ಇನ್ನು ಮುಂದೆ ಭಾರತದಲ್ಲಿ(India) ಕ್ಯಾಶ್ ಲೆಸ್(Cashless) ವಹಿವಾಟು : ಶಕ್ತಿಕಾಂತ ದಾಸ್(Shaktikanta Das.)
ತಂತ್ರಜ್ಞಾನ, ಆಧುನಿಕರಣ ಹಾಗೂ ಡಿಜಿಟಲೀಕರಣ ಹೆಚ್ಚಾಗುತ್ತಿವೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳ (Smart phone) ಬಳಕೆ ಬಹುತೇಕವಾಗಿ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಸ್ಮಾರ್ಟ್ ಫೋನ್ ಬಳಸುತ್ತಿರುವ ವ್ಯಕ್ತಿಯ ಹತ್ತಿರವೂ ಕೂಡ ಫೋನ್ ಪೇ (phone pay), ಗೂಗಲ್ ಪೇ(Google Pay) ಈ ರೀತಿಯಾದಂತಹ ಡಿಜಿಟಲ್ ಹಣ ಪಾವತಿಸುವ ಆಪ್ ಗಳು ಇದ್ದಾವೆ. ಇತ್ತೀಚಿನ ದಿನಗಳಲ್ಲಿ ಯುಪಿಐ ವಹಿವಾಟಿನ (UPI transactions) ಸಂಖ್ಯೆ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ. ದೊಡ್ಡ ದೊಡ್ಡ ವ್ಯಾಪಾರಿಗಳಿಂದ ಹಿಡಿದು ರಸ್ತೆ ಬದಿಗಳಲ್ಲಿ ಸಣ್ಣ ವ್ಯಾಪಾರಗಳನ್ನು ಮಾಡುವವವರೂ ಕೂಡ ಕ್ಯೂಆರ್ ಕೋಡ್(QR code) ಮೂಲಕ ಸ್ಕ್ಯಾನ್ ಮಾಡಿ ಪಾವತಿ ಮಾಡುವ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಹೆಚ್ಚಿನ ಜನ ಹಣ ವರ್ಗಾವಣೆಗಾಗಿ UPI ಅನ್ನೇ ಬಳಸುತ್ತಿದ್ದಾರೆ. ಇನ್ನು ಸರ್ಕಾರವೂ ಕೂಡ ಇದಕ್ಕೆ ಬೆಂಬಲವನ್ನು ನೀಡುತ್ತಿದೆ. ಇನ್ಮುಂದೆ ಯಾರ ಬಳಿಯೂ ನಗದು ಹಣ ಇರಲ್ಲ, ಏನಿದ್ದರೂ ಡಿಜಿಟಲ್ ಕರೆನ್ಸಿ (Digital currency) ಮಾತ್ರ ಎಂದು ಭಾರತದ ರಿಸರ್ವ್ ಬ್ಯಾಂಕ್ ಗವರ್ನರ್ (Governor of the Reserve Bank of India) ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ನಮ್ಮ ಭಾರತ ದೇಶವು ಎಲ್ಲಾ ರೀತಿಯಿಂದಲೂ ಮುಂದುವರೆಯುತ್ತಿದೆ. ಈ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರವು (Central government) ಡಿಜಿಟಲೀಕರಣವನ್ನು ಜಾರಿಗೆ ತಂದಿತ್ತು. ಇದರಿಂದಾಗಿ ನೇರ ಹಣಕಾಸಿನ ವಹಿವಾಟುವನ್ನು ನಿಲ್ಲಿಸಿ, ಎಲ್ಲರೂ ಕೂಡ ಫೋನ್ ಪೇ,ಗೂಗಲ್ ಪೇಯನ್ನು ಬಳಸಲು ಶುರು ಮಾಡಿದ್ದಾರೆ. ಅದರಲ್ಲೂ ಕಪ್ಪು ಹಣ ತಡೆಯಲು ಸರ್ಕಾರ ಡಿಜಿಟಲ್ ಇಂಡಿಯಾ ಎನ್ನುವ ಮೂಲಕ ಡಿಜಿಟಲ್ ವಹಿವಾಟುವನ್ನು ಬಳಸುವಂತೆ ಜನರಿಗೆ ಪ್ರೇರೇಪಿಸಿತ್ತು. ಅದರಲ್ಲೂ 2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು(Prime Minister Narendra Modi) ನೋಟ್ ಬ್ಯಾನ್ ಮಾಡಿದ್ದರು. ಅದಾದ ನಂತರ ಕಪ್ಪು ಹಣ (black money) ವರ್ಗಾವಣೆಯನ್ನು ತಡೆಯಲು ಡಿಜಿಟಲ್ ಟ್ರಾನ್ಸ್ಯಾಕ್ಷನ್ ಗೆ(Digital Transaction) ಮಹತ್ವವನ್ನು ನೀಡುತ್ತಾ ಬಂದಿತು. ಅದರಲ್ಲೂ ಈಗ ಎಲ್ಲರೂ ಡಿಜಿಟಲ್ ವಹಿವಾಟುವನ್ನು ಬಳಸುತ್ತಿದ್ದಾರೆ. ಇದೇ ರೀತಿಯಾಗಿ ಇನ್ಮುಂದೆ ಡಿಜಿಟಲ್ ಕರೆನ್ಸಿ ವಹಿವಾಟು ನಡೆಯುತ್ತದೆ ಎಂದು ಭಾರತದ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಕೋಲ್ಕತಾದಲ್ಲಿ (Kolkata) ನಡೆದ ವಾರ್ಷಿಕ ಜಿ30 ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಸೆಮಿನಾರ್‌ನಲ್ಲಿ ಮಾತನಾಡಿದ ಶಕ್ತಿಕಾಂತ ದಾಸ್, ದೇಶದಲ್ಲಿ ಇನ್ನು ಮುಂದೆ ಜನರು ಹಣವನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡುವ ಅವಶ್ಯಕತೆ ಇಲ್ಲ ಏಕೆಂದರೆ ಇನ್ಮುಂದೆ ನಗದು ಹಣ ಅಥವಾ ನಗದು ವಹಿವಾಟುಗಳು ಇರುವುದಿಲ್ಲ. ಎಲ್ಲವೂ ಡಿಜಿಟಲ್ ಕರೆನ್ಸಿ ಯಾಗುತ್ತದೆ. ಹಾಗೂ ಜನರು ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಆರ್ ಬಿ ಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದೇನು?:
ಇನ್ನು ಮುಂದೆ ಭಾರತದಲ್ಲಿ ನಗದು ಹಣ ವಹಿವಾಟು ಆಗುವುದಿಲ್ಲ. ಆರ್ ಬಿ ಐ(RBI ) ಕೂಡ ನೋಟ್ ಪ್ರಿಂಟ್ ಮಾಡುವುದಿಲ್ಲ. ಸಣ್ಣಮಟ್ಟದ ವ್ಯಾಪಾರದಿಂದ ಹಿಡಿದು ದೊಡ್ಡ ಮಟ್ಟದ ವ್ಯವಹಾರದವರಿಗೂ ಕೂಡ ನಗದು ಹಣ ಇರುವುದಿಲ್ಲ ಎಲ್ಲರೂ ಡಿಜಿಟಲ್ ಕರೆನ್ಸಿ ಬಳಸಬೇಕಾಗುತ್ತದೆ. ಹಾಗೂ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ(CBDC)ಯಿಂದ ಅಂತಾರಾಷ್ಟ್ರೀಯ ಪಾವತಿಗಳು (International payments) ಅತ್ಯಂತ ಸುಲಭವಾಗಿ ನಡೆಯಲಿದೆ. ಹಾಗೂ ಡಿಜಿಟಲ್ ವ್ಯವಹಾರವನ್ನು ಎಲ್ಲರೂ ಅಳವಡಿಸಿಕೊಳ್ಳುವುದರಿಂದ ಯಾರೂ ಬ್ಯಾಂಕುಗಳಿಗೆ ಹೋಗುವ ಪ್ರಮೇಯ ಬರುವುದಿಲ್ಲ. ಇದರಿಂದ ಖರ್ಚು ಕಡಿಮೆಯಾಗುತ್ತದೆ ಅದರಲ್ಲೂ ನೋಟು ತಯಾರಿಕೆ ಮಾಡಲು ಖರ್ಚು ಮಾಡುವ ಅವಶ್ಯಕತೆ ಇರುವುದಿಲ್ಲ. ನಗದು ವ್ಯವಹಾರಕ್ಕೆ ಹೋಲಿಸಿಕೊಂಡರೆ ಡಿಜಿಟಲ್ ವ್ಯವಹಾರವು ಬಹಳ ಬೇಗ ಪಾವತಿ ಮಾಡುವಂತಹ ವ್ಯವಹಾರವಾಗಿದೆ, ಇತರ ದೇಶ ಕೂಡ ಡಿಜಿಟಲ್ ಕರೆನ್ಸಿ ಅಳವಡಿಸಿಕೊಂಡರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಸಮಸ್ಯೆಗಲು ಉದ್ಭವವಾಗುವುದಿಲ್ಲ ಎಂದು ಶಕ್ತಿಕಾಂತ್ ದಾಸ್ ತಿಳಿಸಿದರು.
