ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 10(BigBoss season 10) ಶುರುವಾಗಿದ್ದು. ಮನೆ ಒಳಗೆ 17 ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಭಾರಿ ಕುತೂಹಲ ಮೂಡಿಸಿದ್ದ ಬಿಗ್ ಬಾಸ್ ಗ್ರ್ಯಾಂಡ್ ಪ್ರೇಮಿಯರ್(grand premiere) ಭರ್ಜರಿ ಮನರಂಜನೆಯನ್ನು ತಂದಿದೆ. ಇಂದು 9.30 ಯಿಂದ ಶೋ ಶುರುವಾಗಲಿದ್ದು, ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ(Jio cinema)’ ದಲ್ಲಿ ಲಭ್ಯವಿದೆ. ಮತ್ತು ( OTT ) ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಯಾರೆಲ್ಲ ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ ತಿಳಿದುಕೊಳ್ಳ ಬೇಕೇ ಹಾಗಿದ್ದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ.
ನಮ್ರತಾ ಗೌಡ
ಇವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊಟ್ಟ ಮೊದಲ ಮಹಿಳಾ ಸ್ಪರ್ಧಿ, ನಟಿ, ಮಾಡೆಲ್, ಬೋಲ್ಡ್ ಹುಡುಗಿ ನಮ್ರತಾ. ಇವರು ಮೊದಲು ‘ಕೃಷ್ಣ ರುಕ್ಮಣಿ’ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡವರು. ಹಾಗೆ ‘ಪುಟ್ಟಗೌರಿ ಮದುವೆ’, ‘ನಾಗಿಣಿ 2’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ವೀಕ್ಷಕರಿಂದ 86% ವೋಟ್ ಪಡೆಯುವ ಮೂಲಕ ದೊಡ್ಡ ಮನೆಗೆ ಕಾಲಿಟ್ಟಿದ್ದಾರೆ.
ಸ್ನೇಹಿತ್ ಗೌಡ
ಇನ್ನು ಎರಡನೇ ಸ್ಪರ್ಧಿಯಾಗಿ ಸ್ನೇಹಿತ್ ಗೌಡ ಎಂಟ್ರಿ ಕೊಟ್ಟಿದ್ದಾರೆ. ಇವರು ಕಿಚ್ಚ ಸುದೀಪ್ ಅಪ್ಪಟ ಅಭಿಮಾನಿ. ಸ್ನೇಹಿತ್ ಗೌಡ ಕಿರುತೆರೆಯ ಜನಪ್ರಿಯ ಯುವ ನಟ. 2016ರಲ್ಲಿ ಚಿರವಾದ ನೆನಪು ಅನ್ನೋ ಸಿನಿಮಾದಲ್ಲಿಯೂ ನಟಿಸಿದ್ದರು. ಹಾಗೆ ‘ನಮ್ಮನೆ ಯುವರಾಣಿ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಫಿಟ್ನೆಸ್ ಗೆ ಹೆಚ್ಚು ಒತ್ತು ನೀಡುವ ಇವರು ದೊಡ್ಡ ಮನೆಯೊಳಗೆ ಹೇಗೆ ಆಟ ಆಡುತ್ತಾರೆ ಎಂದು ಕಾದು ನೋಡಬೇಕಾಗಿದೆ.
ಈಶಾನಿ
ಈಶಾನಿ ದೊಡ್ಡ ಮನೆಗೆ ಕಾಲಿಟ್ಟ ಮೂರನೇ ಸ್ಪರ್ಧಿ. ಮೈಸೂರಿನಲ್ಲಿ ಹುಟ್ಟಿದ ರ್ಯಾಪರ್ ಇಶಾನಿ ದುಬೈ, ಲಾಸ್ ಏಂಜಲೀಸ್‌ನಲ್ಲಿ ಓದಿ ಬೆಳೆದವರು. ಮಂಜು ಪಾವಗಡ ಜೊತೆ ಇಶಾನಿ ತಮಾಷೆ ವೀಕ್ಷಕರಿಗೆ ಸಖತ್ ಮಜಾ ಕೊಟ್ಟಿತ್ತು. 83% ವೋಟ್ ಪಡೆದು ಇಶಾನಿ ಮನೆಯೊಳಗೆ ಹೋಗಲು ಅರ್ಹರಾಗಿರುತ್ತಾರೆ. ರ್ಯಾಪ್ ಸಾಂಗ್‌ಗಳಿಂದ ಸದ್ದು ಮಾಡಿದ ಇಶಾನಿಗೆ ಕನ್ನಡದ ಬಗ್ಗೆ ಅಪಾರ ಪ್ರೀತಿ ಇದೆ. ಕನ್ನಡದಲ್ಲಿ ರ್ಯಾಪ್ ಮಾಡುವ ಆಸೆ ಇಟ್ಟುಕೊಂಡಿದ್ದಾರೆ.ಇವರು ಬಿಗ್ ಬಾಸ್ ಮನೆಯಲ್ಲಿ ಹೇಗೆ ಆಟ ಆಡುತ್ತಾರೆ ಎಂದು ಕಾದು ನೋಡಬೇಕಿದೆ.
ವಿನಯ್ ಗೌಡ
ವಿನಯ್ ಗೌಡ ಅವರು ‘ಹರ ಹರ ಮಹಾದೇವ’ ಧಾರಾವಾಹಿ ಖ್ಯಾತಿಯ ಶಿವನ ಪಾತ್ರದಲ್ಲಿ ಮಾಡಿ ಗಮನ ಸೆಳೆದಿದ್ದಾರೆ. ಫಿಟ್ನೆಸ್ ಗೆ ಅವರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. 84 ಪರ್ಸೆಂಟ್‌ನಷ್ಟು ವೋಟ್ ಗಿಟ್ಟಿಸಿಕೊಂಡಿದ್ದಾರೆ.
ತುಕಾಲಿ ಸಂತೋಷ್
ಕಾಮಿಡಿ ಕಿಲಾಡಿಗಳು ಮೂಲಕ ಫೇಮಸ್ ಆದವರು ತುಕಾಲಿ ಸಂತೋಷ್. ನಾಟಕ ಒಂದರಲ್ಲಿ ತುಕಾಲಿ ಹೆಸರಿನ ಪಾತ್ರ ಮಾಡಿದ್ದರು. 93% ವೋಟ್ ಪಡೆದು ದೊಡ್ಡ ಮನೆಯೊಳಗೆ ಪ್ರವೇಶಿಸಿದ್ದಾರೆ. ದೊಡ್ಡ ಮನೆಯಲ್ಲಿ ಇವರ ಕಿಲಾಡಿ ಆಟ ಹೇಗೆ ಇರುತ್ತದೆ ಎಂದು ನೋಡಬೇಕು.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
ನೀತು ವನಜಾಕ್ಷಿ
ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿ ಬಂದ ನೀತು ವನಜಾಕ್ಷಿ ಅವರು ತೃತೀಯಲಿಂಗಿ. ಇವರಿಗೆ ಜೀವದಲ್ಲಿ ಏನನ್ನಾದರೂ ಸಾಧನೆ ಮಾಡುವ ಹಂಬಲ ಇದೆ. ಮತ್ತು ಬ್ಯುಟಿ ಪಾರ್ಲರ್ ಮತ್ತು ಹೋಟೆಲ್ ನಡೆಸುತ್ತಿದ್ದು ಅನೇಕರಿಗೆ ಮಾದರಿಯಾಗಿದ್ದಾರೆ.
