ಇಂದಿನ ವೇಗದ ಜೀವನಶೈಲಿಯಲ್ಲಿ ಬೆನ್ನೋವು, ಸೊಂಟ ನೋವು ಈ ಸಮಸ್ಯೆಗಳು ಎಲ್ಲಾ ವಯಸ್ಸಿನವರಿಗೂ ಕಾಮನ್ ಆಗಿಬಿಟ್ಟಿದೆ. ಆದರೆ ಇದಕ್ಕೆ ಮೂಲ ಕಾರಣವಾಗಿರುವುದು ಮೂಳೆಗಳ ನಿಧಾನವಾದ ಸವೆತ ಅಂದರೆ Bone Erosion. ಮೂಳೆ ತಾನಾಗಿಯೇ ಬಲ ಕಳೆದುಕೊಳ್ಳುತ್ತಾ ಹೋಗುತ್ತದೆ. ಹೆಣ್ಣುಮಕ್ಕಳಲ್ಲಿ lifestyle changes, processed food, hormones imbalance, PCOD, estrogen ಇವು ಮೂಳೆ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತಿವೆ. ಅದೇನಿದು ಮೂಳೆ ಸವೆತ? ಯಂಗ್ಸ್ಟರ್ಸ್‌ಗೂ ಇದು ಯಾಕೆ ಬರುತ್ತಿದೆ? lifestyleನಲ್ಲಿ ನಾವು ಯಾವ ತಪ್ಪುಗಳನ್ನು ಮಾಡ್ತಿದ್ದೀವಿ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮೂಳೆ ಸವೆತ (Bone Erosion / Osteoporosis) – ಸಂಪೂರ್ಣ ಸರಳ ವಿವರಣೆ ಹೀಗಿದೆ:
ಮೂಳೆ ಸವೆತ ಅಂದ್ರೆ ಏನು?:
ಮೂಳೆ ಡೆನ್ಸಿಟಿ (ದಪ್ಪ & ಬಲ) ಕಡಿಮೆ ಆಗೋದು. ಮೂಳೆ ಒಳಗೆ ಸಣ್ಣ ಸಣ್ಣ ರಂಧ್ರಗಳು (ಪೋರ್ಸ್) ದೊಡ್ಡದಾಗೋದು. ಮೂಳೆ ಬಲ ಕಳೆದು, ಸುಲಭಕ್ಕೆ ಮುರಿಯುವಷ್ಟು ವೀಕ್ ಆಗುವುದಕ್ಕೆ ಮೂಳೆ ಸವೆತ ಎಂದು ಕರೆಯಲಾಗುತ್ತದೆ.
ಮೂಳೆ ಏಕೆ ವೀಕ್ ಆಗತ್ತೆ?:
ಮೂಳೆಗಳಿಗೆ ಶಕ್ತಿಯಿಲ್ಲದ ಕಾರಣ ಮೂಳೆಗಳು ವೀಕ್ ಆಗುತ್ತದೆ. ಕ್ಯಾಲ್ಸಿಯಂ, ವಿಟಮಿನ್ ದ, ಫಾಸ್ಫೇಟ್, ಮಿನರಲ್ಸ್, ಹಾರ್ಮೋನ್ಸ್ (estrogen/progesterone)ಕಡಿಮೆ ಆದರೆ ಮೂಳೆಗಳು ವೀಕ್ ಆಗುತ್ತವೆ.
ಇತ್ತೀಚಿಗೆ ಮೂಳೆ ಸವೆತ ಯಾಕೆ ಜಾಸ್ತಿ ಆಗುತ್ತಿದೆ?:
ಮುಖ್ಯ ಕಾರಣಗಳು ಹೀಗಿವೆ,
ಕಡಿಮೆ ಫಿಸಿಕಲ್ ಆಕ್ಟಿವಿಟಿ, ಬದಲಾಗಿದ ಊಟ ವಿಧಾನ (processed food), ವಿಟಮಿನ್ D ಕೊರತೆ (ಸೂರ್ಯನ ಬೆಳಕು ಕಡಿಮೆ), ಹಾರ್ಮೋನಲ್ ಇಮ್ಬ್ಯಾಲನ್ಸ್ (women estrogen drop), ಪ್ರೋಲಾಂಗ್ಡ್ sitting Posture, ಹಿಸ್ಟ್ರೆಕ್ಟಮಿ/ಓವರಿ Removal (estrogen sudden drop), ಥೈರಾಯ್ಡ್/ಕೀಮೋಥೆರಪಿ/ಸ್ಟೆರಾಯ್ಡ್‌ಗಳು ಈ ಕಾರಣಗಳಿಂದ ಇತ್ತೀಚಿಗೆ ಮೂಳೆ ಸವೆತ ಜಾಸ್ತಿಯಾಗುತ್ತದೆ.
ಮಹಿಳೆಯರಲ್ಲಿ ಮೂಳೆ ಸವೆತ ಹೆಚ್ಚು ಯಾಕೆ?:
Estrogen ಮೂಳೆಯ ಕ್ಯಾಲ್ಸಿಯಂ ಲಾಕ್ ಮಾಡಿ ರಕ್ಷಿಸುವ ಹಾರ್ಮೋನ್. ಪಿರಿಯಡ್ಸ್ ನಿಲ್ಲೋ ಸಮಯದ ನಂತರ(menopause) ಮತ್ತು ಹಿಸ್ಟ್ರೆಕ್ಟಮಿ ನಂತರ Estrogen ಕಡಿಮೆಯಾಗಿ ಬೋನ್ ಲಾಸ್ ವೇಗವಾಗುತ್ತದೆ. ಹೀಗಾಗಿ menopause ಆದ ಮೇಲೆ 10–15 ವರ್ಷಗಳಲ್ಲಿ ಮೂಳೆ ಸವೆತ ತೀವ್ರವಾಗುತ್ತದೆ.
ಕ್ಯಾಲ್ಸಿಯಂ ಕೊರತೆ ಎಂದರೆ ಮಾತ್ರ ಮೂಳೆ ಸವೆತ ಅಲ್ಲ! ಜೊತೆಯಲ್ಲಿ ಕೇವಲ ಕ್ಯಾಲ್ಸಿಯಂ ಮಾತ್ರ ಕುಡಿದರೆ ಮೂಳೆ ಬಲವಾಗೋದಿಲ್ಲ. ದೇಹಕ್ಕೆ ಅಬ್ಸಾರ್ಬ್ ಆಗೋದು ಬಹಳ ಕಡಿಮೆ (10–20% ಮಾತ್ರ). ಅದಕ್ಕಾಗಿ, ಕ್ಯಾಲ್ಸಿಯಂ + ವಿಟಮಿನ್ D, ಫಿಸಿಕಲ್ ಆಕ್ಟಿವಿಟಿ, ಹಾರ್ಮೋನಲ್ ಬ್ಯಾಲೆನ್ಸ್ ಈ ಮೂರೂ ಬೇಕು.
ಮೂಳೆ ಸವೆತದ ಸಿಂಟಮ್ಸ್ ಏನು?
ಇದು ಸೈಲೆಂಟ್ ತೀಫ್ ಮೊದಲಿಗೆ ಯಾವುದೇ ಲಕ್ಷಣ ಇರಲ್ಲ. ನಂತರ ಬೆನ್ನೋವು/ಸೊಂಟನೋವು, Height ಕಡಿಮೆಯಾದಂತೆ ಕಾಣುವುದು, ಹಿಂಬಾಗ ಬಾಗುವುದು, ಸಣ್ಣ ಬಿದ್ದುಕೊಳ್ಳುವಲ್ಲಿ ಮೂಳೆ ಮುರಿಯುವುದರಿಂದ ಬ್ರೇಕ್ ಆಗುವುದು ತಿಳಿಯುತ್ತದೆ.
ಯಾರೆಲ್ಲಾ ಸ್ಕ್ಯಾನ್ ಮಾಡಿಸ್ಬೇಕು?:
Women : 60 ವರ್ಷ ಮೇಲ್ಪಟ್ಟ ಎಲ್ಲರೂ
Men : 65 ವರ್ಷದ ಮೇಲ್ಪಟ್ಟವರು
ಯಾರಿಗೆ ಹಾರ್ಮೋನಲ್/ಥೈರಾಯ್ಡ್/ಕ್ಯಾನ್ಸರ್ ಟ್ರೀಟ್ಮೆಂಟ್ ಇದ್ದೋರು.
ಹಿಸ್ಟ್ರೆಕ್ಟಮಿ / ಓವರಿ removal ಆಗಿದ್ದವರು.
Dexa Scan – Bone Mineral Density Test
Normal: 0 to -1
Osteopenia: -1 to -2.5
Osteoporosis: -2.5 ಕ್ಕಿಂತ ಕೆಳಗೆ
ಟ್ರೀಟ್ಮೆಂಟ್ ನ ಸಂಪೂರ್ಣ ಮಾಹಿತಿ:
ಲೈಫ್ಸ್ಟೈಲ್:
20–30 ನಿಮಿಷ walking
Resistance training (ತೂಕ ಎತ್ತುವ ಕೆಲಸ)
ಸೂರ್ಯನ ಬೆಳಕು (10–20 ನಿಮಿಷ, 11am–2pm ಮಧ್ಯೆ ಬೆಸ್ಟ್).
Food:
ಹಾಲು/curd/paneer
ಹಸಿರು ಸೊಪ್ಪು
ನಾನ್ ವೆಜ್ (egg, chicken, fish)
Millets, ragi, nuts, seeds
Medicines:
ಕ್ಯಾಲ್ಸಿಯಂ (ಆಲ್ಟರ್ನೇಟ್ ಡೇ – ಹೆಚ್ಚು ಬೇಡ)
Vitamin D (once in a week/month as per doctor)
Bone loss stop ಮಾಡುವ ಔಷಧಿಗಳು
Alendronate / Risedronate (weekಕ್ಕೆ 1 ಬಾರಿ)
ಯಂಗ್ ಜನರಲ್ಲೂ ಮೂಳೆ ಸವೆತ ಬರಬಹುದೇ?:
ಹೌದು, ಇವತ್ತಿನ ದಿನಗಳಲ್ಲಿ,
PCOD
Thyroid
Vitamin D deficiency
Poor nutrition
Excess weight gain
ಇವೆಲ್ಲಾ ಕಾರಣಕ್ಕೆ 20–30ದ ವರ್ಷದ ವಯಸ್ಸಿನವರಲ್ಲೂ bone density ಕಡಿಮೆ ಆಗೋದನ್ನು ನೋಡ್ತಿದ್ದೇವೆ.
ಹಾಲು ಕುಡಿದರೆ ಮಾತ್ರ ಮೂಳೆ ಬಲವಾಗುತ್ತದಾ?:
ಇಲ್ಲ 1 ಲೀಟರ್ ಹಾಲು ಸುಮಾರು 300mg ಕ್ಯಾಲ್ಸಿಯಂ ದೇಹಕ್ಕೆ ಅಬ್ಬ್ಸಾರ್ಬ್ ಆಗೋದು ಇನ್ನೂ ಕಡಿಮೆ. ಒಟ್ಟಿನಲ್ಲಿ ಹಾಲು ಒಂದು source ಮಾತ್ರ, solution ಅಲ್ಲ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




