Picsart 25 10 08 13 42 07 084 scaled

1 ಲಕ್ಷದೊಳಗಿನ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳು ಒಂದು ಸಾರಿ ಚಾರ್ಜ್‌ ಮಾಡಿದ್ರೆ 212 ಕಿ.ಮೀ. ಮೈಲೇಜ್.!

Categories:
WhatsApp Group Telegram Group

ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಏರುತ್ತಿರುವ ಈ ದಿನಗಳಲ್ಲಿ, ಎಲೆಕ್ಟ್ರಿಕ್ ಸ್ಕೂಟರ್‌ಗಳು ಕೇವಲ ಒಂದು ಟ್ರೆಂಡ್ ಆಗಿ ಉಳಿದಿಲ್ಲ, ಬದಲಿಗೆ ಇಂದಿನ ಅಗತ್ಯವಾಗಿ ಮಾರ್ಪಟ್ಟಿವೆ. ಕಡಿಮೆ ನಿರ್ವಹಣಾ ವೆಚ್ಚ, ಶೂನ್ಯ ಮಾಲಿನ್ಯ ಮತ್ತು ದೀರ್ಘ ರೇಂಜ್ – ಇವು ಇತ್ತೀಚಿನ ಇವಿ ಸ್ಕೂಟರ್‌ಗಳ ಪ್ರಮುಖ ಲಕ್ಷಣಗಳಾಗಿವೆ. ನಿಮ್ಮ ಬಜೆಟ್ ₹1 ಲಕ್ಷದೊಳಗಿದ್ದರೆ, ಒಂದೇ ಚಾರ್ಜ್‌ನಲ್ಲಿ 200 ಕಿ.ಮೀ ವರೆಗೆ ಉತ್ತಮ ರೇಂಜ್ ನೀಡುವ ಮೂರು ಅದ್ಭುತ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸಂಪೂರ್ಣ ವಿವರಗಳು ಇಲ್ಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

TVS iQube

PearlWhite angle

ಟಿವಿಎಸ್‌ನಿಂದ ಬಂದಿರುವ ಈ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ತನ್ನ ಆಕರ್ಷಕ ವಿನ್ಯಾಸ ಮತ್ತು ಕಾರ್ಯಕ್ಷಮತೆ ಎರಡಕ್ಕೂ ಹೆಸರುವಾಸಿಯಾಗಿದೆ. ಇದರ ಎಕ್ಸ್-ಶೋರೂಂ ಬೆಲೆ ₹96,422 ರಿಂದ ಪ್ರಾರಂಭವಾಗುತ್ತದೆ ಮತ್ತು ಆನ್-ರೋಡ್‌ನಲ್ಲಿ ₹1 ಲಕ್ಷದೊಳಗೆ ಲಭ್ಯವಿದೆ.

ಟಿವಿಎಸ್ ಐಕ್ಯೂಬ್ ವಿವಿಧ ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ – 2.2kWh, 3.1kWh, 3.5kWh ಮತ್ತು 5.3kWh. ಇದರ ವಿವಿಧ ವೇರಿಯಂಟ್‌ಗಳ ರೇಂಜ್ ಕೂಡ ವಿಭಿನ್ನವಾಗಿದ್ದು, 94 ಕಿ.ಮೀನಿಂದ ಪ್ರಾರಂಭವಾಗಿ, ಗರಿಷ್ಠ 212 ಕಿ.ಮೀ ವರೆಗೆ ವಿಸ್ತರಿಸುತ್ತದೆ. ನಗರದಲ್ಲಿ ಪ್ರತಿದಿನ ಪ್ರಯಾಣಿಸುವವರಿಗೆ, ಒಂದೇ ಚಾರ್ಜ್‌ನಲ್ಲಿ ದೀರ್ಘಕಾಲ ಪೆಟ್ರೋಲ್ ಚಿಂತೆ ಇಲ್ಲದಂತೆ ಓಡಿಸಲು ಇದು ಅತ್ಯುತ್ತಮ ಆಯ್ಕೆಯಾಗಿದೆ.

