ರೈತರಿಗೆ ಬೋರ್ವೆಲ್ (Borewell Scheme) ಕೊರಿಸಲು ಸಹಾಯ ಮಾಡುವ ಈ ಯೋಜನೆಗೆ ಅರ್ಜಿ ಆಹ್ವಾನ.! ಈ ಯೋಜನೆಯಡಿಯಲ್ಲಿ ಸಿಗುತ್ತದೆ 3.75 ಲಕ್ಷ ಸಹಾಯಧನ.
ಭೂಮಿಯ ಮೇಲೆ ನೀರು ಅತ್ಯಮೂಲ್ಯವಾಗಿರುವಂತದ್ದು, ಅದರಲ್ಲೂ ರೈತರಿಗೆ ಕೃಷಿ(Agriculture) ಮಾಡಲು ಬಹಳ ಮುಖ್ಯವಾಗಿ ಬೇಕಾಗಿರುವುದು ನೀರು. ನೀರು ಇಲ್ಲದೆ ಯಾವ ಕೃಷಿ ಮಾಡಲು ಅಸಾಧ್ಯ. ಬರಗಾಲದ ಸಮಯದಲ್ಲಿ ರೈತಪಡುವ ಕಷ್ಟ ಹೇಳತಿರದು. ಕೇವಲ ಮಳೆಯನ್ನೇ ನಂಬಿಕೊಂಡು ಕೃಷಿ ಮಾಡಲು ಅಸಾಧ್ಯ. ಆದ್ದರಿಂದ ರೈತ ಕೃಷಿ ಚಟುವಟಿಕೆಗಳಿಗೆ ಬೋರ್ವೆಲ್ ಗಳನ್ನು ಕೊರೆಸಿ ನೀರನ್ನು ಸಸ್ಯಗಳಿಗೆ ಒದಗಿಸುತ್ತಾನೆ.ಆದ್ದರಿಂದ ಸರ್ಕಾರ ಕೃಷಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಗಂಗಾಕಲ್ಯಾಣ ಯೋಜನೆಯಡಿ (Ganga Kalyana Scheme) ಬೋರ್‌ವೆಲ್‌ಗಳನ್ನು (Borewell) ಕೊರೆಸಿ ಕೊಡಲಾಗುತ್ತದೆ. 2024-25ನೇ ಸಾಲಿನ ಗಂಗಾಕಲ್ಯಾಣ ಯೋಜನೆಯಡಿ ಬೋರ್‌ವೆಲ್‌ಗಾಗಿ (Borewell) ಸಹಾಯಧನ(subsidy) ಪಡೆಯಲು ರಾಜ್ಯ ಸರ್ಕಾರ(State Govt) ರೈತರಿಂದ ಅರ್ಜಿ ಆಹ್ವಾನಿಸಿದೆ. ಯಾರೆಲ್ಲಾ ಈ ಸೌಲಭ್ಯ ಪಡೆಯಲು ಅರ್ಹರು? ಅರ್ಹತಾ ಮಾನದಂಡಗಳೇನು? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಗಂಗಾಕಲ್ಯಾಣ ಯೋಜನೆ ಅತ್ಯಂತ ಜನಪ್ರಿಯವಾಗಿರುವಂತಹ ಯೋಜನೆ. ರೈತರಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಸಲು ಆರ್ಥಿಕ ನೆರವು ನೀಡಲಾಗುತ್ತಿದೆ. ಇದರಿಂದ ಬೆಳೆಗಳನ್ನು ಬೆಳೆದುಕೊಂಡು ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಈಗಾಗಲೇ ಅನೇಕೆ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.
ಸಹಾಯಧನದ ಮೊತ್ತ ಎಷ್ಟು?
ಈ ಯೋಜನೆ ಲಾಭ ಪಡೆಯಲು ಯಾರಿಲ್ಲ ಅರ್ಜಿಗಳನ್ನು ಹಾಕಿರುತ್ತಾರೋ ಅವರು ಆಯ್ಕೆಯಾದರೆ ಬೋರ್ವೆಲ್ ಮಾಡಲು ಸರ್ಕಾರ ಹಣ ಕೊಡುತ್ತೆ. ಗಂಗಾ ಕಲ್ಯಾಣ ಯೋಜನೆಯಡಿ ಅಂತರ್ಜಲ ಮಟ್ಟ ಕುಸಿದಿರುವ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಘಟಕ ವೆಚ್ಚರೂ. 4.75 ಲಕ್ಷವಿದ್ದು, ಇದರಲ್ಲಿ ರೂ. 4.25 ಲಕ್ಷ ಸಹಾಯಧನ, ರೂ.50,000/- ಅವಧಿಸಾಲವಾಗಿದ್ದು ರೂ.75,000/- ಗಳು ವಿದ್ಯುದ್ದೀಕರಣ ವೆಚ್ಚವಾಗಿ ಎಸ್ಕಾಂಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಉಳಿದ ಇತರೆ 24 ಜಿಲ್ಲೆಗಳಲ್ಲಿ ಘಟಕ ವೆಚ್ಚ ರೂ.3.75 ಲಕ್ಷ ವಿದ್ದು, ಇದರಲ್ಲಿ ರೂ.3.25 ಲಕ್ಷ ಸಹಾಯಧನ ರೂ.50,000/ ಅವಧಿಸಾಲವಾಗಿರುತ್ತದೆ. ಸಹಾಯಧನದಲ್ಲಿ ರೂ.75,000/- ವಿದ್ಯುದ್ದೀಕರಣ ವೆಚ್ಚವಾಗಿ ಎಸ್ಕಾಂಗಳಿಗೆ ಬಿಡುಗಡೆ ಮಾಡಲಾಗುವುದು ಹಾಗೂ ಸಾಲದ ಮೊತ್ತವನ್ನು 6 ಅರ್ಧ ವಾರ್ಷಿಕ ಸಮ ಕಂತುಗಳಲ್ಲಿ ಶೇ4 ರಷ್ಟು ಬಡ್ಡಿ ದರದಲ್ಲಿ ಮರು ಪಾವತಿ ಮಾಡಬೇಕಾಗಿರುತ್ತದೆ.
