ದೇಶದಲ್ಲಿ ದಿನದಿಂದ ದಿನಕ್ಕೆ ಬಾಡಿಗೆ ಮನೆ ಮತ್ತು ವಾಣಿಜ್ಯ ಸ್ಥಳಗಳ ಬೇಡಿಕೆ ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮಾದರಿ ಬಾಡಿಗೆ ಕಾಯ್ದೆ (Model Tenancy Act) ಮತ್ತು 2025ರ ಬಜೆಟ್ ನಿಬಂಧನೆಗಳ ಆಧಾರದ ಮೇಲೆ ಹೊಸ ಬಾಡಿಗೆ ಒಪ್ಪಂದ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳ ಮುಖ್ಯ ಉದ್ದೇಶ ಬಾಡಿಗೆ ವ್ಯವಹಾರವನ್ನು ಸಂಪೂರ್ಣ ಪಾರದರ್ಶಕಗೊಳಿಸುವುದು, ವಿವಾದಗಳನ್ನು ಕಡಿಮೆ ಮಾಡುವುದು ಮತ್ತು ಬಾಡಿಗೆದಾರರಿಗೆ ಆರ್ಥಿಕ ಹೊರೆ ತಗ್ಗಿಸುವುದು ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ…….
ಹೊಸ ನಿಯಮದಲ್ಲಿ ಅತ್ಯಂತ ಮಹತ್ವದ ಬದಲಾವಣೆ ಎಂದರೆ ಬಾಡಿಗೆ ಒಪ್ಪಂದದ ಕಡ್ಡಾಯ ನೋಂದಣಿ. ಇನ್ನು ಮುಂದೆ ಮೌಖಿಕ ಒಪ್ಪಂದ ಅಥವಾ ಸಾದಾ ಕಾಗದದಲ್ಲಿ ಮಾಡಿದ ಒಪ್ಪಂದ ಮಾನ್ಯವಾಗುವುದಿಲ್ಲ. ಯಾವುದೇ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಿದ 60 ದಿನಗಳ (2 ತಿಂಗಳು) ಒಳಗೆ ಅದನ್ನು ಕಡ್ಡಾಯವಾಗಿ ಸರ್ಕಾರಿ ನೋಂದಣಿ ಮಾಡಿಸಬೇಕು. ಇದನ್ನು ಆನ್‌ಲೈನ್‌ನಲ್ಲಿ ರಾಜ್ಯದ ಆಸ್ತಿ ನೋಂದಣಿ ಪೋರ್ಟಲ್‌ನಲ್ಲಿ ಅಥವಾ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾಡಬಹುದು. ಈ ಅವಧಿ ಮೀರಿದರೆ ಬಾಡಿಗೆದಾರ ಮತ್ತು ಮನೆಮಾಲೀಕ ಇಬ್ಬರಿಗೂ ₹5,000 ದಂಡ ವಿಧಿಸಲಾಗುತ್ತದೆ.
ಬಾಡಿಗೆದಾರರಿಗೆ ದೊಡ್ಡ ರಿಲೀಫ್ ಎಂದರೆ ಭದ್ರತಾ ಠೇವಣಿ (Security Deposit) ಮೇಲಿನ ಮಿತಿ. ಇನ್ನು ಮುಂದೆ ಮನೆ ಬಾಡಿಗೆಗೆ ಕೇವಲ 2 ತಿಂಗಳ ಬಾಡಿಗೆ ಮೊತ್ತಕ್ಕಿಂತ ಹೆಚ್ಚು ಡಿಪಾಸಿಟ್ ಪಡೆಯಲು ಮನೆಮಾಲೀಕರಿಗೆ ಅವಕಾಶವಿಲ್ಲ. ಅದೇ ರೀತಿ ವಾಣಿಜ್ಯ ಸ್ಥಳಗಳಿಗೆ ಗರಿಷ್ಠ 6 ತಿಂಗಳ ಬಾಡಿಗೆ ಮೊತ್ತಕ್ಕೆ ಮಾತ್ರ ಡಿಪಾಸಿಟ್ ನಿಗದಿಪಡಿಸಲಾಗಿದೆ. ಇದರಿಂದ ಬಾಡಿಗೆಗೆ ಮನೆ ತೆಗೆದುಕೊಳ್ಳುವಾಗ ಲಕ್ಷಾಂತರ ರೂಪಾಯಿ ಒಮ್ಮೆಲೇ ಕಟ್ಟುವ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ.
ಬಾಡಿಗೆ ಹೆಚ್ಚಳದಲ್ಲಿಯೂ ಇನ್ನು ಮುಂದೆ ಮನಸಿಗೆ ಬಂದಂತೆ ದರ ಏರಿಸಲು ಸಾಧ್ಯವಿಲ್ಲ. ಒಪ್ಪಂದದಲ್ಲಿ ಸ್ಪಷ್ಟವಾಗಿ ಬಾಡಿಗೆ ಹೆಚ್ಚಳದ ಶೇಕಡಾವಾರು ಅಥವಾ ನಿಗದಿತ ಮೊತ್ತವನ್ನು ಉಲ್ಲೇಖಿಸಬೇಕು. ಇದಲ್ಲದೆ ಬಾಡಿಗೆ ಹೆಚ್ಚಿಸಬೇಕಾದರೆ ಕನಿಷ್ಠ 3 ತಿಂಗಳು ಮುಂಚಿತವಾಗಿ ಲಿಖಿತ ಸೂಚನೆ ನೀಡಬೇಕು. ಇದರದೆ ಏಕಾಏಕಿ ಬಾಡಿಗೆ ಏರಿಕೆ ಮಾಡಿದರೆ ಅದು ಕಾನೂನುಬಾಹಿರವಾಗಿರುತ್ತದೆ.
ಬಾಡಿಗೆದಾರರನ್ನು ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಲು ಆದೇಶಿಸುವ ಪ್ರಕ್ರಿಯೆಯೂ ಇನ್ನು ಮುಂದೆ ಸುಲಭವಲ್ಲ. ಹೊಸ ಕಾಯ್ದೆಯಡಿ ಮನೆ ಖಾಲಿ ಮಾಡಿಸಲು ಸಾಕಷ್ಟು ಕಾನೂನು ಆಧಾರ ಮತ್ತು ಪೂರ್ವಸೂಚನೆ ಕಡ್ಡಾಯವಾಗಿದೆ. ಇದರಿಂದ ಬಾಡಿಗೆದಾರರು ರಾತ್ರೋರಾತ್ರಿ ಬೀದಿಗೆ ಬೀಳುವ ಸ್ಥಿತಿ ತಪ್ಪಲಿದೆ.
ವಿವಾದ ಪರಿಹಾರದಲ್ಲಿಯೂ ದೊಡ್ಡ ಬದಲಾವಣೆ ಬಂದಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಬಾಡಿಗೆ ನ್ಯಾಯಾಲಯಗಳು (Rent Tribunals) ಮತ್ತು ಬಾಡಿಗೆ ಪ್ರಾಧಿಕಾರಗಳು (Rent Authorities) ಸ್ಥಾಪನೆಯಾಗುತ್ತಿವೆ. ಯಾವುದೇ ಬಾಡಿಗೆ ಸಂಬಂಧಿತ ವಿವಾದ ಬಂದರೆ ಅದನ್ನು ಕೇವಲ 60 ದಿನಗಳಲ್ಲಿ ಪರಿಹರಿಸುವುದು ಈ ನ್ಯಾಯಾಲಯಗಳ ಗುರಿಯಾಗಿದೆ. ಇದರಿಂದ ವರ್ಷಗಟ್ಟಲೆ ನ್ಯಾಯಾಲಯದಲ್ಲಿ ತಿರುಗುವ ಸ್ಥಿತಿ ತಪ್ಪಲಿದೆ.
ಈ ಹೊಸ ಬಾಡಿಗೆ ನಿಯಮಗಳು 2025ರಿಂದ ದೇಶದಾದ್ಯಂತ ಜಾರಿಯಾಗುತ್ತಿದ್ದು, ಈಗಾಗಲೇ ಉತ್ತರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ಮಾದರಿ ಕಾಯ್ದೆಯನ್ನು ಅಳವಡಿಸಿಕೊಂಡಿವೆ. ಕರ್ನಾಟಕ ಸರ್ಕಾರವೂ ಶೀಘ್ರದಲ್ಲೇ ಈ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಈ ನಿಯಮಗಳು ಬಾಡಿಗೆದಾರರಿಗೆ ಮಾತ್ರವಲ್ಲದೆ ಮನೆಮಾಲೀಕರಿಗೂ ಸುರಕ್ಷತೆ ನೀಡುತ್ತವೆ ಎಂಬುದು ಸರ್ಕಾರದ ವಾದ.
ಒಟ್ಟಾರೆಯಾಗಿ ಹೇಳುವುದಾದರೆ, 2025ರ ಹೊಸ ಬಾಡಿಗೆ ನಿಯಮಗಳು ಬಾಡಿಗೆ ಮಾರುಕಟ್ಟೆಯಲ್ಲಿ ದಶಕಗಳಿಂದಿರುವ ಅವ್ಯವಸ್ಥೆಗೆ ಕಡಿವಾಣ ಹಾಕುವ ಮಹತ್ವದ ಹೆಜ್ಜೆಯಾಗಿದೆ. ಕಡಿಮೆ ಡಿಪಾಸಿಟ್, ಕಡ್ಡಾಯ ನೋಂದಣಿ, ನಿಯಂತ್ರಿತ ಬಾಡಿಗೆ ಏರಿಕೆ, ವೇಗದ ನ್ಯಾಯ – ಇವೆಲ್ಲವೂ ಬಾಡಿಗೆದಾರರಿಗೆ ದೊಡ್ಡ ಗುಡ್ ನ್ಯೂಸ್ ಆಗಿವೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Shivaraj is the Lead Editor at NeedsOfPublic.in with over 4 years of experience tracking Indian government schemes and educational updates. He specializes in simplifying complex notifications from the Central and State governments to help the public understand their benefits. Before joining NeedsOfPublic, Shivaraj worked as a Content Writer focusing on Civic issues. When he isn’t decoding the latest circulars, he enjoys reading about digital literacy.”
Follow Shivaraj on:


WhatsApp Group




