BPCL Recruitment 2025: BPCL ನಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.!

Picsart 25 06 03 17 12 00 550

WhatsApp Group Telegram Group

ಈ ವರದಿಯಲ್ಲಿ ಬಿಪಿಸಿಎಲ್ ನೇಮಕಾತಿ 2025(BPCL  recruitment 2025) ನೇಮಕಾತಿ ಹುದ್ದೆಗಳ  ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಡಿಜಿಟಲ್ ಇಂಡಿಯಾದ ಹಿನ್ನಲೆಯಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿರುವ ಸಮಯದಲ್ಲಿ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಇದೀಗ ತಾಂತ್ರಿಕ ಹಾಗೂ ಆಡಳಿತಾತ್ಮಕ ಹುದ್ದೆಗಳಿಗೆ ಭರತಿ ಪ್ರಕಟಣೆ ನೀಡಿರುವುದು, ಸಾಧಕರಿಗೆ ಹೊಸ ದಿಕ್ಕು ನೀಡುವಂತಿದೆ.

ಬಿಪಿಸಿಎಲ್‌ನ ಈ ನೇಮಕಾತಿ ಕ್ರಮವು ಜೂನಿಯರ್ ಎಕ್ಸಿಕ್ಯೂಟಿವ್, ಅಸೋಸಿಯೇಟ್ ಎಕ್ಸಿಕ್ಯೂಟಿವ್ ಹಾಗೂ ಕಾರ್ಯದರ್ಶಿ ಹುದ್ದೆಗಳನ್ನು ಒಳಗೊಂಡಿದೆ. ಅರ್ಹ ಅಭ್ಯರ್ಥಿಗಳಿಗೆ ಜೂನ್ 27, 2025 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಪ್ರಮುಖ ಹುದ್ದೆಗಳು ಮತ್ತು ವಿದ್ಯಾರ್ಹತೆ:

ಜೂನಿಯರ್ ಎಕ್ಸಿಕ್ಯೂಟಿವ್ (ಎಂಜಿನಿಯರಿಂಗ್):
ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಇನ್ಸ್ಟ್ರುಮೆಂಟೇಶನ್, ಸಿವಿಲ್, ಎಲೆಕ್ಟ್ರಾನಿಕ್ಸ್ ಅಥವಾ ಕೆಮಿಕಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಅಗತ್ಯ.

ಅಸೋಸಿಯೇಟ್ ಎಕ್ಸಿಕ್ಯೂಟಿವ್ (ಎಂಜಿನಿಯರಿಂಗ್):
ಸಂಬಂಧಿತ ಕ್ಷೇತ್ರದಲ್ಲಿ ಬಿಇ/ಬಿಟೆಕ್ (BE/Btech) ಅಥವಾ ಬಿಎಸ್‌ಸಿ (ಎಂಜಿನಿಯರಿಂಗ್) ಪದವಿ.

ಜೂನಿಯರ್ ಎಕ್ಸಿಕ್ಯೂಟಿವ್ (ಅಕೌಂಟ್ಸ್):
ಇಂಟರ್ CA ಅಥವಾ ಇಂಟರ್ CMA ಅರ್ಹತೆ ಹೊಂದಿರಬೇಕು.

ಅಸೋಸಿಯೇಟ್ ಎಕ್ಸಿಕ್ಯೂಟಿವ್ (ರಸಾಯನ ಶಾಸ್ತ್ರ):
M.Sc. (chemistry) ಪದವಿ, ಸಾವಯವ, ಅಜೈವಿಕ, ಭೌತಿಕ ಅಥವಾ ವಿಶ್ಲೇಷಣಾತ್ಮಕ ರಸಾಯನಶಾಸ್ತ್ರದಲ್ಲಿ ಪರಿಣತಿ.

ಕಾರ್ಯದರ್ಶಿ (Secretary):
10ನೇ, 12ನೇ ತರಗತಿಯಲ್ಲಿ ಉತ್ತೀರ್ಣರಾಗಿರುವುದರೊಂದಿಗೆ ಮೂರು ವರ್ಷದ ಪದವಿ ಹೊಂದಿರಬೇಕು.

ವಯಸ್ಸಿನ ಮಿತಿ ಮತ್ತು ರಿಯಾಯಿತಿ:
ಸಾಮಾನ್ಯ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು: ಗರಿಷ್ಠ 35 ವರ್ಷ

ಇತರೆ ಮೀಸಲಾತಿ ವರ್ಗಗಳು (OBC/SC/ST): ಸರಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ (Steps to Apply):

ಅಧಿಕೃತ ವೆಬ್‌ಸೈಟ್: bharatpetroleum.in

ಮುಖ್ಯ ಪುಟದಲ್ಲಿ “BPCL Recruitment 2025” ಲಿಂಕ್ ಕ್ಲಿಕ್ ಮಾಡಿ.