Hero Vida V2 Plus

01

ಹೀರೋ ಮೊಟೊಕಾರ್ಪ್ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬ್ರ್ಯಾಂಡ್ ‘ವಿದಾ’ (Vida) ಮೂಲಕ ಇವಿ ಮಾರುಕಟ್ಟೆಗೆ ಪ್ರಬಲ ಪ್ರವೇಶ ನೀಡಿದೆ. ಹೀರೋ ವಿಡಾ V2 ಪ್ಲಸ್‌ನ ಎಕ್ಸ್-ಶೋರೂಂ ಬೆಲೆ ₹92,800 ಆಗಿದ್ದು, ಇದು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ.

ಈ ಸ್ಕೂಟರ್ 3.4kWh ಸಾಮರ್ಥ್ಯದ, ತೆಗೆಯಬಹುದಾದ(removeable) ಬ್ಯಾಟರಿಯನ್ನು ಹೊಂದಿದೆ. ಇದರಿಂದಾಗಿ ಬ್ಯಾಟರಿಯನ್ನು ಸ್ಕೂಟರ್‌ನಿಂದ ತೆಗೆದು ಮನೆಯಲ್ಲಿಯೂ ಚಾರ್ಜ್ ಮಾಡಬಹುದು. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ, ಈ ಸ್ಕೂಟರ್ 143 ಕಿ.ಮೀ ವರೆಗೆ ಉತ್ತಮ ಡ್ರೈವಿಂಗ್ ರೇಂಜ್ ನೀಡುತ್ತದೆ. ಟಚ್‌ಸ್ಕ್ರೀನ್ ಡಿಸ್ಪ್ಲೇ, ರೈಡಿಂಗ್ ಮೋಡ್‌ಗಳು ಮತ್ತು ಕನೆಕ್ಟೆಡ್ ನ್ಯಾವಿಗೇಷನ್‌ನಂತಹ ಸ್ಮಾರ್ಟ್ ವೈಶಿಷ್ಟ್ಯಗಳು ಇದನ್ನು ಈ ವಿಭಾಗದ ಅತ್ಯಂತ ಬುದ್ಧಿವಂತ ಸ್ಕೂಟರ್‌ಗಳಲ್ಲಿ ಒಂದನ್ನಾಗಿ ಮಾಡಿದೆ.

Kinetic Green Zing

Red

ನಿಮ್ಮ ಬಜೆಟ್ ಸ್ವಲ್ಪ ಕಡಿಮೆ ಇದ್ದರೆ, ಕೈನೆಟಿಕ್ ಗ್ರೀನ್ ಜಿಂಗ್ (Kinetic Green Zing) ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ. ಇದರ ಬೆಲೆ ಕೇವಲ ₹67,990 (ಎಕ್ಸ್-ಶೋರೂಂ) ನಿಂದ ಪ್ರಾರಂಭವಾಗುತ್ತದೆ ಮತ್ತು ಒಂದೇ ಚಾರ್ಜ್‌ನಲ್ಲಿ 70 ಕಿ.ಮೀ ವರೆಗೆ ರೇಂಜ್ ನೀಡುತ್ತದೆ.

ದಿನನಿತ್ಯದ ಕಡಿಮೆ ದೂರದ ಪ್ರಯಾಣಕ್ಕಾಗಿ ಈ ಸ್ಕೂಟರ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಹಗುರವಾದ ವಿನ್ಯಾಸ (Lightweight Design), ಆರಾಮದಾಯಕ ಆಸನ ಮತ್ತು ಕಡಿಮೆ ನಿರ್ವಹಣಾ ವೆಚ್ಚವು ಕಾಲೇಜು ವಿದ್ಯಾರ್ಥಿಗಳು ಮತ್ತು ಕಚೇರಿಗೆ ಹೋಗುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories