ration card bandhf

BPL ಕಾರ್ಡ್ ಇದ್ದವರೇ ಗಮನಿಸಿ ಎಚ್ಚರ : ರೇಷನ್ ಮಾರಾಟ ಮಾಡಿದ್ರೆ 6 ತಿಂಗಳು ರೇಷನ್ ಕಾರ್ಡ್ ರದ್ದು.!

Categories:
WhatsApp Group Telegram Group

ಬೆಂಗಳೂರು: ರಾಜ್ಯದ ಲಕ್ಷಾಂತರ ಪಡಿತರ ಚೀಟಿದಾರರಿಗೆ ಪ್ರಮುಖ ಎಚ್ಚರಿಕೆ. ಸರ್ಕಾರದಿಂದ ಉಚಿತವಾಗಿ ವಿತರಿಸಲಾದ ಆಹಾರ ಧಾನ್ಯಗಳನ್ನು ನೀವು ಮುಕ್ತ ಮಾರುಕಟ್ಟೆಯಲ್ಲಿ ಹಣಕ್ಕಾಗಿ ಮಾರಾಟ ಮಾಡಿದರೆ ಅಥವಾ ಅಕ್ರಮವಾಗಿ ಸಂಗ್ರಹಿಸಿದರೆ, ನಿಮಗೆ ಮುಕ್ತ ಮಾರುಕಟ್ಟೆ ದರದಂತೆ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ, ನಿಮ್ಮ ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತು (ರದ್ದು) ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ನವೆಂಬರ್ 2025 ರ ಮಾಹೆಗೆ ಧಾನ್ಯಗಳ ವಿತರಣೆ ವಿವರ:

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ (NFSA) ಅಡಿಯಲ್ಲಿ ನವೆಂಬರ್ 2025 ರ ಮಾಹೆಗೆ ಹಾಸನ ಜಿಲ್ಲೆಯಲ್ಲಿ ವಿತರಿಸಲಾಗುತ್ತಿರುವ ಆಹಾರ ಧಾನ್ಯಗಳ ವಿವರಗಳು ಹೀಗಿವೆ:

ಅಂತ್ಯೋದಯ (AAY) ಪಡಿತರ ಚೀಟಿಗಳಿಗೆ:

ಪ್ರತಿ ಕಾರ್ಡಿಗೆ 21 ಕೆಜಿ ರಾಗಿ ಮತ್ತು 14 ಕೆಜಿ ಸಾರವರ್ಧಿತ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ.

ಪಿ.ಹೆಚ್.ಹೆಚ್ (BPL) ಪಡಿತರ ಚೀಟಿಗಳಿಗೆ:

ಪ್ರತಿ ಫಲಾನುಭವಿಗೆ 3 ಕೆಜಿ ರಾಗಿ ಮತ್ತು 2 ಕೆಜಿ ಸಾರವರ್ಧಿತ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಂಚಿಕೆ:

ನವೆಂಬರ್ 2025 ರ ಮಾಹೆಗೆ ಅನ್ನಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆ (DBT) ಬದಲಿಗೆ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಈ ಕೆಳಗಿನಂತೆ ಹಂಚಿಕೆ ಮಾಡಲಾಗುತ್ತಿದೆ:

  • AAY ಕಾರ್ಡುದಾರರಿಗೆ (ನಾಲ್ಕು ಅಥವಾ ಹೆಚ್ಚಿನ ಸದಸ್ಯರುಳ್ಳ): ಕೇಂದ್ರದ NFSA ಹಂಚಿಕೆಯ 35 ಕೆಜಿ ಹೊರತುಪಡಿಸಿ ಹೆಚ್ಚುವರಿ ಅಕ್ಕಿ ನೀಡಲಾಗುತ್ತಿದೆ. (ಏಕ, ದ್ವಿ ಮತ್ತು ತ್ರಿಸದಸ್ಯ AAY ಕಾರ್ಡ್‌ಗಳಿಗೆ ಅನ್ವಯಿಸುವುದಿಲ್ಲ).
  • PHH ಕಾರ್ಡುದಾರರಿಗೆ (ಪ್ರತಿ ಫಲಾನುಭವಿಗೆ): ರಾಜ್ಯಾದ್ಯಂತ ಪ್ರತಿ ಪಿಎಚ್‌ಹೆಚ್ ಫಲಾನುಭವಿಗೆ ತಲಾ 5 ಕೆಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಲು ಹಂಚಿಕೆ ಪ್ರಮಾಣವನ್ನು ನಿಗದಿಪಡಿಸಲಾಗಿದೆ.

ಗಮನಿಸಿ: ಪ್ರಸ್ತುತ ನವೆಂಬರ್ 2025 ರ ಮಾಹೆಗೆ ಆದ್ಯತೇತರ (APL) ಪಡಿತರ ಚೀಟಿಗಳಿಗೆ ಯಾವುದೇ ಆಹಾರಧಾನ್ಯದ ಹಂಚಿಕೆ ಇರುವುದಿಲ್ಲ.

ಸೀಮೆಎಣ್ಣೆ ಮತ್ತು ಪೋರ್ಟೆಬಿಲಿಟಿ ಅವಕಾಶ:

  • ಸೀಮೆಎಣ್ಣೆ ಹಂಚಿಕೆ: ಹಾಸನ ಜಿಲ್ಲೆಯ ಆಲೂರು, ಬೇಲೂರು, ಅರಕಲಗೂಡು ಮತ್ತು ಸಕಲೇಶಪುರ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ AAY ಮತ್ತು PHH ಕಾರ್ಡುದಾರರಿಗೆ ಪ್ರತಿ ಲೀಟರ್‌ಗೆ ₹35 ರಂತೆ ಪ್ರತಿ ಕಾರ್ಡಿಗೆ ಎರಡು ಲೀಟರ್ ಸೀಮೆಎಣ್ಣೆ ಹಂಚಿಕೆ ಮಾಡಲಾಗಿದೆ.
  • ಒಂದು ರಾಷ್ಟ್ರ ಒಂದು ಪಡಿತರ ಚೀಟಿ (ಪೋರ್ಟೆಬಿಲಿಟಿ): ಈ ವ್ಯವಸ್ಥೆ ಜಾರಿಯಲ್ಲಿರುವುದರಿಂದ, ಯಾವುದೇ ರಾಜ್ಯದ ಅಥವಾ ಜಿಲ್ಲೆಯ ಪಡಿತರ ಚೀಟಿದಾರರು ತಮ್ಮ ವರ್ಗದ (AAY/PHH) ಪಡಿತರವನ್ನು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡೆಯಲು ಅವಕಾಶವಿದೆ.

ದೂರು ಸಲ್ಲಿಸುವುದು ಹೇಗೆ?

ಯಾವುದೇ ನ್ಯಾಯಬೆಲೆ ಅಂಗಡಿ ವಿತರಕರು ಕಡಿಮೆ ಪ್ರಮಾಣದ ಪಡಿತರವನ್ನು ವಿತರಣೆ ಮಾಡಿದರೆ, ಅನಗತ್ಯವಾಗಿ ಹಣ ಕೇಳಿದರೆ ಅಥವಾ ಇತರೆ ಯಾವುದೇ ದೂರುಗಳಿದ್ದರೆ, ಈ ಕೆಳಗಿನ ಉಚಿತ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ದೂರು ಸಲ್ಲಿಸಬಹುದು:

  • ನಿಶುಲ್ಕ ದೂರವಾಣಿ ಸಂಖ್ಯೆಗಳು: 1967, 1800-425-9339 ಮತ್ತು 14445
  • ಅಥವಾ, ಆಯಾ ತಾಲ್ಲೂಕಿನ ತಹಶೀಲ್ದಾರರ ಕಚೇರಿಗೆ ಅಥವಾ ಜಿಲ್ಲೆಯ ಜಂಟಿ ನಿರ್ದೇಶಕರ ಕಚೇರಿಗೆ ನೇರವಾಗಿ ದೂರು ಸಲ್ಲಿಸಬಹುದು.
WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories