WhatsApp ಬಳಸುವವರಿಗೆ ಎಚ್ಚರಿಕೆ! ನಿಮಗೆ ಅಪರಿಚಿತ ನಂಬರ್‌ನಿಂದ ಯಾವುದೇ ಫೋಟೋ ಬಂದರೆ, ಅದನ್ನು ಡೌನ್‌ಲೋಡ್ ಮಾಡಬೇಡಿ. ವಂಚಕರು ಮಸುಕಾದ ಫೋಟೋ ಕಳುಹಿಸಿ ನಿಮ್ಮನ್ನು ಮೋಸಗೊಳಿಸಲು ಹೊಂಚು ಹಾಕುತ್ತಿದ್ದಾರೆ. ಈ ಅಪಾಯದಿಂದ ಪಾರಾಗಲು ಜಾಗರೂಕರಾಗಿರಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ಡಿಜಿಟಲ್ ಯುಗದಲ್ಲಿ ವಾಟ್ಸಾಪ್ (WhatsApp)ಎಂಬ ಅಪ್ಲಿಕೇಶನ್ ನಮ್ಮ ಜೀವನದ ಅನಿವಾರ್ಯ ಭಾಗವಾಗಿಹೋಗಿದೆ. ಸ್ನೇಹಿತರ ಜೊತೆಗಿನ ಮಾತುಕತೆ, ಕುಟುಂಬದ ಸಂಪರ್ಕ, ಉದ್ಯೋಗ ಸಂಬಂಧಿತ ಸಂದೇಶಗಳು ಹಾಗೂ ವ್ಯಾಪಾರ ವ್ಯವಹಾರ ಎಲ್ಲವೂ ಇದರ ಮೂಲಕವೇ ಸಾಗುತ್ತಿದೆ. ಆದರೆ ತಂತ್ರಜ್ಞಾನ ಏರಿದಂತೆ, ವಂಚನೆಯ ಮಾದರಿಗಳೂ ಹದಗೆಟ್ಟಿವೆ. ಇತ್ತೀಚೆಗೆ ಬಹಳವಾಗಿ ಕಂಡುಬರುತ್ತಿರುವ ವಾಟ್ಸಾಪ್ “ಬ್ಲರ್ ಇಮೇಜ್ ಸ್ಕ್ಯಾಮ್(Blur Image Scam)” ಎಂಬ ಹೊಸ ಮಾದರಿಯ ಮೋಸವೇ ಇದಕ್ಕೆ ಸಾಕ್ಷಿ.
ಬ್ಲರ್ ಇಮೇಜ್ ಸ್ಕ್ಯಾಮ್ ಎಂದರೇನು?What is a Blur Image Scam?
ಈ ವಂಚನೆ(Fraud) ಅತ್ಯಂತ ಚತುರತನದಿಂದ ಜರುಗುತ್ತದೆ. ಅಪರಿಚಿತ ಸಂಖ್ಯೆಗಳಿಂದ ನಿಮ್ಮ ವಾಟ್ಸಾಪ್‌ಗೆ ಒಂದು ಬ್ಲರ್ ಆಗಿರುವ (ಅಪೂರ್ಣವಾಗಿ ಸ್ಪಷ್ಟವಾಗದ) ಚಿತ್ರವೊಂದು ಬರುತ್ತದೆ. ಈ ಫೋಟೋ ಕೆಳಗೆ “ಇದು ನಿನ್ನ ಫೋಟೋನಾ?”, “ಈ ಫೋಟೋ ನೋಡಿದೀನಿ… ನೆನಪಾಯ್ತು(“Is this your photo?” or “Have you seen this photo… I remember it?)” ಎಂಬ ಶೀರ್ಷಿಕೆಯನ್ನು ಕೂಡ ಇಡುವ ಮೂಲಕ ನಿಮ್ಮ ಕುತೂಹಲವನ್ನು ಹುಟ್ಟಿಸುತ್ತಾರೆ. ನೀವು ಈ ಫೋಟೋ ಮೇಲೆ ಕ್ಲಿಕ್ ಮಾಡುವ ಕ್ಷಣದಿಂದಲೇ ಸೈಬರ್ ಅಪಾಯದ ದಾರಿ ತೆರೆದುಕೊಳ್ಳುತ್ತದೆ.
ವಂಚನೆಯ ಹಿಂದೆ ನಡೆಯುವ ತಂತ್ರ(The strategy behind the fraud)
ಫೋಟೋ ಕ್ಲಿಕ್ ಮಾಡಿದ ಬಳಿಕ, ನೀವು ನಕಲಿ ವೆಬ್‌ಸೈಟ್‌ಗಳಿಗೆ ಮರುನಿರ್ದೇಶಿತರಾಗುತ್ತೀರಿ. ಈ ವೆಬ್‌ಸೈಟ್‌ಗಳಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ವಿವರಗಳು ಅಥವಾ OTP ಬೇಡಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ಈ ಲಿಂಕ್‌ಗಳ ಮೂಲಕ ಮಾಲ್‌ವೇರ್(Malware) ಅಥವಾ ವೈರಸ್‌ಗಳು(Viruses) ನಿಮ್ಮ ಫೋನ್‌ಗೆ ಇಂಜೆಕ್ಟ್ ಆಗುತ್ತವೆ. ಇದರಿಂದ ನಿಮ್ಮ ಫೋನ್‌ದ ನಿಯಂತ್ರಣ ಸೈಬರ್ ಕ್ರಿಮಿನಲ್‌ಗಳ ಕೈಗೆ ಹೋಗಬಹುದು.
ಈ ವಂಚನೆಯಿಂದ ಏನಾದರೂ ಆಗಬಹುದೆ?
ನಿಮ್ಮ ಮೊಬೈಲ್ ಮತ್ತು ಅಂತರಂಗದ ಮಾಹಿತಿಗೆ ಅನಧಿಕೃತ ಪ್ರವೇಶ
ಸಾಮಾಜಿಕ ಮಾಧ್ಯಮ ಖಾತೆಗಳ ಹ್ಯಾಕಿಂಗ್
ಬ್ಯಾಂಕ್ ಖಾತೆಯಿಂದ ಹಣ ಕಳವು
ಫೋನ್‌ನಲ್ಲಿರುವ ಫೋಟೋಗಳು, ಫೈಲ್‌ಗಳು, ಸಂಪರ್ಕ ಮಾಹಿತಿಗಳ ಕಳವು
ಈ ರೀತಿ ಮೋಸದಿಂದ ಹೇಗೆ ನಿಮ್ಮನ್ನು ರಕ್ಷಿಸಿಕೊಳ್ಳಬಹುದು?
ಅಪರಿಚಿತ ಲಿಂಕ್ ಅಥವಾ ಫೋಟೋಗಳ ಮೇಲೆ ಕ್ಲಿಕ್ ಮಾಡಬೇಡಿ(Don’t click on unknown links or photos): ನಿಮ್ಮ ಗೆಳೆಯರಿಲ್ಲದ ಅಥವಾ ಶಂಕಾಸ್ಪದ ಸಂಖ್ಯೆಯಿಂದ ಬರುವ ಯಾವುದೇ ಬ್ಲರ್ ಇಮೇಜ್ ಅಥವಾ ಲಿಂಕ್‌ಗಳನ್ನು ತೆರೆದುಕೊಳ್ಳಬೇಡಿ.
ಆಂಟಿ ವೈರಸ್ ಅಪ್ಲಿಕೇಶನ್ ಬಳಸಿ(Use an anti-virus app): ವಿಶ್ವಾಸಾರ್ಹ ಆಂಟಿ ವೈರಸ್ ಅಪ್ಲಿಕೇಶನ್ ಅನ್ನು ನಿಮ್ಮ ಫೋನ್‌ನಲ್ಲಿ ಇಟ್ಟುಕೊಳ್ಳಿ. ಇದು ಮಾಲ್‌ವೇರ್ ದಾಳೆಗಳಿಂದ ರಕ್ಷಿಸುತ್ತದೆ.
ವಾಟ್ಸಾಪ್ ಸೆಟ್ಟಿಂಗ್‌ಗಳಲ್ಲಿ ಗೌಪ್ಯತೆ ಬಲಪಡಿಸಿ(Strengthen privacy in WhatsApp settings): ನಿಮ್ಮ ಪ್ರೊಫೈಲ್ ಫೋಟೋ, ಅನ್‌ಸೇವುಡ್ ನಂಬರ್‌ಗಳಿಂದ ಮೆಸೇಜ್, ಮೀಡಿಯಾ ಸ್ವೀಕಾರವನ್ನು ನಿರ್ಬಂಧಿಸಿ.
ಮೇಲ್ಕಂಡ ತಪ್ಪು ಆಗಿದೆಯೆಂದು ತಿಳಿದ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳಿ:
ಪಾಸ್‌ವರ್ಡ್‌ಗಳನ್ನು ಬದಲಾಯಿಸಿ(Change Password).
ಬ್ಯಾಂಕ್‌ಗೆ ಅಥವಾ ಸಂಬಂಧಿತ ಸಂಸ್ಥೆಗೆ ಮಾಹಿತಿ ನೀಡಿ.
ಸೈಬರ್ ಕ್ರೈಂ ಪೋರ್ಟಲ್ (www.cybercrime.gov.in) ಮೂಲಕ ದೂರು ದಾಖಲಿಸಿ.
ಅಂತಿಮವಾಗಿ ಹೇಳುವುದಾದರೆ, ಡಿಜಿಟಲ್ ಜಗತ್ತಿನಲ್ಲಿ ನಿರ್ವಹಣೆ ಜವಾಬ್ದಾರಿಯುತ ಬಳಕೆಯಿಂದ ಮಾತ್ರ ಸಾಧ್ಯ. ಬ್ಲರ್ ಇಮೇಜ್ ಸ್ಕ್ಯಾಮ್ ಮುಂತಾದ ವಾಟ್ಸಾಪ್ ವಂಚನೆಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿವೆ. ಹಾಗಾಗಿ ಪ್ರತಿಯೊಬ್ಬ ಬಳಕೆದಾರನು ಎಚ್ಚರದಿಂದ, ಜಾಗೃತಿಯಿಂದ ಹಾಗೂ ತಂತ್ರಜ್ಞಾನ ಜ್ಞಾನದಿಂದ ಇಂಥ ಅಪಾಯಗಳಿಂದ ದೂರವಿರುವುದು ಅತ್ಯಂತ ಅಗತ್ಯ. ವಾಟ್ಸಾಪ್ ಬಳಕೆಯಲ್ಲಿ ಜಾಗೃತಿ ಮತ್ತು ಎಚ್ಚರಿಕೆಯಿಂದ ನಾವು ಈ ಡಿಜಿಟಲ್ ದಾಳಿಗಳನ್ನು ತಡೆಯಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.