Picsart 25 11 01 22 49 00 031 scaled

ಡಿ ಮಾರ್ಟ್ ವಿಸ್ತರಣೆ: ಡಿ ಮಾರ್ಟ್ ಫ್ರಾಂಚೈಸಿ ಬಿಗ್ ಅಪ್ಡೇಟ್ – ಎಲ್ಲಾ ಕಡೆ ವಿಸ್ತರಣೆ ಆಗುತ್ತಾ.? 

Categories:
WhatsApp Group Telegram Group

ಭಾರತದ ಚಿಲ್ಲರೆ ವ್ಯಾಪಾರ ವಲಯದಲ್ಲಿ ಕಳೆದ ಎರಡು ದಶಕಗಳಿಂದ ತನ್ನದೇ ಆದ ವಿಭಿನ್ನ ಗುರುತನ್ನು ನಿರ್ಮಿಸಿಕೊಂಡಿರುವ ಡಿ ಮಾರ್ಟ್ (DMart) ಇಂದು ಲಕ್ಷಾಂತರ ಗ್ರಾಹಕರ ವಿಶ್ವಾಸದ ಹೆಸರಾಗಿದೆ. ಗುಣಮಟ್ಟದ ನಿತ್ಯ ಬಳಕೆ ವಸ್ತುಗಳನ್ನು ಕಡಿಮೆ ದರದಲ್ಲಿ ನೀಡುವ ಮೂಲಕ, ಈ ಸಂಸ್ಥೆ ನಗರಗಳಿಂದ ಗ್ರಾಮಾಂತರ ಪ್ರದೇಶಗಳವರೆಗೆ ತನ್ನ ಪಾದಾರ್ಪಣೆ ವಿಸ್ತರಿಸಿಕೊಂಡಿದೆ. ವಿಶೇಷವಾಗಿ, ಕಡಿಮೆ ಲಾಭ ಹೆಚ್ಚು ಮಾರಾಟ ಎಂಬ ವ್ಯವಹಾರ ಮಾದರಿಯಿಂದ ಡಿಮಾರ್ಟ್‌ ಇತರ ಸೂಪರ್ ಮಾರ್ಕೆಟ್‌ಗಳಿಗೆ ಸ್ಪರ್ಧೆಯನ್ನು ನೀಡುತ್ತಾ, ತನ್ನ ವಹಿವಾಟನ್ನು ಸ್ಥಿರವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇತ್ತೀಚೆಗೆ ದೊಡ್ಡ ನಗರಗಳಿಂದ ಹಿಡಿದು ಚಿಕ್ಕ ಮತ್ತು ಮಧ್ಯಮ ಪಟ್ಟಣಗಳತ್ತ ವಿಸ್ತರಣೆಗೆ ಡಿಮಾರ್ಟ್ ಹೆಚ್ಚು ಒತ್ತು ನೀಡುತ್ತಿದೆ. ಇದಕ್ಕಾಗಿ ಸೂಕ್ತವಾದ ಜಾಗಗಳನ್ನು ಹುಡುಕುವ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದ್ದು, ತಮ್ಮ ಜಮೀನನ್ನು ಬಾಡಿಗೆಗೆ ಅಥವಾ ಮಾರಾಟಕ್ಕೆ ನೀಡಲು ಬಯಸುವ ಭೂಮಾಲೀಕರಿಗೆ ಇದು ದೊಡ್ಡ ಅವಕಾಶವಾಗಿ ಪರಿಣಮಿಸಿದೆ. ಡಿಮಾರ್ಟ್ ಪ್ರತಿನಿಧಿಗಳು ಸದ್ಯ ಭೂಮಾಲೀಕರಿಂದಲೇ ನೇರವಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿದ್ದು, ಆಯ್ಕೆಯಾದವರಿಗೆ ಸ್ವತಃ ಸಂಪರ್ಕಿಸುವುದಾಗಿ ತಿಳಿಸಿದೆ.

ಭೂಮಾಲೀಕರು ಹೇಗೆ ಅವಕಾಶ ಪಡೆಯಬಹುದು?:

ಭೂಮಾಲೀಕರು ತಮ್ಮ ಜಮೀನುಗಳನ್ನು,
ಬಾಡಿಗೆಗೆ
ದೀರ್ಘಾವಧಿ ಲೀಸ್‌ಗೆ
ಅಥವಾ ಮಾರಾಟಕ್ಕೆ
ಡಿ ಮಾರ್ಟ್‌ಗೆ ನೀಡುವ ಮೂಲಕ ನೇರವಾಗಿ ಸಂಸ್ಥೆಯೊಂದಿಗೆ ಕೈಜೋಡಿಸಬಹುದು. ಜಮೀನು ವ್ಯಾಪ್ತಿ, ಸ್ಥಳದ ಪ್ರವೇಶ, ಪಾರ್ಕಿಂಗ್ ಸೌಲಭ್ಯ, ಸುತ್ತಮುತ್ತಲಿನ ವ್ಯಾಪಾರಿಕ ಚಟುವಟಿಕೆಗೆ ಕೊಡಬಹುದು.

ಉತ್ಪಾದಕರಿಗೆ ದೊಡ್ಡ ಅವಕಾಶ!

ಡಿ ಮಾರ್ಟ್‌ನಲ್ಲಿ, ದೊಡ್ಡ ಬ್ರಾಂಡ್‌ಗಳೊಂದಿಗೆ ಸ್ಥಳೀಯ ಉತ್ಪನ್ನಗಳಿಗೂ ಕೂಡ ಸಮಾನ ( equally) ಅವಕಾಶ ಪಡೆಯುತ್ತವೆ.
ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ಸೂಕ್ತ ಸ್ಥಳೀಯ ಉತ್ಪಾದಕರು ತಮ್ಮ ಉತ್ಪನ್ನ ವಿವರಗಳು ಮತ್ತು ವೈಯಕ್ತಿಕ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬಹುದು. ಉತ್ತಮ ಗುಣಮಟ್ಟ ಹಾಗೂ ನಿರಂತರ ಸರಬರಾಜು ನೀಡುವ ತಯಾರಕರೊಂದಿಗೆ ದೀರ್ಘಕಾಲದ ಪಾಲುದಾರಿಕೆಯನ್ನು ಬೆಳೆಸಲು ಡಿಮಾರ್ಟ್‌ ವಿಶೇಷ ಆಸಕ್ತಿ ತೋರಿಸಿದೆ.

ಎಚ್ಚರಿಕೆ:

ಡಿ ಮಾರ್ಟ್ ಫ್ರಾಂಚೈಸಿ ನೀಡುವುದಿಲ್ಲ.
ಡಿ ಮಾರ್ಟ್ ಅಧಿಕಾರಿಗಳ ಸ್ಪಷ್ಟ ಹೇಳಿರುವ ಪ್ರಕಾರ,
ಡಿ ಮಾರ್ಟ್ ಫ್ರಾಂಚೈಸಿ ವ್ಯವಸ್ಥೆ ಹೊಂದಿರುವ ಸಂಸ್ಥೆ ಅಲ್ಲ.
ಯಾವುದೇ ವ್ಯಕ್ತಿ ಅಥವಾ ಏಜೆನ್ಸಿ ಡಿ ಮಾರ್ಟ್ ಫ್ರಾಂಚೈಸಿ ಹೆಸರಿನಲ್ಲಿ ಹಣ ಕೇಳಿದರೆ ಅದು 100% ವಂಚನೆ. ಆದ್ದರಿಂದ ಇಂತಹ ಯಾವುದೇ ದೂರವಾಣಿ ಕರೆ, ಇಮೇಲ್‌ ಅಥವಾ ಆನ್‌ಲೈನ್ ಜಾಹೀರಾತುಗಳನ್ನು ನಂಬಬಾರದು.

ಡಿ ಮಾರ್ಟ್ ಯಶಸ್ಸಿನ ಗುಟ್ಟು ಏನು?:

ಡಿ ಮಾರ್ಟ್ ವಸ್ತುಗಳನ್ನು MRP ಗಿಂತ ಕಡಿಮೆ ದರದಲ್ಲಿ ನೀಡುವುದಕ್ಕೆ ಮೂರು ಪ್ರಮುಖ ಕಾರಣಗಳು,
ತಯಾರಕರಿಂದ ಭಾರಿ ಪ್ರಮಾಣದಲ್ಲಿ ನೇರ ಖರೀದಿ.
ಕಡಿಮೆ ವ್ಯಾಪಾರಿಕ ವೆಚ್ಚ.
ಕಡಿಮೆ ಲಾಭದಲ್ಲಿ ಹೆಚ್ಚು ಮಾರಾಟ ಮಾಡುವ ನೀತಿ.
ಈ ಕಾರಣಗಳಿಂದ ಡಿಮಾರ್ಟ್‌ ಗ್ರಾಹಕರಲ್ಲಿ ದಿನೇ ದಿನೇ ಜನಪ್ರಿಯವಾಗುತ್ತಿದ್ದು, ಸಂಸ್ಥೆಯ ವಿಸ್ತರಣೆ ದೇಶದಾದ್ಯಂತ ವೇಗವಾಗಿ ನಡೆಯುತ್ತಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories