ ಹಬ್ಬದ ಪ್ರಯುಕ್ತ ಹಲವು ದಿನಗಳ ಕಾಲ ರಜೆ ಪಡೆದು ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಸರ್ಕಾರಿ-ಖಾಸಗಿ ಶಾಲಾ ಮಕ್ಕಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ದಸರಾ ರಜೆ ಘೋಷಣೆ :
2024-25ನೇ ಶೈಕ್ಷಣಿಕ ಸಾಲಿನ ಕರ್ನಾಟಕದ ಸರ್ಕಾರಿ-ಖಾಸಗಿ ಶಾಲಾ ಮಕ್ಕಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ದಸರಾ ರಜೆ (Dasara Holidays 2024 in karnataka) ಘೋಷಿಸಿದೆ. ನಾಡ ಹಬ್ಬ ದಸರಾಕ್ಕೆ ಅದ್ಧೂರಿ ಸಿದ್ದತೆ ನಡೆಸುತ್ತಿರುವ ರಾಜ್ಯ ಸರ್ಕಾರ, ಅಕ್ಟೋಬರ್ 3 ರಿಂದ 14 ತನಕ ದಸರಾ ರಜೆ ಘೋಷಿಸಿದೆ. ಈ ಹಿಂದೆ ಮಂಗಳೂರಿನ ಭಾಗದಲ್ಲಿ ವಿದ್ಯಾರ್ಥಿಗಳ ದಸರಾ ರಜೆಯಲ್ಲಿ ಸ್ವಲ್ಪ ಮಾರ್ಪಾಡು ಆಗುತ್ತಿತ್ತು. ಆದರೆ, ಈ ಬಾರಿ ಯಾವುದೇ ಮಾರ್ಪಾಡು ಆಗಿಲ್ಲ. ಇಡೀ ಕರ್ನಾಟಕದ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಿದೆ.
ಖಾಸಗಿ ಶಾಲೆಗಳಿಗೆ ದಸರಾ ರಜೆ ಘೋಷಿಸಲು ಸರ್ಕಾರ ಸಿದ್ಧತೆ :
ರಾಜ್ಯದಾದ್ಯಂತ ಸರ್ಕಾರಿ (government) ಮತ್ತು ಖಾಸಗಿ (private) ಶಾಲೆಗಳಿಗೆ ದಸರಾ ರಜೆ ಘೋಷಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಈಗಾಗಲೇ ನಗರದಲ್ಲಿರುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ತಮ್ಮ ತಮ್ಮ ದೂರದ ಊರಿಗೆ ತೆರಳಲು ಸಜ್ಜು ಮಾಡಿಕೊಳ್ಳುತ್ತಿದ್ದಾರೆ. ಪ್ರತಿ ಬಾರಿ ದಸರಾ ಬಂತೆಂದರೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ. ಹಾಗೆಯೇ ಈ ವರ್ಷ ರಾಜ್ಯದ ಶಾಲೆಗಳಿಗೆ 10 ದಿನ ರಜೆ ನೀಡಲು ಸಿದ್ಧತೆ.
ದಸರಾ ರಜೆ ಸೇರಿದಂತೆ ಒಟ್ಟು 12 ದಿನ ರಜೆ ಇರಲಿದೆ :
ಅಕ್ಟೋಬರ್ 4ರಿಂದ ದಸರಾ ರಜೆ (dasara Holiday) ಆರಂಭವಾಗಲಿದ್ದು, ಅಕ್ಟೋಬರ್ 13ಕ್ಕೆ ರಜಾದಿನಗಳು ಕೊನೆಗೊಳ್ಳುವ ಸಾಧ್ಯತೆ ಇದೆ. ಅಕ್ಟೋಬರ್ 14ರಿಂದ ಮತ್ತೆ ಶಾಲಾ-ಕಾಲೇಜುಗಳು ಆರಂಭವಾಗಲಿವೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ರಜೆ ಬರುತ್ತದೆ. ಅಕ್ಟೋಬರ್ 3ರಂದು ಕೂಡ ಸರ್ಕಾರ ರಜೆ ನೀಡಿದರೆ, ಒಟ್ಟು 12 ದಿನ ರಜೆ ಇರಲಿದೆ.
ಸರ್ಕಾರದಿಂದ ಅಧಿಕೃತ ಪ್ರಕಟಣೆ (Official announcement) ಬಂದರೆ ಒಟ್ಟು ಎಷ್ಟು ದಿನಗಳ ರಜೆ ಎಂದು ತಿಳಿದು ಬರುತ್ತದೆ :
ದಸರಾ ಹಬ್ಬವನ್ನು ಶನಿವಾರ 12 ರಂದು ಆಚರಿಸಲಾಗುತ್ತಿದ್ದು, ಅಕ್ಟೋಬರ್ ತಿಂಗಳ ರಜೆಯ ಕಾರಣ 17 ದಿನ ಮಾತ್ರ ತರಗತಿಗಳು ನಡೆಯಲಿವೆ. ಆದರೆ, ದಸರಾ ರಜೆಗಳ ಕುರಿತು ರಾಜ್ಯ ಸರ್ಕಾರ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಒಂದು ವೇಳೆ ಘೋಷಣೆ ಬಂದರೆ ಒಟ್ಟು ಎಷ್ಟು ದಿನಗಳ ರಜೆ ಎಂಬ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.
ದೀಪಾವಳಿ, ಕ್ರಿಸ್ಮಸ್, ಸಂಕ್ರಾಂತಿ ಹಬ್ಬಗಳ ಪ್ರಯುಕ್ತ ಹಲವು ದಿನಗಳ ಕಾಲ ಶಾಲೆಗಳಿಗೆ ರಜೆ ಇರಲಿವೆ :
ದೀಪಾವಳಿ ಹಬ್ಬವು ಅಕ್ಟೋಬರ್ 31 ರಂದು ಬರುವುದರಿಂದ, ಆ ದಿನ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಇರಲಿದೆ. ಒಟ್ಟಿನಲ್ಲಿ ಅಕ್ಟೋಬರ್ ತಿಂಗಳಲ್ಲಿ 13 ದಿನ ರಜೆ ಇರುವ ಸಾಧ್ಯತೆ ಇದೆ. ಡಿಸೆಂಬರ್ 22 ರಿಂದ 29 ರವರೆಗೆ ಕ್ರಿಸ್ಮಸ್ ರಜಾದಿನಗಳನ್ನು ನೀಡಲಾಗುತ್ತದೆ. ಸಂಕ್ರಾಂತಿ ರಜಾದಿನಗಳು 2025 ಜನವರಿ 10 ರಿಂದ 19 ರವರೆಗೆ ಇರುತ್ತದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




