ಸಿಬಿಎಸ್ಇ 10ನೇ-12ನೇ ಫಲಿತಾಂಶ 2025 ಲೈವ್ ಅಪ್ಡೇಟ್: ಕರ್ನಾಟಕದ ಎಸ್ ಎಸ್ ಎಲ್ ಸಿ ಪರೀಕ್ಷೆ ರಿಸಲ್ಟ್ ನಂತರ, ಈಗ ಎಲ್ಲರೂ ಸಿಬಿಎಸ್ಇ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಮಾಧ್ಯಮ ವರದಿಗಳಲ್ಲಿ ಹೇಳುವ ಪ್ರಕಾರ, ಸಿಬಿಎಸ್ಇ ಫಲಿತಾಂಶಗಳು ಮುಂದಿನ ವಾರವೇ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಸಿಬಿಎಸ್ಇ ಬೋರ್ಡ್ ತನ್ನ 10ನೇ ಮತ್ತು 12ನೇ ತರಗತಿಯ ಫಲಿತಾಂಶಗಳನ್ನು ಶೀಘ್ರವೇ ಘೋಷಿಸಲಿದೆ. ಫಲಿತಾಂಶ ಬಿಡುಗಡೆ ಮಾಡುವ ಮುನ್ನ ಒಂದು ದಿನ ಮುಂಚೆ ಸಿಬಿಎಸ್ಇ ಬೋರ್ಡ್ ಅಧಿಕೃತ ನೋಟಿಫಿಕೇಶನ್ ನೀಡಲಿದೆ. ಆದರೆ, ಇನ್ನೂ ಯಾವುದೇ ದಿನಾಂಕವನ್ನು ಸಿಬಿಎಸ್ಇ ಅಧಿಕೃತವಾಗಿ ಘೋಷಿಸಿಲ್ಲ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ನೋಡೋಣ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಫಲಿತಾಂಶ ಯಾವಾಗ ಬರಲಿದೆ?
CBSE ಇನ್ನೂ 10 ಮತ್ತು 12ನೇ ತರಗತಿ ಫಲಿತಾಂಶದ ನಿಖರ ದಿನಾಂಕವನ್ನು ಘೋಷಿಸಿಲ್ಲ. ಆದರೆ, ಎರಡೂ ತರಗತಿಗಳ ಫಲಿತಾಂಶಗಳನ್ನು ಒಂದೇ ದಿನ ಪ್ರಕಟಿಸಬಹುದು ಎಂದು ಅಂದಾಜು ಮಾಡಲಾಗಿದೆ. ಫಲಿತಾಂಶ ಬಿಡುಗಡೆಯಾದ ನಂತರ, ವಿದ್ಯಾರ್ಥಿಗಳು ಇವುಗಳ ಮೂಲಕ ತಮ್ಮ ಅಂಕಗಳನ್ನು ಪರಿಶೀಲಿಸಬಹುದು:
- ಅಧಿಕೃತ ವೆಬ್ಸೈಟ್ಗಳು: cbseresults.nic.in, results.cbse.nic.in, cbse.nic.in
- DigiLocker: digilocker.gov.in
- ಭಾರತ ಸರ್ಕಾರದ ರಿಜಲ್ಟ್ ಪೋರ್ಟಲ್: results.gov.in
- Umang ಅಪ್ಲಿಕೇಶನ್ ಅಥವಾ SMS ಸೇವೆ
ವಿದ್ಯಾರ್ಥಿಗಳಿಗೆ ಸೂಚನೆ: ಸಿಬಿಎಸ್ಇ ಬೋರ್ಡ್ ಫಲಿತಾಂಶ 2025 ಸಂಬಂಧಿತ ಎಲ್ಲಾ ನವೀನ ಅಪ್ಡೇಟ್ಗಳನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (CBSE) ಅಧಿಕೃತ ವೆಬ್ಸೈಟ್ cbse.gov.in ಮತ್ತು results.cbse.nic.inನಲ್ಲಿ ಮಾತ್ರ ಪರಿಶೀಲಿಸಲು ಸಲಹೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ನಕಲಿ ಸುದ್ದಿಗಳಿಂದ ದೂರವಿರಬೇಕು. ಅನೇಕ ವೆಬ್ಸೈಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಸುದ್ದಿಗಳನ್ನು ಹರಡುತ್ತವೆ.
ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಫಲಿತಾಂಶ ಬಿಡುಗಡೆ ಮಾಡುವ ಮುನ್ನ ಒಂದು ದಿನ ಮುಂಚೆ ಸಿಬಿಎಸ್ಇ ಬೋರ್ಡ್ ನೋಟಿಫಿಕೇಶನ್ ನೀಡಲಿದೆ. ಎಲ್ಲಾ ಪರೀಕ್ಷೆ, ವಿದ್ಯಾರ್ಥಿ ವೇತನ ಮತ್ತು ಉದ್ಯೋಗ ಮಾಹಿತಿಯ ನವೀನ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ತಕ್ಷಣ ಎಲ್ಲ ಅಧಿಕೃತ ಮಾಹಿತಿಯನ್ನು ಉಚಿತವಾಗಿ ಪಡೆದುಕೊಳ್ಳಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.