ಎಲ್ಲರಿಗೂ ಅವರದೇ ಅದ ಒಂದು ಕನಸು ಆಸೆ ಅಂತಾ ಇದ್ದೆ ಇರುತ್ತದೆ ಅಲ್ಲವೇ. ಅದರ ಜೊತೆಗೇ ಚಿಕ್ಕದೋ ದೊಡ್ಡದೋ ಜೀವನಕ್ಕೆ ಒಂದು ತಮ್ಮದೇ ಆದ ಸ್ವಂತ ಮನೆ(Own House) ಕಟ್ಟಿಕೊಂಡು ಇರುವುದು ಎಲ್ಲರ ಕನಸು ಆಗಿರುತ್ತದೆ. ಆ ಕನಸನ್ನು ನನಸು ಮಾಡುವುದೆ ಒಂದು ಗುರಿ ಹೊಂದಿರುತ್ತಾರೆ. ಈ ಸ್ವಂತ ಮನೆ ಕಟ್ಟಬೇಕೆಂದರೆ ಹಣ ಸಾಮಾನ್ಯವಾಗಿ ಹೆಚ್ಚಿನ ಮೊತ್ತದಲ್ಲಿನೆ ಅವಶ್ಯಕ ಆಗಿರುತ್ತದೆ. ಆದರೆ ಇದೀಗ ನಮ್ಮ ಸ್ವಂತ ಜಾಗದಲ್ಲಿ ಸ್ವಂತ ಮನೆ ಕಟ್ಟಬೇಕೆಂದರೆ ಬಹಳ ದುಬಾರಿ ಖರ್ಚಾಗುತ್ತದೆ. ಆದರೆ ಹೀಗಿರುವಾಗ ಗೃಹಸಾಲಗಳಿಗೆ (Home Loans) ಯಾವತ್ತೂ ಬೇಡಿಕೆ ಕಡಿಮೆ ಆಗಿಲ್ಲಾ ನೆನಪಿರಲಿ. ಸಾಲ ತಗೆದು ಕೊಳ್ಳುತ್ತೇವೆ ಅಂದರೆ ಆ ಸಾಲಕ್ಕೆ ಬಡ್ಡಿ (interest rate) ಕಟ್ಟುವುದು ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ. ಆದರೆ ಬಡ್ಡಿ ಕಟ್ಟವುದು ಏನೋ ನಿಜಾ ಆದರೆ, ನಾವು ಏಷ್ಟು ಜಾಸ್ತಿ ಬಡ್ಡಿದರ ಕೊಟ್ಟುತ್ತೇವೋ ಅಷ್ಟು ಸಾಲದ ಹೊರೆ ಬಹಳ ಹೆಚ್ಚಾಗಿರುತ್ತದೆ. ಆದರಿಂದ ಆದಷ್ಟು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳುವುದು ಬಹಳ ಮುಖ್ಯ ವಾಗಿರುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಗೃಹ ಸಾಲಕ್ಕಾಗಿ ಉತ್ತಮ ಬ್ಯಾಂಕುಗಳು :
ಇದೀಗ ಗ್ರಾಹಕರಿಗೆ ಬ್ಯಾಂಕುಗಳು ಹಲವಾರು ಅನುಕೂಲಗಳು ಮತ್ತು ವಿಶೇಷಣಗಳೊಂದಿಗೆ ವಿವಿಧ ಹೋಮ್ ಲೋನ್ (home loan) ಕಾರ್ಯಕ್ರಮಗಳನ್ನು ನಿಮಗೆ ನೀಡುತ್ತವೆ, ಮತ್ತು ಹೆಚ್ಚಿನ ಅನುಕೂಲವನ್ನು ಮಾಡಿ ಕೊಡುತ್ತದೆ. ಹೆಚ್ಚಿನ ಅರ್ಹತೆ, ಕಡಿಮೆ EMI ಗಳು, EMI ವಿನಾಯಿತಿಗಳು, ಮಿಶ್ರ ಬಡ್ಡಿ ದರಗಳು, ಓವರ್‌ಡ್ರಾಫ್ಟ್ ಸಾಮರ್ಥ್ಯ ಮತ್ತು ಬ್ಯಾಲೆನ್ಸ್ ವರ್ಗಾವಣೆ ಸಾಮರ್ಥ್ಯವನ್ನು ಹೊಂದಿರುತ್ತದೆ. ಇಂತಹ ಎಲ್ಲಾ ಉತ್ತಮ ಸೌಲಭ್ಯಗಳೊಂದಿಗೆ ಅನುಕೂಲತೆ ಮಾಡಿ ಹೋಂ ಲೋನ್ ಅನ್ನು ನೀಡುತ್ತಾರೆ.
ಬನ್ನಿ ಹಾಗಾದರೆ , ನೀವೇನಾದರೂ 2023 ರಲ್ಲಿ ಯಾರು ಅತ್ಯುತ್ತಮ ಹೋಮ್ ಲೋನ್‌ಗಳನ್ನು ಕೊಡುತ್ತಾರೆ? ಯಾವ ಬ್ಯಾಂಕ್ ನೀಡುತ್ತದೆ ಎಂಬ ಯೋಚನೆ ಮಾಡುತ್ತಿದ್ದರೆ ,ಈ ವಿಷಯದಲ್ಲಿ ಭಾರತದಲ್ಲಿ ಗೃಹ ಸಾಲಕ್ಕಾಗಿ ಉತ್ತಮ ಬ್ಯಾಂಕ್ ಯಾವವು ಎಂದು ಹುಡುಕುತ್ತಿದ್ದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
SBI ಬ್ಯಾಂಕ್ ಗೃಹ ಸಾಲ ಬಡ್ಡಿ ದರ (intrest rate):
SBI ಗೃಹ ಸಾಲ:(8.06% ರಿಂದ 9.45%)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭಾರತದ ಅತಿದೊಡ್ಡ ಸಾಲ ಕೂಡುವ ಬ್ಯಾಂಕ್ ಗಳಲ್ಲಿ ಇದು ಒಂದ ಆಗಿದೆ. SBI ಇದುವರೆಗೆ 30 ಲಕ್ಷ ಕುಟುಂಬಗಳನ್ನು ತಮ್ಮ ಮನೆ ಖರೀದಿಯಲ್ಲಿ ಬೆಂಬಲಿಸಿದೆ. ಮತ್ತು ಭಾರತದಲ್ಲಿ ಗೃಹ ಸಾಲಕ್ಕಾಗಿ ಅತ್ಯುತ್ತಮ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಮತ್ತು ಭಾರತದಲ್ಲಿ ಗೃಹಸಾಲಗಳಿಗೆ SBI ಬ್ಯಾಂಕ್ ಬಡ್ಡಿದರ ವರ್ಷಕ್ಕೆ 8.6%ರಿಂದ ಆರಂಭವಾಗಿ 9.45%ರವರೆಗೂ ಇರುತ್ತದೆ.
ಎಚ್ಡಿಎಫ್ಸಿ (HDFC) ಬ್ಯಾಂಕ್ ಗೃಹ ಸಾಲ
ಬಡ್ಡಿ ದರ:(8.50%ರಿಂದ 9.40%)
ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (HDFC) ಮುಂಬೈ ಮೂಲದ ಭಾರತೀಯ ಹಣಕಾಸು ಸೇವಾ ಸಂಸ್ಥೆಯಾಗಿದೆ. ಈ ಬ್ಯಾಂಕ್ ನ ಪ್ರಾರಂಭದಿಂದಲೂ, HDFC 80 ಲಕ್ಷಕ್ಕೂ ಹೆಚ್ಚು ಜನಗಳಿಗೆ ಮನೆಗಳನ್ನು ಖರೀದಿಸಲು ಸಹಾಯ ಮಾಡಿದೆ ಮತ್ತು ಗೃಹ ಸಾಲಕ್ಕಾಗಿ ಅತ್ಯುತ್ತಮ ಬ್ಯಾಂಕ್‌ಗಳಲ್ಲಿ ಒಂದಾಗಿದೆ.
ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಖಾಸಗಿ ವಲಯದ (private sector) HDFC ಬ್ಯಾಂಕ್ನಲ್ಲಿ ಗೃಹಸಾಲ ದರ(Home loan intrest rate) ವರ್ಷಕ್ಕೆ 8.50% ರಿಂದ9.40% ರವರೆಗು ಇರುತ್ತದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಐಸಿಐಸಿಐ(ICICI) ಬ್ಯಾಂಕ್ ಗೃಹಸಾಲಕ್ಕೆ ಬಡ್ಡಿದರ(home loan intrest): (9% ರಿಂದ 10.05%)
ICICI ಬ್ಯಾಂಕ್, ಮಾರುಕಟ್ಟೆ ಬಂಡವಾಳೀಕರಣದ ಮೂಲಕ ದೇಶದ ಎರಡನೇ ಅತಿ ದೊಡ್ಡ ಖಾಸಗಿ ಸಾಲ ನೀಡುವ ಬ್ಯಾಂಕ್ ಆಗಿದೆ. ICICI ಬ್ಯಾಂಕ್ ಈಗ ಭಾರತದಾದ್ಯಂತ 5,288 ಶಾಖೆಗಳನ್ನು ಹೊಂದಿದೆ ಮತ್ತು ಅದರ ಕೈಗೆಟುಕುವ ಮತ್ತು ಅದ್ಭುತವಾದ ವೈಶಿಷ್ಟ್ಯಗಳು ಗೃಹ ಸಾಲಕ್ಕಾಗಿ ಭಾರತದ ಅಗ್ರ 10 ಬ್ಯಾಂಕ್‌ಗಳಲ್ಲಿ ತನ್ನ ಸ್ಥಾನವನ್ನು ದೃಢವಾಗಿ ಭದ್ರಪಡಿಸಿಕೊಂಡಿದೆ. ಮತ್ತು ಇದೀಗ ಐಸಿಐಸಿಐ(ICICI) ಬ್ಯಾಂಕ್ನಲ್ಲಿ ಗೃಹಸಾಲ ದರಗಳು 9%ರಿಂದ ಆರಂಭವಾಗುತ್ತವೆ. ಶೇ. 10.05%ರವರೆಗೂ ಬಡ್ಡಿದರ ಲಭ್ಯವಿರುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ(PNB) ಗೃಹಸಾಲಕ್ಕೆ ಬಡ್ಡಿದರ: (ಶೇ. 8.40ಯಿಂದ ಶೇ. 10.60)
ಸರ್ಕಾರಿ ಸ್ವಾಮ್ಯದ ಪಿಎನ್ಬಿ (PNB)ಬ್ಯಾಂಕ್ನಲ್ಲಿ ಗೃಹಸಾಲಗಳಿಗೆ ಬಡ್ಡಿದರ ವರ್ಷಕ್ಕೆ ಶೇ. 8.40ಯಿಂದ ಶೇ. 10.60ರವರೆಗೂ ಬಡ್ಡಿದರ ಇರುತ್ತದೆ.
ಕರ್ಣಾಟಕ ಬ್ಯಾಂಕ್ನಲ್ಲಿ (karnataka bank) ಗೃಹಸಾಲಕ್ಕೆ ಬಡ್ಡಿದರ: (8.75%ಯಿಂದ 11.02%)
ಕರ್ಣಾಟಕ ಬ್ಯಾಂಕ್ನಲ್ಲಿ ಗೃಹಸಾಲಕ್ಕೆ ಬಡ್ಡಿದರ ಶೇ. 8.75% ರಿಂದ ಶೇ. 11.02% ರವರೆಗೂ ಬಡ್ಡಿದರ ವಿಧಿಸಲಾಗುತ್ತದೆ.
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

ಹೋಮ್ ಲೋನ್‌ಗೆ ಅಗತ್ಯವಿರುವ ದಾಖಲೆಗಳು ಈ ಕೆಳಗಿನಂತಿವೆ:
ತಮ್ಮ KYC ಅನ್ನು ಸ್ಥಾಪಿಸಲು, ಅರ್ಜಿದಾರರು ಈ ಕೆಳಗಿನ ದಾಖಲೆಗಳನ್ನು ಒದಗಿಸುವ ಅಗತ್ಯವಿದೆ:
ಸಾಲದ ಅರ್ಜಿ ನಮೂನೆ
ಗುರುತಿನ ಪುರಾವೆ
ನಿವಾಸ
ಕಳೆದ ಆರು ತಿಂಗಳ ಬ್ಯಾಂಕ್‌ನಿಂದ ಖಾತೆ ಹೇಳಿಕೆ
ವೈಯಕ್ತಿಕ ಆಸ್ತಿಗಳು ಮತ್ತು ಹೊಣೆಗಾರಿಕೆಗಳ ಘೋಷಣೆ
ವಿವರವಾದ ಆಸ್ತಿ ದಾಖಲೆಗಳು
ಉದ್ಯೋಗದಾತ ನೀಡಿದ ಸಂಬಳ ಪ್ರಮಾಣಪತ್ರ
ಫಾರ್ಮ್ 16/IT ರಿಟರ್ನ್ಸ್
ಕಳೆದ ಎರಡು ವರ್ಷಗಳಿಂದ ಅಸೆಸ್‌ಮೆಂಟ್ ಆರ್ಡರ್‌ಗಳು ಮತ್ತು ಐಟಿ ರಿಟರ್ನ್ಸ್.
ವ್ಯಾಪಾರದ ವಿಳಾಸದ ಪುರಾವೆ
ಮುಂಗಡ ಆದಾಯ ತೆರಿಗೆ ಪಾವತಿಗಳನ್ನು ದೃಢೀಕರಿಸಲು ಚಲನ್‌ಗಳು.
ಗೃಹ ಸಾಲಕ್ಕಾಗಿ (Home loan)ಅರ್ಹತೆಯ ಮಾನದಂಡಗಳು:
ಬ್ಯಾಂಕ್‌ನಿಂದ ಹೋಮ್ ಲೋನ್‌ಗೆ ಅರ್ಜಿ ಸಲ್ಲಿಸಲು ಒಬ್ಬ ವ್ಯಕ್ತಿಯು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.
ಅರ್ಜಿದಾರರು ಕನಿಷ್ಠ ವಯಸ್ಸು 18 ವರ್ಷಗಳನ್ನು ತಲುಪಬೇಕು.
ಸಾಲಕ್ಕೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 70 ವರ್ಷಗಳು.
ಅರ್ಜಿದಾರರ ಕನಿಷ್ಠ ಮಾಸಿಕ ಆದಾಯ ರೂ 25,000 ಆಗಿರಬೇಕು.
ಅರ್ಜಿದಾರರ CIBIL ಸ್ಕೋರ್ 750 ಕ್ಕಿಂತ ಹೆಚ್ಚಿರಬೇಕು.
ಅರ್ಜಿದಾರರ ಉದ್ಯೋಗ ಸ್ಥಿತಿಯು ಸಂಬಳ ಅಥವಾ ಸ್ವಯಂ ಉದ್ಯೋಗಿಯಾಗಿರಬೇಕು.
ಸಾಲ ನೀಡುವ ಸಂಸ್ಥೆಗಳಿಂದ 90% ವರೆಗಿನ LTV ಅನುಪಾತವನ್ನು ಒಬ್ಬರು ಪಡೆಯಬಹುದು.
ಅಸ್ತಿತ್ವದಲ್ಲಿರುವ ಅಥವಾ ಹೊಸ ಆಸ್ತಿಗಳ ಬ್ಯಾಂಕಿನ ಪಡೆಯುವಿಕೆ, ನಿರ್ಮಾಣ ಮತ್ತು ನವೀಕರಣದಿಂದ ಅರ್ಜಿದಾರರು ಹಣವನ್ನು ಸಂಗ್ರಹಿಸಬಹುದು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ


Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