ಸಿರಿಜಾ
ಸಿರಿಜಾ ಕನ್ನಡ ಕಿರುತೆರೆಯ ಜನಪ್ರಿಯ ನಟಿ. ಕನ್ನಡ ಸೇರಿದಂತೆ ತೆಲುಗು, ತಮಿಳು ಭಾಷೆಗಳ 30ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ಇವರು, ಸಾಕಷ್ಟು ಹಿಟ್ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕೆಲ ವರ್ಷಗಳ ಹಿಂದೆ ಬಹುಬೇಡಿಕೆಯ ನಟಿಯಾಗಿದ್ದ ಸಿರಿಜಾ, ಏಕಕಾಲಕ್ಕೆ ನಾಲ್ಕು ಧಾರಾವಾಹಿಗಳಲ್ಲಿ ನಟಿಸಿದ್ದ ದಾಖಲೆಯಿದೆ. ‘ರಂಗೋಲಿ’ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದವರು. ಈಗ ದೊಡ್ಡ ಮನೆಗೆ ಕಾಲಿಟ್ಟಿದ್ದಾರೆ. ಇವರ ಆಟ ಹೇಗೆ ಇರುತ್ತೆ ಎಂದು ಕಾದು ನೋಡೋಣ.
ಸ್ನೇಕ್ ಶ್ಯಾಮ್
ಸ್ನೇಕ್ ಶ್ಯಾಮ್ ಅವರು ಮೂಲತಃ ಮೈಸೂರಿನವರಾಗಿದ್ದು ಇವರು ಉರಗ ರಕ್ಷಕರು ಆಗಿದ್ದರೆ. ಸಾವಿರಾರು ಹಾವುಗಳು ಅಲ್ಲದೆ ಸಾಕಷ್ಟು ಪ್ರಾಣಿಗಳ ರಕ್ಷಣೆಯನ್ನು ಕೂಡ ಮಾಡಿದ್ದಾರೆ. ಚಿಕ್ಕಂದಿನಿಂದಲೂ ಹಾವು ಹಿಡಿಯುವುದನ್ನೂ ಕರಗತ ಮಾಡಿಕೊಂಡಿರುವ ಇವರ ಮೂಲ ಹೆಸರು ಬಾಲಸುಬ್ರಮಣ್ಯ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸ್ನೇಕ್ ಶ್ಯಾಮ್ ಅವರ ಸಾಕ್ಷ್ಯ ಚಿತ್ರವನ್ನು ನ್ಯಾಷನಲ್ ಜಿಯೋಗ್ರಫಿ ಚಾನೆಲ್ ಪ್ರಸಾರ ಮಾಡಿದೆ. ಈಗ ಇವರು ಬಿಗ್ ಬಾಸ್ ಗೆ ಸ್ಪರ್ಧಿಯಾಗಿ ಬಂದಿದ್ದಾರೆ.
ಭಾಗ್ಯಶ್ರೀ
ಭಾಗ್ಯಶ್ರೀ ಕನ್ನಡ ಕಿರುತೆರೆಯ ಜನಪ್ರಿಯ ನಟಿ. ಇವರು ಲಕ್ಷ್ಮೀ ಬಾರಮ್ಮ ಧಾರವಾಹಿಯಲ್ಲಿ ಕುಮದಾ ಪಾತ್ರದ ಮೂಲಕ ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ಲಕ್ಷಣ’ ಧಾರಾವಾಹಿ ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಈ ಧಾರಾವಾಹಿಯಲ್ಲಿ ನಟಿಸಿದ್ದ ಭಾಗ್ಯಶ್ರೀ ಕೂಡ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಅವರಿಗೆ ಹಲವು ವರ್ಷಗಳ ಅನುಭವ ಇದೆ.
ಗೌರೀಶ್ ಅಕ್ಕಿ
ಗೌರೀಶ್ ಅಕ್ಕಿ ಕನ್ನಡದ ಪ್ರಸಿದ್ಧ ನಿರೂಪಕ, ಚಿತ್ರನಟ ಮತ್ತು ನಿರ್ದೇಶಕ. ಮಾಧ್ಯಮ ಜಗತ್ತಿನ ಸೆಳೆತದಿಂದಾಗಿ ಹೈದರಾಬಾದಿನಲ್ಲಿ ಈಟಿವಿ ಕನ್ನಡ(E TV) ಚಾನಲ್‌ಗೆ ಸೇರಿದರು. 2005ರಲ್ಲಿ `ಟಿವಿ೯ ಕನ್ನಡ ವಾಹಿನಿ ಸೇರಿ 5 ವರ್ಷಗಳ ಕಾಲ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದರು. ನಂತರ `ಸುವರ್ಣ ನ್ಯೂಸ್(Suvarna News)’ ಮತ್ತು `ಸುದ್ದಿ’ ಚಾನೆಲ್‌ನಲ್ಲಿಯೂ ಕೆಲಸ ಮಾಡಿದ್ದಾರೆ. 2016ರಲ್ಲಿ ಇವರು `ಸಿನಿಮಾ ಮೈ ಡಾರ್ಲಿಂಗ್’ ಎಂಬ ಚಿತ್ರದ ಕಥೆ ಬರೆದು ನಿರ್ದೇಶಿಸಿದರು. ಚಾರ್ಮಿನಾರ್, ಲೂಸಿಯಾ, ಸಿಪಾಯಿ, 3000 ಮುಂತಾದ ಚಿತ್ರಗಳಲ್ಲಿ ಗೌರೀಶ್ ಅಕ್ಕಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಆಲ್ಮಾ ಮೀಡಿಯಾ ಸ್ಕೂಲ್ ನಡೆಸುತ್ತಿದ್ದಾರೆ. ಅವರು ಬಿಗ್ ಬಾಸ್ ಗೆ ಬಂದಿದ್ದಾರೆ.
ಮೈಕಲ್ ತಾಯಿ
ಮೈಕಲ್ ಅಜಯ್ ನೈಜೀರಿಯಲ್ ಕನ್ನಡಿಗ. ಇವರು ಮಾಡೆಲ್ ಹಾಗೂ ಉದ್ಯಮಿ ಕೂಡ. ಮೈಕಲ್ ತಮ್ಮದೇ ಬರ್ಗರ್ ಶಾಪ್ ಹೊಂದಿದ್ದಾರೆ. ಮಾಡೆಲ್ ಕೂಡ ಹೌದು.
ಸದ್ಯ ಇವರು ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.
ಡ್ರೋನ್ ಪ್ರತಾಪ್
ಡ್ರೋನ್ ಪ್ರತಾಪ್ ಎಂದೇ ಫೇಮಸ್ ಆಗಿರುವ ಇವರು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲು ಇವರು ಟ್ರೋಲ್ ಆಗಿದ್ದರು. ತಮ್ಮನ್ನು ತಾವು ಯುವ ವಿಜ್ಞಾನಿ ಎಂದು ಅವರು ಕರೆದುಕೊಂಡಿದ್ದಾರೆ. ಅವರು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದು ಬಹಳ ಕುತೂಹಲ ಮೂಡಿಸಿದೆ. ಆದರೆ ಈಗಾಗಲೇ ಇವರು ಡೇಂಜರ್ ಜೋನ್ ನಲ್ಲಿದ್ದಾರೆ. ನೋಮಿನೇಟ್ ಆಗುತ್ತಾರೋ ಇಲ್ಲವೋ ಎಂಬ ಕುತೂಹಲ ಮೂಡಿದೆ.
ಸಂಗೀತಾ ಶೃಂಗೇರಿ
ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಪ್ರಮುಖ ನಟಿ. ಸಂಗೀತಾ ‘ಹರ ಹರ ಮಹಾದೇವ’ ಕನ್ನಡ ಧಾರವಾಹಿ ಮೂಲಕ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿಕೊಟ್ಟ ಇವರು, ಪಾವರ್ತಿ ಪಾತ್ರದ ಮೂಲಕ ಖ್ಯಾತಿ ಗಳಿಸಿದರು. ಸಂಗೀತಾ ಎ+ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಸಾಲಗಾರರ ಸಹಕಾರ ಸಂಘ, 777 ಚಾರ್ಲಿ, ಲಕ್ಕಿಮ್ಯಾನ್, ಶಿವಾಜಿ ಸುರತ್ಕಲ್ 2 ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಸದ್ಯ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇವರು ಡೇಂಜರ್ ಜೋನ್ ನಲ್ಲಿದ್ದಾರೆ.
ಬುಲೆಟ್ ಪ್ರಕಾಶ್ ಮಗ ರಕ್ಷಕ್
ರಕ್ಷಕ್ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಅವರ ಪುತ್ರ. ಇವರು 2022ರಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇವರು ಕೂಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಇವರು ಗುರು ಶಿಷ್ಯರು ಸಿನಿಮಾದಲ್ಲಿ ನಟಿಸಿದ್ದು. ಇವರು ಕೂಡಾ ಅನೇಕ ಬಾರಿ ಟ್ರೋಲ್ ಆಗಿದ್ದರು. ಇವರು ಕೂಡ ಡೇಂಜರ್ ಜೋನ್ ನಲ್ಲಿದ್ದಾರೆ.
ವರ್ತೂರ್ ಸಂತೋಷ್
ವರ್ತೂರ್ ಸಂತೋಷ್ ಹಳ್ಳಿಕಾರ್ ತಳಿಯ ಜಾನುವಾರು ಸಾಕಾಣಿಕೆಯಿಂದ ಜನಪ್ರಿಯತೆ ಪಡೆದಿರುವ ಕರ್ನಾಟಕದ ಜನಪ್ರಿಯ ವ್ಯಕ್ತಿ. ಜೊತೆಗೆ ಇವರು ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ. ವರ್ತೂರ್ ಸಂತೋಷ್ ಹಳ್ಳಿಕಾರ್ ಒಡೆಯ ಅಂತಲೇ ಜನಪ್ರಿಯತೆ ಗಳಿಸಿದ್ದಾರೆ. ಇವರು ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಇವರು ಸಹ ಡೇಂಜರ್ ಜೋನ್ ನಲ್ಲಿದ್ದಾರೆ.
ತನಿಷಾ ಕುಪ್ಪಂಡ
ತನಿಷಾ ಕುಪ್ಪಂಡ ಕನ್ನಡ ಚಿತ್ರರಂಗದ ನಟಿ. ‘ಮಂಗಳಗೌರಿ ಮದುವೆ’ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಇವರು ‘ಪೆಂಟಗನ್’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿಕೊಟ್ಟಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇವರು ಡೇಂಜರ್ ಜೋನ್ ನಲ್ಲಿದ್ದಾರೆ.
ಕಾರ್ತಿಕ್
ಕಾರ್ತಿಕ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ. ಮೂಲತಃ ಮೈಸೂರಿನವರಾದ ಇವರು, ಅಕ್ಕ, ಬಂಗಾರಿ, ಖುಷಿ, ಇಂತಿ ನಿಮ್ಮ ಆಶಾ, ಪುಟ್ಟಕ್ಕನ ಮಕ್ಕಳು ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಕೆಲ ತೆಲುಗೂ ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ. ಕಾರ್ತಿಕ್ ಸುನೀಲ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಸಿನಿಮಾದಲ್ಲಿ ನಾಯಕನಾಗಿ ನಟಿಸಿಸುವ ಮೂಲಕ ಕನ್ನಡ ಚಿತ್ರರಂಕ್ಕೆ ಎಂಟ್ರಿಕೊಟ್ಟರು. ಇವರ ನಟನೆಯ ಡೊಳ್ಳು ಚಿತ್ರ ಕನ್ನಡದ ಅತ್ಯುತ್ತಮ ಪ್ರಾದೇಶಕ ರಾಷ್ಟ್ರ ಪ್ರಶಸ್ತಿ ಪಡೆದಿದೆ. ಅವುರ ಕೂಡ ಬಿಗ್ ಬಾಸ್ ಗೆ ಬಂದಿದ್ದಾರೆ. ಇವರು ಡೇಂಜರ್ ಜೋನ್ ನಲ್ಲಿದ್ದಾರೆ.
ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ಲೇಖನ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group








