ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಸಂಬಂಧಿಸಿದಂತೆ ಒಳಮೀಸಲು (Sub-Categorisation) ಜಾರಿ ಮಾಡುವ ಚಾರಿತ್ರಿಕ ನಿರ್ಣಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹೊಸ ನೀತಿ ಜಾರಿಯಾದ ತಕ್ಷಣವೇ ಸಾರ್ವಜನಿಕ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಮತ್ತು ಅರ್ಜಿದಾರರಿಗೆ ಒಮ್ಮೆ ಮಾತ್ರ ಅನ್ವಯವಾಗುವಂತೆ ನೇಮಕಾತಿ ವಯೋಮಿತಿಯನ್ನು (Age Limit) ಸಡಿಲಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕಾಂಗದ ಉಭಯ ಸದನಗಳಲ್ಲಿ ಪ್ರಕಟಿಸಿದ್ದಾರೆ .ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ನಿರ್ಣಯವು ಸರ್ವೋಚ್ಛ ನ್ಯಾಯಾಲಯದ ಇತ್ತೀಚಿನ ತೀರ್ಪಿನ ಆಧಾರದ ಮೇಲೆ ಎತ್ತಲಾಗಿದೆ. 2024 ಆಗಸ್ಟ್ 1ರಂದು ಪಂಜಾಬ್ ರಾಜ್ಯ ಮತ್ತು ಇತರರು ವರ್ಸಸ್ ದೇವಿಂದರ್ ಸಿಂಗ್ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ, “ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿಗಳ ಉಪವರ್ಗೀಕರಣ (Sub-Classification) ಮಾಡುವ ಸಂಪೂರ್ಣ ಅಧಿಕಾರ ಹೊಂದಿವೆ ಮತ್ತು ಇದು ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸಮಾನತೆ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಇದೊಂದು ಮಾರ್ಗವಾಗಿದೆ” ಎಂದು ಸ್ಪಷ್ಟಪಡಿಸಲಾಗಿತ್ತು. ಸಂವಿಧಾನದ ಅನುಚ್ಛೇದ 14, 15 ಮತ್ತು 16ರಲ್ಲಿರುವ ಸಮಾನತೆಯ ತತ್ವವನ್ನು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು 2024 ನವೆಂಬರ್ 12ರಂದು ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ದಾಸ್ ಅವರ ನೇತೃತ್ವ ಒಂದು ಏಕಸದಸ್ಯ ಆಯೋಗವನ್ನು ರಚಿಸಿತ್ತು. ಈ ಆಯೋಗದ ಕರ್ತವ್ಯವೆಂದರೆ ರಾಜ್ಯದ ಎಲ್ಲಾ ಪರಿಶಿಷ್ಟ ಜಾತಿ ಸಮುದಾಯಗಳ ಸಮಗ್ರ ಸ್ಥಿತಿ-ಗತಿಗಳ ಕುರಿತು ಸಮೀಕ್ಷಾ ದತ್ತಾಂಶಗಳನ್ನು (Empirical Data) ಸಂಗ್ರಹಿಸಿ, ಒಳಮೀಸಲು ನೀಡುವ ಬಗ್ಗೆ ಶಿಫಾರಸ್ಸುಗಳನ್ನು ಮಂಡಿಸುವುದಾಗಿತ್ತು.
ನ್ಯಾಯಮೂರ್ತಿ ನಾಗಮೋಹನ್ದಾಸ್ ಅವರ ಆಯೋಗವು ರಾಜ್ಯದ 101 ಪರಿಶಿಷ್ಟ ಜಾತಿಗಳನ್ನು ಅಧ್ಯಯನ ಮಾಡಿ ಈ ಆಗಸ್ಟ್ 1ರಂದು ತನ್ನ ವರದಿಯನ್ನು ಸಲ್ಲಿಸಿದೆ. ಶೇಕಡಾ 93ರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆಯನ್ನು ಪ್ರತಿನಿಧಿಸುವ 1,05,09,871 ಜನರ ದತ್ತಾಂಶವನ್ನು ಆಯೋಗವು ಸಂಗ್ರಹಿಸಿದೆ. ಸಚಿವಾಲಯವು ಈ ವರದಿಯನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ, ಆಗಸ್ಟ್ 19ರಂದು ನಡೆದ ಸಚಿವ ಸಂಪುಟದ emergency meeting ಯಲ್ಲಿ ಅದರ ಶಿಫಾರಸ್ಸುಗಳನ್ನು ಕೆಲವು ಮಾರ್ಪಾಡುಗಳೊಂದಿಗೆ ಅಂಗೀಕರಿಸಲಾಯಿತು.
ಅಂಗೀಕೃತ ಒಳಮೀಸಲು ವಿಭಜನೆಯ ವಿವರಗಳು:
- ‘ಎ’ ವರ್ಗ (ಎಡಗೈ ಸಂಬಂಧಿತ ಜಾತಿಗಳು): ಈ ವರ್ಗದ ಸಮುದಾಯಗಳಿಗೆ ಶೇಕಡಾ 6 ರಷ್ಟು ಒಳಮೀಸಲು ಕಲ್ಪಿಸಲಾಗಿದೆ.
- ‘ಬಿ’ ವರ್ಗ (ಬಲಗೈ ಸಂಬಂಧಿತ ಜಾತಿಗಳು): ಆಯೋಗವು ಪರಯ, ಮೊಗೇರ ಮುಂತಾದ ಬಲಗೈ ಜಾತಿಗಳನ್ನು ಎಡಗೈ ಜಾತಿಗಳೊಂದಿಗೆ ಸೇರಿಸಿದ್ದನ್ನು ಪರಿಶೀಲಿಸಿದ ಸಚಿವ ಸಂಪುಟವು, ಅವುಗಳನ್ನು ಬಲಗೈ ಸಮೂಹದೊಂದಿಗೆ ಪುನರ್ವರ್ಗೀಕರಿಸಿ ಶೇಕಡಾ 6 ರಷ್ಟು ಮೀಸಲು ನೀಡಲು ತೀರ್ಮಾನಿಸಿದೆ.
- ‘ಸಿ’ ವರ್ಗ (ಸ್ಪೃಶ್ಯ ಜಾತಿಗಳು): ಆಯೋಗವು ಈ ಗುಂಪಿಗೆ ಶೇ. 4 ಮೀಸಲು ಮತ್ತು 59 ಇತರ ಜಾತಿಗಳಿಗೆ (5,22,099 ಜನಸಂಖ್ಯೆ) ಶೇ. 1 ಮೀಸಲು ಶಿಫಾರಸು ಮಾಡಿತ್ತು. ತಾಂತ್ರಿಕ ಕಾರಣಗಳಿಗಾಗಿ, ಈ ಎರಡೂ ಗುಂಪುಗಳನ್ನು ಒಟ್ಟಿಗೆ ಸೇರಿಸಿ ಶೇಕಡಾ 5 ರಷ್ಟು ಒಳಮೀಸಲು ನೀಡಲು ನಿರ್ಧರಿಸಲಾಗಿದೆ.
- ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ ಗುಂಪು: ಈ ಗುಂಪಿನ 4,74,954 ಜನಸಂಖ್ಯೆಯನ್ನು ‘ಎ’ ಮತ್ತು ‘ಬಿ’ ವರ್ಗಗಳ ನಡುವೆ ಸಮಾನವಾಗಿ ಹಂಚಿಕೆ ಮಾಡಲಾಗುವುದು.
ಈ ಮಾರ್ಪಾಡುಗಳನ್ನು ಪರಿಶಿಷ್ಟ ಜಾತಿಯ ಎಲ್ಲಾ 101 ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ ಮತ್ತು ಇತರ ಅವಕಾಶಗಳಲ್ಲಿ ಸಮಾನತೆ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಮಾಡಲಾಗಿದೆ ಮತ್ತು ಇದು ಸರ್ವೋಚ್ಛ ನ್ಯಾಯಾಲಯದ ತತ್ವಗಳಿಗೆ ಅನುಗುಣವಾಗಿದೆ.
ಇತರ ಮುಖ್ಯ ನಿರ್ಣಯಗಳು:
- ಭವಿಷ್ಯದಲ್ಲಿ ಕಾಲಕಾಲಕ್ಕೆ ಈ ವರ್ಗೀಕರಣವನ್ನು ಪರಿಶೀಲಿಸಿ ವರದಿ ನೀಡಲ ಶಾಶ್ವತ ಪರಿಶಿಷ್ಟ ಜಾತಿ ಆಯೋಗವನ್ನು ರಚಿಸಲು ತೀರ್ಮಾನಿಸಲಾಗಿದೆ.
- ಒಳಮೀಸಲು ಹಕ್ಕಿಗಾಗಿ ಹೋರಾಟವನ್ನು ನಡೆಸಿದರ ಮೇಲೆ ನಡೆಯುತ್ತಿದ್ದ ಎಲ್ಲಾ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
- ಈ ನಿರ್ಣಯವು ಮುಂದಿನ ರಾಷ್ಟ್ರೀಯ ಜನಗಣತಿಯ ದತ್ತಾಂಶಗಳ ಆಧಾರದ ಮೇಲೆ ಪುನರಾಲೋಚನೆ ಮತ್ತು ಮಾರ್ಪಾಡುಗಳಿಗೆ ತೆರೆದಿರುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ತೀರ್ಮಾನವು ದಶಕಗಳಿಂದ ನಡೆದುಬಂದಿದ್ದ ಒಳಮೀಸಲು ಹೋರಾಟಕ್ಕೆ ನ್ಯಾಯ ಕಲ್ಪಿಸುವ ಐತಿಹಾಸಿಕ ಘಟ್ಟವಾಗಿದೆ ಎಂದು ಭಾವಿಸಿದ್ದಾರೆ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಕರ್ನಾಟಕವು ಮತ್ತ ದೇಶದ ಮುಂಚೂಣಿಯಲ್ಲಿದೆ ಎಂಬುದನ್ನು ಈ ನಿರ್ಣಯ ಮೂಲಕ ಸರ್ಕಾರವು ಸಾಬೀತುಪಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.


WhatsApp Group




