ಜೂನ್ 2025ರ 2ನೇ ವಾರ: ಮೋಟೊರೊಲಾ, ವಿವೋ, ಲಾವಾ ಹೊಸ 5G ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸಂಚಲನ
ಸ್ಮಾರ್ಟ್‌ಫೋನ್(Smart phone) ತಂತ್ರಜ್ಞಾನದ ಕ್ಷೇತ್ರದಲ್ಲಿ ಪ್ರತಿದಿನವೂ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಬಳಕೆದಾರರ ನಿರೀಕ್ಷೆಗಳನ್ನು ಪೂರೈಸುವ ಜೊತೆಗೆ ಹೆಚ್ಚಿನ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕ ದರದಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ನೀಡುವ ಸ್ಪರ್ಧೆ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಜೂನ್ 2025ರ ಎರಡನೇ ವಾರವು ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಹಳ ಮಹತ್ವಪೂರ್ಣವಾಗಿದ್ದು, ದೇಶೀಯ ಮತ್ತು ಅಂತರರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು ತಮ್ಮ ನೂತನ ಫೋನ್‌ಗಳನ್ನು ಬಿಡುಗಡೆ ಮಾಡುವುದರ ಮೂಲಕ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ವಾರ ಮೂರು ಪ್ರಮುಖ ಬ್ರ್ಯಾಂಡ್‌ಗಳಾದ ಮೋಟೊರೊಲಾ (Motorola), ವಿವೋ (Vivo), ಮತ್ತು ಲಾವಾ (Lava) ತಮ್ಮ ಶಕ್ತಿಶಾಲಿ, ಆಧುನಿಕ ತಂತ್ರಜ್ಞಾನ ಒಳಗೊಂಡ ಫೋನ್‌ಗಳನ್ನು ಭಾರತೀಯ ಬಳಕೆದಾರರಿಗೆ ಪರಿಚಯಿಸುತ್ತಿವೆ. ಈ ಫೋನ್‌ಗಳು ಕೇವಲ ಆಕರ್ಷಕ ವಿನ್ಯಾಸವಲ್ಲದೆ, ಪ್ರಬಲ ಕ್ಯಾಮೆರಾ, ವೇಗದ ಪ್ರೊಸೆಸರ್, AI ಆಧಾರಿತ ವೈಶಿಷ್ಟ್ಯಗಳು ಹಾಗೂ ಪ್ರಬಲ ಬ್ಯಾಟರಿ ಸಾಮರ್ಥ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ. ಹಾಗಿದ್ದರೆ ಮೋಟೊರೊಲಾ (Motorola), ವಿವೋ (Vivo), ಮತ್ತು ಲಾವಾ (Lava) ಬ್ರ್ಯಾಂಡ್‌ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
1. ಮೋಟೋ ಎಡ್ಜ್ 60 ಅಲ್ಟಾ (Moto Edge 60 Ultra) – ಜೂನ್ 10, 2025:
ಮುಖ್ಯ ವೈಶಿಷ್ಟ್ಯಗಳು,
ಡಿಸ್‌ಪ್ಲೇ: 1.5K Quad-Curved POLED ಡಿಸ್‌ಪ್ಲೇ, ಉತ್ತಮ ಬಣ್ಣ ತೀಕ್ಷ್ಣತೆ ಮತ್ತು 144Hz ರಿಫ್ರೆಶ್ ರೇಟ್.
ಪ್ರೊಸೆಸರ್: MediaTek Dimensity 7400.
RAM ಮತ್ತು ಸ್ಟೋರೆಜ್: 12GB RAM + ಹೆಚ್ಚಿನ ಒಳಂಗಡ ಕಾಪಿಡುವ ಸಾಮರ್ಥ್ಯ.
ಬ್ಯಾಟರಿ: 5500mAh, 68W ಫಾಸ್ಟ್ ಚಾರ್ಜಿಂಗ್
ಕ್ಯಾಮೆರಾ: ಹಿಂಭಾಗದಲ್ಲಿ 3x 50MP ಕ್ಯಾಮೆರಾ ಸೆನ್ಸರ್‌ಗಳು (ಅಲ್ಟ್ರಾ ವೈಡ್ + ಟೆಲಿಫೋಟೋ), ಮುಂಭಾಗದಲ್ಲಿ 50MP ಸೆಲ್ಪಿ ಕ್ಯಾಮೆರಾ.
ಸುರಕ್ಷತೆ: ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ + 3 ವರ್ಷ OS ಮತ್ತು 4 ವರ್ಷ ಭದ್ರತಾ ಅಪ್ಡೇಟ್‌ಗಳು.
ಫೋಟೋ ಗ್ರಾಫಿ ಪ್ರಿಯರು ಮತ್ತು ಪ್ರೊಫೆಷನಲ್ ಬಳಕೆದಾರರಿಗೆ ಈ ಬ್ರ್ಯಾಂಡ್ ಸೂಕ್ತವಾಗಿದೆ.
ಬಿಡುಗಡೆ ದಿನಾಂಕ: ಜೂನ್ 10, 2025.
ಲಭ್ಯತೆ: ಫ್ಲಿಪ್‌ಕಾರ್ಟ್.

2. ವಿವೋ ಟಿ4 ಅಲ್ಟಾ (Vivo T4 Ultra) – ಜೂನ್ 11, 2025:
ವಿವೋ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ AI ತಂತ್ರಜ್ಞಾನದ ಬಳಕೆಯಲ್ಲಿ ಮುಂದಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಲಿದೆ.
ಮುಖ್ಯ ವೈಶಿಷ್ಟ್ಯಗಳು:
ಡಿಸ್‌ಪ್ಲೇ: 1.5K Curved AMOLED, ಗರಿಷ್ಠ ಬ್ರೈಟ್ನೆಸ್ 5000 nits – ಹೊರಗಿನ ಬೆಳಕಲ್ಲೂ ಪರಿಪೂರ್ಣ ದೃಶ್ಯ.
ಪ್ರೊಸೆಸರ್: MediaTek Dimensity 9300+ – ಗೇಮಿಂಗ್, ಎಡಿಟಿಂಗ್, AI ಪ್ರೊಸೆಸಿಂಗ್‌ಗಾಗಿ ಸೂಕ್ತ.
ಕ್ಯಾಮೆರಾ:
50MP Sony IMX921 ಪ್ರಾಥಮಿಕ ಕ್ಯಾಮೆರಾ.
8MP ಅಲ್ಟ್ರಾ ವೈಡ್ ಲೆನ್ಸ್.
50MP IMX882 ಸೆನ್ಸರ್.
AI ಫೀಚರ್ಸ್: ನೋಟ್ಸ್ ಅಸಿಸ್ಟ್, ಕಾಲ್ ಟ್ರಾನ್ಸ್‌ಲೇಷನ್, ಎರೇಸ್ ಮತ್ತು ಸರ್ಚ್ – productivity ಬೂಸ್ಟ್ರ್ಸ್.
ಬ್ಯಾಟರಿ: ದೀರ್ಘ ಕಾರ್ಯನಿರ್ವಹಣೆಗೆ ಸೂಕ್ತ ಸಾಮರ್ಥ್ಯ.
ತಂತ್ರಜ್ಞಾನ, ಗೇಮಿಂಗ್ ಮತ್ತು AI ಪ್ರಿಯರಿಗೆ ಈ ಬ್ರ್ಯಾಂಡ್ ಸೂಕ್ತವಾಗಿದೆ.
ಬಿಡುಗಡೆ ದಿನಾಂಕ: ಜೂನ್ 11, 2025 ಅಂದರೆ ಇಂದು 12 ಗಂಟೆಯಿಂದ ಲಭ್ಯವಾಗುತ್ತಿದೆ.
ಲಭ್ಯತೆ: ಆನ್ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ.

3. ಲಾವಾ ಸ್ಟಾರ್ಮ್ ಲೈಟ್ 5G (Lava Storm Lite 5G) – ಜೂನ್ 13, 2025:
ಇದು ಬಜೆಟ್ ಬಳಕೆದಾರರಿಗೆ ಶಕ್ತಿಯುತ 5G ಫೋನ್ ಆಗಿದ್ದು, ಭಾರತೀಯ ಬ್ರಾಂಡ್ ಲಾವಾ ನಿಜವಾದ “ಮೇಕ್ ಇನ್ ಇಂಡಿಯಾ” ಆಯ್ಕೆಯಾಗಿದೆ.
ಮುಖ್ಯ ವೈಶಿಷ್ಟ್ಯಗಳು:
ಪ್ರೊಸೆಸರ್: MediaTek Dimensity 7060 – ಗೇಮಿಂಗ್, ವೀಕ್ಷಣೆ, ವೆಬ್ ಬ್ರೌಸಿಂಗ್‌ಗೆ ಸೂಕ್ತ.
ಡಿಸ್‌ಪ್ಲೇ: ಹೆಚ್ಚು ಸ್ಪಷ್ಟತೆ ಹೊಂದಿರುವ LCD ಅಥವಾ AMOLED ನಿರೀಕ್ಷಿಸಲಾಗಿದೆ (ಬಿಡುಗಡೆ ನಂತರ ಖಚಿತವಾಗಲಿದೆ).
ಬ್ಯಾಟರಿ: ಉತ್ತಮ ಬ್ಯಾಟರಿ ಬ್ಯಾಕಪ್ ಜೊತೆಗೆ ವೇಗದ ಚಾರ್ಜಿಂಗ್.
ಪ್ಲಾಟ್‌ಫಾರ್ಮ್: Android 14 ಅಥವಾ ಆಧುನಿಕ ವರ್ಶನ್.
ವಿದ್ಯಾರ್ಥಿಗಳು, ಸಾಮಾನ್ಯ ಬಳಕೆದಾರರು, ಕಡಿಮೆ ಬಜೆಟ್‌ನಲ್ಲಿರುವವರಿಗೆ ಈ ಬ್ರ್ಯಾಂಡ್ ಸೂಕ್ತವಾಗಿದೆ.
ಬಿಡುಗಡೆ ದಿನಾಂಕ: ಜೂನ್ 13, 2025.
ಲಭ್ಯ: ಇಂದು ಮಧ್ಯಾಹ್ನ 12 ಗಂಟೆ, ಅಮೆಜಾನ್‌ನಲ್ಲಿ.

ಈ ವಾರದ ಸ್ಮಾರ್ಟ್‌ಫೋನ್ ಲಾಂಚ್‌ಗಳ ಹೈಲೈಟ್ಸ್ ಹೀಗಿದೆ:
ಎಲ್ಲಾ ಮೂರು ಫೋನ್‌ಗಳು 5G ಬೆಂಬಲ ಹೊಂದಿವೆ.
ಹೆಚ್ಚು ಪ್ರಭಾವಿತ್ತವಾದ ಕ್ಯಾಮೆರಾ ಸೆಟ್‌ಅಪ್ ಮತ್ತು ಸ್ಪಷ್ಟ ಡಿಸ್ಪ್ಲೇಗಳನ್ನು ಕಾಣಬಹುದು.
ಮೋಟೊರೊಲಾ ಮತ್ತು ವಿವೋ ಫೋನ್‌ಗಳಲ್ಲಿ AI ಆಧಾರಿತ ವೈಶಿಷ್ಟ್ಯಗಳು.
ಲಾವಾ ಫೋನ್ ಬಜೆಟ್ ಸೆಗ್ಮೆಂಟ್‌ಗೆ ಹೊಸ ಶಕ್ತಿ.
ಎಲ್ಲಾ ಮಾದರಿಗಳಲ್ಲಿ ಪ್ರಬಲ ಬ್ಯಾಟರಿ ಬ್ಯಾಕಪ್.
ಒಟ್ಟಾರೆಯಾಗಿ, ಈ ವಾರ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಳ್ಳೆ ಒಳ್ಳೆ ಫೋನ್ ಗಳು ಬಿಡುಗಡೆಯಾಗಿವೆ. ನೀವು ಒಂದು ಪ್ರೀಮಿಯಂ ಸ್ಮಾರ್ಟ್‌ಫೋನ್ ಹುಡುಕುತ್ತಿದ್ದರೆ ಅಥವಾ ಬಜೆಟ್ ಫೋನ್ ಅನ್ನು ಅಪ್‌ಗ್ರೇಡ್ ಮಾಡಲು ಉತ್ಸುಕರಾಗಿದ್ದರೆ, ಈ ವಾರ ಬಿಡುಗಡೆ ಆಗುತ್ತಿರುವ Motorola Edge 60 Ultra, Vivo T4 Ultra ಮತ್ತು Lava Storm Lite 5G ನಂತ ಫೋನ್‌ಗಳು ನಿಮಗಾಗಿ ಪರಿಪೂರ್ಣ ಆಯ್ಕೆಯಾಗಬಹುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.