ration card status

BPL ಕಾರ್ಡ್​​ ಇದ್ದವರಿಗೆ ಬಿಗ್ ಶಾಕ್​: ಇಂತಹ ರೇಷನ್ ಕಾರ್ಡ್ ರದ್ದು, ನಿಮ್ಮ ಕಾರ್ಡ್ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

Categories:
WhatsApp Group Telegram Group

ಬೆಂಗಳೂರು: ರಾಜ್ಯ ಸರ್ಕಾರವು ಅನರ್ಹ ಕುಟುಂಬಗಳು ಪಡೆದಿರುವ BPL (ಬಡತನ ರೇಖೆಗಿಂತ ಕೆಳಗಿರುವ) ಕಾರ್ಡ್‌ಗಳನ್ನು ರದ್ದುಗೊಳಿಸಲು ಮಹತ್ವದ ಕ್ರಮ ಕೈಗೊಂಡಿದೆ. ಕೇಂದ್ರ ನೇರ ತೆರಿಗೆಗಳ ಮಂಡಳಿ (Central Board of Direct Taxation – CBDT) ಒದಗಿಸಿರುವ ತೆರಿಗೆದಾರರ ಮಾಹಿತಿಯನ್ನು ಆಧರಿಸಿ ಈ ಪ್ರಕ್ರಿಯೆ ಆರಂಭಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಾತ್ರವೇ ಲಕ್ಷಾಂತರ BPL ಕಾರ್ಡ್‌ಗಳು ರದ್ದಾಗುವ ಅಥವಾ APL (ಬಡತನ ರೇಖೆಗಿಂತ ಮೇಲಿರುವ) ಕಾರ್ಡ್‌ಗಳಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕಳೆದ ತಿಂಗಳು ಆಹಾರ ಇಲಾಖೆಗೆ ಬಂದಿರುವ ತೆರಿಗೆ ವರದಿಯ ಪ್ರಕಾರ, ತೆರಿಗೆ ಪಾವತಿಸುತ್ತಿರುವ ಅನೇಕ ಕುಟುಂಬಗಳು BPL ಕಾರ್ಡ್‌ಗಳನ್ನು ಹೊಂದಿದ್ದಾರೆ. ನಿಯಮಾನುಸಾರ, ತೆರಿಗೆ ಪಾವತಿಸುವವರು BPL ಸೌಲಭ್ಯಗಳಿಗೆ ಅರ್ಹರಾಗಿರುವುದಿಲ್ಲ. ಇಂತಹ ಕಾರ್ಡ್‌ಗಳನ್ನು APL ಕಾರ್ಡ್‌ಗಳನ್ನಾಗಿ ಬದಲಾಯಿಸಲು ಸರ್ಕಾರ ನಿರ್ಧರಿಸಿದೆ.

ಈಗಾಗಲೇ ರದ್ದಾದ ಸಾವಿರಾರು ಕಾರ್ಡ್‌ಗಳು

ಬೆಂಗಳೂರಿನ ರಾಜಾಜಿನಗರ ಜಂಟಿ ಆಯುಕ್ತರ ವ್ಯಾಪ್ತಿಯಲ್ಲಿಯೇ ಈಗಾಗಲೇ 13,329 BPL ಕಾರ್ಡ್‌ಗಳನ್ನು ರದ್ದುಪಡಿಸಿ APL ಆಗಿ ಪರಿವರ್ತಿಸಲಾಗಿದೆ. ಇದರಿಂದಾಗಿ ಪಡಿತರ ನಿರಾಕರಿಸಲ್ಪಟ್ಟ ಜನರು ಆತಂಕಕ್ಕೊಳಗಾಗಿದ್ದಾರೆ. ಆಹಾರ ಇಲಾಖೆಯ ಕಚೇರಿಗಳ ಮುಂದೆ ಜನರು ಸೇರಿ, ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

“ಕಳೆದ ತಿಂಗಳು ನಮಗೆ ರೇಷನ್ ಸಿಕ್ಕಿತ್ತು, ಆದರೆ ಈ ತಿಂಗಳು ನಿರಾಕರಿಸಿದ್ದಾರೆ. ನಾವು ಯಾವುದೇ ಟ್ಯಾಕ್ಸ್ ಕಟ್ಟುತ್ತಿಲ್ಲ. ಮಗಳು ಕೆಲಸ ಮಾಡುತ್ತಿದ್ದಳು, ಆದರೆ ಈಗ ಅವಳಿಗೆ ಮದುವೆಯಾಗಿದೆ. ಆದರೂ ನಮ್ಮ ಕಾರ್ಡ್ ರದ್ದು ಮಾಡಿದ್ದಾರೆ,” ಎಂದು ಮಹಿಳೆಯೊಬ್ಬರು ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.

ಈ ಬೆಳವಣಿಗೆಯು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿ ಆತಂಕ ಸೃಷ್ಟಿಸಿದ್ದು, ಸರ್ಕಾರದ ಮಾನದಂಡಗಳು ಮತ್ತು ಅರ್ಹತೆಯ ಕುರಿತು ಮರುಪರಿಶೀಲನೆ ನಡೆಸಬೇಕು ಎಂದು ಬಡ ಕುಟುಂಬಗಳು ಆಗ್ರಹಿಸುತ್ತಿವೆ.

BPL ಕಾರ್ಡ್‌ಗೆ ಇರಬೇಕಾದ ಪ್ರಮುಖ ಮಾನದಂಡಗಳು

ರಾಜ್ಯ ಸರ್ಕಾರವು 2017 ರಲ್ಲಿ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ, BPL ಕಾರ್ಡ್ ಪಡೆಯಲು ಈ ಕೆಳಗಿನ ಪ್ರಮುಖ ಷರತ್ತುಗಳನ್ನು ಪಾಲಿಸಬೇಕು:

  • ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷ ರೂಪಾಯಿ ಮೀರಬಾರದು.
  • ಯಾವುದೇ ಸದಸ್ಯರು ಸರ್ಕಾರಿ ನೌಕರಿಯಲ್ಲಿರಬಾರದು.
  • ನಗರ ಪ್ರದೇಶದಲ್ಲಿ 1,000 ಚದರ ಅಡಿಗಿಂತ ಹೆಚ್ಚಿನ ಜಾಗ ಹೊಂದಿರಬಾರದು.
  • ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ಗಿಂತ ಹೆಚ್ಚಿನ ಭೂಮಿ ಇರಬಾರದು.
  • ಕುಟುಂಬವು ನಾಲ್ಕು ಚಕ್ರದ ವಾಹನವನ್ನು ಹೊಂದಿರಬಾರದು.

ಸರ್ಕಾರವು ಈ ಮಾನದಂಡಗಳನ್ನು ಉಲ್ಲಂಘಿಸಿರುವ ಕಾರ್ಡ್‌ಗಳನ್ನು ರದ್ದುಪಡಿಸಲು ಮುಂದಾಗಿದ್ದು, ಈಗಾಗಲೇ ಪಡಿತರ ಅಂಗಡಿಗಳ ಮುಂದೆ ಅನರ್ಹರೆಂದು ಗುರುತಿಸಲಾದ ಜನರು ತಮ್ಮ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ಅಂಟಿಸಲಾಗಿದೆ.

ಹಾವೇರಿಯಲ್ಲಿ 14 ಸಾವಿರಕ್ಕೂ ಅಧಿಕ ಕಾರ್ಡ್‌ಗಳ ರದ್ದತಿ

ಕಳೆದ ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿಯೇ 14,771 ಅನರ್ಹ ಪಡಿತರ ಚೀಟಿಗಳನ್ನು ಅಧಿಕಾರಿಗಳು ಗುರುತಿಸಿ ರದ್ದುಪಡಿಸಲು ಆದೇಶ ನೀಡಿದ್ದರು. ಜಿಲ್ಲೆಯಲ್ಲಿರುವ 2 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್‌ಗಳ ಪೈಕಿ ಈ ಪ್ರಮಾಣದ ಕಾರ್ಡ್‌ಗಳು ರದ್ದಾಗಲು ಆದೇಶಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಸರ್ಕಾರದ ಈ ದಿಢೀರ್ ಕ್ರಮದಿಂದಾಗಿ ನಿಜವಾದ ಬಡವರು ತೊಂದರೆಗೆ ಒಳಗಾಗುತ್ತಾರೆಯೇ ಎಂಬ ಪ್ರಶ್ನೆ ಎದುರಾಗಿದೆ.

Ration card  ಸ್ಥಿತಿಯನ್ನು ಚೆಕ್ ಮಾಡಲು ಕೆಳಗಿನ ಸಲಹೆಗಳನ್ನು ಅನುಸರಿಸಿ:

ಹಂತ 1: ಮೊದಲಿಗೆ,ಕರ್ನಾಟಕ ಸರ್ಕಾರದ “ಮಾಹಿತಿ ಕಣಜ” website ಗೆ ಹೋಗಿ.

https://mahitikanaja.karnataka.gov.in/FCS/MyRationCard?ServiceId=1036&Type=TABLE&DepartmentId=1010

ಹಂತ 2: My Ration card details ವಿವರಗಳ ಪುಟ ತೆರೆದುಕೊಳ್ಳುತ್ತದೆ.

mk1

ಹಂತ 3: ನಂತರ ನಿಮ್ಮ ಜಿಲ್ಲೆ ಮತ್ತು  ನಿಮ್ಮ ration card ಅಲ್ಲಿ ಇರುವ 12 ಸಂಖ್ಯೆಯ  ನಂಬರ್ ಅನ್ನು ನಮೂದಿಸಿ. ನಂತರ ಸಲ್ಲಿಸು/submit ಇದಲ್ಲಿ ಕ್ಲಿಕ್ ಮಾಡಿ. ಅದು ಆದ ಬಳಿಕ my Ration shop details/ನನ್ನ ಪಡಿತರ ಅಂಗಡಿ ವಿವರದ ಪುಟ ತೆರೆಯುತ್ತದೆ. ನಂತರ card status/ಕಾರ್ಡ್ ಸ್ಥಿತಿ  ಸಕ್ರಿಯ/active ಎಂದು ತೋರಿಸಿದರೆ ನಮ್ಮ Ration card ಚಾಲ್ತಿ ಇದೆ ಎಂದು ತಿಳಿಯಬಹುದಾಗಿದೆ.

mk2
WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories