ಕನ್ನಡ ಕಿರುತೆರೆಯ ಬೃಹತ್ ರಿಯಾಲಿಟಿ ಶೋ ಬಿಗ್‌ಬಾಸ್(BigBoss) ಕನ್ನಡದಲ್ಲಿ ನಿನ್ನೆಯಿಂದ ಆರಂಭವಾಗಿದ್ದು ದೊಡ್ಡ ಮನೆಯೊಳಗೆ 17 ಜನ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ನ ಅಸಲಿ ಆಟ ಶುರುವಾಗಿದೆ. ಹಾಗೆಯೇ ಮನೆಯೊಳಗೆ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಎಂಟ್ರಿ ನೀಡಿರುವ ಕುರಿತು ಹಲವಾರು ಮಾತುಗಳು ಕೇಳಿ ಬರುತ್ತಿವೆ. ಪ್ರದೀಪ್ ಈಶ್ವರ್ ಬಗ್ಗೆ ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ವಿಧಾನಸಭೆ ಸ್ಪೀಕರ್(Vidhanasabha speaker) ಗೆ ದೂರು ನೀಡಿದೆ. ಇದರ ಕುರಿತು ಪೂರ್ತಿ ಮಾಹಿತಿ ಬೇಕೇ ಹಾಗಿದ್ದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ವಿಧಾನಸಭಾ ಸ್ಪೀಕರ್ ಗೆ ಪ್ರದೀಪ್ ಈಶ್ವರ್ ಮೇಲೆ ದೂರು :
ಪ್ರದೀಪ್ ಈಶ್ವರ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಸೇವಾ ಸಂಸ್ಥೆಯು ಆಗ್ರಹಿಸಿದೆ. ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿರುವುದನ್ನು ಪ್ರಶ್ನಿಸಿ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಅವರಿಗೆ ದೂರು ಸಲ್ಲಿಸಲಾಗಿದೆ.
ದೂರು ಪತ್ರದಲ್ಲಿ ಏನಿದೆ ?
ರಾಜ್ಯ ಸರಕಾರದಿಂದ ಸಂಬಳ ಪಡೆಯುತ್ತಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್ ಅವರು ಜವಾಬ್ದಾರಿಯುತ ಪ್ರಜೆಯಾಗಿದ್ದಾರೆ. ತಮ್ಮ ಕ್ಷೇತ್ರದ ಜನರಿಗೆ ಏನಾದರೂ ಸಮಸ್ಯೆಯಾದಗ ಸ್ಪಂದಿಸುವುದು ಇವರ ಕರ್ತವ್ಯ. ಆದರೆ, ಈ ಜವಾಬ್ದಾರಿ ಮರೆತು ಇವರು ಬಿಗ್‌ಬಾಸ್ ಮನರಂಜನೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಇಂತಹ ತಪ್ಪು ಮಾಡಿರುವ ಇವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ದೂರು ನೀಡಿದೆ. ಈ ತಪ್ಪು ಮಾಡಿರುವ ಇವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು. ಇವರಿಗೆ ಯಾವುದೇ ಶಾಸಕ ಭತ್ಯೆ ನೀಡಬಾರದು. ತಕ್ಷಣದಿಂದಲೇ ಇವರನ್ನು ಅಮಾನತ್ತು ಮಾಡಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅವರ ಎಂಟ್ರಿ ಅನೇಕರಿಗೆ ಅಚ್ಚರಿ ತಂದಿದೆ. ಎಂ ಎಲ್ ಎ ಆಗಿ ದೊಡ್ಮನೆಗೆ ತೆರಳಿರೋ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಕೆಲವು ದಿನಗಳ ಅತಿಥಿಯಾಗಿ ಹೋಗಿದ್ದಾರೆಯೋ ಅಥವಾ ಉಳಿದ ಸ್ಪರ್ಧಿಗಳಂತೆಯೇ ಅವರು ಇರುತ್ತಾರಾ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ.
ಈಗಾಗಲೇ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಗೆ ಹೋಗಿರುವ ಬಗ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಮತ್ತು ಸಾಮಾಜಿಕ ಜಾಲತಾಣದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಸ್ಪರ್ಧಿಯಾಗಿ ಇರಲಿದ್ದಾರೆ ಎಂದು ಹಲವಾರು ಪೋಸ್ಟರ್ ಗಳು ವೈರಲ್ ಆಗುತ್ತಿವೆ.
ಪ್ರದೀಪ್ ಈಶ್ವರ್ ಹೇಳಿಕೆ :
ನಾನು ಬಿಗ್ ಬಾಸ್ ಮನೆಗೆ ನಿನ್ನೆಯೇ ಬರಬೇಕಿತ್ತು. ಆದರೆ ಇವತ್ತು ಬಂದಿದ್ದೇನೆ. ಸ್ಪರ್ಧಿಯಾಗಿ ನಾನು ಬಿಗ್ ಬಾಸ್ ಮನೆಗೆ ಬಂದಿರೋದಿಕ್ಕೆ ಖುಷಿಯಾಗಿದೆ. ನಾವೆಲ್ಲ ಬೆಂಗಳೂರಿಗೆ ಸೋಲೋಕೆ ಬಂದವರು ಸ್ಪರ್ಧಿಯಾಗಿ ನಿಮ್ಮ ಜತೆಗೆ ಜಾಯಿನ್ ಆಗಿದ್ದಕ್ಕೂ ಖುಷಿಯಾಗ್ತಿದೆ ಎಂದಿರುವ ಅವರು, ಕೊಂಚ ಸರ್ಪ್ರೈಸ್ ಇರಲಿ ಅನ್ನೋ ಕಾರಣಕ್ಕೆ ಒಂದು ದಿನ ತಡವಾಗಿ ಆಗಮಿಸಿದ್ದಾಗಿ ಇತರೆ ಸ್ಪರ್ಧಿಗಳ ಮುಂದೆ ಪ್ರದೀಪ್ ಹೇಳಿಕೊಂಡಿದ್ದಾರೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ಮೊದಲೇ ಈ ಸಲದ ಬಿಗ್‌ಬಾಸ್‌ಗೆ ಪ್ರದೀಪ್ ಈಶ್ವರ್ ಆಗಮಿಸುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಗ್ರ್ಯಾಂಡ್ ಓಪನಿಂಗ್ ದಿನ ಅವರ ಆಗಮನವಾಗಲಿಲ್ಲ. ಬದಲಿಗೆ ಮಾರನೇ ದಿನವಾದ ನೆನ್ನೆ (ಅ. 9) ಬಿಗ್ ಬಾಸ್‌ಗೆ ಡೊಳ್ಳು ಕುಣಿತದ ಸದ್ದಿನ ಜತೆಗೆ ಎಂಟ್ರಿ ಕೊಟ್ಟಿದ್ದಾರೆ. ಡೊಳ್ಳು ಕುಣಿತದ ಸದ್ದು ಜೋರಾಗ್ತಿದ್ದಂತೆ, ಮನೆಯೊಳಗಿದ್ದ ಎಲ್ಲರೂ ಏನಾಯಿತೆಂದು ಹೊರಗೆ ನೋಡುತ್ತಿದ್ದಂತೆ, ಶಾಸಕ ಪ್ರದೀಪ್ ಈಶ್ವರ್ ಆಗಮಿಸಿದ್ದಾರೆ.
ಶಾಸಕರು ಹೀಗೆ ಆಗಮಿಸುತ್ತಿದ್ದಂತೆ, ಸೋಷಿಯಲ್ ಮೀಡಿಯಾ(social media)ದಲ್ಲಿಯೂ ಇವರ ಬಗ್ಗೆ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group