ಭಾರತದಲ್ಲಿ ನಕಲಿ ನೋಟುಗಳ ಚಲಾವಣೆಯನ್ನು ತಡೆಯಬಹುದು :
ಭಾರತದಲ್ಲಿ ನಕಲಿ ನೋಟುಗಳ ಚಲಾವಣೆ ಇದೆ. ಈ ಕುರಿತಂತೆ ಹಲವು ಕ್ರಮಗಳನ್ನು ಆರ್‌ಬಿಐ ಕೈಕೊಂಡರೂ ಕೂಡ ಸಂಪೂರ್ಣವಾಗಿ ನಕಲಿ ನೋಟು ಬಳಸುವುದನ್ನು ತಡೆಯಲು ಆಗುವುದಿಲ್ಲ. ಆದರೆ ಇಂದು ಹಳ್ಳಿ ಹಳ್ಳಿಗಳಲ್ಲೂ ಡಿಜಿಟಲ್ ಕರೆನ್ಸಿ ಮೂಲಕವೇ ವ್ಯವಹಾರವನ್ನು ನಡೆಸುತ್ತಿದೆ. ಆದರೆ ಜನರು ಪೂರ್ಣವಾಗಿ ಡಿಜಿಟಲೀಕರಣವನ್ನು(Digitization) ಬಳಸುತ್ತಿಲ್ಲ. ಒಂದು ವೇಳೆ ಎಲ್ಲರೂ ಡಿಜಿಟಲ್ ಕರೆನ್ಸಿ ಬಳಸಿದರೆ ನಕಲಿ ನೋಟುಗಳ ಹಾವಳಿಯನ್ನು ತಡೆಯಬಹುದು. ಕ್ರಮೇಣ ನಗದು ವ್ಯವಹಾರವು ಸಂಪೂರ್ಣವಾಗಿ ನಿಂತು ಹೋಗಲಿದ್ದು, ನೋಟುಗಳು ನಾಣ್ಯಗಳು ಸೇರಿದಂತೆ ಎಲ್ಲವೂ ಬಂದಾಗಿ ಡಿಜಿಟಲ್ ಕರೆನ್ಸಿ ಸಂಪೂರ್ಣವಾಗಿ ಎಲ್ಲಾ ಕಡೆಯೂ ವ್ಯಾಪಿಸಲಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದರು.
ಪ್ರಸ್ತುತ ಭಾರತದಲ್ಲಿ ಎಷ್ಟು ವಹಿವಾಟು ಯುಪಿಐ(UPI) ಮೂಲಕ ನಡೆಯುತ್ತಿದೆ?:
ಇಂದು ಪ್ರತಿಯೊಬ್ಬರೂ ಕೂಡ ಫೋನ್ ಪೇ(Phone Pay), ಗೂಗಲ್ ಪೇ(Google Pay) ಬಳಸುತ್ತಿರುವುದರಿಂದ ಸಣ್ಣಪುಟ್ಟ ವಸ್ತುಗಳನ್ನು ಕೊಳ್ಳುವುದು ಸೇರಿದಂತೆ ದೊಡ್ಡ ಪ್ರಮಾಣದ ಎಲ್ಲಾ ವಹಿವಾಟುಗಳನ್ನು ಯುಪಿಐ (UPI) ಮೂಲಕವೇ ನಡೆಸುತ್ತಿದ್ದಾರೆ. ಸದ್ಯ ಭಾರತದಲ್ಲಿ ಒಂದು ಬಿಲಿಯನ್(billion) ಯುಪಿಐ ವಹಿವಾಟು ನಡೆಯುತ್ತಿದೆ ಹಾಗೂ ಬರುವ ವರ್ಷಗಳಲ್ಲಿ ಇದು ದುಪ್ಪಟ್ಟಾಗಲಿದೆ ಎಂದು ತಿಳಿಸಿದರು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