ಅರ್ಜಿ ನಮೂನೆ ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ಶುಲ್ಕ ಪಾವತಿಸಿ ಮತ್ತು ಅರ್ಜಿ ಸಲ್ಲಿಸಿ.

ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿ.

ಸಂಬಳ ರಚನೆ (Pay Structure):

ಜೂನಿಯರ್ ಎಕ್ಸಿಕ್ಯೂಟಿವ್: ₹30,000 – ₹1,20,000 (CTC: ಸುತ್ತಮುತ್ತ ₹11.86 ಲಕ್ಷ/ವರ್ಷ)

ಅಸೋಸಿಯೇಟ್ ಎಕ್ಸಿಕ್ಯೂಟಿವ್: ₹40,000 – ₹1,40,000 (CTC: ಸುತ್ತಮುತ್ತ ₹16.64 ಲಕ್ಷ/ವರ್ಷ)

ಆಯ್ಕೆ ಪ್ರಕ್ರಿಯೆ:

ಅರ್ಜಿ ಶಾರ್ಟ್‌ಲಿಸ್ಟ್: ಅರ್ಹತೆ ಮತ್ತು ಅನುಭವ ಆಧಾರದ ಮೇಲೆ.

ಲಿಖಿತ/ಕಂಪ್ಯೂಟರ್ ಆಧಾರಿತ ಪರೀಕ್ಷೆ

ಪ್ರಕರಣ ಆಧಾರಿತ ಚರ್ಚೆ (Case Discussion), ಗುಂಪು ಚಟುವಟಿಕೆ, ವೈಯಕ್ತಿಕ ಸಂದರ್ಶನ

ಅಂತಿಮ ಆಯ್ಕೆ: ಒಟ್ಟಾರೆ ಕಾರ್ಯಕ್ಷಮತೆ + ಅನುಭವ + ಶೈಕ್ಷಣಿಕ ಸಾಧನೆ

ಬಿಪಿಸಿಎಲ್ ನೇಮಕಾತಿಯು ತಾಂತ್ರಿಕ ನಿಪುಣತೆ, ಲೆಕ್ಕಚಾರು ಸಾಮರ್ಥ್ಯ ಮತ್ತು ವಿಜ್ಞಾನ ಕ್ಷೇತ್ರದ ಪರಿಣತಿಯನ್ನು ಮೌಲ್ಯಮಾಪನ ಮಾಡುವ ಸಮಗ್ರ ಆಯ್ಕೆ ಪ್ರಕ್ರಿಯೆಯೊಂದಿಗೆ ಪರಿಣಿತರನ್ನು ಸದುಪಯೋಗಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಉದ್ಯೋಗವು ಕೇವಲ ವೇತನದ ದೃಷ್ಟಿಯಿಂದಲ್ಲ, ಬದಲಾಗಿ ಭಾರತದ ಪ್ರಮುಖ ಪೆಟ್ರೋಲಿಯಂ ಸಂಸ್ಥೆಯೊಂದರಲ್ಲಿ ಉದ್ಯೋಗದ ಭದ್ರತೆ ಮತ್ತು ವೃತ್ತಿಪರ ಬೆಳವಣಿಗೆಗೆ ಸಾಕ್ಷಿಯಾಗಬಲ್ಲದು.

ಕೊನೆಯದಾಗಿ ಹೇಳುವುದಾದರೆ, ಈ ನೇಮಕಾತಿ ಸಾಧಕರಿಗೆ ಉನ್ನತ ಮಟ್ಟದ ಉದ್ಯೋಗ ಅವಕಾಶವಲ್ಲದೆ, ರಾಷ್ಟ್ರ ನಿರ್ಮಾಣದಲ್ಲಿ ಪಾಲುಗೊಳ್ಳಲು ಒಂದು ವಿಶಿಷ್ಟ ವೇದಿಕೆಯನ್ನೂ ಒದಗಿಸುತ್ತದೆ. ಅರ್ಹ ಅಭ್ಯರ್ಥರು ಸಮಯವಿದ್ದು, ಸ್ಪರ್ಧಾತ್ಮಕ ಪ್ರಕ್ರಿಯೆಗೆ ಸಜ್ಜಾಗಬೇಕು.ಅವಕಾಶ ಸಿಗುತ್ತಿರುವಾಗೆನೇ ಪ್ರಯತ್ನ ಮಾಡಿ .ಭವಿಷ್ಯವನ್ನು ನಿರ್ಮಿಸಿಕೊಳ್ಳಿ.ಮತ್ತು ಇಂತಹ ಉತ್ತಮವಾದ  ಮಾಹಿತಿಯನ್ನು ನೀವು ತಿಳಿದಮೇಲೆ  ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!