ಈ ಯೋಜನೆಗೆ ಅರ್ಜಿ ಹಾಕಲು ಯಾರು ಅರ್ಹರು (Qualifications) ?
ಮೊದಲಿಗೆ ಅರ್ಜಿದಾರರು ಕರ್ನಾಟಕ(karnataka) ಖಾಯಂ ನಿವಾಸಿಯಾಗಿರಬೇಕು.
1.20 ಎಕರೆಯಿಂದ 5 ಎಕರೆ ಜಮೀನು ಹೊಂದಿರಬೇಕು.
ಪರಿಶಿಷ್ಟ ಪಂಗಡಕ್ಕೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಅರ್ಜಿದಾರನ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು.
ಈಗಾಗಲೇ ಆಯಾ ಜಾತಿ ಸಮುದಾಯದ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅರ್ಜಿದಾರನು ಕೇಂದ್ರ ಅಥವಾ ರಾಜ್ಯ ಸರ್ಕಾರದ ಹುದ್ದೆಯಲ್ಲಿ ಇರಬಾರದು.
ಅರ್ಜಿದಾರರ ಹೆಸರಿನಲ್ಲಿ ಕೃಷಿ ಜಮೀನು ಹೊಂದಿರುವುದು ಕಡ್ಡಾಯವಾಗಿದೆ.
ಈ ಯೋಜನೆಯ ಪ್ರಯೋಜನ ಪಡೆಯಬೇಕೆಂದರೆ ರೈತರು ಯಾವುದೇ ರೀತಿಯ ನೀರಾವರಿ ಸೌಲಭ್ಯ ಹೊಂದಿಲ್ಲದವರಾಗಿರಬೇಕು.
ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
ಅರ್ಜಿದಾರನು ಆಧಾರ್ ನಂಬರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು (Documents) ?
ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್.
ಹಿಡುವಳಿ ಪ್ರಮಾಣ ಪತ್ರ.
ಬ್ಯಾಂಕ್ ಪಾಸ್ ಬುಕ್ ಪ್ರತಿ.
ಸಣ್ಣ/ಅತಿ ಸಣ್ಣ ರೈತರ ದೃಢೀಕರಣ ಪತ್ರ.
ರೈತರ ಈIಆ ಸಂಖ್ಯೆ.
ಜಮೀನಿನ ಪಹಣಿ (RTC).
ಅರ್ಜಿದಾರರ ಪೋಟೋ.
ಬಾವಿ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ (ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಪಡೆಯಬೇಕು).
ಎಲ್ಲಿ ಅರ್ಜಿ ಸಲ್ಲಿಸಬೇಕು.?
ಅರ್ಹ ಫಲಾಪೇಕ್ಷಿಗಳು ಗ್ರಾಮ ಒನ್/ಬೆಂಗಳೂರು ಒನ್/ಕರ್ನಾಟಕ ಒನ್ ಕಂಪ್ಯೂಟರ್ ಸೆಂಟರ್ ಗಳನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು. ಅಥವಾ https://sevasindhu.karnataka.gov.in/Sevasindhu/Kannada ಸೇವಾ ಸಿಂದು ಪೋರ್ಟಲ್ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು. ಎಲ್ಲಾ ಅರ್ಹ ಫಲಾನುಭವಿಗಳು ಅಗತ್ಯ ದಾಖಲಾತಿಗಳ ಸಮೇತ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಬೇಕು.
ಗಮನಿಸಿ (Notice) :
ಕೊಟ್ಟಿರುವ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಲಾಗಿದ್ದು, ಸೇವಾಸಿಂಧು ವೆಬ್‌ಸೈಟ್ ಮೂಲಕ ಅರ್ಜಿಗಳನ್ನು ಅಕ್ಟೋಬರ್ 23 ರಿಂದ ನವೆಂಬರ್ 23 ರ ವರೆಗೆ ಸಲ್ಲಿಸಬಹುದಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




