Picsart 25 09 25 23 12 40 436 1024x575 1

ಕೇಂದ್ರ ಸರ್ಕಾರದ ಬಂಪರ್ ಘೋಷಣೆ: ನೌಕರರು, ಪಿಂಚಣಿದಾರರಿಗೆ 3% ತುಟ್ಟಿ ಭತ್ಯೆ ಏರಿಕೆ.!

Categories:
WhatsApp Group Telegram Group

ಭಾರತದಲ್ಲಿ ಕೇಂದ್ರ ಸರ್ಕಾರಿ ನೌಕರರು (Central government employees) ಮತ್ತು ಪಿಂಚಣಿದಾರರ ಜೀವನೋಪಾಯವನ್ನು ನೇರವಾಗಿ ಪ್ರಭಾವಿಸುವ ಮಹತ್ವದ ಘೋಷಣೆಯೊಂದನ್ನ ಕೇಂದ್ರ ಸರ್ಕಾರ ಮಾಡಿದೆ. ಬೆಲೆ ಏರಿಕೆ ಮತ್ತು ಜೀವನ ವೆಚ್ಚ ದಿನೇ ದಿನೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ತುಟ್ಟಿ ಭತ್ಯೆ (DA) ಮತ್ತು ತುಟ್ಟಿ ಪರಿಹಾರ (DR) ಏರಿಕೆ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗಾಗಿ ದೊಡ್ಡ ನಿರೀಕ್ಷೆಯಾಗಿರುತ್ತದೆ. ದೀರ್ಘಕಾಲದ ಪದ್ಧತಿಯಂತೆ, ಹಣದುಬ್ಬರದ ಆಧಾರದ ಮೇಲೆ ವರ್ಷಕ್ಕೆ ಎರಡು ಬಾರಿ ಕೇಂದ್ರ ಸರ್ಕಾರವು ಡಿಎ ಪರಿಷ್ಕರಣೆ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ನೇತೃತ್ವದ ಕೇಂದ್ರ ಸಚಿವ ಸಂಪುಟವು ಮಹತ್ವದ ನಿರ್ಧಾರ ಕೈಗೊಂಡಿದ್ದು, ಹಬ್ಬದ ಸಂಭ್ರಮವನ್ನು ಇನ್ನಷ್ಟು ಮಧುರಗೊಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

3% ಡಿಎ/ಡಿಆರ್ ಏರಿಕೆ ಅನುಮೋದನೆ:

ಕೇಂದ್ರ ಸಚಿವ ಸಂಪುಟವು ಬುಧವಾರ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ತುಟ್ಟಿ ಭತ್ಯೆ (DA) ಹಾಗೂ ತುಟ್ಟಿ ಪರಿಹಾರ (DR) ಯಲ್ಲಿ ಶೇಕಡಾ 3ರಷ್ಟು ಏರಿಕೆಗೆ ಅನುಮೋದನೆ ನೀಡಿದೆ. ಇದರೊಂದಿಗೆ, ಮೂಲ ವೇತನ ಮತ್ತು ಪಿಂಚಣಿಯ ಮೇಲಿನ ಡಿಎ ದರವು ಶೇಕಡಾ 55ರಿಂದ ಶೇಕಡಾ 58ಕ್ಕೆ ಏರಲಿದೆ.

ಈ ಹೆಚ್ಚಳವು ಜುಲೈ 1, 2025 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವುದಾಗಿ ಕೇಂದ್ರ ಸರ್ಕಾರ (Central government) ಸ್ಪಷ್ಟಪಡಿಸಿದೆ. ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಬಾಕಿ ಮೊತ್ತವನ್ನು ದೀಪಾವಳಿಗೆ ಮುಂಚೆಯೇ ಅಕ್ಟೋಬರ್ ಸಂಬಳದೊಂದಿಗೆ ನೀಡಲಾಗುತ್ತದೆ.

ಹಬ್ಬದ ಮುನ್ನ ದೊಡ್ಡ ಪರಿಹಾರ:

ಡಿಎ ಏರಿಕೆಯಿಂದ ನೌಕರರು ಹಾಗೂ ಪಿಂಚಣಿದಾರರಿಗೆ ಹಬ್ಬದ ಸಮಯದಲ್ಲಿ (Festival season) ಹೆಚ್ಚುವರಿ ಆದಾಯ ಸಿಗಲಿದೆ.
ಉದಾಹರಣೆಗೆ, ₹30,000 ಮೂಲ ವೇತನ ಹೊಂದಿರುವ ಉದ್ಯೋಗಿಗೆ ತಿಂಗಳಿಗೆ ₹900 ಹೆಚ್ಚುವರಿ ದೊರೆಯುತ್ತದೆ.
₹40,000 ವೇತನ ಪಡೆಯುವವರಿಗೆ ₹1,200 ಹೆಚ್ಚುವರಿ ಸಿಗುತ್ತದೆ.
ಮೂರು ತಿಂಗಳ ಬಾಕಿ ಮೊತ್ತ ₹2,700 ರಿಂದ ₹3,600 ರವರೆಗೆ ತಲುಪುತ್ತದೆ.
ಇದರಿಂದಾಗಿ ದಸರಾ ಹಾಗೂ ದೀಪಾವಳಿ ಹಬ್ಬದ (Deepavali Festival) ಖರ್ಚಿಗೆ ಸಕಾಲಿಕ ನೆರವು ದೊರಕಲಿದೆ.

ಯಾರಿಗೆ ಲಾಭ?:

ಈ ನಿರ್ಧಾರದಿಂದ ದೇಶದಾದ್ಯಂತ ಸುಮಾರು 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 68 ಲಕ್ಷ ಪಿಂಚಣಿದಾರರು ಲಾಭ ಪಡೆಯಲಿದ್ದಾರೆ. ಕುಟುಂಬ ಪಿಂಚಣಿದಾರರಿಗೂ ಈ ಏರಿಕೆ ಅನ್ವಯವಾಗಲಿದೆ.

ಡಿಎ ಪರಿಷ್ಕರಣೆ ಹೇಗೆ?:

ಕೈಗಾರಿಕಾ ಕಾರ್ಮಿಕರ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (CPI-IW) ಆಧಾರದ ಮೇಲೆ ವರ್ಷಕ್ಕೆ ಜನವರಿ ಮತ್ತು ಜುಲೈನಲ್ಲಿ ಎರಡು ಬಾರಿ ಡಿಎ ಪರಿಷ್ಕರಣೆ ಮಾಡಲಾಗುತ್ತದೆ. ಪ್ರಕಟಣೆ ಸಾಮಾನ್ಯವಾಗಿ ಕೆಲವು ತಿಂಗಳು ತಡವಾಗಿ ಬರುವುದಾದರೂ, ಬಾಕಿ ಮೊತ್ತ ನೀಡುವುದರಿಂದ ನೌಕರರು (Employees) ನಷ್ಟ ಅನುಭವಿಸುವುದಿಲ್ಲ.

ಮುಂದಿನ ವೇತನ ಆಯೋಗ:

ಈ ಪರಿಷ್ಕರಣೆಯು 7 ನೇ ವೇತನ ಆಯೋಗದ (7th Pay Commission) ಅಡಿಯಲ್ಲಿ ಕೊನೆಯದಾಗುವ ಸಾಧ್ಯತೆ ಇದೆ. ಏಕೆಂದರೆ 8ನೇ ವೇತನ ಆಯೋಗವು ಜನವರಿ 2026ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರವು ಈ ಹಿಂದೆ ಜನವರಿ 1, 2025ರಿಂದ ಶೇಕಡಾ 2ರಷ್ಟು ಡಿಎ ಏರಿಕೆ ಮಾಡಿತ್ತು. ಆ ವೇಳೆ ಡಿಎ ಶೇಕಡಾ 53ರಿಂದ 55ಕ್ಕೆ ಏರಿಕೆಯಾಯಿತು. ಈಗಿನ ಹೆಚ್ಚಳದೊಂದಿಗೆ ಅದು 58ಕ್ಕೆ ತಲುಪಿದೆ.

ಒಟ್ಟಾರೆಯಾಗಿ, ಹಣದುಬ್ಬರ ಮತ್ತು ಜೀವನ ವೆಚ್ಚದ ಒತ್ತಡವನ್ನು ಕಡಿಮೆ ಮಾಡುವ ದೃಷ್ಟಿಯಿಂದ, ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರವು ನೌಕರರು ಮತ್ತು ಪಿಂಚಣಿದಾರರಿಗೆ(Employees and Pension receives) ದೊಡ್ಡ ನೆರವಾಗಲಿದೆ.  ಡಿಎ–ಡಿಆರ್ ಏರಿಕೆಯ ಈ ತೀರ್ಮಾನವು 1.16 ಕೋಟಿ ಜನರಿಗೆ ನೇರ ಪ್ರಯೋಜನ ನೀಡಲಿದ್ದು, ಹಬ್ಬದ ಖುಷಿಗೆ ಮತ್ತಷ್ಟು ಬೆಳಕು ತುಂಬಲಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories